ಬ್ರಹ್ಮ ತತ್ವ

ಬ್ರಹ್ಮ ತತ್ವ

Comments

ಬರಹ

ಬ್ರಹ್ಮ ಎಂದರೆಯೇನು?

ಬ್ರಾಹ್ಮಿ ಎಂದರೆ ವಿಶಾಲವಾದ, ಮುಗಿಯದ, ಕೊನೆಯೇಇಲ್ಲದ, ಎಲ್ಲವನ್ನು ಮೀರಿದ (Realm of Universe) ಅದ್ಯಾತ್ಮಿಕವಾದ, ಸಾತ್ವಿಕವಾದ, ಧಾರ್ಮಿಕವಾದ ಎಲ್ಲೆಯನ್ನು ಮೀರಿದ ಮನುಜನ ವಿವರಣೆಗೆ ನಿಲುಕದ ವಿಷಯಸಕ್ತಿಯೇ ಬ್ರಾ(Brahman is beyond the senses, beyond the mind, beyond intelligence, beyond imagination)ಹ್ಮಿ. ಈ ತತ್ವದ ತಳಹದಿಯ ಮೇಲೆ ಬ್ರಹ್ಮ ಅಥವಾ ಬ್ರಾಹ್ಮಣ ಬಗ್ಗೆ ಸ್ವಲ್ಪ ತಿಳಿಯೋಣ...ಬ್ರಾಹ್ಮಣನು ಭೌದ್ದಿಕ ಜಗತ್ತಿನಲ್ಲಿ ಆತ್ಮ ಜ್ಞ್ಯಾನವನ್ನು ಪಡೆದವನು, ಸತ್ ಚಿತ್ ಆನಂದವನ್ನು ಪಡೆದವನು,ಎಲ್ಲರಲ್ಲೂ ಒಂದಾಗಿರುವವನು.

ಮುಖ್ಯವಾಗಿ ಇದರ ಅರ್ಥ...ಎಲ್ಲ ವೇದ, ಉಪನಿಷದ್, ಶಾಸ್ತ್ರ , ಧರ್ಮ ಗ್ರಂಥಗಳನ್ನು ಅರೆದುಕುಡಿದು....ತಿಳಿದು ಕೊಂಡಾಗಲೇ ನಮ್ಮ ಜೀವನದ ನಿಜವಾದ ಬಣ್ಣ ಬಯಲಾಗುವುದು.

ನಿಜವಾದ ಬಣ್ಣವೇ??? ಕೆಳಗೆ ಓದೀ:

ಎಲ್ಲರಲ್ಲೂ ಒಳ್ಳೆಯದನ್ನು ನೋಡುವುದು, ಒಳ್ಳೆಯದನ್ನು ಮಾಡುವವನು...ಸಹಾನು ಬೂತಿಯನ್ನು ಉಳ್ಳವನು...ಜಾತಿಬೇದಗಳನ್ನು ಮಾಡದವನು...ಎಲ್ಲರನ್ನು ಶೇಷ್ಟರನ್ನಾಗಿ ಕಾಣುವವನು, ಶೇಷ್ಟರನ್ನಾಗಿ ಮಾಡುವವನು...ನಾವೆಲ್ಲ ಒಂದೇ ಎಂಬ ಬಾವನೆಯನ್ನು ಉಂಟುಮಾಡುವವನು...ಹೇಳಿದಂತೆ ನುಡಿಯುವವನು....ಸನ್ಮಾರ್ಗವನ್ನು ತೋರಿಸುವವನು...ವೇದ, ಉಪನಿಷದ್, ಶಾಸ್ತ್ರ , ಧರ್ಮಗ್ರಂಥಗಳನ್ನೂ ಸರಿಳಿಕರಿಸಿ ಜನರಿಗೆ ತಿಳಿಹೇಳುವವನು....ಹೀಗೆ ಅವನ ಭೌದ್ದಿಕ ವೈಶಾಲ್ಯತೆಯನ್ನು ಜನಾಂಗದ ಒಳಿತಿಗಾಗಿ ತನ್ನ ಜೀವನವನ್ನು ಸವೆಸುವವನು...ಹೀಗೆ ಹಲಾವಾರು ಸದ್ಗುಣಗಳನ್ನು ಬೆಳಸಿಕೊಂಡವನೇ ನಿಜವಾದ ಬ್ರಾಹ್ಮಣ!!!

ಬ್ರಾಹ್ಮಣ ಒಂದು ಜಾತಿಯೇ ಇಲ್ಲವೇ or ಇದು ಒಂದು ತತ್ವವೇ ??? ನೋಡೋಣ

ಮನುಷತ್ವಕಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ...ಮನುಷ್ಯನೇ ಇಲ್ಲವೆಂದರೆ ಇನ್ನೆಲ್ಲಿಯ ಧರ್ಮ, ಜಾತಿ , ನೀತಿ...ಧರ್ಮವೆಂಬುದು ನಾವು ನಡೆಯುವ ಒಂದು ಹಾದಿ, ಜೀವಿಸುವ ಒಂದು ವಿಧಾನ ಅಷ್ಟೇ...ಇದರ ಅವಿಚ್ಛಿನ್ನ, ಸಾತ್ವಿಕತೆಯೇ...ಒಳ್ಳೆಯ ದಾರಿಯಲ್ಲಿ ನಡೆದು ಕೊಂಡು ಹೋಗುವ ಮಾರ್ಗ. ಧರ್ಮವನ್ನು ಬರೆದವನು ಮನುಷ್ಯನೇ...ಅದರಂತೆ ನಡೆಯುವವನೆ ಮನುಷ್ಯನೇ...ಸರಿಯಾದ ರೀತಿಯಲ್ಲಿ ಧರ್ಮ ಗ್ರಂಥಗಳನ್ನು ತಿಳಿಯದೆ,ಸ್ವಂತಿಕೆಗಾಗಿ ಜನರನ್ನು ದಿಕ್ಕು ತಪ್ಪಿಸುವ ಅರೆಬರೆ ಜಿರ್ಣಿಸಿ ಕೊಂಡ ಜ್ಞ್ಯಾನವನ್ನು ಪ್ರಚುರ ಪಡಿಸಿ ಅಜ್ಞ್ಯಾನದ ಘೋರಾಂದಕಾರವನ್ನು ಎಲ್ಲಡೆ ಪಸರಿಸಿದ ಜನರಿಂದಲೇ "ಬ್ರಾಹ್ಮಣ" ಎಂಬ ತತ್ವದ ನಿಜರೂಪ ಮರೆಯಾಗಿದೆ.

ಅಪ್ಪ ಬೆಳಿಸಿದ ಮರಕ್ಕೆ ನೇಣು ಹಾಕಿಕೊಳ್ಳುವುದಕ್ಕೆ ಇದು ಸತ್ ಕಾಲವು ಅಲ್ಲ....ನಿಜವಾದ ಅರ್ಥವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ...ನನಗೆ ಸಿಕ್ಕ ವಿಷಯಗಳನ್ನು ಕ್ರೌಡಿಕರಿಸಿ ನಿಮ್ಮ ಮುಂದೆ ಪ್ರಸ್ತಾಪಿಸಿದ್ದೇನೆ...ಇದೆ ನಿಜವಾದ ಸತ್ಯ ಇಷ್ಟವಿದ್ದಲ್ಲಿ ತಿಳಿದುಕೊಳ್ಳಬಹುದು.

ಇದು ಒಂದು ತತ್ವವೇ ಹೊರತು ಬೇರೇನೂ ಅಲ್ಲ...ಯಾರು ಬೇಕಾದರೂ ವೇದಾದಿಗ್ರಂಥಗಳನು ತಿಳಿಯಬಹುದು...ಇದಕ್ಕೆ ಮುಂಚೆ ಕಟ್ಟುನಿಟ್ಟಿನ ವಿಧಾನಗಳಿವೆ ಅದನ್ನು ಪಾಲಿಸಿದರೆ ಕಂಡಿತ ಯಾರು ಬೇಕಾದರೂ ಅರ್ಥೈಸಿಕೊಳ್ಳಬಹುದು..ತಾಳ್ಮೆ ,ಸಂಯಮ ತುಂಬ ಅವಶ್ಯಕ.

ಎಲ್ಲರು ತುಂಬ ಕಷ್ಟ ಎಂದಿದ್ದಾರೆ ಹೊರತು ಪ್ರಯತ್ನವನ್ನು ಮಾಡಿಲ್ಲ, So called ಬ್ರಾಹ್ಮಣರು ತಮಗೆ ಮಾತ್ರ ಸೀಮಿತ ಎಂಬ ಅಹಂ ಭಾವವೇ ಇಂದು ವೈದಿಕವಾದ ಜೀವನಧಾರೆಗಳು Common Peopleಗೆ ತಲುಪಿಲ್ಲ ಅಷ್ಟೇ...Common People ಕೂಡ ತಿಳಿದು ಕೊಳ್ಳುವುದಕ್ಕೆ try ಮಾಡಿಲ್ಲ...ಇಬ್ಬರ ತಪ್ಪು ಇದೆ..ಇಲ್ಲಿ ಎಲ್ಲರೂ ತಪ್ಪು ಮಾಡಿದ್ದಾರೆ ಎಂದರೆ ತಪ್ಪಾಗುತ್ತದೆ...ಕ್ಷಮಿಸಿ!!!

ಇದರಿಂದ ಸಮಾಜದ ಜೀವನದ ಏರುಪೇರು ಬಂದಾಗ, ಎದುರಿಸಲಾಗದೆ ದುಶ್ಚಟಗಳಿಗೆ ಬಲಿಯಾಗಿ ಆಘೋರಶಕ್ತಿಗಳ ಬೆನ್ನಟ್ಟಿ, ಜೀವನದಲ್ಲಿ ಲವಲವಿಕೆಗಳನ್ನೂ ಕಳೆದು ಕೊಂಡು ಮುಡಾಥ್ಮರಂತೆ ವರ್ತಿಸುತ್ತಾರೆ...ಇದೆ ಸಮಾಜಿಕ ಕಟ್ಟಲೇಗಾಳಗಿ ಬಹಿಷ್ಕಾರಗಾಳಗುತ್ತವೆ.

ಜಾತಿಗಳ ವಿಷಯಕ್ಕೆ ಬಂದಾಗ....ವ್ಯವಸಾಯ ಮಾಡುವವರು ಗುಂಪುಗಳಾಗಿ ಅದರಲ್ಲೇ ತಲ್ಲಿನರಾಗಿ ಪಂಗಡಗಳಾಗಿ ಅಲ್ಲೇ ತಮ್ಮ ಮುಕ್ಯಸ್ತರನ್ನಾಗಿ ಮಾಡಿ...ಮುಕ್ಯಸ್ತ ಎಂದರೆ ಊರಿನ ಮುಕ್ಯಸ್ತ, ಧಣಿ (Land Lords), ಊರ ದೊರೆ ಎಂದಾಯಿತು...ಉಳ್ಳವರು ಸ್ವಹಿತಾಸಕ್ತಿಯಿಂದ ತಮ್ಮದೇ ಕಿಮ್ಮತ್ತು ನಡೆಯಬೇಕೆಂಬ ಅಹಂನಿಂದ ತಲೆಮಾರುಗಳಿಂದ ಈ ವಿಧಾನವನ್ನು ನಡೆಸಿಕೊಂಡು ಬಂದರು...ವ್ಯವಸಾಯಎಂಬುದು ಕೆಲಸಮಾಡುವ proffesionನ ಹೆಸರಾಯಿತು ಅಷ್ಟೇ....ನಂತರ ಅದನ್ನೇ ಜಾತಿಯೆಂದು ಪ್ರತಿಬಿಂಬಿಸಲಾಯಿತು

....ಹೀಗೆ ನಾನಾ ಜಾತಿಗಳಾಗಿ, ಹಿಂದೂ ಧರ್ಮದಲ್ಲಿ ಜಾತಿಗಳ ಸೆಲೆಯಾಯಿತು...ಇಲ್ಲಿ ಧರ್ಮದ ಹಿನ್ನಲೆಯನ್ನೇ ಬುಡಮೇಲು ಮಾಡಿ, ಧರ್ಮವನ್ನೆ ಹಿಗಳೆಯುವಂತೆ....ಮಾಡಿದ್ದು ಜನಗಳೇ ಹೊರತು, ಧರ್ಮವಲ್ಲ...ಹೇಳೆಬೇಕೆಂದರೆ ಜಾತಿಯೇ ಇಲ್ಲ ಇದು ನಮ್ಮ ಮಾನಸಿಕ ನಿವೇದನೆ ಅಷ್ಟೇ...ಅಪ್ಪ ಬೆಳೆಸಿದ ಮರಕ್ಕೆ ನೇಣು ಹಾಕಿಕೊಂಡಂತೆ ಅಲ್ಲವೇ???....So break the rules, enjoy the realm of universe.... Brahman itself a universal concept...ಯಾರು ಬೇಕಾದರೂ ಅನುಸರಿಸಬಹುದು...ಇದು ಜಾತಿಯಲ್ಲ ಪಂಗಡವಲ್ಲ...ವಿಶ್ವ ಮಾನವ ತತ್ವ...ಹೇಗೆಂದರೆ ವೈಜ್ಞ್ಯಾನಿಕಾವಾಗಿ ಬೆಳಸಿದ ಕ್ರಿಯೆಗಳನ್ನು ಮಾಡಿದಾಗಲೇ ನಮಗೆ ವೇದಾದಿಗ್ರಂಥಗಳನು ತಿಳಿಯುವುದು, ಇಲ್ಲವೆಂದರೆ ಎಲ್ಲವೂ ಕಷ್ಟ ಅಲ್ಲವೇ???..ಇಷ್ಟಪಟ್ಟು ಕಷ್ಟಪಟ್ಟು ಕಲಿತವರೇ ವಿಶ್ವಮಾನವರಾದರು...ಇಷ್ಟವಿಲ್ಲದವರು ನಿಮಗೆ ಗೊತ್ತಲ್ಲ...ಜಾತಿ ಜಾತಿ ಎಂದು ರಂಪ ರಾಮಾಯಣ...ಮಾಡಿಕೊಂಡರು...ಮಾಡಿಕೊಳ್ಳುತ್ತಿದ್ದಾರೆ???

ಸರ್ವೋಜನೋ ಸುಖಿನೋ ಭವಂತು - ಇಂತಿ ನಿಮ್ಮ ಪ್ರೀತಿಯ ಹುಡುಗ

ಇದು ನನ್ನ ವೀವೆಚನೆ ಅಷ್ಟೇ ಯಾರಮೇಲು Blame ಮಾಡಿಲ್ಲ, ತಪ್ಪನ್ನು ಹೊರೆಸಿಲ್ಲ...ತಪ್ಪಿದಲ್ಲಿ ಕ್ಷಮಿಸಿ...
0 COMMENTS

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet