ಕವನ ಬರೆವ ಹವ್ಯಾಸವುಳ್ಳವರಿಗಾಗಿ
ಸದ್ಯದಲ್ಲಿ ಜನರು ಬರೆಯುತ್ತಿರುವ ಕವನಗಳ ಕುರಿತು ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ ಒಂದು ಕವಿತೆ ಇದೆ, ಸುಮತೀಂದ್ರ ನಾಡಿಗರದು . ಕವನ ಬರೆವ ಹವ್ಯಾಸವುಳ್ಳವರು ತಪ್ಪದೇ ಗಮನಿಸಬೇಕು . ಅಲ್ಲಿಯ ಕೆಲವು ಸಾಲುಗಳು ಹೀಗಿವೆ .
ಗಳಿಗೆಗಳಿಗೆಯೂ ಹುಟ್ಟುತ್ತಾವೆ ಅಸಂಖ್ಯ ಕವಿತೆಗಳು
ಅಲ್ಪಾಯುಷಿಗಳಿದ್ದಲ್ಲಿ ಜನನ ಸಂಖ್ಯೆಯು ಜಾಸ್ತಿ .
ಉಪಮಾನ ರೂಪಕ, ಸಂಕೇತ, ಛಂದಸ್ಸು ಇವುಗಳಿಗೆ ಗೊತ್ತಿಲ್ಲ
ನೋಡಿ ನಕ್ಕಿರಬಹುದು , ಕುವೆಂಪು ಬೇಂದ್ರೆ ..
... ದಾವಾಗ್ನಿ ಬಡಬಾಗ್ನಿ ಎರಡೂ ಒಂದೇ, ವ್ಯತ್ಯಾಸವಿಲ್ಲ
ಶಬ್ದಗಳು ಗೊತ್ತಿವೆ , ನಮಗೆ ಭಾಷೆ ಗೊತ್ತಿಲ್ಲ .
... ನಾವು ಪತ್ರಿಕಾ ನಗರಗಳ ತೊಟ್ಟಿ ಚರಂಡಿಗಳಲ್ಲಿ
ಎಸೆಯುತ್ತಲಿದ್ದೇವೆ ಅಸಂಖ್ಯ ಕವಿತೆ ಕೂಸುಗಳನ್ನು
ಕೂಸು ಕೂಡ ಅಲ್ಲ , ಕಣ್ಣು ಕಿವಿ ತುಟಿ ಮೂಗು
ಮೂಡಿರದ ಭ್ರೂಣಗಳನ್ನು ...
ನಾನು ತಪ್ಪಿಲ್ಲದೆ ಸರಳ ಹೊಸಗನ್ನಡ ಬರೆಯಲಿಕ್ಕೆ ಬಾರದವರು ಕವಿತೆಗಳನ್ನು ಬರೆಯುವದನ್ನು ನೋಡಿದ್ದೇನೆ. ಬಹುತೇಕ ಜನ ಇನ್ನೊಬ್ಬರು ಬರೆದುದನ್ನು ಓದುವದೂ ಇಲ್ಲ! ಇಂಥ ಪರಿಸ್ಥಿತಿಯನ್ನು ಈ ಕವನ ಬಿಂಬಿಸುತ್ತದೆ.
Comments
Re: ಕವನ ಬರೆವ ಹವ್ಯಾಸವುಳ್ಳವರಿಗಾಗಿ