ಜೇಡ ಜೇಡ ಎಂದು ಹೀಗಳೆಯಬೇಡ

ಜೇಡ ಜೇಡ ಎಂದು ಹೀಗಳೆಯಬೇಡ

ಬರಹ

ಈ ಕೂಡ ಕೊಟ್ಟಿರುವ ಜೇಡದ ಚಿತ್ರ ನಾನು ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯ ಶ್ರೀ ಉದ್ಭವ ಕಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ತೆಗೆದದ್ದು. ಈ ಜಾತಿಯ ಜೇಡವು ಬಲೆ ನೇಯುವುದಿಲ್ಲ. ಗೋಡೆ ಹಾಗು ಗಿಡ ಮರಗಳ ಬಿರುಕುಗಳಲ್ಲಿ ಮತ್ತು ಗೋಡೆಗೆ ನೇತು ಹಾಕಿದ ಫೋಟೋಗಳ ಹಿಂದೆ ಹೀಗೆ ಕತ್ತಲ ಸ್ಥಳಗಳಲ್ಲಿ ಹುಟ್ಟಿ ಬೆಳೆಯುತ್ತವೆ. ಗೋಡೆಯ ಮೇಲೆ ಕುಳಿತ ಸೊಳ್ಳೆ, ನೊಣ ಮುಂತಾದ ಕ್ರಿಮಿ ಕೀಟಗಳನ್ನು ಮೇಲಿಂದ ಗಬಕ್ಕೆಂದು ಎರಗಿ ಹಿಡಿದು, ಜೊಲ್ಲು ಸುರಿಸಿ, ಹೊಟ್ಟೆಗೆ ಸೇರಿಸಿಕೊಳ್ಳುತ್ತದೆ. ನಾವು ಹತ್ತಿರ ಹೋದರೂ, ಕ್ಯಾಮರಾ ಬೆಳಕು ಮೇಲೆ ಬಿದ್ದರೂ ಅದಕ್ಕೆ ಯಾವುದೇ ರೀತಿಯ ಎಗ್ಗಿಲ್ಲದೆ, ತನ್ನ ಪಾಡಿಗೆ ತಾನು ತನ್ನ ಕಾರ್ಯ ನಿರತವಾಗಿರುತ್ತದೆ. ಈ ಜೇಡದ ಜಾತಿ ಕುಲಗಳ ಬಗ್ಗೆ ನನಗೇನೂ ತಿಳಿದಿಲ್ಲ.
ಧನ್ಯವಾದಗಳು,
ಎ.ವಿ. ನಾಗರಾಜು