ಯುಗಾದಿಯ ಶುಭಾಶಯಗಳು

ಯುಗಾದಿಯ ಶುಭಾಶಯಗಳು

ಬರಹ

ವಿನಾಯಕನಿಗರ್ಪಿಸುವ ಪಂಚಕಜ್ಜಾಯ
ನಂಬಿದವರಿಗೆಂದಿಗೂ ಅವನದೇ ದಯಾ
ಧರ್ಮ ನಂಬಿದವಗೆಂದಿಗೂ ಜಯ
ರಿಪುಗಳಿಗಷ್ಟೇ ಕಾದಿಹುದು ಪರಾಜಯ

ಹೊಸ ವರುಷ ಹೇಳುತಿದೆ ತಾನು ವ್ಯಯ
ನಿರೀಕ್ಷಿಸುತಿದೆ ಎಲ್ಲರಿಂದ ಅಪವ್ಯಯ
ಸುಳ್ಳು ಮಾಡಲಾಗಲಿ, ಎಲ್ಲರಿಂದ ಮಿತವ್ಯಯ
ಜೀವ ದೀಪ ಪ್ರಜ್ವಲಿಸಿ ಸೂಸುತಿದೆ ಆಶಯ

ತೋರಿದರೇನು ತಳೆದರೇನು ಅಸಹ್ಯ
ಬಾಳ ಬಂಡಿ ಸಾಗಲಿ, ತೋರಲಿ ನಿರ್ಭಯ
ತ್ರಿಲಿಂಗಗಳಲೂ ಅಲುಗಾಡದ ಅವ್ಯಯ *
ವಿಚಲಿತವಾಗದೇ ಭದ್ರವಾಗಲಿ ಅಡಿಪಾಯ

ಕಾದಿಹುದು ಸೇವಿಸಲು ಬೇವು ಬೆಲ್ಲ
ಕಹಿಯ ಅರಿತವಗೆ ಹಿರಿದಾಗುವುದು ಬೆಲ್ಲ
ಏರಲಿ ಬಾಯೊಳಗೆ ಬೇವು ಮೊದಲಿಗೆ
ತಾನೇ ತಾನಾಗಿ ಬರಲಿಹುದು ಬೆಲ್ಲ ಬಾಗಿಲಿಗೆ

ಬೇವು ಬೆಲ್ಲದಂತೆ ದು:ಖ ಸುಖಗಳು ಸಮನಾಗಿ ಬರಲಿ
ವ್ಯಯ ನಾಮ ಸಂವತ್ಸರದ ಹೆಸರು ಹೆದರಿಸದಿರಲಿ
ಕಹಿಯುಳಿಯಲಿ ಬಾಯಲಿ, ಸಿಹಿ ಬರಲಿ ಮೊಗದಿಂದ
ಮನೆಯನು ಬೆಳಗಲಿ ನಿತ್ಯ ನೂತನ ಸಂಪದ

* (ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಗಳಲ್ಲಿ
'ಅವ್ಯಯ' ಬದಲಾಗದೇ ಒಂದೇ ತರಹವಿರುದು)

ಸಂಪದ ಸದಸ್ಯರೆಲ್ಲರಿಗೆ ಯುಗಾದಿಯ ಶುಭಾಶಯಗಳು