ಆಟೋ ಸೇವೆ ಮತ್ತು ಓಡಾಟ
ಪ್ರಿಯ ಗೆಳೆಯರೆ,
ಬಹಳ ದಿನಗಳಿಂದ ನಾನು ಬೆಂಗಳೂರಿನಲ್ಲಿ ಓಡಾಡುವ ಆಟೋಗಳ ಬಗ್ಗೆ ಒಂದು ವಿಷಯ ನಿಮ್ಮ ಜೊತೆ ಚರ್ಚಿಸಬೇಕು ಅಂದುಕೊಂಡಿದ್ದೆ.ನಾನು ಬೈಕ್ ನಲ್ಲಿ ಹೋಗುವಾಗ ನನ್ನ ಮುಂದೆ ಹೋಗುತ್ತಿರುವ ಆಟೋವೊಂದು ಯಾವುದೇ ಸೂಚನೆ ಇಲ್ಲದೆ ಭರ್ರನೆ ಎಡಗಡೆಗೆ ತಿರುಗಿತು.ನಾನು ತತ್ ಕ್ಷಣ ಬ್ರೇಕ್ ಹಾಕಿ ಹೇಗೋ ಸಂಭಾಳಿಕೊಂಡು ಬೈಕ್ ನಿಲ್ಲಿಸಿ,ಆಟೋದವನಿಗೆ "ಯಾಕ್ರಿ ಸಿಗ್ನಲ್ ಕೊಡದೆ ಹಾಗೆ ತಿರುಗಿಸಿದ್ರಿ" ಅಂತ ಕೇಳಿದ್ರೆ ನನ್ನೇ ದಬಾಯಿಸಿದ "ಏನ್ ಮುಚ್ಕೊಂಡು ಬೈಕ್ ಓಡ್ಸು ಜಾಸ್ತಿ ಮಾತಡ್ಬೇಡ, ನೀನೇ ನೋಡ್ಕೊಂಡು ಬೈಕ್ ಓಡ್ಸಬೇಕು" ಅಂದ..
ನಾನು ನನ್ನ ಮಡದಿ ಹಿಂದೆ ಕೂತಿದ್ದರಿಂದ ಯಾಕಪ್ಪ ರಗಳೆ ಅಂತ ಸುಮ್ಮನೆ ಬೈಕ್ ಸ್ಟಾರ್ಟ್ ಮಾಡ್ಕೊಂಡು ಅಲ್ಲಿಂದ ಹೊರಟೆ.ಆದ್ರೆ ಮನಸಿನಲ್ಲಿ ನಡೆದ ಘಟನೆ ಬಗ್ಗೆ ಸ್ವಲ್ಪ ಬೇಜಾರಿತ್ತು.ಹಾಗೆಯೇ ನನ್ನ ಮನಸಿನಲ್ಲಿ ಕಾಡುವ ಪ್ರಶ್ನೆಗಳು.."ಈ ಆಟೊದವರಿಗೆ ಹೇಳುವವರು ಕೇಳುವವರು ಯಾರೂ ಇಲ್ವ?"(ಕೆಲವರನ್ನು ಬಿಟ್ಟು ಯಾಕೆಂದರೆ ಕೆಲವರು ಮಾತ್ರ ಸರಿಯಾಗಿ
ಸಿಗ್ನಲ್ ನಿಯಮಗಳನ್ನು ಪಾಲಿಸುತ್ತಾರೆ).ಪೋಲಿಸರು ಆಟೋದವರಿಗೆ ಏನನ್ನು ಕೇಳುವುದಿಲ್ಲ.ಏಕೋ ಏನೋ ಗೊತ್ತಿಲ್ಲ ಇದುವರೆಗೂ ಸಿಗ್ನಲ್ ಪಾಲಿಸದ ಆಟೋದವರಿಗೆ ದಂಡ ಹಾಕಿದ್ದು ನಾನು ನೋಡಿಯೇ ಇಲ್ಲ.ಆಟೋಗಳು ಇರುವದು ಕಷ್ಟದಲ್ಲಿದ್ದವರಿಗೆ,ಬೇರೆ ಯಾವುದೇ ವಾಹನಗಳ ಸೇವೆ ಸ್ಥಗಿತಗೊಂಡಾಗ,ತುರ್ತು ಪರಿಸ್ಥಿತಿಗಳಲ್ಲಿ ಜನರ ನೆರವಿಗೆ ಬರುವುದು ಆಟೊಗಳು, ಅಂತ ನಾನು ಅಂದುಕೋಂಡಿದ್ದೇನೆ.ಆದರೆ ಬೇಕಂತಲೆ ಇಂತಹ ಪರಿಸ್ಥಿತಿಗಳಲ್ಲಿ ಕೆಲವು ಆಟೊದವರು ಆಟೊ ಸೇವೆ ಕೇಳಿದರೆ ಹೆಚ್ಚಿಗೆ ದುಡ್ಡು ಕೇಳ್ತಾರೆ.."ಆ ಏರಿಯಾಗೆ ಬರೋದಿಲ್ಲ ಸರ್,ಮರಳಿ ಬರಲು ಪ್ಯಾಸೆಂಜರ್ ಸಿಗೋದಿಲ್ಲ,ಬರಲೇಬೇಕೆಂದರೆ ಹೆಚ್ಚಿಗೆ ಆಟೊಫೇರ್ ಕೊಡ್ಬೆಕು" ಅಂತಾರೆ.ಅದೂ ಹೊಗ್ಲಿ ಅಂತ ಬಿಟ್ರೆ ಯರ್ರಾಬಿರ್ರಿ ವಾಹನ ಓಡಿಸುವರ ಪಟ್ಟಿಗೆ ಖಾಸಗಿ ಟ್ಯಾಕ್ಸಿ ಚಾಲಕರೂ ಸೇರಿಕೊಂಡಿದ್ದಾರೆ.ಇದಕ್ಕೆ ಕೊನೆ ಎಂದು?ಈ ರೀತಿಯ ಆಟೊ ಚಾಲನೆಯಿಂದ ಆಗುವ ಅನಾಹುತಗಳ ಬಗ್ಗೆ ಒಂದು ಉದಾಹಣೆ ಕೊಡುತ್ತೇನೆ.ಒಂದು ನಾನು ಆಫೀಸ್ ಗೆ ಹೋಗುವಾಗ ನನ್ನ ಮುಂದೆ ಹೋಗುತ್ತಿರುವ ಆಟೋವೊಂದು ಅದರ ಮುಂದೆ ಹೋಗುತ್ತಿರುವ ವಾಹನವೊಂದನ್ನು ಹಿಂದೆ ಹಾಕಲು ಪ್ರಯತ್ನಿಸುತ್ತಿರುವಾಗ ಎದುರುಗಡೆಯಿಂದ ಬರುವ ಬಸ್ಸಿಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನಲ್ಲಿ ತಿರುಗಿ ನಿಂತಿತು.ಹತ್ತಿರ ಹೋಗಿ ನೋಡಿದರೆ ಆಟೊದಲ್ಲಿದ್ದ ಒಬ್ಬಳು ಹೆಂಗಸು ಮತ್ತು ಅವಳ ಎರಡು ಮಕ್ಕಳು ಗಾಯಗೊಂಡು ನೆಲದ ಮೇಲೆ ಬಿದ್ದಿದ್ದರು.ಆಟೊದವನು ಸಹಿತ.ಸದ್ಯಕ್ಕೆ ಪ್ರಾಣ ಹಾನಿಯೇನು ಆಗಿರಲಿಲ್ಲ.ತಕ್ಷಣ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಳಗಿಳಿದು ಬಂದು ಗಾಯಗೊಂದವರನ್ನು ಆಸ್ಪತ್ರೆಗೆ ಸಾಗಿಸಿದರು.ಆದರೆ ಮುಂದಾಗುವ ಹಾನಿಯನ್ನು ತಪ್ಪಿಸುವರಾರು?ಇದಕ್ಕೆ ಪರಿಹಾರವೇನು?
Comments
ಉ: ಆಟೋ ಸೇವೆ ಮತ್ತು ಓಡಾಟ