ಸ್ಟೀವ್ ಜಾಬ್ಸ್ ಜೀವನದ ಪ್ರೀತಿ ಮತ್ತು ನಷ್ಟ - 2

ಸ್ಟೀವ್ ಜಾಬ್ಸ್ ಜೀವನದ ಪ್ರೀತಿ ಮತ್ತು ನಷ್ಟ - 2

ಬರಹ

ಸ್ಟೀವ್ ಜಬ್ಸ್ನ್ ಜೀವನದ ಪ್ರೀತಿ ಮತ್ತು ನಷ್ಟ

ಸ್ಟೀವ್ ಜಬ್ಸ್ನ್ ಯಾವದನ್ನು ಪ್ರೀತಿಸಿದರು ಚಿಕ್ಕ ವಯಸ್ಸಿನಲ್ಲಿಯೇ ಅದನ್ನು ಪಡೆದರು, ೨೦ನೆ ವಯಸ್ಸಿನ್ನಲ್ಲಿ ಆಪಲ್ ಕಂಪ್ಯೂಟರ್'ನ ಸ್ಥಾಪನೆ ಮಾಡಿ ಕಷ್ಟ ಪಟ್ಟು ದುಡಿದರು, ಕಂಪನಿಯ ೧೦ ವರ್ಷದಲ್ಲೇ $ ೨ ಮಿಲಿಯನ್ ಕಂಪನಿ ಇಂದ $ ೨ ಬಿಲಿಯನ್ ಬೆಲೆಯುಳ್ಳ ಕಂಪನಿ ಮತ್ತು ೪೦೦೦ ಕೆಲಸಗಾರರು ಇರುವ ದೊಡ್ಡ ಮಟ್ಟಕ್ಕೆ ಕಟ್ಟಿದರು. ಅದೇ ಸಮಯದಲ್ಲಿ ಆದ್ಬುತ ಸೃಷ್ಟಿಯಾದ Macintosh ಆಪರೇಟಿಂಗ್ ಸಿಸ್ಟಂನ ಮಾರುಕಟ್ಟೆಗೆ ತಂದರು.

ಅವ್ರೆ ಸ್ಥಾಪಿಸಿದ ಕಂಪೆನಿಯಿಂದ ಅವ್ರೆನ್ನೇ ತೆಗೆದರೆ ಏನಾಗ ಬಹುದು?...ಅವರಿಗೆ ಆದೆ ಆಗಿತ್ತು . ಆಪಲ್ ಗ್ರೂಪ್ ಒಬ್ಬ ಅನುಭಾವಿ ಮತ್ತು ಬುದ್ದಿವಂತ ವ್ಯಕ್ತಿಯನ್ನು ಡೈರೆಕ್ಟರ್ಆಗಿ ನೇಮಿಸಿದರು, ಅವನು ಸ್ಟೀವ್ಗೆ ಸಹಾಯಕನಾಗಿ ಕೆಲಸ ಮಾಡಿದ ಮೊದಲ ವರ್ಷ ಕಂಪನಿ ಸಾರಿಯಾಗಿ ಲಾಭದಿಂದ ನಡೆಯಿತು. ನಂತರ ಕಂಪೆನಿಯ ನಷ್ಟದಲ್ಲಿ ಮುಳಿಗಿತ್ತು. ಅದರ ಹೊಣೆಯನ್ನು ಸ್ಟೀವ್ನ ಮೇಲೆ ಹಾಕಿ ಕಂಪನಿಯಿಂದ ಸಾರ್ವಜನಿಕರ ಮುಂದೆ ಹೊರಕಳಿಸಿದರು. ಆ ಸಮಯಕ್ಕೆ ಅವರ ವಯಸ್ಸು ೩೦ಗಿತ್ತು.

"ಈ ನೋವಿನಿಂದ ಮುಂದೆ ಏನು ಮಾಡಬೇಕೆಂದು ತೋಚದೇ, ಜೀವನದ ಗುರಿಯಿಂದ ಬೇರೆಡೆಗೆ ಹೋದಂತೆ ಅನುಭವವಾಯಿತು. ಅ ಸಮಯದ entrepreneurಗಳ ಪಟ್ಟಿಯಿಂದ ಹೊರನಡೆಯುವಂತೆ ಮಾಡಲಾಯಿತು.ಸಾರ್ವಜನಿಕರ ಮುಂದೆ ಸೋತೆಎಂಬ ನೋವು.
ಮತ್ತೆ ನಾನು ಏನು ಮಾಡಿದೆನೋ ಅದನ್ನ ಪ್ರೀತಿಸಿದೇನು, ನಾನು ಸೋತಿರಬಹುದು ಆದರೆ ಆದನ್ನ ಪ್ರೀತಿಸಿದೆನು...ನಿಧಾನವಾಗಿ ಮತ್ತೆ ನನ್ನ ಗುರಿಯೆಡೆಗೆ ನನ್ನ ಸೆಳೆತ ಶುರುವಾಯಿತು" - ಸ್ಟೀವ್ ಜಾಬ್ಸ್

ಘಟನೆಗಳು ಮತ್ತೆ ಮರುಕಳಿಸಿತು, ನನ್ನ ಯೋಚನೆಗಳಿಗೆ ಮತ್ತೆ ಜೀವ ಬಂತು, ಮತ್ತೆ ಹಿಂದೆ ನೋಡದೆ ಮತ್ತೆ ಹೊಸತನ್ನು ಮಾಡುವ ಹುಮ್ಮಸ್ಸು ಅವರನ್ನು ಮತ್ತೆ entrepreneurಆಗುವಂತೆ ಪ್ರೇರೇಪಿಸಿತು. ಆ ಸಮಯ ಮತ್ತೆ ಹೊಸ ತಂತ್ರಜ್ಞ್ಯಾನದ ಸೃಷ್ಟಿಗೆ ನಾಂದಿಯಾಯಿತು.

"ನನ್ನ ದೊಡ್ಡ ಸಾಧನೆಯು ಮತ್ತೆ ಹೊಸ ಆಲೋಚನೆಗೆ ದಾರಿಯಾಗಿ, ಹೊಸತನ್ನು ಮಾಡುವ ಹುಮ್ಮಸ್ಸು ನನ್ನಲ್ಲಿ ಮರುಕಳಿಸಿತು" - ಸ್ಟೀವ್ ಜಾಬ್ಸ್

ಮುಂದಿನ ೫ ವರುಷಗಳಲ್ಲಿ Next ತಂತ್ರಾಂಶದ ಮತ್ತು Pixaar ಎಂಬ ಅನಿಮೇಷನ್ ಕಂಪನಿಯನ್ನು ಸ್ತಾಪಿಸಿದರು,ಸುಂದರವಾದ ಹುಡುಗಿಯ ಜೊತೆ ಪ್ರೀತಿಯಾಗಿ ಮದುವೆಯಾದರು.

"Pixaar ಮೊದಲ ಅನಿಮೇಷನ್ ಚಲನಚಿತ್ರ Toystory ತಯಾರಿಸಿತು,ದೊಡ್ಡ ಮಟ್ಟಕ್ಕೆ ಹಣ ಮಾಡಿದ ಅನಿಮೇಷನ್ ಚಿತ್ರವು ಹೌದು ಮತ್ತು ಪ್ರಪಂಚದಲ್ಲೇ ಬೆಸ್ಟ್ ಅನಿಮೇಷನ್ ಸ್ಟುಡಿಯೊಆಗಿ ರೂಪಾಂತರಗೊಂಡಿತು". ಅದೃಷ್ಟ ಮತ್ತೆ ಸ್ಟೀವ್ ಜಾಬ್ಸ್ರ ಹಿಂದೆ ಬಿದ್ದಿತು, Next ಕಂಪನಿಯನ್ನು ತನ್ನದಾಗಿಸಿಕೊಂಡು ಆಪಲ್ ಮತ್ತೆ ಅವರನ್ನು ನಿರ್ದೇಶಕರಾಗಿ ನೇಮಿಸಿತು.

ಆಪಲ್ ನಲ್ಲಿ ಮತ್ತೆ ಹೊಸ ಆವಿಷ್ಕಾರದ ದಿನಗಳು ಪ್ರಾರಂಭವಾಹಿತು, ಅಲ್ಲಿ ಕಂಡು ಹಿಡಿದ ತಂತ್ರಜ್ನ್ಯಾನ ಆಪಲ್ ಮುಂದಿನ ಬೆಳೆವಣಿಗೆಗೆ ದಾರಿಯಾಯಿತು. ಆಪಲ್ ನಿಂದ ಹೊರ ಬರದಿದ್ದರೆ ಇದ್ದರೆ, ಐಪಾಡ್, ಐಫೋನ್....ಹೀಗೆ ಹೊಸ ಅವಿಷ್ಕಾರಗಳು ನಡೆಯುತ್ತಲೇ ಇರುತ್ತರಿರಲಿಲ್ಲ.("ರೋಗಿ ಯಾವ ಆಹಾರ ಬೇಕೆಂದು ವೈದ್ಯರಿಗೆ ಮಾತ್ರ ಗೊತ್ತಲ್ಲವೇ ")

"ಜೀವನದಲ್ಲಿ ಕಷ್ಟಗಳು ಬಂಡೆಯಂತೆ ಕಂಡರೂ, ನಂಬಿಕೆಯನ್ನು ಕಳೆದು ಕೊಳ್ಳಬಾರದು. ಆದನ್ನೇ ಪ್ರೀತಿಸಿದೇ, ನಂಬಿಕೆಗಳೇ ನನಗೆ ಹಿಂದಕ್ಕೆ ತಳ್ಳದೇ, ಮುನ್ನಡೆಗೆ ಶಕ್ತಿಯಾಯಿತು. ಏನು ಮಾಡುತ್ತಿರೋ ಮತ್ತು ಸಿಗೊತ್ತೋ ಪ್ರೀತಿಸಿ ಅದನ್ನೇ ಮಾಡಬೇಕು, ನಾವು ಪ್ರೀತಿಸಿದನ್ನೇ ಹುಡುಕಬೇಕು, ನಂಬಿದನ್ನೇ ಮಾಡಬೇಕು, ಇದೆ ಸತ್ಯ ಮತ್ತು ನಿತ್ಯದ ದೊಡ್ಡ ಸಾಧನೆಗೆ ಮಾರ್ಗ. ಕೆಲಸಗಳು ನಮ್ಮ ಜೀವನದ ದೊಡ್ಡ ಸಮಯವನ್ನೇ ನುಂಗುತ್ತದೆ, ಆದರೆ ನಮಗೆ ಇಷ್ಟವಾಗುವ ಕೆಲಸವೇ ನಮಗೆ ಸಂತೋಷ ಕೊಡುತ್ತದೆ. ಪ್ರೀತಿಸುವ ಕೆಲಸವೇ ಸಂತೋಷ ಕೊಡುವುದು. ಇನ್ನು ನಿಮಗೆ ಸಂತೋಷವಾಗುವ ಕೆಲಸ ಸಿಕ್ಕಿಲ್ಲವೇ, ಸೂಕ್ಷ್ಮವಾಗಿ ಹುಡುಕಿ ಕಂಡಿತ ಸಿಗುತ್ತದೆ, ನಿತ್ರಾಣ ಗೊಳ್ಳಬೇಡಿ. ಇವ್ವೆಲ್ಲವು ಹೃದಯದ ವಿಷಯ, ನೀವು ಕಂಡುಕೊಂಡಾಗ ಮಾತ್ರ ದಕ್ಕುತ್ತವೆ. ಯಾವುದೇ ಸಂಬಂಧಗಳು ವರುಷದಿಂದ ವರುಷಕ್ಕೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ ಹಾಗೆ, ಹುಡುಕುತ್ತಾ ಇರಿ, ಸುಸ್ತಾಯಿತು ಎಂದು ಸುಮ್ಮನಿರ ಬೇಡಿ, ಒಂದು ದಿನ ಖಂಡಿತ ಸಿಕ್ಕೇ ಸಿಗುತ್ತದೆ " - ಸ್ಟೀವ್ ಜಾಬ್ಸ್

ಮುಂದಿನ ಲೇಖನದಲ್ಲಿ ಸ್ಟೀವ್ ಜಾಬ್ಸ್ - ಸಾವಿನ ನಿಜವಾದ ಬಣ್ಣದ ಅರ್ಥ - ೩