ನನ್ನವಳು ನನ್ನೊಳಗೆ

ನನ್ನವಳು ನನ್ನೊಳಗೆ

ಬರಹ

ಅದೇ ನಗು
ಬೆಳ್ದಿಂಗಳಿಳಿದು ಬಂದಂತೆ
ಎದೆಯಂಗಳದ ತುಂಬೆಲ್ಲಾ
ಹರಡಿದೆ
ತುಂಟ ಕಂಗಳ ನೋಟಕೆ
ಚಂದಿರ ಕೆಂಪಾಗಿದ್ದಾನೆ
ನಿನ್ನ ಗೀತದಿಂಪಿಗೆ
ನಾ ಸೋತಂತೆ ಅವನೂ
ಸೋತಿದ್ದಾನೆ ಮತ್ತು
ಮೌನ ತಂಪಿಗೆ ಶರಣಾಗಿದ್ದಾನೆ
ಶುಭ್ರ,ಕೋಮಲ
ಪುನೀತ,ಪಾವನ
ಚಂದ್ರಾಬ್ಧಿಯೊಳಗೆ
ಮಿಂದು ಬಾ ಗೆಳತಿ
ಶುಧ್ಧ,ಮುಗ್ಧ
ಸ್ನಿಗ್ಧ ಜ್ಯೋತ್ಸ್ನೆಯಾಗುವೆ
ಮನಸಾಗುವೆ ನನ್ನ
ಬದುಕಾಗುವೆ
ಗೆಳತಿ
ಚಂದಿರನಿಲ್ಲದ ಇರುಳ ನಾ ಬಲ್ಲೆ
ನೀನಿಲ್ಲದಿರುಳ ನಾನೊಲ್ಲೆ