ಹನಿಕತೆಗಳು
ಪಾತ್ರ
"ಅಮ್ಮ ಯಾಕಮ್ಮ ನೀನು ಹೇಳೋ ಕತೇಲಿ ಎಲ್ಲಾರೂ ಅಳ್ತಾನೆ ಇರುತ್ತವೆ"? ಮಗು ಮುದ್ದಾಗಿ ಕೇಳಿತು. "ಯಾಕೆಂದರೆ ಆ ಕತೆಯ ಪಾತ್ರಗಳೆಲ್ಲವೂ ನನ್ನದೇ ಪ್ರತಿರೂಪ" ತಾಯಿ ಮಗುವನ್ನು ಬಿಗಿದಪ್ಪಿ ಅತ್ತಳು. ಹೊರಗಡೆ ಬಾಗಿಲು ಬಡಿದ ಶಬ್ಭ್ದಕ್ಕೆ ಮಗು ಬೆಚ್ಚಿ ಮುದುಡಿ ಮಲಗಿತು. ತಾಯಿ ಎದ್ದು ಕನ್ನಡಿಯಲ್ಲಿ ಮುಖ ನೋಡಿಕೊಂಡು ಕೊಂಚ ಪೌಡರ್ ಬಳಿದುಕೊಂಡು ಅಗ್ಗದ ಲಿಪ್ಸ್ಟಿಕ್ ಹಚ್ಚಿಕೊಂಡು ಬಾಗಿಲು ತೆರೆದಳು ಬರುವ ಪುಡಿಗಾಸಿನ ಆಸೆಗಾಗಿ.
ಎಣಿಕೆ
"ನಿಂಗೆ ಇದೇ ಮೊದಲ ಸಲಾನಾ? " ತೋಳತೆಕ್ಕೆಯಲ್ಲಿ ಮಲಗಿ ಸುಖದ ಹೊಳೆಯಲ್ಲಿ ತೇಲುತಿದ್ದವಳ ಕೇಳಿದ ಅವನು . "ಯಾಕೆ ಅನುಮಾನಾನ ?" ಎಂದು ಹುಸಿಮುನಿಸು ತೋರುತ್ತಾ ಗುದ್ದಿದವಳ ಮನದಲ್ಲಿ ಈ ಮಾತನ್ನ ಕೇಳಿದ ಹುಡುಗರ ಸಂಖ್ಯೆಯ ಎಣಿಕೆ ನಡೆಯುತ್ತಿತ್ತು. ಆತನ ಮನದಲ್ಲಿ ನಾಳೆಗಾರು ಎಂಬ ಎಣಿಕೆ ನಡೆಯುತ್ತಿತ್ತು.
ನೆನ್ನೆ- ಇಂದು
ನೆನ್ನೆ "ನಿನ್ನ ಬಿಟ್ರೆ ನಂಗೆ ಬೇರೆ ಯಾರಿದ್ದಾರೆ ಕಣೇ . ಯಾವತ್ತೂ ನನ್ನ ಬಿಟ್ಟು ಹೋಗ್ಬೇಡಾ , ನಂಗೆ ನೀನೆ ಎಲ್ಲಾ " ಎಂದು ಹುಡುಗಿಗೆ ಹೇಳಿದ ಹುಡುಗ ಇಂದು ಅವನ ಹೆಂಡತಿಯ ಜೊತೆ ಅದೇ ಮಾತನ್ನು ಹೇಳುತ್ತಿದ್ದ. ಆ ಹುಡುಗಿಯ ಗಂಡ ಅದೇ ಮಾತನ್ನು ಅವಳಿಗೆ ಹೇಳುತ್ತಿದ್ದ ಅದೇ ಪಾರ್ಕಿನಲ್ಲಿ.
ಸಮಾಧಾನ
"ಇವತ್ತು ನನ್ನ ಕೆಲಸ ಹೋಯ್ತು . ಇನ್ನು ಒಂದು ತಿಂಗಳು ಹೇಗೂ ದಿನ ದೂಡಬಹುದು . ಆಮೇಲೇನು ಗತಿ ? " ಐಟಿ ಹುಡುಗ ಅತ್ತ . ಅವನ ಗರ್ಲ್ ಫ್ರೆಂಡ್ ಸಮಾಧಾನಿಸಿದಳು. "ಹ್ಯಾಗಿದ್ದರೂ ಒಂದು ತಿಂಗಳು ಇದ್ದೇ ಇರ್ತೀನಿ ಭಯ ಪಡಬೇಡ"
Comments
ಉ: ಹನಿಕತೆಗಳು
In reply to ಉ: ಹನಿಕತೆಗಳು by ಅರವಿಂದ್
ಉ: ಹನಿಕತೆಗಳು
ಉ: ಹನಿಕತೆಗಳು
In reply to ಉ: ಹನಿಕತೆಗಳು by anil.ramesh
ಉ: ಹನಿಕತೆಗಳು
ಉ: ಹನಿಕತೆಗಳು
In reply to ಉ: ಹನಿಕತೆಗಳು by hariharapurasridhar
ಉ: ಹನಿಕತೆಗಳು
In reply to ಉ: ಹನಿಕತೆಗಳು by roopablrao
ಉ: ಹನಿಕತೆಗಳು
In reply to ಉ: ಹನಿಕತೆಗಳು by hariharapurasridhar
ಉ: ಹನಿಕತೆಗಳು
In reply to ಉ: ಹನಿಕತೆಗಳು by roopablrao
ಉ: ಹನಿಕತೆಗಳು
In reply to ಉ: ಹನಿಕತೆಗಳು by hariharapurasridhar
ಉ: ಹನಿಕತೆಗಳು
In reply to ಉ: ಹನಿಕತೆಗಳು by hariharapurasridhar
ಉ: ಹನಿಕತೆಗಳು
In reply to ಉ: ಹನಿಕತೆಗಳು by asuhegde
ಉ: ಹನಿಕತೆಗಳು
In reply to ಉ: ಹನಿಕತೆಗಳು by hariharapurasridhar
ಉ: ಹನಿಕತೆಗಳು
ಉ: ಹನಿಕತೆಗಳು
In reply to ಉ: ಹನಿಕತೆಗಳು by asuhegde
ಉ: ಹನಿಕತೆಗಳು
ಉ: ಹನಿಕತೆಗಳು
In reply to ಉ: ಹನಿಕತೆಗಳು by srinivasps
ಉ: ಹನಿಕತೆಗಳು
In reply to ಉ: ಹನಿಕತೆಗಳು by srinivasps
ಉ: ಹನಿಕತೆಗಳು
ಉ: ಹನಿಕತೆಗಳು
In reply to ಉ: ಹನಿಕತೆಗಳು by harshab
ಉ: ಹನಿಕತೆಗಳು