ಶಾಯರಿ ಜುಗಲಬಂದಿ - ೦೩

ಶಾಯರಿ ಜುಗಲಬಂದಿ - ೦೩

ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ
ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ
ನನ್ನದೆಲ್ಲವ ದೋಚಿಕೊಂಡು ಕೊನೆಗೆ ಕೊಟ್ಟಳು ಕೈಗೆ ಒಂದು ಜಿಲೇಬಿ!!
- Vರ ( Venkatesha ರಂಗಯ್ಯ )

ಜಿಲೇಬಿ ಕೊಟ್ಟ ಚೆಲುವೆ ಇರೋದ್ರಲ್ಲಿ ವಾಸಿ
ಜಿಲೇಬಿ ಕೊಟ್ಟ ಚೆಲುವೆ ಇರೋದ್ರಲ್ಲಿ ವಾಸಿ
ನನ್ನ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನೋಡಿ ಒಸಿ
-ಅರವಿಂದ್

ಹುಡುಗಿಯರ ಕೈಗೆ ಸಿಕ್ಕರೆ ನಿನ್ನ ಕ್ರೆಡಿಟ್ ಕಾರ್ಡ್
ಹುಡುಗಿಯರ ಕೈಗೆ ಸಿಕ್ಕರೆ ನಿನ್ನ ಕ್ರೆಡಿಟ್ ಕಾರ್ಡ್
ಕೊನೆಗೆ ನಿನಗೆ ಸಿಗುವುದು ಒಂದೇ ನಿಮ್ಹಾನ್ಸ್ ವಾರ್ಡ್!!!
- Vರ ( Venkatesha ರಂಗಯ್ಯ )

ಇರಬಹುದಾಗಿತ್ತೇನೊ ಮೊದಲೆ ನಿಮ್ಹಾನ್ಸ್ ವಾರ್ಡಿನಲ್ಲಿ
ಇರಬಹುದಾಗಿತ್ತೇನೊ ಮೊದಲಿ ನಿಮ್ಹಾನ್ಸ್ ವಾರ್ಡಿನಲ್ಲಿ
ಕೆಟ್ಟ ಮೇಲೆ ಬಂತು ಬುದ್ದಿ ಕ್ರೆಡಿಟ್ ಕಾರ್ಡಿನಲ್ಲಿ
-ಅರವಿಂದ್

ಹೊರ ಚೆಲುವ ಕಂಡು ಹೊಗಳಿದಿರಿ ನೀವು ಗುಲಾಬಿಯೆಂದು
ಹೊರ ಚೆಲುವ ಕಂಡು ಹೊಗಳಿದಿರಿ ನೀವು ಗುಲಾಬಿಯೆಂದು
ಅವಳಿಗೆ ಅರ್ಥವಾಯ್ತಾಗ ನೀವು ಒಳಗೆ ಖಾಲಿ ಖಾಲಿಯೆಂದು

ಮುತ್ತಿಗೆ ಒಂದು ಮುತ್ತು ಕೊಡಿ ಪ್ರೀತಿಗೆ ನಿಮ್ಮ ಪ್ರೀತಿ
ಮುತ್ತಿಗೆ ಒಂದು ಮುತ್ತು ಕೊಡಿ ಪ್ರೀತಿಗೆ ನಿಮ್ಮ ಪ್ರೀತಿ
ಕಾರ್ಡು, ಕಾಸು ಕೊಟ್ಟರೆ ಕೈಗೆ ಆಗುವುದು ಹೀಗೇ ಪಜೀತಿ
-ಆಸು ಹೆಗ್ಡೆ

ಅವಳು ಬರುವ ಮೊದಲು ಮನಸೆಲ್ಲಾ ಖಾಲಿ ಖಾಲಿ
ಅವಳು ಬರುವ ಮೊದಲು ಮನಸೆಲ್ಲಾ ಖಾಲಿ ಖಾಲಿ
ಬಂದು ಹೋದ ಮೇಲೆ ನನ್ನ ಜೇಬು ಖಾಲಿ ಖಾಲಿ

ಕಾರ್ಡು ಕಾಸು ತೋರಿಸಲಿಲ್ಲ ಗೆಳೆಯ
ಕಾರ್ಡು ಕಾಸು ತೋರಿಸಲಿಲ್ಲ ಗೆಳೆಯ
ಪ್ರೀತಿಯ ಪರಾಕಾಷ್ಠೆಯಲ್ಲಿ ಅವಳ ಒಪ್ಪಿಸಿದ್ದೆ ನನ್ನ Moneyಯ
-ಅರವಿಂದ್

ಮನ ತುಂಬಿ ಬಂದವಳ ಕಿಸಿಯೊಳಗೆ ಇಳಿಸದಿರಿ
ಮನ ತುಂಬಿ ಬಂದವಳ ಕಿಸಿಯೊಳಗೆ ಇಳಿಸದಿರಿ
ಕಿಸೆ ಖಾಲಿಯಾದರೆ ಮತ್ತೆ ನೆನೆನೆನೆದು ಮರುಗದಿರಿ

ಪ್ರೀತಿಯ ಪರಾಕಾಷ್ಠೆಯಲ್ಲಿ ನಿಮ್ಮ ತಪ್ಪಿಗೆ ನೀವು ತೆತ್ತಿದ್ದೀರಿ ಬೆಲೆ
ಪ್ರೀತಿಯ ಪರಾಕಾಷ್ಠೆಯಲ್ಲಿ ನಿಮ್ಮ ತಪ್ಪಿಗೆ ನೀವು ತೆತ್ತಿದ್ದೀರಿ ಬೆಲೆ
ಮತ್ತೇಕೆ ಈಗ ಅಳುತ್ತಿದ್ದೀರಿ ಕೆಳಗೆ ಮಾಡಿಕೊಂಡು ನಿಮ್ಮ ತಲೆ?
-ಆಸು ಹೆಗ್ಡೆ

ಕಿಸೆ ಖಾಲಿಯಾದಾಗಲೆಲ್ಲ ನೆನಪಿದೆ ನನ್ನವಳು ಕಿಸಕ್ಕನೆ ನಕ್ಕಿದ್ದು
ಕಿಸೆ ಖಾಲಿಯಾದಾಗಲೆಲ್ಲ ನೆನಪಿದೆ ನನ್ನವಳು ಕಿಸಕ್ಕನೆ ನಕ್ಕಿದ್ದು
ಖಾಲಿಯಾದ ಕಿಸೆ ನೋಡಿ ನಾನೊಬ್ಬನೆ ಅದ ನೆಕ್ಕಿದ್ದು

ಅಳುತ್ತಿಲ್ಲಾ ಗೆಳೆಯ ತಲೆ ಕೆಳಮಾಡಿ
ಅಳುತ್ತಿಲಾ ಗೆಳೆಯ ತಲೆ ಕೆಳಮಾಡಿ
ಅರಳುತ್ತಿದೆ ಮತ್ತೊಂದು ಹೂ ನನ್ನ ನೋಡಿ
-ಅರವಿಂದ್

ಶಾಯರಿಯಲಿ ಸದಾ ಗಂಭೀರವಾಗಿ ಇರಬೇಕು ಶಬ್ದಗಳ ಪ್ರಾಸ
ಶಾಯರಿಯಲಿ ಸದಾ ಗಂಭೀರವಾಗಿ ಇರಬೇಕು ಶಬ್ದಗಳ ಪ್ರಾಸ
ಅರ್ಥಹೀನವಾದರೆ ಶಾಯರಿ ಯಾರಿಗೂ ಆಗುವುದಿಲ್ಲ ಅದು ಗ್ರಾಸ
-ಆಸು ಹೆಗ್ಡೆ

ಕಾಸಿನಿಂದ ಪಡೆದ ಪ್ರೀತಿ ಉಳಿಯೋದು ಮೂರೇ ದಿನ
ಕಾಸಿನಿಂದ ಪಡೆದ ಪ್ರೀತಿ ಉಳಿಯೋದು ಮೂರೇ ದಿನ
ಪ್ರೀತಿಯಿಂದ ಗಳಿಸಿದ ಕಾಸು ಉಳಿಯುವುದು ಸಾವಿರಾರು ದಿನ !!
- Vರ ( Venkatesha ರಂಗಯ್ಯ )

ಪ್ರೀತಿ ತರುವುದು ಬರೇ ಪ್ರೀತಿ, ಅದು ತರದು ಕಾಸು
ಪ್ರೀತಿ ತರುವುದು ಬರೇ ಪ್ರೀತಿ, ಅದು ತರದು ಕಾಸು
ಕಷ್ಟದಲಿ ಬೆವರಿಳಿಸಿದರೆ ಸಿಗುವುದು ಶಾಶ್ವತ ಕಾಸು
-ಆಸು ಹೆಗ್ಡೆ

ಪ್ರೀತಿಯಿಂದ ಗಳಿಸಿದ ಕಾಸು ಉಳಿಯುವುದೇನು ಸಾವಿರಾರು ದಿನ
ಪ್ರೀತಿಯಿಂದ ಗಳಿಸಿದ ಕಾಸು ಉಳಿಯುವುದೇನು ಸಾವಿರಾರು ದಿನ
ಅದಕ್ಕೆ ಇರಬೇಕು ನನ್ನವಳು ನನ್ನೊಡನಿದ್ದದ್ದು ಕೇವಲ್ ಮೂನ್ನೂರ ಅರವತ್ತ್ಯೆದು ದಿನ
-ಅರವಿಂದ್

ಕಾಸು ಗಳಿಸುವ ಪ್ರೀತಿ ಅದು ಪ್ರೀತಿಯಲ್ಲ ಪ್ರೀತಿಯ ಸೋಗು
ಕಾಸು ಗಳಿಸುವ ಪ್ರೀತಿ ಅದು ಪ್ರೀತಿಯಲ್ಲ ಪ್ರೀತಿಯ ಸೋಗು
ನನಗೇನು, ಪ್ರೀತಿಯೆಂದು ನಂಬಿ ಹೀಗೆಯೇ ಮೋಸ ಹೋಗು
-ಆಸು ಹೆಗ್ಡೆ

ಪ್ರೀತಿಯ ಅನ್ವರ್ಥ ಹುಡುಗಿ ಅಲ್ಲ ಗೆಳೆಯ
ಪ್ರೀತಿಯ ಅನ್ವರ್ಥ ಹುಡುಗಿ ಅಲ್ಲ ಗೆಳೆಯ
ಮುಕ್ತ ಮನಸಿಂದ ನೀ ಪ್ರೀತಿಸೋದು ನಿನಗೆ ಸಿಗುತ್ತೆ ತಿಳಿಯ

ಕಾಸಿಗೂ ಪ್ರೀತಿಗೂ ಸಂಬಂಧ ಇದೆ ನೋಡಿ
ಕಾಸಿಗೂ ಪ್ರೀತಿಗೂ ಸಂಬಂಧ ಇದೆ ನೋಡಿ
ಕಾಸು ಒಂದು ಕುದುರೆ, ಪ್ರೀತಿ ನಮ್ಮ ಜೀವನ ಗಾಡಿ
- Vರ ( Venkatesha ರಂಗಯ್ಯ )

ಪ್ರೀತಿಯ ಜೀವನ ಗಾಡಿಗೆ ಕಾಸಿನ ಕುದುರೆಯೇ
ಪ್ರೀತಿಯ ಜೀವನ ಗಾಡಿಗೆ ಕಾಸಿನ ಕುದುರೆಯೇ
ಕಾಸಿಲ್ಲದಿದ್ದರೂ ಚಿಂತಿಲ್ಲ ಬೇಕಾಗಿದ್ದು ಪ್ರೀತಿಯೇ

ಕಟ್ಟದಿರು ಕಾಸಿನ ಕುದುರೆ ಗೆಳೆಯ ಬಾಳಬಂಡಿಗೆ
ಕಟ್ಟದಿರು ಕಾಸಿನ ಕುದುರೆ ಗೆಳೆಯ ಬಾಳಬಂಡಿಗೆ
ಪ್ರೀತಿಯಿಂದಲಷ್ಟೇ ಬಾಳಬಹುದು ಎಲ್ಲರೊಂದಿಗೆ

ಕಾಸಿನ ಕುದುರೆ ಎಳೆವ ಗಾಡಿಯಲಿ ಬಹಳ ಮಂದಿ
ಕಾಸಿನ ಕುದುರೆ ಎಳೆವ ಗಾಡಿಯಲಿ ಬಹಳ ಮಂದಿ
ಕಾಸಿಲ್ಲದಿರೆ ಉಳಿಯುವುದು ಬರೇ ಪ್ರೀತಿಸೋ ಮಂದಿ
-ಆಸು

ಚೆನ್ನಾಗಿದೆ ನಿಮ್ಮಗಳ ಶಾಯರಿ
ಚೆನ್ನಾಗಿದೆ ನಿಮ್ಮಗಳ ಶಾಯರಿ
ಓದುತಿದ್ದರೆ ಬರೆಯಬೇಕು ಅಂತ ಅನಿಸುತಿದೆ ಓಂದು ಶಾಯರಿ
-ಮಧುಸೂದನ್ ಗೌಡ

ಪ್ರೀತಿ ಒಂದೇ ಸಾಕಾಗಿದ್ದಿದ್ದರೆ ನಾವೆಲ್ಲ ಯಾಕೆ ದುಡಿಯಬೇಕು
ಪ್ರೀತಿ ಒಂದೇ ಸಾಕಾಗಿದ್ದಿದ್ದರೆ ನಾವೆಲ್ಲ ಯಾಕೆ ದುಡಿಯಬೇಕು
ಹೃದಯಕೆ ಪ್ರೀತಿ ಬೇಕು, ಹೊಟ್ಟೆ ತುಂಬಿಸಲಿಕ್ಕೆ ಕಾಸು ಬೇಕು
ಕಾಸು ಕಣ್ಣಿಗೆ ಕಾಣಿಸುತ್ತೆ ಪ್ರೀತಿ ಮನಸನು ತಣಿಸುತ್ತೆ
ಇವೆರಡು ಸ್ನೇಹಿತರೇ ಹೊರತು ರಕ್ತ ಸಂಬಂಧಿಗಳಲ್ಲ
- Vರ ( Venkatesha ರಂಗಯ್ಯ )

ಕಾಸಿದ್ರೆ ಧರೆಯಲ್ಲೇ ಕಾಣಬಹುದು ಕೈಲಾಸ
ಕಾಸಿದ್ರೆ ಧರೆಯಲ್ಲೇ ಕಾಣಬಹುದು ಕೈಲಾಸ
ಕಾಸಿಲ್ಲಾಂದ್ರೆ ಕಣ್ ಕಣ್ ಬಿಡೋ ಹಾಗೆ ಮಾಡುತ್ತೆ ಉಪವಾಸ !!
- Vರ ( Venkatesha ರಂಗಯ್ಯ )

ಒಪ್ಪುತ್ತೇನೆ Vರಂಗಯ್ಯ ನಿಮ್ಮ ವಾದ ಮಾಡುವುದಿಲ್ಲ ಪ್ರತಿವಾದ
ಒಪ್ಪುತ್ತೇನೆ Vರಂಗಯ್ಯ ನಿಮ್ಮ ವಾದ ಮಾಡುವುದಿಲ್ಲ ಪ್ರತಿವಾದ
ಹಣ ಮೇಲೋ ಗುಣವೋ ಎನ್ನುವುದೆಂದಿಗೂ ಮುಗಿಯದ ವಾದ
-ಆಸು ಹೆಗ್ಡೆ

Rating
No votes yet

Comments