ಇನ್ನೇನಿನ್ನೇನು ?
ನೀವು ಪುರಂದರದಾಸರ 'ಹರಿದಾಸರ ಸಂಗ ದೊರಕಿತು ಎನಗೆ , ಇನ್ನೇನಿನ್ನೇನು ? ' ಹಾಡನ್ನು ಕೇಳಿದ್ದೀರಾ? . ನಾನು ಬಾಲಮುರಳಿಕೃಷ್ಣ ಅವರ ಧ್ವನಿಯಲ್ಲಿ ಕೇಳಿದ್ದೇನೆ.
ಇತ್ತೀಚೆಗೆ ನಾನು ನಮ್ಮ ಸಂಸ್ಥೆಯಲ್ಲಿ ಇಪ್ಪತ್ತು ವರ್ಷಗಳ ಸೇವೆಯನ್ನು ಪೂರ್‍ಐಸಿದೆ . ಆ ಕಾರಣದಿಂದ ನಿವೃತ್ತಿವೇತನ ( ಅದು ಎಷ್ಟೇ ಇರಲಿ , ಆ ಮಾತು ಬೇರೆ) ಸೌಲಭ್ಯಕ್ಕೆ ಹಕ್ಕುದಾರನಾದೆ . ಇದು ಒಂದು ಪ್ರಮುಖ ಮೈಲಿಗಲ್ಲೇ ಸರಿ . ಆ ಸಂತೋಷದಲ್ಲಿ ನಾನು ಹೀಗೆ ಹಾಡಿಕೊಂಡೆ.
ಇಪ್ಪತ್ತು ವರುಷ ಆಯಿತು ಸರ್ವೀಸು, ಇನ್ನೇನಿನ್ನೇನು ?
ಒಪ್ಪತ್ತು ಊಟಕ್ಕೆ ಆಯಿತು ವ್ಯವಸ್ಥೆ , ಇನ್ನೇನಿನ್ನೇನು ?
ನಿಮಗೂ ಹೀಗೆ ಯಾವಾಗಲಾದರೂ 'ಇನ್ನೇನಿನ್ನೇನು?' ಅನ್ನಿಸಿದ್ದರೆ ನಿಮಗೆ ಬೇಕಾದಂತೆ ಶಬ್ದ ಜೋಡಿಸಿ ಹಾಡಿಕೊಳ್ಳಬಹುದು! ಹಾಗೆ ಮಾಡಿದರೆ ಖಂಡಿತ ತಿಳಿಸಿ. ಶಬ್ದ ಜೋಡಣೆ , ಕಲ್ಪನೆ ನೋಡಿ ಸಂತೋಷಪಡುತ್ತೇನೆ.
Rating