ಡಾ|| ರಾಜಕುಮಾರ್ V/S ವಜ್ರಮುನಿ

ಡಾ|| ರಾಜಕುಮಾರ್ V/S ವಜ್ರಮುನಿ

ಡಾ|| ರಾಜಕುಮಾರ್ :
ಡಾ|| ರಾಜಕುಮಾರ್ ರವರು ಹುಟ್ಟಿದ್ದು ಏಪ್ರಿಲ್ ೨೪, ೧೯೨೯ ರಲ್ಲಿ. ಇವರ ಮೊದಲ ಹೆಸರು ಮುತ್ತುರಾಜ್. ಇವರು ಸುಮಾರು ೨೦೦ ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಸಾರ್ವ ಭೌಮ ಎಂಬ ಹೆಸರನ್ನು ಪಡೆದಿದ್ದಾರೆ. ಇವರ ಕಟ್ಟ ಕಡೆಯ ಚಿತ್ರ ಶಬ್ಧವೇಧಿ. ಇವರು ನಮ್ಮನೆಲ್ಲ ಅಗಲಿ ಹೋಗಿದ್ದು, ಏಪ್ರಿಲ್ ೧೩, ೨೦೦೬ ರಂದು. ಇವರ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೊ ನಲ್ಲಿ ಇಡಲಾಗಿದೆ.

ವಜ್ರಮುನಿ:
ಇವರು ಸಹ ನಮ್ಮ ಡಾ|| ರಾಜಕುಮಾರ್ ನಟಿಸಿರುವ ಚಿತ್ರಗಳಲೆಲ್ಲ ಖಳನಾಯಕನ ಪಾತ್ರ ವಜ್ರಮುನಿ ಯವರದ್ದೆ ಆಗಿದೆ. ಇವರು ೬೨ ವರ್ಷಗಳ ಕಾಲ ನಮ್ಮ ಜೊತೆಗಿದ್ದು, ಕಿಡ್ನಿ ಯಾ ತೊಂದರೆ ಇಂದಾಗಿ ಇವರು ಸಹ ನಿಧನರಾದರು.ಇವರು ಸುಮಾರು ೩೦೦ ಚಿತ್ರಗಳಿಗಿಂತ ಹೆಚ್ಚು ಚಿತ್ರ ಗಳಲ್ಲಿ ಅಭಿನಯಿಸಿದ್ದಾರೆ.

ನಮ್ಮ ಕನ್ನಡ ಚಿತ್ರ ರಂಗದಲ್ಲಿ ಡಾ|| ರಾಜಕುಮಾರ್ ರವರು ತುಂಬಾ ಹೆಸರನ್ನು ಮಾಡಿದ ವ್ಯಕ್ತಿ. ಇವರ ಎಲ್ಲಾ ಚಿತ್ರಗಳು ತುಂಬಾ ಚೆನ್ನಾಗಿದೆ. ಒಂದಕಿಂಥ ಒಂದು ಸೂಪರ್ ಹಿಟ್ ಚಲನ ಚಿತ್ರಗಳೇ. ಇವರ ಚಿತ್ರಗಳಲ್ಲಿ ಅತಿ ಹೆಚ್ಚು ಖಳನಾಯಕನ ಪಾತ್ರಗಳನ್ನು ಮಾಡಿರುವುದು ವಜ್ರಮುನಿ. ಡಾ|| ರಾಜಕುಮಾರ್ ರವರು ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆ ಗಳಲ್ಲಿ ಅಭಿನಯಿಸಿಲ್ಲ. ಹಾಗೆಯೆ ವಜ್ರಮುನಿ ಯವರು ಕೂಡ ಯಾವುದೇ ಬೇರೆ ಭಾಷೆಯ ಚಲನಚಿತ್ರ ದಲ್ಲಿ ಅಭಿನಯಿಸಿಲ್ಲ. ಈಗ Dr.ರಾಜ್ ರವರಿಗೆ ಸಮಾಧಿಯನ್ನು ಕಟ್ಟಿಸಿ ಅದಕ್ಕೆ ಡಾ|| ರಾಜ್ ಪುಣ್ಯ ಭೂಮಿ ಎಂದು ಹೆಸರು ಪಡೆದಿದೆ. ಇವರಿಗೆ ಸಲ್ಲಿಸಬೇಕಾದ ಗೌರವ ನಮ್ಮ ಕರ್ನಾಟಕದ ಜನತೆ ಸಲ್ಲಿಸಿದ್ದಾರೆ. ಆದರೆ ವಜ್ರಮುನಿಯವರಿಗೆ ಯಾಕೆ ಸಿಕ್ಕಿಲ್ಲ? ಇವರು ಕೂಡ ಕನ್ನಡ ಚಿತ್ರ ರಂಗ ಬಿಟ್ಟು ಬೇರೆ ಯಾವ ಭಾಷೆ ಯಲ್ಲೂ ಅಭಿನಯ ಮಾಡಿಲ್ಲ. ಇವರು ಡಾ|| ರಾಜ್ ರವರ ಅತ್ಯುತ್ತಮ ಚಿತ್ರಗಳಲೆಲ್ಲ ವಜ್ರಮುನಿ ಯವರ ಖಳನಾಯಕನ ಪಾತ್ರವು ಕೂಡ ಅತ್ಯುತ್ತಮ ವಾಗಿ ಮೊಡಿ ಬಂದಿದೆ. ಒಂದು ಚಲನಚಿತ್ರ ಸೂಪರ್ ಡೂಪರ್ ಹಿಟ್ ಆಗಬೇಕು ಅಂದರೆ ನಾಯಕನ ಪಾತ್ರ ಎಷ್ಟು ಮುಖ್ಯವೋ ಹಾಗೆಯೇ ಖಳನಾಯಕನ ಪಾತ್ರವು ಅಸ್ಷ್ಟೇ ಮುಖ್ಯ.ಹಾಗೆ ಇದ್ದಲ್ಲಿ ನಾವು ನಾಯಕ ನಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀವೋ, ಖಳನಾಯಕನಿಗೂ ಅಷ್ಟೇ ಪ್ರಾಮುಖ್ಯತೆ ಕೊಡಬೇಕಲ್ಲವೇ ?

Rating
No votes yet

Comments