ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು

ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು

ಬರಹ

ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು !

ಈ ತಿಂಗಳ ೨೪ ರಂದು ಡಾ. ರ್‍ಆಜ್ ಕುಮಾರ್ ಹುಟ್ಟಿದಹಬ್ಬ. ೭೭ ವರ್ಷಗಳು ತುಂಬಿ ೭೮ ಕ್ಕೆ ಕಾಲಿರಿಸುತ್ತಾರೆ. ಕನ್ನಡದ ಕೋಟಿ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅವರು ನಟ ರಾಜ್ ಆಗಿ ಮೆರೆದ ವರ್ಷಗಳು ಅನನ್ಯ. ಅವರೀಗ ಭೌತಿಕವಾಗಿ
ಕಾಣಿಸದಿದ್ದರೂ ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ! ಆ ಕ್ಷಣಗಳನ್ನು ಸ್ಮರಿಸಲು ಬರೆದ ಭಾವಪೂರ್ಣ 'ಶ್ರಧ್ಧಾಂಜಲಿ' ಇದು.

ಪಾರ್ಕಿನೊಳು ಕುಳಿತೆದ್ದೆ ಥಟ್ಟನು
ಲಿಯಿತು ಮನವು ಭುಗಿಲೆದ್ದು ಮಿಡಿಯಿತು
ಹೃದಯವಲ್ಲಿ ! ಏನು ಬರೆಯಲಿ ನಾನು ಸಂತಸದ 'ಸಂಪದಕೆ '?
ಬರಲೊಲ್ಲುದೇ ಏನೂ, ಕ್ಷಣ ಒಂದು ಸ್ಮರಿಸಿಕೊಂಬೆ

'ಅಣ್ಣಾವ್ರ್‍ಅ' ಸ್ಮೃತಿಯಲ್ಲಿ ಕಳೆದ ೧೨ ದಿನ
ಹೇಗೆ ಕಳೆದೆವೊ ಏನೋ ಪೇಳಿರಲ್ಲಿ,
ಅಂದು ಬುಧವಾರ, ೧೨ ನೇ ತೇದಿ ಅಣ್ಣನಗಲಿದ ದಿನವು
ಮರೆವುದೆಂತು ? ನಾಳೆ ೨೪ ಅವರುದಿಸಿದ ದಿನವು
ರಸಿಕರೆಲ್ಲರು, ಭುವಿಯ ಕಾಯುತಿಹರು

'ಕಣ್ಣಪ್ಪ' ನಿಂದ 'ಶಬ್ಧವೇಧಿಯ' ವರೆಗೆ ಬೆಳೆದು ಹೆಮ್ಮರವಾದೆ
ಅಂದಿನಾ, ಮುತ್ತುರಾಜ ಮುಗಿಲೇರಿ ತ್ರಿವಿಕ್ರಮನಾದೆ, 'ನಟರಾಜ'ನಾದೆ
ಕನ್ನಡದ 'ಸುಧೆ'ಯನ್ನು, 'ಮಧು'ವನ್ನು ಜಗಕೆಲ್ಲಾ ಉಣಿಸಿದಾ ಪರಿಯ
ಮರೆವುದೆಂತು ?

ಸರಳ ಸಜ್ಜನಿಕೆಯ ಧೃವತಾರೆ ಅಸ್ತಂಗತವಾಯಿತೈ
ಸವಿನೆನಪು ಹೃದಯದಲಿ, ಮನವೆಲ್ಲ ತುಂಬಿಹುದು
ನೀನಿಲ್ಲ ವೆಂದು ಪೇಳ್ವರಾರಿಹರಿಲ್ಲಿ ಎತ್ತ ನೋಡಿದರಲ್ಲಿ ನೀನೆ ಇರುವೆ !
ಸವಿ ನುಡಿಯ ಕೇಳುವೆವು ಕಾಣುತಿಹೆವಿಂದಿಗೂ, ಮುಂದೆಯೂ ಕಾಣುವೆವು ಟೀವಿ ಯಲ್ಲಿ !

ಮಣ್ಣಿನಾ ಮಗನೆಂದು ಹಾಡಿ ಹೇಳಿದ ನೀನು ಕನ್ನಡದಾ ಮಣ್ಣಿನಲಿ ಐಕ್ಯವಾದೇ !
ಕನ್ನಡದ ಕಣ್ಮಣಿಯು ನೀನುರುವೆ ಇಲ್ಲೆ. ನಮ್ಮ ಮನದಾಳದಲ್ಲೇ !
ಕನ್ನಡದ ಕುಲ ತಿಲಕ, ಬಂಗಾರದಾ ಮನುಶ, ನಮನ ನಿನಗೆ

ನಮಿಪೆವೆಲ್ಲರು ನಾವು ಸವಿನುಡಿಯ ಅಣ್ಣನಿಗೆ, ನಮನಗಳ ಸ್ವೀಕರಿಸಿ
ಹರೆಸು ಎಮ್ಮಾ, ನಮನಗಳ ಸ್ವೀಕರಿಸಿ ಹರೆಸು ಎಮ್ಮಾ !

(ವೆಂಕಟೇಶ) ಲಕ್ಷ್ಮೀವೆಂಕಟೇಶ.