ಸಂಪದಿಗರೆ, ನೀವೆನಂತಿರೀ?

ಸಂಪದಿಗರೆ, ನೀವೆನಂತಿರೀ?

ಬರಹ

ಸಂಪದ ಸ್ನೇಹಮಿಲನದಿಂದ ಉಲ್ಲಸಿತರಾದ ಸಂಪದಿಗರೇ, ನಿಮ್ಮ ಉತ್ಸಾಹದ ಭೇಟಿಯ ಬಗ್ಗೆ ಓದಿ ತುಂಬಾ ಖುಶಿಯಾಯಿತು. (ಹೊಟ್ಟೆಕಿಚ್ಚು ಆಯಿತು) ನಿಮ್ಮೊಟ್ಟಿಗೆ ಮುಂದಿನ ಭೇಟಿಯಲ್ಲಿಯಲ್ಲಾದರೂ ಸೇರಬೇಕೆಂಬ ಆಸೆಯಿದೆ. ಸಂಪದಿಗರಲ್ಲಿ ಮತ್ತೊಂದು ಮನವಿ. ಇದು ಕಾರ್ಯಸಾಧುವೋ ಇಲ್ಲವೋ ಎಂಬುದನ್ನು ಹರಿಪ್ರಸಾದರೇ ಹೇಳಬೇಕು. ಸಾಧ್ಯವಾದರೆ ಎಲ್ಲ ಸಂಪದಿಗರ ಹೆಸರು ಒಂದೆಡೆಯಲ್ಲಿ ಸಿಗುವಂತೆ ಮಾಡಲು ಸಾಧ್ಯವೇ? ಎಂಬುದು ನನ್ನ ಪ್ರಶ್ನೆ. ಯಾಕೆಂದರೆ

೧. ಬೇರೆ ಬೇರೆ ಆಸಕ್ತಿಯ ವ್ಯಕ್ತಿಗಳು ಸಂಪದದಲ್ಲಿ ಇದ್ದಾರೆ. ಅವರವರ ಪ್ರಾವೀಣ್ಯದ ಕ್ಷೇತ್ರಗಳ ಬಗ್ಗೆ ಇತರರು ಅವರನ್ನು ಸಂಪರ್ಕಿಸಿ ಬೇಕಾದ ಮಾಹಿತಿ ಸಲಹೆ ಪಡೆಯಬಹುದು. ಸಂಪದದಲ್ಲಿಯೇ ಆಯಾ ಕ್ಷೇತ್ರಗಳ ಕುರಿತಾದ ಚರ್ಚೆಗಳನ್ನು ಅವರು ನಿರ್ವಹಿಸಬಹುದು. ಇದರಿಂದಾಗಿ ವಿಷಯವೊಂದು ಅಧಿಕೃತೆತೆಯನ್ನು ಪಡೆಯುತ್ತದೆ. ವಿಚಾರ ವಿನಿಮಯಕ್ಕೆ ಚರ್ಚೆ ಹೇಗೂ ಇದ್ದೇ ಇರುತ್ತದೆ.

೨. ಈಗಾಗಲೇ ಸಂಪದವನ್ನು ಓದುತ್ತಿರುವ ಆದರೆ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇರುವವರನ್ನು, ಇದರಿಂದಾಗಿ ಆಸಕ್ತರು ತಮ್ಮ ಮಾಹಿತಿಯ ಅನುಕೂಲಕ್ಕಾಗಿ ಸಂಪರ್ಕಿಸಬಹುದು. ಇದರಿಂದಾಗಿ ಬರೆಹಗಾರರ ಬಳಗ ಬೆಳೆಯುತ್ತದೆ. ಗುರುತಿಸಿಕೊಳ್ಳದ ಪ್ರತಿಭಾವಂತರಿಗೆ ಸಂಪದ ವೇದಿಕೆಯಾಗುತ್ತದೆ.

೩. ಐದು ಸಾವಿರದಷ್ಟಿರುವ ಸಂಪದಿಗರಲ್ಲಿ ಬರೆಯುವವರು ಕಡಿಮೆ. ಓದುವವರೆ ಹೆಚ್ಚು. ಆದರೂ ಅಪರೂಪಕ್ಕೊಮ್ಮೆ ಬರೆಯುವವರ ಬರೆಹಗಳು ತಾಜಾತನದಿಂದ ಕೂಡಿರಬಹುದು. ಆದರೆ ಇವು ನಮಗೆ ನೇರ ಲಭ್ಯವಾಗದೇ ಓದುವ ಅವಕಾಶ ತಪ್ಪಿಹೋಗುವ ಸಾಧ್ಯತೆ ಇರುತ್ತದೆ.

೪. ಕಡೇ ಪಕ್ಷ, ಸಂಪದಿಂದ ಒಳ್ಳೆಯ ಆಸಕ್ತಿ, ಅಭಿರುಚಿಯುಳ್ಳ ಗೆಳೆಯರ ಗುಂಪನ್ನೂ ಬೆಳೆಸಬಹುದು. ಮುಖ್ಯವಾಹಿನಿಯಿಂದ ದೂರ ಇರುವ ಬರಹಗಾರರಿಗೆ ಇದೊಂದು ಉತ್ತಮ ಅವಕಾಶ ಒದಗಿಸಲಿದೆ.

ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ನೋಡುವಾಗ ಸಂಪದದಲ್ಲಿ ಸದಸ್ಯರ ಮಾಹಿತಿ ಒಂದೆಡೆ ಸಿಕ್ಕರೆ ಚೆಂದ ಎನಿಸಿತು. ಅದಕ್ಕಾಗಿ ಈ ಬರೆಹ. ನೀವು ಎನಂತೀರಿ? ಇನ್ನೊಂದು ಖುಷಿಯ ವಿಚಾರ ನಿನ್ನೆಯ ಉದಯವಾಣಿಯಲ್ಲಿ ಸಂಪದದ ಬಗ್ಗೆ ಮಾಹಿತಿ ಪ್ರಕಟವಾಗಿದೆ. ಸಾಧ್ಯವಾದಲ್ಲಿ ಕಣ್ಣಾಡಿಸಿ.