ಸ್ಟೀವ್ ಜಾಬ್ಸ್ - ಮಿದಿಳಿನಿಂದ ತಂತ್ರಜ್ಞ್ಯಾನಿ, ಹೃದಯದಿಂದ ಕಲೆಗಾರ - 1

ಸ್ಟೀವ್ ಜಾಬ್ಸ್ - ಮಿದಿಳಿನಿಂದ ತಂತ್ರಜ್ಞ್ಯಾನಿ, ಹೃದಯದಿಂದ ಕಲೆಗಾರ - 1

ಬರಹ

ಸ್ಟೀವ್ ಜಾಬ್ಸ್ - ಮಿದಿಳಿನಿಂದ ತಂತ್ರಜ್ಞ್ಯಾನಿ, ಹೃದಯದಿಂದ ಕಲೆಗಾರ

ಸ್ಟೀವ್ ಜಾಬ್ಸ್' ಪ್ರಸಿದ್ದ ಗಣಕಯಂತ್ರ ಮತ್ತು ತಂತ್ರಾಂಶ ಉತ್ಪಾದಿಸುವ ಆಪಲ್ ಕಂಪ್ಯೂಟರ್ ಸಂಸ್ಥೆಯ ಸ್ಥಾಪಕ ಹಾಗು ಹಾಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ. ಇತ್ತೀಚೆಗೆ ಡಿಸ್ನಿ ಕಂಪೆನಿ ಪಿಕ್ಸಾರ್ ಕಂಪೆನಿಯನ್ನು ಕೊಂಡುಕೊಂಡ ನಂತರ ಸ್ಟೀವ್ ಜಾಬ್ಸ್ ಡಿಸ್ನಿಯ ಅತಿ ದೊಡ್ಡ ಪಾಲುಗಾರರಲ್ಲೊಬ್ಬರು.

ಮತ್ತೆ ಕತ್ತೆಲೆ ಸೇರಲು ತವಕ : ಇವರ ತಂದೆ ಹೈ ಸ್ಕೂಲ್, ತಾಯಿ ಕಾಲೇಜ್ ಬಿಟ್ಟವರಾಗಿದ್ದರು,ಯವ್ವನದ ವಯಸ್ಸಿನ ಸ್ಟೀವ್ ಅನೌಪಚಾರಿಕವಾಗಿ ಪಡೆದ ಮಗು. ಆದರೆ ಇವರ ಆಸೆ ಮಗನಾದರು ಪದವಿಧರ ಆಗಬೇಕೆಂದು ತೀರ್ಮಾನಿಸಿ ಮತ್ತು ಅವರ ಹಣಕಾಸು ಸ್ತಿತಿ ಕೂಡ ಉತ್ತಮವಾಗಿರಲ್ಲಿಲ್ಲದ ಕಾರಣ ದತ್ತು ಕೊಡಲು ತೀರ್ಮಾನಿಸಿದರು.

ನ್ಯಾಯವಾದಿ ದಂಪತಿಗಳಿಗೆ ದತ್ತು ಕೊಟ್ಟರು, ಆದರೆ ಗ್ರಹಚಾರ ಕಾದಿತ್ತು, ಸ್ಟೀವ್ನ ತಂದೆ ತಾಯಿಗಳು ಪದವಿಧರರಅಲ್ಲ ಎಂದು ತಿಳಿದ ಮೇಲೆ, ದತ್ತು ಪತ್ರವನ್ನು ಅನುರ್ಜಿತಗೊಳಿಸಿದರು. ನಂತರ ತಂದೆ ತಾಯಿಗಳು ಮುಂದೆ ಮಗನನ್ನು ಪದವಿಧರ ಮಾಡಲೇ ಬೇಕೆಂದು ತಿರ್ಮಾನ ಮಾಡಿದರು. ೧೭ ವರ್ಷದ ನಂತರ ಕಾಲೇಜ್ಗೆ ಸೇರಿಸಿದರು, ಆದರು ಅವರ ಯೋಗ್ಯತೆಗೆ ತಕ್ಕದಲ್ಲದ ಸ್ಟೇನ್ಸ್ಫೋರ್ಡ್ ವಿಶ್ವವಿದ್ಯಾನಿಲಯ ಸೇರಿಕೊಂಡರು, ಜೀವಮಾನದ ದುಡಿಮೆಯನ್ನು ಕಳೆಯಲು ಮನಸ್ಸು ಒಪ್ಪಲಿಲ್ಲ,ಕಾಲೇಜಿನಲ್ಲಿ ಕಲಿಯುವ ಅವಶ್ಯಕತೆ ಕಾಣಲಿಲ್ಲ ೬ ತಿಂಗಳ ನಂತರ ಕಾಲೇಜ್ ಬಿಟ್ಟರು. ದೇಶದಲ್ಲೇ ಪ್ರಸಿದ್ದವಾದ ಕ್ಯಾಲಿಗಪ್ರಿ ಕಲಿಸುವ ಸ್ತಳವಾಗಿತ್ತು, ಅಲ್ಲೇ ಕಲಿತ ಕ್ಯಾಲಿಗಪ್ರಿ ಮುಂದೆ ಒಂದು ಅವಿಷ್ಕಾರವೇ ನಡೆಯುವಂತಾಯಿತು

ಅನಂತರ ಏನು ಮಾಡಬೇಕಂತ ತಿಳಿಯದೆ ತೊಲಾಳಡಿದರು, ಇಷ್ಟವಲ್ಲದ ತರಗತಿಗೆ ಕೂಳಿತು ಕೊಳ್ಳಲು ಆಗದೆ, ಹೊರನಡೆದರು, ಮತ್ತೆ ಮನ ಇಚ್ಚಿಸುವ ಸ್ವತಂತ್ರ ದಕ್ಕಿತು. ಪೌಷ್ಟಿಕಾಂಶ ಬರಿತ ಒಂದು ಹೊತ್ತಿನ ಊಟಕ್ಕಾಗಿ ಒದ್ದಾಡುತಿದ್ದ ಸಮಯವದು ವಾಸವಿದ್ದ ಸ್ಥಳದಿಂದ ೧೭ ಕಿಲೋಮೀಟರ್ರ್ ದೂರವಿದ್ದ ಶ್ರೀ ಕೃಷ್ಣ ದೇವಸ್ತಾನಕ್ಕೆ ಪ್ರತಿ ಭಾನುವಾರ ಸಿಗುತ್ತಿದ್ದ ಪೌಷ್ಟಿಕಾಂಶ ಬರಿತ ಊಟಕ್ಕಾಗಿ ನಡೆದೇ ಹೋಗುತಿದ್ದರಂತೆ. ದೇವಸ್ತಾನದ ಆದ್ಯಾತ್ಮಿಕ ಗುರುವಿನ ದರ್ಶನದಿಂದ ಜೀವನದ ಸತ್ಯವನ್ನು ಮತ್ತು ಆದರ ವಿರುದ್ದ ನಡೆಯಬಾರದು ಎಂಬ ಸತ್ಯವನ್ನು ಮನಗೊಂಡರಂತೆ.

೨೦ ವಯಸ್ಸಿನಲ್ಲಿ ಆಪಲ್ ಕಂಪನಿಯನ್ನು ಶುರುಮಾಡಲು, ಸ್ಟೀವ್ಗೆ ಕತ್ತಲೆಯೇ ದಾರಿಯಾಯಿತು. ಅಂದು ಕಾಲೇಜ್ ನಿಂದ ಹೊರನಡೆಯದೆ ಇದ್ದಿದ್ದರೆ, ಕ್ಯಾಲಿಗ್ರಫಿ ಕಲಿಯದೇ ಇದ್ದಿದ್ದರೆ, ಇಂದು ವಯಕ್ತಿಕ ಗಣಕಯಂತ್ರದಲ್ಲಿ(ಪರ್ಸನಲ್ ಕಂಪ್ಯೂಟರ್) ಆದ್ಬುತವಾದ ಟೈಪೋಗ್ರಫಿ ಸೇರಿಸಲು ಸಾದ್ಯವೇ ಆಗುತಿರಲ್ಲಿಲ್ಲ.

ಕತ್ತಲೆಯಲ್ಲೇ ನನಗೆ ವಯಕ್ತಿಕ ಗಣಕಯಂತ್ರ(ಪರ್ಸನಲ್ ಕಂಪ್ಯೂಟರ್) ಉಪಾಯ ಕಂಡಿದ್ದು, ಅದ್ದನ್ನೇ ಮೈಕ್ರೋಸಾಫ್ಟ್ ಕಾಪಿ ಮಾಡಿ ವಿಶ್ವದ್ಯಾಂತ ಹೆಸರು ಮಾಡಿದ್ದು.

ಕಾಲೇಜಿನ ದಿನದಲ್ಲಿ ಕಲಿತಿದ್ದ ಕ್ಯಾಲಿಗ್ರಫಿ, ಅವರಿಗೆ ವಯಕ್ತಿಕ ಗಣಕಯಂತ್ರ(ಪರ್ಸನಲ್ ಕಂಪ್ಯೂಟರ್) ವಿನ್ಯಾಸಕ್ಕೆ ಸಹಾಯವಾಯಿತು.

"ಕತ್ತಲನ್ನು ಸೇರಲು ಭವಿಷ್ಯದ ಅವಶ್ಯಕತೆ ಇಲ್ಲ, ನಾನು ಬಂದ ಹಿನ್ನೋಟವೆ ನನಗೆ ಸಹಕಾರಿಯಾಯಿತು. ಮುಖ್ಯವಾಗಿ ನನ್ನ ಹೃದಯವನ್ನು ಕೇಳುವ, ಅದರಂತೆ ನಡೆಯುವ ದೈರ್ಯ ನನಗೆ ನನ್ನ ಕತ್ತಲಿನ ನಡಿಗೆಯೇ ದಾರಿದೀಪವಾಯಿತು" - ಸ್ಟೀವ್ ಜಾಬ್

"ಕತ್ತಲೆಯಲ್ಲಿ ನಡೆದ ದಿನಗಳು.....ಕಷ್ಟ ಮತ್ತು ಒಳ್ಳೆಯ ಸಮಯಗಳಲ್ಲಿ ಜೀವನವನ್ನು ಹೆದರಿಸುವ ಶಕ್ತಿಯನ್ನು, ನೆಟ್ಟ ಗುರಿಗೆ, ದಿಟ್ಟ ಹೆಜ್ಜೆಯನ್ನು ಇಡುವಂತೆ ಪ್ರೇರೇಪಿಸುತ್ತದೆ" - ಸ್ಟೀವ್ ಜಾಬ್

ಮುಂದಿನ ಲೇಖನ - ಸ್ಟೀವ್ ಜಬ್ಸ್ನ್ ಜೀವನದ ಪ್ರೀತಿ ಮತ್ತು ನಷ್ಟ