ಸಂಪದ

ಸಂಪದ

ಸಂಪದ.ನೆಟ್ ಕನ್ನಡಿಗರ ಅಚ್ಚುಮೆಚ್ಚಿನ ತಾಣ. ಕಾರಣ ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ವೇದಿಕೆಯಾಗಿದೆ. ಸಂಪದವನ್ನು ಮೊದಲು ಹರಿಪ್ರಸಾದ್ ನಾಡಿಗ್ ಪ್ರಾರಂಭಿಸಿದರು ನಂತರದ ದಿನಗಳಲ್ಲಿ ಪ್ರಪಂಚಾದ್ಯಂತ ಕನ್ನಡಿಗರು ಇದುವರೆಗೂ ಬೆಳೆಸುತ್ತಾ ಬಂದಿದ್ದಾರೆ. ಸಂಪದ.ನೆಟ್ ನಲ್ಲಿ ಈಗಾಗಲೇ 5230 ಸದಸ್ಯರು ಇದ್ದು, ಸುಮಾರು 3493 ಲೇಖನಗಳು, ಸುಮಾರು 4894 ಬ್ಲಾಗ್ ಗಳನ್ನೂ ಬರೆದಿದ್ದಾರೆ. ಇವರು ಬರೆದಂತಹ ಬ್ಲಾಗ್ ಗಳಿಗೆ ಸುಮಾರು 41829 ಪ್ರತಿಕ್ರಿಯೆಗಳು ಬಂದು ಸೇರಿವೆ (ದಿನಾಂಕ 24:12:2008 ಕ್ಕೆ ಅನುಗುಣವಾಗಿ ). ಸಂಪದದಲ್ಲಿ ಪ್ರತಿನಿತ್ಯಲು ಕಡಿಮೆ ಎಂದರು 10 ರಿಂದ 15 ಬ್ಲಾಗಗಳು ಬರೆಯುತ್ತಾರೆ. ನಾನು ಸಹ ಸಂಪದದಲ್ಲಿ ಸುಮಾರು 37 ಬ್ಲಾಗ್ ಗಳನ್ನು ಮತ್ತು ಲೇಖನಗಳನ್ನು ಬರೆದಿದ್ದೇನೆ. ಸಂಪದ ನನಗೂ ಸಹ ಅಚ್ಚು ಮೆಚ್ಚಿನ ತಾಣವಾಗಿದೆ. ಈ ತಾಣದಲ್ಲಿ ವೀಕ್ಷಕರು ಮತ್ತು ಸದಸ್ಯರು ಸೇರಿ ಕಡಿಮೆ ಅಂದರು ಸುಮಾರು 100 ಜನ ಅದ್ರು ಆನ್ ಲೈನ್ ನಲ್ಲಿ ಇರುತ್ತಾರೆ. ಈ ತಾಣಕ್ಕೆ ತಿಂಗಳಿಗೆ 5.5 ಮಿಲಿಯನ್ ವೀಕ್ಷಕರು ಬೇಟಿಯನ್ನು ನೀಡುತ್ತಿದ್ದಾರೆ. ನೀವೇ ಯೋಚನೆ ಮಾಡಿ ಸಂಪದ ಎಷ್ಟರ ಮಟ್ಟಿಗೆ ಕನ್ನಡಿಗರಿಗೆ ಹತ್ತಿರವಾಗಿದೆ ಅಂತ. ಈ ರೀತಿಯಾಗಿ ಚಿಕ್ಕದಾದ ಬ್ಲಾಗ್ ಒಂದನ್ನ ನಮ್ಮ ಮರ ವೆಬ್ ಸೈಟ್ ನಲ್ಲಿ ಬರೆದಿದ್ದೇನೆ ಮುಂದೆ ಓದಿ ಅಭಿಪ್ರಾಯ ಬರೆಯಲು ಮರೆಯಬೇಡಿ

Rating
No votes yet

Comments