ಅಂತೂ ಮೊಬೈಲ್ ನಲ್ಲಿ ಕನ್ನಡ ಬಂತು.......

ಅಂತೂ ಮೊಬೈಲ್ ನಲ್ಲಿ ಕನ್ನಡ ಬಂತು.......

ನಾನು ಇಷ್ಟು ದಿನ ಸ್ಯಾಮ್ಸಂಗ್ ಮೊಬೈಲ್ ಉಪಯೋಗಿಸ್ತಾಇದ್ದೆ. ಅದ್ರಲ್ಲಿ ಕನ್ನಡ interface ಇತ್ತು ಮತ್ತೆ ಸಂದೇಶವನ್ನೂ ಓದಬಹುದಿತ್ತು. ನಿನ್ನೆ ನನ್ನ ಸ್ನೇಹಿತನಿಂದ ನೋಕಿಯ n76 ತಂದೆ. ಅದರಲ್ಲಿ ಕನ್ನಡ ಬೆಂಬಲ ಇರಲಿಲ್ಲ. ಕನ್ನಡ ಸಂದೇಶವನ್ನು ಓದಲಿಕ್ಕೆ ಆಗ್ತಾ ಇರಲಿಲ್ಲ. ಏನ್ಮಾಡ್ ಬೇಕು ಅಂತ ಯೋಚನೆ ಮಾಡ್ತಾ ಇದ್ದೆ. ಹಾಗೆ, ಅಂತರ್ಜಾಲದಲ್ಲಿ ಶೋಧನೆಮಾಡಿದಾಗ, ಸಿಕ್ತು ನೋಡಿ ಈತಂತ್ರಾಂಶ. ಮರುಭೂಮಿನಲ್ಲಿ ಓಯಸಿಸ್ ಸಿಕ್ಕ ಹಾಗೆ. ಡೌನ್ ಲೋಡ್ ಮಾಡಿ, ಅನುಸ್ಥಾಪನೆನೂ ಮಾಡಿದೆ. ಅದರಲ್ಲಿ ಕನ್ನಡ ಪದಕೋಶನೂ ಇದೆ. ಅನುಸ್ಥಾಪನೆ ಮಾಡಿದ ಮೇಲೆ, ತಂತ್ರಾಂಶವನ್ನು ಸಕ್ರಿಯ ಮಾಡಿಕೊಂಡರಾಯಿತು. ಸಕ್ರಿಯ ಮಾಡಿಕೊಳ್ಳೊದಿಕ್ಕೆ , ಒಂದು ಸಂದೇಶವನ್ನು ಕಳಿಸಿದರಾಯಿತು, ಸಂದೇಶಕ್ಕೆ normal ಚಾರ್ಜ್ ಆಗುತ್ತೆ ಅಷ್ಟೆ.
ಛೆ.. ಇಷ್ಟೆಲ್ಲ ಆಗಿ ತಂತ್ರಾಂಶದ ಹೆಸರನ್ನೇ ಹೇಳಲಿಲ್ಲ ಅಲ್ವ.
ತಂತ್ರಾಂಶದ ಹೆಸರು IndiSMS 2.0 by Eterno Infotech Private Limited, Basavangudi.
ಇದರಲ್ಲಿ ಭಾರತದ ೯ ಭಾಷೆಯ ಬೆಂಬಲ ಇದೆ, ಹೆಚ್ಚಿನ ವಿವರಗಳಿಗೆ ಸಂಸ್ಥೆಯ ತಾಣಕ್ಕೆ ಭೇಟಿ ನೀಡಿ.
ತಂತ್ರಾಂಶವನ್ನು ಇಳಿಸಿಕೊ ಳ್ಳಲು ಕೊಂಡಿ: http://www.eternoinfotech.com/support.html#downloads,
http://www.eternoinfotech.com/

Rating
No votes yet

Comments