ಜನಗಳು ಅಥವಾ ಜನನಾಯಕರ ಉದ್ದೇಶ ಸರಿಯೋ ಅಥವಾ ತಪ್ಪೋ ?

ಜನಗಳು ಅಥವಾ ಜನನಾಯಕರ ಉದ್ದೇಶ ಸರಿಯೋ ಅಥವಾ ತಪ್ಪೋ ?

ಬರಹ

ನಾನು ಈ ಲೇಖನ ಸೇರಿಸಿರುವುದು ನಮ್ಮ ಆತ್ಮಿಯ ಕರ್ನಾಟಕದ ಜನತೆಗಾಗಲಿ ಆಥವಾ ಜನನಾಯಕರಿಗಾಗಲಿ ನೋವುನುಂಟು ಮಾಡಬೇಕೆನ್ನುವ ಉದ್ದೇಶ ಖಂಡಿತ ನನ್ನದ್ದಲ್ಲ.

ಈಗ ವಿಷಯಕ್ಕೆ ಬರೋಣ,ನಾನು ತೆಗೆದುಕೊಂಡಿರುವ ವಿಷಯ ಉಪಚುಣಾವಣೆ ಬಗ್ಗೆ ನಾನು ಮತ್ತೆ ನನ್ನ ಗೆಳೆಯ ಚಿಂತನೆ ಮಾಡಿದ ವಿಷಯನ ನನ್ನ ಸಂಪದದ ಆತ್ಮಿಯ ಗೆಳೆಯರ ಜೊತೆ
ಅಂಚಿಕೊಳ್ಳಬೇಕು ಆಂಥ ಅನಿಸಿತು ಅದಕ್ಕೆ ಬರೆದ್ದಿದ್ದೆನೆ.

ಈಗ ನಮ್ಮ ಕರ್ನಾಟಕನ ಬಿ.ಜೆ.ಪಿ ಸರ್ಕಾರ ಆಳುತ್ತಾ ಇದೆ . ಆಗ ನಡೆದ ಚುಣಾವಣೆಯಲ್ಲಿ ನಮ್ಮ ಕರ್ನಾಟಕದ ಎಲ್ಲಾ ಕ್ಷೇತ್ರಾ ಗಳಲ್ಲಿ ನಮಗೆ ಒಳ್ಲೆಯದನ್ನೇ ಮಾಡುತ್ತಾರೆ ಅನ್ನು ನಂಬಿಕೆಯನ್ನ ಇಟ್ಟುಕೊಂಡು ನಮಗೆ ಬೇಕಾದ ಜನಪ್ರತಿನಿದಿಗಳನ್ನ ಆರಿಸಿ ಕಳಿಸಿದ್ವಿ.

ಆಗ ನಂಬಿಕೆಗೆ ಆಬದ್ದರಾದವರು ಆಥವಾ ಅವರ ನಂಬಿಕೆಗೆ ಅವರ ಪಕ್ಷ ನಂಬಿಕೆ ಉಳಿಸಿಕೊಳ್ಳಲಿಲ್ಲವೋ ಗೊತ್ತಿಲ್ಲ. ಅದಕ್ಕೆ ಅವರಲ್ಲಿ ಕೆಲವರು ಮಂಗಗಳ ತರಹ ಒಂದು ಮರದಿಂದ ಒಂದು ಮರಕ್ಕೆ ಹಾರೋ ರೀತಿ ಅವರು ಕೂಡ ಪಕ್ಷದಿಂದ ಒಂದು ಪಕ್ಷಕ್ಕೆ ಹಾರಿದ್ದರು ಪಾಪ ಅವರು ತಾನೆ ಏನು ಮಾಡುತ್ತಾರೆ "ಮಂಗನಿಂದ ಮಾನವ" ಅನ್ನೋ ಗಾದೆನಾ ಅವರು ಇನ್ನು ಮರೆತಿಲ್ಲ ಅಂತ ಅನಿಸ್ಸುತ್ತೆ ,ಅಲ್ಲರಯ್ಯಾ ೫ ವರುಷಕ್ಕೊಮ್ಮೆ ನಡೆಯೊ ಚುಣಾವಣೆ ಯಲ್ಲಿ ಆಗೋ ಖರ್ಚುನ್ನ ನಮ್ಮಗಳ ತಲೆ ಮೇಲೆ ಹಾಕುತೀರ ಅದನ್ನೆ ನಾವು ಜಿರ್ಣಿಸಿಕ್ಕೊಳ್ಳ ಬೇಕಾದರೆ ನಮಗೆ ತುಂಬ ದಿನ ಬೇಕು ಅದು ಸಾಲದು ಅಂತ ತಿಂಗಳಿಗೊ ಆಥವಾ ವರುಷಕ್ಕೊ ಪುನಃ ನೀವು ನೀವೂ ನಾಯಿಗಳ ತರಹ ಕಿತ್ತಾಡಿಕೊಂಡು ಆ ಪಕ್ಷ ಸರಿಯಿಲ್ಲ ಈ ಪಕ್ಷ ಸರಿಯಿಲ್ಲ ಅವರನ್ನ ಅಧಿಕಾರದಿಂದ ಕೆಳಗಿಳಿಸಿ ಅಂತ ನೀವೂ ಹೇಳೋದು ಅದೇ ರೀತಿ ಅವರು ನೀವೂ ಅಧಿಕಾರಕ್ಕೆ ಬಂದಾಗ ಅವರು ನಿಮ್ಮಲೆ ಗೂಬೆ ಕೂರಿಸಿ ಪುನಃ ಚುಣಾವಣೆ ನಡೆಸಿ ಮತ್ತೆ ನಮ್ಮಗಳ ತಲೆನೆ ಬೊಳಿಸೊದು ಇದು ಯಾವ ನ್ಯಾಯನಯ್ಯ? ಇರಲಿ ಈ ವಿಷಯ ನಿಮಗೆಲ್ಲಾ ಗೊತ್ತಿರೊದೆ ಈಗ ನಮ್ಮ ವಿಷಯಕ್ಕೆ ಬರೋಣ

ನಾನು ಮೇಲೆ ಹೆಳಿರುವಾ ಹಾಗೆ ೮ ಕ್ಷೇತ್ರಾ ಗಳಲ್ಲಿ ಉಪಚುಣಾವಣೆ ನಡೆಯಿತು ಅದರಲ್ಲಿ ಕೆಲವರು ಮಂಗಗಳ ತರಹ ಮತ್ತೆ ಕೆಲವರು ನಿದನರಾದರು. ಆ ೮ ಕ್ಷೇತ್ರಾ ಗಳಲ್ಲಿ ನಮ್ಮ ಕ್ಷೇತ್ರಾ ನೂ (ಮದ್ದೂರು) ಒಂದು ಮತ್ತೆ ನಾನು ಬರಿಯುತ್ತಾ ಇರೋದು ನಮ್ಮ ಕ್ಶೇತ್ರಾದ ಬಗ್ಗೆ.

ನಮ್ಮ ಕ್ಶೇತ್ರಾದ ಹಿಂದಿನ ಎಂ.ಎಲ್ .ಎ ಆದ ಮಾನ್ಯ ಶ್ರಿ ಸಿದ್ದರಾಜು ಅವರು ಗತರಾದ್ರು ಪಾಪ ಅತ ಒಳ್ಳೆ ಮನುಷ್ಯನೆ , ಬಡವರ ಬಂಧುವಾಗಿದ್ದ ಅದಕ್ಕಾಗಿ ಅವನು ಜನಗಳಿಗೆ ಒಳ್ಳೆಯ ಕೆಲಸನ ಮಾಡುತ್ತಾನೆ ಅಂಥ ನಾವು ಮೊದಲ ಸಲ ಗೆಲಿಸಿದ್ದಿವಿ. ಏನು ಮಾಡುವುದು ಒಂದು ಗಾದೆ ಇದೆಯಲ್ಲ "ತಾನು ಒಂದು ಬಗೆದರೆ ದೈವ ಒಂದು ಬಗೆಯಿತು" ಅಂಥ ನಮ್ಮ ಜನಗಳೆ ಅಂದು ಕೊಂಡಿದ್ದು ಒಂದು ಅದು ಆಗಿದ್ದೆ ಒಂದು . ದೊಡ್ಡವರು ಒಂದು ಮುತ್ತಿನಂಥ ಮಾತು ಹೆಳುತ್ತಾರೆ ಎಂಥ ಒಳ್ಳೆ ಮನುಷ್ಯನು ರಾಜಕೀಯಕ್ಕೆ ಹೋದ ಮ್ಯಾಲೆ ಹಾಳಗಿಲ್ಲ ಅಂಥ ಅಂದರೆ ಅದು ರಾಜಕೀಯಕ್ಕೆ ಅವಮಾನ ಅಂಥ ಅದು ಇರಲಿ ಬಿಡಿ ನಮಗೆ ಬ್ಯಾಡ

ಸಿದ್ದರಾಜು ಸತ್ತ ಮ್ಯಾಲೆ ನಮ್ಮ ಕ್ಶೇತ್ರಾಕ್ಕೆ ದಳದವರು ಯಾರು ಸಿಕ್ಕಿಲ್ಲ ಅಂಥ ಜನಗಳ ಸಿಂಪತಿಗೆ ಸಿದ್ದರಾಜು ಅವರ ಹೆಂಡತಿನೆ ಕೂರಿಸಿಬಿಟ್ಟರು ಮತ್ತೆ ಇನ್ನೊಂದೆಡೆ (ಮಧುಗಿರಿಗೆ) ಕುಮಾರಸ್ವಾಮಿ ಯವರ ಹೆಂಡತಿ ನೆ ನಿಲ್ಲಿಸಿದ್ದರು ಇದು ಯಾವ ರೀತಿ ಅಂಥನೆ ಗೋತ್ತಿಲ್ಲ .ಇದೇ ರೀತಿ ಹಿಂದೆ ನಮ್ಮ ಪಕ್ಕದ ಕ್ಷೆತ್ರಾಕ್ಕೆ ಮಾನ್ಯ ಶ್ರಿ ಕೆ.ಎನ್. ನಾಗೇಗೌಡ ರು ತೀರಿ ಹೋದಾಗ ಅವರ ಸ್ಥಾನಕ್ಕೆ ಅವರ ಹೆಂಡತಿ ಶ್ರಿಮತಿ ನಾಗಮಣಿ ತಂದರು ಅವರು ಕೂಡ ಸಿಂಪತಿ ಮ್ಯಾಲೆ ಗೆದ್ದಿದ್ದರು ಆಗ ಅವರ ಅಧಿಕಾರ ಅವದಿ ಮುಗಿಯುವದೊರೊಳಗೆ ಜನಗಳಿಗೆ ಅವರ ಮುಖದ ಪರಿಚಯವೆ ಮರೆತೊಯಿತು ಅದೆ ರೀತಿ ಮತ್ತೆ ಈ ಸಾರಿ ತಪ್ಪು ಮಾಡಿದ್ದಾರೆ ಈ ಉದ್ದೆಶ ಜನಗಳದೊ ಅಧವಾ ಜನನಾಯಕರದೊ ಗೊತ್ತಿಲ್ಲ.....

ಅಲ್ಲ ರೀ ಒಬ್ಬ ಸರಕಾರಿ ನೌಕರ ಅವನ ಅವದಿಗೆ ಮುಂಚೆನೆ ತೀರಿಹೋದರೆ ಆ ಕೆಲಸನ ಅವನ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಕೊಡೋದು ನ್ಯಾಯವೇ ಸರಿ.ಅದು ಯಾವ ರೀತಿ ಆ ಸತ್ತ ವ್ಯಕ್ತಿ ಆರ್ಹತೆಗೆ ಆ ಕುಟುಂಬದಲ್ಲಿ ಇದ್ದರೆ ಅಥವಾ ಇಲ್ಲಾದ್ದಿದ್ದ ಪಕ್ಷದಲ್ಲಿ ಆ ಕುಟುಂಬದಲ್ಲಿ ಸೇರಿಕ್ಕೊಳ್ಳುವ ವ್ಯಕ್ತಿಯ ವಿದ್ಯಾರ್ಹತೆಗೆ ತಕ್ಕಂತೆ ಕೊಡುತ್ತಾ ಇರುವುದು ಸರಿಯಾಗಿದೆ

ಆದರೆ ಇದೆ ರೀತಿ ನಮ್ಮ ಸರಕಾರದ ಆಡಳಿತ ನಡೆಸುವವರ ಹತ್ತಿರ ಇಲ್ಲ ಏಕೆ? ಜನರ ಹತ್ತಿರ ಸಿಂಪತಿಗಾಗಿ ಅವನ ಸತ್ತರೆ ಅವರ ಕುಟುಂಬದ ಸದಸ್ಯನೋಬ್ಬನಿಗೆ ಕೂಟ್ಟು ಪಕ್ಷ ಗೆದ್ದುಬಿಡುತ್ತೇ.ಗೆದ್ದ ಮ್ಯಾಲೆ ಅವನಿಗೆ ಆಡಳಿತ ನಡೆಸೊಕೆ ಬರಲ್ಲ ಏಕೆಂದರೆ ಅದೇನೊ ಹೆಳುತ್ತಾರೆಲ್ಲ " ನಾಯಿ ತಗೆದುಕೊಂಡು ಹೋಗಿ ಉಪ್ಪರಿಗೆ ಮ್ಯಾಲೆ ಕೂರಿಸಿದ್ದರೆ ಅದೇನೋ ನೋಡಿ ಎದ್ದು ಹೋಯಿತ್ತಂತೆ" .ಒಂದು ವೇಳೆ ಅವನು ಸಮರ್ಧನೆ ಆಗಿದ್ದರೆ ಸರಿ .ಆ ಅವನು ಆಗಿದ್ದರು ಅವನ ಕೈ ಯಲ್ಲಿ ಏನು ಇರಲ್ಲ ಬಿಡಿ ಇದ್ದರು ಅವನ ಚುಟ್ಟು ಆ ಪಕ್ಷದ ಮುಖಂಡನ ಕೈ ಯಲ್ಲಿರುತ್ತೆ ಅಲ್ಲವಾ.

ನಮ್ಮ ಸರಕಾರದ ಆಡಳಿತ ನಡೆಸೋರ ವಿದ್ಯಾರ್ಹತೆ ಹೇಗಿರುತ್ತೆ ಅಂದರೆ ಮೆಡಿಕಲ್ ಅಥವಾ ಹೆಲ್ತ್ ಬಗ್ಗೆ ಗೊತ್ತಿರದವನ ಹೆಲ್ತ್ ಮಿನಿಸ್ಟ್ ರ್ ಮತ್ತು ಇತರೆ ಪದವಿಗಳಾದ ಹೊಮ್,ಕಾನೂನು, ಹಾಗೆ ಯಾಕೆ ಸಿ.ಎಂ. ಪದವಿ ಕೂಡ ನಾನು ಈ ಮಾತನ್ನು ಹೇಳಿದ್ದು ಸಾಮಾನ್ಯವಾಗಿ ಅಷ್ಟೆ.

ನಮ್ಮದು ಪ್ರಜಾಪ್ರಬುತ್ವ ರಾಷ್ತ್ರ ಅಂದರೆ ಪ್ರಜೆ ಗಳಿಂದ,ಪ್ರಜೆಗಳಿಗಾಗಿ,ಪ್ರಜೆಗಳಿಗೋಸ್ಕರ ಇರುವಂದದ್ದು ದೇಶದ ಎಲ್ಲಾ ಜನಗಳು ಅಧಿಕಾರ ನಡೆಸುವುದರಲ್ಲಿ ಅರ್ಥ ಇಲ್ಲ ಅಂಧ ನಾಯಕರುಗಳನ್ನ ಮಾಡಿಕೊಡಿದ್ದಿವೀ ಆದರೆ ಆ ನಾಯಕರುಗಳಿಗೆ ದೇಶ ಆಳೋಕೇ ಅನುಭವ ಇದೆ ನಾನು ಒಪ್ಪಿಕೂಳ್ಳುತೆನೆ ಆದೇ ತರಹ ಅವನಿಗೆ ಬೇಕಾದ ವಿದ್ಯಾರ್ಹತೆ ಕೂಡ ಇರಬೇಕು ಅನ್ನುವುದು ನನ್ನ ಬಾವನೆ.

ಆ ನಾಯಕನ ಸ್ಥಾನಕ್ಕೆ ನಿಂತು ಕೊಳ್ಳುವುದಕ್ಕೆ ಪ್ರತಿಯೂಬ್ಬ ಭಾರತಿಯ ನಾಗರಿಕನಿಗೆ ಹಕ್ಕಿದೆ ಆದರಲಿ ಸಮರ್ಥರು ನಿಂತುಕೊಳ್ಳುತ್ತಾರೆ ಅಸಮರ್ಥರು ಒಪ್ಪಿಕ್ಕೊಳ್ಳುತ್ತಾರೆ ಈಗಿದೆ ನಮ್ಮ ಸಮಾಜ

ಕೊನೆಯಲ್ಲಿ ಒಂದು ಮಾತು ಮಾನ್ಯ ನಾಯಕರೆ ನಿವೂ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಮೊದಲೂ ಆ ಸ್ಥಾನಕ್ಕೆ ನಾನು ಸೂಕ್ತನೇ ಅನ್ನೊದನ್ನ ಅರಿತುಕ್ಕೊಳ್ಳಿ ,ಸುಮ್ಮನೆ ಹಣ ಸಂಪಾದನೆಗೊ ಅಥವಾ ನಿವೂ ಸಂಪಾದಿಸಿದ ಹಣ ಉಳಿಸಿಕೋಳ್ಳುವುದಕ್ಕ್ಕೊ ಸೇರಿ ನಮ್ಮಂಥ ಮುಗ್ಧ ಜನಗಳನ್ನ ಗೊಳಾಡಿಸಬೇಡಿ..

ಇಂತಿ ನಿಮ್ಮ ಗೆಳೆಯ

ಮಧುಸೂದನ್ ಗೌಡ

ಜೈ ಕರ್ನಾಟಕ ಮಾತೆ
ಸಿರಿ ಕನ್ನಡಂ ಏಳ್ಗೆ
ಸಿರಿ ಕನ್ನಡಂ ಬಾಳ್ಗೆ