ಗುರು ಅಷ್ಟಕಂ

ಗುರು ಅಷ್ಟಕಂ

ಗುರು ಅಷ್ಟಕಂ

ನಿನಗೆ ಉದಾತ್ತವಾದ ನಡವಳಿಕೆ ಇದ್ದರೇನು? ಸುಂದರವಾದ ಹೆಂಡತಿ ಇದ್ದರೇನು?
ನಿನಗೆ ಪ್ರಸಿದ್ದತೆ ಇದ್ದರೇನು? ಬೆಟ್ಟದಷ್ಟು ಹಣವಿದ್ದರೇನು?
ನೀನು ಗುರುವಿನ ಚರಣಕ್ಕೆ ಬಾಗದಿದ್ದರೆ?
ಏನು ಪ್ರಯೊಜನ, ಏನು ಪ್ರಯೊಜನ.

ನಿನಗೆ ಹೆಂಡತಿ, ಮಕ್ಕಳು,ಮೊಮ್ಮಕ್ಕಳು, ಶ್ರೀಮಂತಿಗೆ ಇದ್ದರೇನು ?
ಮನೆ, ಸಂಭದಿಕರು ಮತ್ತು ಒಳ್ಳೆ ಕುಟುಂಬದಲ್ಲಿ ಹುಟ್ಟಿದರೇನು?
ನೀನು ಗುರುವಿನ ಚರಣಕ್ಕೆ ಬಾಗದಿದ್ದರೆ?
ಏನು ಪ್ರಯೊಜನ, ಏನು ಪ್ರಯೊಜನ.

ನೀನು ೬ ಅಂಗಗಳು ಮತ್ತು ೪ ವೇದಗಳಲ್ಲಿ ಪರಿಣಿತಿ ಪಡೆದಿದ್ದರೇನು?
ಮತ್ತು ನಾಟಕಕಾರನಾಗಿದ್ದರೇನು, ಕವಿಯಗಿದ್ದರೇನು?
ನೀನು ಗುರುವಿನ ಚರಣಕ್ಕೆ ಬಾಗದಿದ್ದರೆ?
ಏನು ಪ್ರಯೊಜನ, ಏನು ಪ್ರಯೊಜನ.

ನೀನು ವಿದೇಶ ಯಾತ್ರೆ ಮುಗಿಸಿದ್ದರೇನು? ಸ್ವಂತ ಸ್ಥಳದಲ್ಲಿ ಶ್ರೀಮಂತಿಗೆ ಇದ್ದರೇನು?
ನೀನು ಬೌದ್ದಿಕವಾಗಿ ಪ್ರಬುದ್ದತೆ ಗಳಿಸಿದ್ದರೇನು? ಜೀವನದಲ್ಲಿ ಸಾದಿಸಿದ್ದರೇನು?
ನೀನು ಗುರುವಿನ ಚರಣಕ್ಕೆ ಬಾಗದಿದ್ದರೆ?
ಏನು ಪ್ರಯೊಜನ, ಏನು ಪ್ರಯೊಜನ.

ನೀನು ಯಾವುದಾದರು ರಾಜ್ಯದ ರಾಜನಾದರೇನು?
ನಿನಗೆ ರಾಜಾದಿರಾಜರು ಸೇವೆ ಮಾಡಿದ್ದರೇನು?
ನೀನು ಗುರುವಿನ ಚರಣಕ್ಕೆ ಬಾಗದಿದ್ದರೆ?
ಏನು ಪ್ರಯೊಜನ, ಏನು ಪ್ರಯೊಜನ.

ನಿನ್ನ ಹೆಸರು ಎಲ್ಲಾ ಕಡೆ ಹರಡಿದ್ದರೇನು?
ಮತ್ತು ನಿನ್ನ ಧಾನ ಗುಣಕ್ಕೆ, ಗಳಿಸದ ಹೆಸರಿಗೆ ಪ್ರಪಂಚವೇ ನಿನ್ನ ಜೊತೆ ಇದ್ದರೇನು?
ನೀನು ಗುರುವಿನ ಚರಣಕ್ಕೆ ಬಾಗದಿದ್ದರೆ?
ಏನು ಪ್ರಯೊಜನ, ಏನು ಪ್ರಯೊಜನ.

ನೀನು ನಿನ್ನ ಬುದ್ದಿಯ ಬಗ್ಗೆ ಚಿಂತನೆ ನಡೆಸದ್ದಿದರೇನು?
ಯೋಗ, ಭೋಗ , ದೊಡ್ಡಭಾವನೆ, ಅಗ್ನಿ ದೀಕ್ಷೆ, ಹೆಂಡತಿಯ ಜೊತೆ ಸಾಮ್ಯತೆ ಇಲ್ಲದಿದ್ದರೇನು?
ನೀನು ಗುರುವಿನ ಚರಣಕ್ಕೆ ಬಾಗದಿದ್ದರೆ?
ಏನು ಪ್ರಯೊಜನ, ಏನು ಪ್ರಯೊಜನ.

ನಿನ್ನ ಚಿಂತನೆ ಅರಣ್ಯ ಅಥವಾ ಮನೆ ಅಥವಾ
ಕೆಲಸದಿಂದ ಅಥವಾ ದೊಡ್ಡ ಆಲೋಚನೆಯಿಂದ ದೂರ ಇದ್ದರೇನು?
ನೀನು ಗುರುವಿನ ಚರಣಕ್ಕೆ ಬಾಗದಿದ್ದರೆ?
ಏನು ಪ್ರಯೊಜನ, ಏನು ಪ್ರಯೊಜನ.

ಈ ಶ್ಲೋಕವನ್ನು ಓದಿದರೆ ಜ್ಞ್ಯಾನ, ಬುದ್ದಿವಂತಿಕೆ ಮತ್ತು ಜೀವನದಲ್ಲಿ ಜಯ ಕಾಣುವಿರಿ.
ಮುಲ ರೂಪ: ಶ್ರೀ ಆದಿ ಶಂಕರಚಾರ್ಯ

ಕನ್ನಡಕ್ಕೆ: ಹರ್ಷ ಕೆ ಆಚಾರ್ಯ

Rating
No votes yet