ಸಂಪದಿಗರ ಸಮ್ಮಿಲನ

ಸಂಪದಿಗರ ಸಮ್ಮಿಲನ

೧೮ ಜನವರಿ ೨೦೦೯ ರಂದು ನಡೆದ ಆ ಸಮ್ಮಿಲನ
೧೮ ಜನವರಿ ೨೦೦೯ ರಂದು ನಡೆದ ಆ ಸಮ್ಮಿಲನ
ನನ್ನ ನರನಾಡಿಗಳಲಿ ತಂದಿದೆ ಹೊಸ ಸಂವಹನ

ಸಂಪದಿಗರ ಸಮ್ಮಿಲನದಲಿ ಕಳೆದ ಆ ಸಂಜೆ ಹೊತ್ತು
ಸಂಪದಿಗರ ಸಮ್ಮಿಲನದಲಿ ಕಳೆದ ಆ ಸಂಜೆ ಹೊತ್ತು
ನೆನಪಿನಲಿ ಉಳಿಯುತ್ತದೆ ನಿಜಕೂ ನನಗೆ ಯಾವತ್ತೂ

ಮೊದಲ ಭೇಟಿಯ ತವಕ ಅಲ್ಲಿ ಎಲ್ಲರ ಮನಗಳಲ್ಲಿತ್ತು
ಮೊದಲ ಭೇಟಿಯ ತವಕ ಅಲ್ಲಿ ಎಲ್ಲರ ಮನಗಳಲ್ಲಿತ್ತು
ಸಂತೃಪ್ತಿಯ ಭಾವ ಹೆಚ್ಚಿನೆಲ್ಲರ ಮುಖಗಳಲ್ಲೂ ಇತ್ತು.

ಆ ಕೂಟಕ್ಕೇ ಇದ್ದೇ ಇರಲಿಲ್ಲ ಔಪಚಾರಿಕವಾದ ವ್ಯವಸ್ಥೆ
ಆ ಕೂಟಕ್ಕೇ ಇದ್ದೇ ಇರಲಿಲ್ಲ ಔಪಚಾರಿಕವಾದ ವ್ಯವಸ್ಥೆ
ಆದರೂ ಇದ್ದಿರಲಿಲ್ಲ ನೋಡಿ ಅಲ್ಲಿ ಯಾವುದೇ ಅವ್ಯವಸ್ಥೆ.

ಹಾಗಾಗಬೇಕು ಹೀಗಾಗಬೇಕು ಎನ್ನುವ ಮಾತೇ ಇಲ್ಲ
ಹಾಗಾಗಬೇಕು ಹೀಗಾಗಬೇಕು ಎನ್ನುವ ಮಾತೇ ಇಲ್ಲ
ಅಲ್ಲಿದ್ದ ಭಾವ "ಹೇಗಾದರೂ ಸರಿ ಅಲ್ಲಿ ನಮ್ಮವರೇ ಎಲ್ಲ"

ದೂರದ ಊರಿದ ಬಂದು ಕಾಯುತ್ತಿದ್ದ ಶ್ರೀಧರ್ ಹೆಚ್ಚೋ
ದೂರದ ಊರಿದ ಬಂದು ಕಾಯುತ್ತಿದ್ದ ಶ್ರೀಧರ್ ಹೆಚ್ಚೋ
ವಯಸ್ಸಿಗೂ ಮೀರಿ ಉತ್ಸುಕರಾಗಿದ್ದ ಎಮ್ಮೆನ್ನೆಸ್ ಹೆಚ್ಚೋ

ಎಲ್ಲರಿಗೂ ಇತ್ತು ಅಲ್ಲಿ ಎಲ್ಲಾ ವಿಷಯಗಳಲ್ಲೂ ಆಸಕ್ತಿ
ಎಲ್ಲರಿಗೂ ಇತ್ತು ಅಲ್ಲಿ ಎಲ್ಲಾ ವಿಷಯಗಳಲ್ಲೂ ಆಸಕ್ತಿ
ಯಾರೂ ಬೇಸರಗೊಂಡಿಲ್ಲ ನಿನ್ನೆ ಹೊಂದಿ ನಿರಾಸಕ್ತಿ

ಎಲ್ಲರನು ಮಾತಾಡಲು ಬಿಟ್ಟಿದ್ದರೆ ಬೆಳಗಾಗಿ ಬಿಡುತ್ತಿತ್ತು
ಎಲ್ಲರನು ಮಾತಾಡಲು ಬಿಟ್ಟಿದ್ದರೆ ಬೆಳಗಾಗಿ ಬಿಡುತ್ತಿತ್ತು
ಕೆಲವರು ಅವಕಾಶ ವಂಚಿತರಾದುದಕೆ ಬೇಸರವೂ ಇತ್ತು

ನಿನ್ನೆ ಅಲ್ಲಿ Vರ ಹಾಜರಿದ್ದಿಲ್ಲಲ್ಲವೆಂಬ ಕೊರಗು ನನ್ನಲ್ಲಿತ್ತು
ನಿನ್ನೆ ಅಲ್ಲಿ Vರ ಹಾಜರಿದ್ದಿಲ್ಲಲ್ಲವೆಂಬ ಕೊರಗು ನನ್ನಲ್ಲಿತ್ತು
ಇಲ್ಲವಾದರೆ ಶಾಯರಿ ಜುಗಲಬಂದಿ ನಡೆಯಬಹುದಿತ್ತು

ಹೀಗೆಯೇ ಅಗಾಗ ಆಗುತ್ತಿರಬೇಕು some ಮಿಲನ
ಹೀಗೆಯೇ ಅಗಾಗ ಆಗುತ್ತಿರಬೇಕು some ಮಿಲನ
ಎನ್ನುವುದಷ್ಟನ್ನೇ ಹೇಳುತ್ತಿತ್ತು ಅಂದು ಎಲ್ಲರ ಮನ.

ಮುಂದಿನ ಬಾರಿ ನಾವು ಹಾಕಿದರೆ ಇಂತಹ ಯೋಜನೆ
ಮುಂದಿನ ಬಾರಿ ನಾವು ಹಾಕಿದರೆ ಇಂತಹ ಯೋಜನೆ
ಶುರುಮಾಡಿ ಬಿಡಬೇಕು ಕಾರ್ಯಕ್ರಮ ಬೇಗ ಮುಂಜಾನೆ

ಎಲ್ಲ ಸಂಪದಿಗರಿಗೂ ಕೊಟ್ಟು ಬಿಟ್ಟು ವಿಫುಲ ಅವಕಾಶ
ಎಲ್ಲ ಸಂಪದಿಗರಿಗೂ ಕೊಟ್ಟು ಬಿಟ್ಟು ವಿಫುಲ ಅವಕಾಶ
ಕಲಾಭಿವ್ಯಕ್ತಿಯಿಂದ ಎಲ್ಲ ಪಡುವಂತಾಗಲಿ ಸಂತೋಷ
-ಆಸು ಹೆಗ್ಡೆ
"ಹಾಸ್ಯ ನನ್ನುಸಿರು"

Rating
No votes yet

Comments