ದೇವರು ಇದ್ದಾನೆಯೇ????

ದೇವರು ಇದ್ದಾನೆಯೇ????

ಬರಹ

ಎಂಬ ಪ್ರಶ್ನೆ ನನ್ನನ್ನು ತುಂಬ ದಿನದಿಂದ ಕಾಡಿದ್ದ ಪ್ರಶ್ನೆ...ನನಗೆ ಸಮಂಜಸವಾದ ಉತ್ತರವನ್ನು ನನಗೆ ತಿಳಿದ ಸ್ವಲ್ಪ ವಿಷಯದಲ್ಲಿ ವಿವೇಚಿಸಿ ನಿಮ್ಮ ಮುಂದೆ ಇಡುತ್ತಿದೇನೆ, ತಪ್ಪಿದ್ದಲ್ಲಿ ಕ್ಷಮಿಸಿ.

ನಮ್ಮೆಲ್ಲರ ಸೃಷ್ಟಿಗೆ ಪಂಚಭೂತಗಳೇ ಕಾರಣ , ಕೊನೆಗೊಂದುದಿನ ಅದರಲ್ಲೇ ಲಿನಾವಾಗುತ್ತೇವೆ ಎಂಬದು ನಮಗೆಲ್ಲರಿಗೂ ತಿಳಿದ ವಿಚಾರ. ಈ ಪಂಚಭೂತಗಳು ಕೂಡ ಒಂದೇ ಒಂದು ಶಕ್ತಿಯ ಒಡೆತನ,ಅದೇ ಅಮುರ್ಥ ರೂಪದ ಶಕ್ತಿ, ಎಲ್ಲ ಶಕ್ತಿಗಳ ಗುಣಗಳನ್ನು ತನ್ನ ಒಡಲೊಳಗೆ ಕಾಪಿಟ್ಟು, ನಾನಾ ವಿಧದ ಚಿಹ್ನೆಗಳು ರೂಪಾನ್ತರಗೊಳ್ಳುತ್ತವೆ.
ಉದಾ:- ಬಿಸುವಿಕೆಗೆ, ಹರಿಯುವಿಕೆ, ಸುಡುವಿಕೆ....ಹೀಗೆ ನಾನಾ ಗುಣಗಳನ್ನೂ ವ್ಯಕ್ತ ಪಡಿಸುತ್ತವೆ.

ಬೆಂಕಿ ಸುಟ್ಟಾಗ ನಮಗೆ ಅದರ ಶಕ್ತಿಯ ಅರಿವಾಗುತ್ತದೆ, ಬೆಂಕಿ ಒಂದು ಶಕ್ತಿ ಎಂದು ನಂಬುತ್ತೇವೆ....ದೇವರು ಒಂದು ಶಕ್ತಿಯೇ???

ಹೌದು ದೇವರು ಎಂಬುದು ಒಂದು ಶಕ್ತಿ ಅದರ ಆದಿ ಇರುವುದು ಬ್ರಹ್ಮಾಂಡದಲ್ಲಿ, ಅದು ನಾನಾರೂಪದ ತನ್ನ ಗುಣದ ಗೌಣ್ಯವನ್ನು ವ್ಯಕ್ತಪಡಿಸುತ್ತಾ
ಹೋಗುತ್ತದೆ. ನಮ್ಮಲ್ಲಿ ಬೆಳೆಯುವ ನಂಬಿಕೆಗಳು ಕೂಡ ಶಕ್ತಿಯಾಗಿ ಪರಿವರ್ತನೆಗೊಂಡು ನಮ್ಮ ವ್ಯಕ್ತಿಗತ ಗುಣಗಳಾಗಿ ಮಾರ್ಪಾಡುಗೊಳ್ಳುತ್ತದೆ.

ನಮ್ಮ ಚಿಕ್ಕ ವಯಸ್ಸಿನ ಬೆಳೆವಣಿಗೆಯಲ್ಲಿ ನಾವು ಕಂಡು, ಕೇಳಿದ, ಪರಿಣಾಮಬಿರೀದ ವಿಷಾಯಸಕ್ತಿಯಾ ಕಾರಣವೆ ನಂಬಿಕೆಯಾಗಿ ಬೆಳೆದು ನಮಗೆ ಇಷ್ಟವಾದ ಶಕ್ತಿಗೆ ನಮಗೆ ಗೊತ್ತಿಲ್ಲದ ಹಾಗೆ ಮನಸೋತು. ಅದರ ಗುಣಗಳ್ಳನ್ನು ಮನನಿಸುತ್ತೇವೆ, ಪೂಜಿಸುತ್ತೇವೆ...ಇದರ ಪರಿಣಾಮವಾಗಿ ದೃಡವಾದ ನಂಬಿಕೆಯ ಶಕ್ತಿ ಮುಡಿ ನಮ್ಮ ಇಷ್ಟದಂತೆ ನಾವೇ ನಡೆದು ಕೊಂಡು, ಇಷ್ಟಾರ್ಥ ಸಿದ್ದಿಸಿದಾಗ ಆನಂದಿಸಿ ನಮಿಸುತ್ತೇವೆ. ನಮ್ಮಲ್ಲಿ ಇರುವ ಅಚಲವಾದ ನಂಬಿಕೆಯೇ ದೇವರು ಅಥವಾ ಶಕ್ತಿ.

ಇಷ್ಟಾರ್ಥ ಸಿದ್ದಿಸದಾಗ ಬಯ್ಯುತ್ತೇವೆ, ಇದರ ಅವ್ಯಕ್ತ ಕಾರಣವಿರುವುದು ಸಮಯ, ಸಂದರ್ಭ, ನಮ್ಮ ಕೌಶಲ್ಯತೆಯದ
ಅವೀವೆಚನೆ ಅಷ್ಟೇ.

ನಿಮ್ಮೆಲರ ನಡುವೆ ಸಣ್ಣವನಾದ
ಹರ್ಷ ಕೆ ಆಚಾರ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet