ದಾಂಪತ್ಯ ಪೂಜೆ - ಶ್ರೀಕೃಷ್ಣ ಪೂಜೆ

ದಾಂಪತ್ಯ ಪೂಜೆ - ಶ್ರೀಕೃಷ್ಣ ಪೂಜೆ

ಬರಹ

ಎದೆಯೊಳಗೆ
ಮನದೊಳಗೆ
ನನ್ನ, ಕಣ್ಣೊಳಗೆ ನೀನಿರು
ನೋವೊಳಗೆ
ನಲಿವೊಳಗೆ
ನನ್ನ ಬದುಕೊಳಗೆ ನೀನಿರು ಶ್ರೀಹರಿ

ತಾಯಿ,ತಂದೆಯರೆಂದೆ
ಅಕ್ಕ, ತಂಗಿಯರೆಂದೆ
ಮಡದಿ, ಮಕ್ಕಳೆಂದೆ ಶ್ರೀಹರಿ
ಬಂಧು, ಬಾಂಧವರೆಂದೆ
ಸಂಸಾರವೇ ಸರಿಯೆಂದೆ
ಇದರೊಳಗೆ ನಿನ ನಾಮ ಬಡವಾಯ್ತೋ ಶ್ರೀಹರಿ

ತಾಯ್ತಂದೆ ಕೇಶವನೆಂದೆ
ಹೆಂಡತಿ ಶ್ರೀಮಾತೆಯೆಂದೆ
ಎಲ್ಲರೊಳು ನಾನಿರುವೆನೆಂದೆ ಶ್ರೀಹರಿ
ಜೀವನವೇ ನಿಜವೆಂದೆ
ದಾಂಪತ್ಯ ಪೂಜೆಯೊಂದೇ
ನಿತ್ಯಪೂಜೆ ಸತ್ಯವೆಂದೇ ಶ್ರೀಹರಿ

ಸಂಸಾರ ವಿಮುಖನಾಗಿ
ಕಾಷಾಯ ವಸ್ತ್ರವ ಧರಿಸಿ
ಅರಿವುತಿಳಿವುದೊಂದು ಭಾಗ ಶ್ರೀಹರಿ
ಸಂಸಾರ ಸವಿಯನುಂಡು
ಬಂದುದೆಲ್ಲವ ತಿಂದು
ಮತ್ತೆ ಒಳಗನರಿವುದೊಂದು ಭಾಗ ಶ್ರೀಹರಿ

ಮೇಲೇರಬೇಕೆಂದೆ
ಕೈಯ ಹಿಡಿದು ನಡೆಸುತ ಬಂದೆ
ಅನುಭವ, ಅನುಭಾವ ಒಂದೇ ಎಂದೆ ಶ್ರೀಹರಿ
ಸಂನ್ಯಾಸಿ ನಾನೇ ಎಂದೆ
ಸಂಸಾರಿ ನಾನೇ ಎಂದೆ
ಇಬ್ಬರೊಳು ಇರುವ ಆತ್ಮ
ಶ್ರೀಗುರು ಶಂಕನೆಂದೆ ಶ್ರೀಹರಿ

ರಾಷ್ಟ್ರಕವಿ ಕುವೆಂಪುರವರ 'ಸಂಸಾರ ಪೂಜೆ ಶ್ರೀಪಾದ ಪೂಜೆ' ಎಂಬ ಸಾಲುಗಳಿಂದ ಪ್ರೇರಿತವಾದದ್ದು