ಒಂದು ಕತ್ತಲೆ ಕವಿತೆ.

ಒಂದು ಕತ್ತಲೆ ಕವಿತೆ.

          ಒಂದು ಕತ್ತಲೆ ಕವಿತೆ.

 

 ನಾನು ಹಣತೆ ಹಚ್ಚಿಟ್ಟುಕೊಂಡು

ನಿದ್ದೆ ತೊರೆದು

ಕಾಯುತ್ತ ಕೂತಿದ್ದೇನೆ.

ನಿಟ್ಟುಸಿರು

ಹಣತೆಯನ್ನು ಕೊಲ್ಲಬಹುದೆಂಬ

ಬಯವ ಹೊತ್ತು.

 

ಒಮ್ಮೊಮ್ಮೆ ಏಕಾಗ್ರತೆ ತಪ್ಪಿ ಹೋಗಿ

ಸಾವು ನೆನಪಾಗುತ್ತದೆ.

ಬಯಕೆಯಾಗುತ್ತದೆ.

ಬದುಕಿನ ಬಗ್ಗೆ

ಕಳವಳ ಹುಟ್ಟಿಸುವ ಸಾವು...

..... ನಿಶ್ಚಿಂತ ಸಾವು.

 

ಹಣತೆಯ ಶಿಖೆ

ಅದರ ಪ್ರಭೆ!!

ಅದರಾಳಕ್ಕೆ ಇಳಿದು ಕೂತರೆ

ಅಂಥ ಬಿಸಿಯಲ್ಲೂ 

ಎಂಥಹ ಶಾಂತಿ!

ನೈರ್ಲಿಪ್ತ್ಯ

ಕತ್ತಲೆಯ ಬಗ್ಗೆ

ಹೆಮ್ಮೆಯೆನಿಸುತ್ತದೆ.

ಹಣತೆಯ ಹಿರಿಮೆ ಸಾರುವುದಕ್ಕೆ

ಹೀಗೆ ಕವಿದು ಕಾಯುವುದಿಲ್ಲ,

ಅದಕ್ಕೆ.

Rating
No votes yet

Comments