ನನ್ನ ಜೀವ ನೀನು.. ನನ್ನ ಬಾಳ ಜ್ಯೋತಿ ನೀನು…
ಪ್ರೀತಿಯ ಪುಟ್ಟ…
sorry ಕಣೋ ಸ್ವಲ್ಪ ದಿನದಿಂದ ತುಂಬಾ busy ಆಗಿದ್ದೆ..ಹಂಗಾಗಿ ನಿಂಗೆ ಪತ್ರ ಬರೆಯೋಕಾಗ್ಲಿಲ್ಲ.. ನಂಗೊತ್ತು ನೀನೇನು ಕಾಯ್ತಾ ಕೂತಿರಲ್ಲ ನಾನು ನಿಂಗೆ letter ಬರೀತೀನಿ ಅಂತ.. ಆದರೂ ನಾನು ಬಿಟ್ಟು ಬಿಡೋಕಾಗುತ್ತಾ? ನನ್ನ ಜೀವದ ಜೀವ ನೀನು.. ನಿನ್ನ ಬಿಟ್ಟು ಬದುಕೋಕೆ ವಿಫಲ ಪ್ರಯತ್ನ ಮಾಡ್ತಿರೋ ಪಾಪಿ ನಾನು.. ನಂಗೇ ನಾನೇ ಕೆಲವು ಸಲ ಪ್ರಶ್ನೆ ಕೇಳಿಕೊಂಡಿದೀನಿ, ‘ಏನೋ ಮಗನೇ ಅವಳನ್ನ ಬಿಟ್ಟು ಹೆಂಗೋ ಬದುಕ್ತಿದಿಯಾ ನೀನು’ ಅಂತ.. ನಂಗೂ ಅದೇ ಅರ್ಥ ಆಗ್ತಿಲ್ಲ ಬಂಗಾರ.. ಹೆಂಗೆ ಬದುಕ್ತಿದೀನಿ ನಾನು ನಿನ್ನ ಬಿಟ್ಟು…? ಆದ್ರೂ ಹೇಳ್ತೀನಿ ಕೇಳು, ದಿನಕ್ಕೆ ಕನಿಷ್ಟ 24 ಗಂಟೆ ನೆನಪಾಗ್ತಿಯ ನೀನು.. ಎಲ್ಲಿಲ್ಲ ಹೇಳು ನೀನು.. ಯಪ್ಪಾ.. ನಂಜೊತೆಗೆ ಇದ್ದಿದ್ದು ಒಂದ್ ಸ್ವಲ್ಪ ದಿನ ಆದ್ರೂ ಎಂತಹ ಅಚ್ಚೊತ್ತಿ ಹೋಗಿದಿಯೇ ಹುಡುಗಿ.. ಏನೋ ಮೋಡಿ ಮಾಡಿದೆ.. ಮನಸೇ ಮೌನವಾಗಿದೆ… ದಿನದ ಸಾಕಷ್ಟು ಸಮಯ ಕೆಲಸದ ಜೊತೆಗೇ ಕಳೆದು ಹೋಗುತ್ತೆ.. ಆಗೆಲ್ಲೋ ಸ್ವಲ್ಪ ಆಯಾಸ ಆದ್ರೆ ಸುಮ್ಮನೆ ಕೂತು ಬಿಡಬೇಕು ಅನ್ಸುತ್ತೆ.. ಆದ್ರೆ ನೀನು ಕಣ್ಮುಂದೆ ಬಂದ ಹಾಗಾಗಿ ತಕ್ಷಣ ಮತ್ತೆ ಕೆಲಸಕ್ಕೆ ಅಂಟಿಕೊಳ್ತೀನಿ.. ನಿನ್ನನ್ನ ಪಡೆಯೋದು ಅಂದ್ರೇನು ಆಟಾನ? ನಿಲುಕದ ನಕ್ಷತ್ರ ಆಗಿದಿಯ ನೀನು.. ಅದರೆಡೆಗೆ ಆಸೆಯ ಕಂಗಳಿಂದ ನೋಡ್ತಾ ಇರೋ ನಿನ್ನ ಪ್ರೀತಿಯ stupid ನಾನು.. ಎಷ್ಟು ಸಲ ಹೇಳಿಲ್ಲ ನೀನು? ‘ನೀನು ನನ್ ಜೊತೆ ಯಾವಾಗ್ಲೂ ಇರಬೇಕು ಕಣೋ.. ನೀನ್ ಇಲ್ದೇ ನಾನ್ ಬದ್ಕೊಲ್ಲ ಕಣೋ’ ಅಂತ.. ಆ ದಿನವನ್ನೆಲ್ಲ ಮರೆತ ಹಾಗೆ ನಾಟಕ ಮಾಡ್ತಾ ಈಗ ನನ್ನಿಂದ ದೂರ ಆಗಿ ಅಲ್ಲೆಲ್ಲೋ ಕೂತು ನನ್ನ ಬಗ್ಗೆ ಒಲ್ಲದ ಮನಸಿನಲ್ಲಿ ನನ್ನ ಬಗ್ಗೇನೆ ಯೋಚಿಸ್ತಾ ಇದಿಯ… ಯಾಕೇ ಹುಡುಗಿ ಇಷ್ಟು ಕಲ್ಲು ಹೃದಯ ನಿಂಗೆ.. ನಾನು ಅಂದ್ರೆ ಜೀವನ.. ನಾನು ಅಂದ್ರೆ ಬದುಕು ಅಂತ ನನ್ನ ಜೊತೆಗೇ ಇರ್ತಿದ್ದ ಹುಡುಗಿ, ನಂಗೆ ನೀನಂದ್ರೆ ಅಸಹ್ಯ ಅನ್ನೋ ತರ ಅಷ್ಟು ದೂರ ಹೋಗಿಬಿಡೋದಾ? ಪ್ರತಿ ಕ್ಷಣ ನಾನ್ ಅನುಭವಿಸ್ತಿರೋ ಯಾತನೆ ಇದಿಯಲ್ಲ.. ಅದು ಯಾವ ಶತ್ರೂಗೂ ಬೇಡ ಕಣೇ… ಆದ್ರೂ ನಂಗೆ ಒಂದು ದೊಡ್ಡ ನಂಬಿಕೆ ಇದೆ, ನೀನೊಂದು ದಿನ ಬರ್ತಿಯ.. ಬಂದವಳೇ ಅಷ್ಟು ದೂರದಲ್ಲಿ ನಿಂತು ನನ್ನ ಕಣ್ತುಂಬ ನೋಡಿ ದುಃಖ ತಡೆಯೋಕಾಗ್ದೇ ನನ್ನ ಹತ್ರ ಓಡಿ ಬಂದು, ನನ್ನ ಕೆನ್ನೆಗೆ ಪಟ ಪಟ ಅಂತ ಹೊಡ್ದು, ‘ಯಾಕೋ stupid ನನ್ನ ಇಷ್ಟು ದಿನ ಬಿಟ್ಟು ಹೋಗಿದ್ದೆ.. ನೀನಿಲ್ದೇ ನಾನೆಷ್ಟು ನೋವು ಅನುಭವಿಸಿದೀನಿ ಅಂತ ಗೊತ್ತೇನೋ ಕೋತಿ..’ ಅಂತ ಹೇಳಿ ನನ್ನ ಅಪ್ಪಿ ಜೋರಾಗಿ ಅಳ್ತೀಯ.. ನಾನು ನಿನ್ನನ್ನ ಎರಡೂ ಕೈಗಳಲ್ಲಿ ಆಲಂಗಿಸಿ ನನ್ನ ಎದೆಗೊತ್ತಿಕೊಂಡು ನಿನ್ನ ಹಣೆಗೊಂದು ಮುತ್ತು ಕೊಟ್ಟು,“ಇನ್ಯಾವತ್ತೂ ನಿನ್ನ ಬಿಟ್ಟು ಹೋಗಲ್ಲಾ ಪುಟ್ಟ’ ಅಂತ ಹೇಳ್ತೀನಿ… ಆ ದಿನಕ್ಕೋಸ್ಕರ ಪ್ರತೀ ದಿನ ಕಾಯ್ತಾ ಇದೀನಿ.. ಕಾಯ್ತಾನೇ ಇರ್ತೀನಿ… ಯಾಕ್ ಗೊತ್ತಾ? ನನ್ನ ಜೀವ ನೀನು.. ನನ್ನ ಬಾಳ ಜ್ಯೋತಿ ನೀನು…
www.neenillade.wordpress.com