ತೆಂಕಣ ಗಾಳಿಯಾಟ !

ತೆಂಕಣ ಗಾಳಿಯಾಟ !

ಬರಹ

ತೆಂಕಣ ಗಾಳಿಯಾಟ !

-ಶ್ರೀ. ಪಂಜೆ ಮಂಗೇಶರಾಯರು.

ಗಿಡಗಿಡದಿಂ -ಚೆಲುಗೊಂಚಲು ಮಿಂಚಲು- ಮಿಡಿಯನು ಹಣ್ಣನು, ಉದುರಿಸಿ ಕೆದರಿಸಿ, ಎಡದಲಿ ಬಲದಲಿ ಕೆಲದಲಿ ನೆಲದಲಿ, ಪಡುವಣ ಮೋಡವ ಬೆಟ್ಟಕ್ಕೆ ಗಟ್ಟಕೆ ಹೊಡೆದಟ್ಟುತ, ಕೋಲ್ ಮಿಂಚನು ಮಿರುಗಿಸಿ, ಗುಡುಗನು ಗುಡುಗಿಸಿ, ನೆಲವನು ನಡುಗಿಸಿ, ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ, ಜಡಿಮಳೆ ಸುರಿವೋಲ್, ಬಿರುಮಳೆ ಬರುವೋಲ್, ಕುಡಿ ನೀರನು ಒಣಗಿದ ನೆಲಕೆರೆವೋಲ್, ಬಂತೈ ಬೀಸುತ ! ಬೀಸುತ ಬಂತೈ

! ತೆಂಕಣ ಗಾಳಿಯು ಕೊಂಕಣ ಸೀಮೆಗೆ ಬಂತೈ ! ಬಂತೈ ! ಬಂತೈ ! ಆರು ಪದ್ಯಗಳಲ್ಲಿ ಹಿಡಿದಿಟ್ಟ,'ತೆಂಕಣ ಗಾಳಿಯ ಆರ್ಭಟ' ವನ್ನು ನಾವು ಅನುಭವಿಸುತ್ತಿದ್ದೇವೋ, ಎನ್ನುವಂತೆ 'ಹೃದಯಂಗಮವಾಗಿ' ನಿವೇದಿಸಿದ್ದಾರೆ !

ಇಲ್ಲಿ,ನಾನು ಕೊನೆಯ ಪದ್ಯವನ್ನು ಮಾತ್ರ,ಕೊಟ್ಟಿದ್ದೇನೆ.

ವೆಂ.