ಮನಸ್ಸು

ಮನಸ್ಸು

ಬರಹ

... ಇದು ನನಗೆ ತಿಳಿಯದು.. ತಿಳಿಯುವ ಕುತೂಹಲವಿದೆ.. ನಮ್ಮ ದೇಹವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಅದಕ್ಕಿದೆ... "ಹೇಗಿರುತ್ತದೆ ಮನಸ್ಸು?" ಇದು ನನ್ನ ಮನಸ್ಸಿನಂತರಾಳದಲ್ಲಿ ಉತ್ತರಕ್ಕಾಗಿ ಕಾಯುತ್ತಿರುವ ಒಂದು ಪ್ರಶ್ನೆ. ಅದಕ್ಕೆ ನನ್ನದೆ ರೀತಿಯಲ್ಲಿ ಉತ್ತರ ಹುಡುಕಿಕೊಂಡಿದ್ದೆನೆ.. ನನಗೆ ಮನಸ್ಸಿನ ಬಗ್ಗೆ ಇರುವ ಕಲ್ಪನೆಯನ್ನು ಈ ಲೇಖನದಲ್ಲಿ ವ್ಯಕ್ತಪಡಿಸುತ್ತಿದ್ದೇನೆ...

ಒಂದು.. ದೊಡ್ದ ಹೂದೋಟ... ಅದರಲ್ಲಿ ಅರಳುವ ಪ್ರತಿಯೊಂದು ಹೂ ವಿಭಿನ್ನವಾದ ಸುವಾಸನೆ ಭೀರುತ್ತದೆ. ತೋಟದ ಮಧ್ಯದಲ್ಲೊಂದು ಬಣ್ಣದ ನೀರಿನ ಕಾರಂಜಿ. ಕಾರಂಜಿಯಲ್ಲಿ ಚಿಮ್ಮುವ ನೀರಿನ ಬಣ್ಣ, ಅರಳುವ ಹೂವಿನ ಬಣ್ಣದ ಜೊತೆಯಲ್ಲಿ ಬದಲಾಗುತ್ತಿರುತ್ತದೆ.. ತೋಟದಲ್ಲಿ ಹಾರಾಡುವ ಪಕ್ಷಿಗಳ ಸದ್ಡು.. ಇವೆಲ್ಲ, ತೋಟವನ್ನು ಸ್ವರ್ಗಕ್ಕೆ ಹೋಲಿಸುವಷ್ಟು ಸುಂದರವಾಗಿಸುತ್ತದೆ..
ನಮ್ಮ ಮನಸ್ಸು ಕೂಡ ಹೂದೋಟದ ಹಾಗೆ... ಮನಸ್ಸಿನಲ್ಲಿ ಭಾವನೆಗಳೆಂಬ ಹೂಗಳು ಹಲವಾರಿವೆ.. ಪ್ರತಿಯೊಂದು ಭಾವನೆಗಳು ವಿಭಿನ್ನ.. ಪ್ರೀತಿಯ ಭಾವನೆ.. ಸಂಕಟದ ಭಾವನೆ.. ದುಖದ ಭಾವನೆ.. ಹೀಗೆ ಹಲವಾರು ಭಾವನೆಗಳು ಅರಳುತ್ತವೆ..

ಹಾಗಾದರೆ ಕಾರಂಜಿಯನ್ನು ಯಾವುದಕ್ಕೆ ಹೋಲಿಸಲು ಸಾಧ್ಯ.. ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ರೀತಿಯನ್ನು ಕಾರಂಜಿಗೆ ಹೋಲಿಸಬಹುದು.. ದುಖವದಾಗ.. ಕಣ್ಣೀರಿನ ರೂಪದಲ್ಲಿ, ಸಂತೋಷವಾದಾಗ ನಗುವಿನ ರೂಪದಲ್ಲಿ ವ್ಯಕ್ತಪಡಿಸುತ್ತೆವೆ.. ನಮ್ಮ ಭಾವನೆಯ ಬದಲಾವಣೆಯ ಜೊತೆ ಜೊತೆಯಲಿ ಅದನ್ನು ವ್ಯಕ್ತಪಡಿಸುವ ರೀತಿ ಬದಲಾಗುತ್ತದೆ.. ಹೂದೋಟದ ಬಣ್ಣದ ನೀರಿನ ಕಾರಂಜಿಯ ಹಾಗೆ..

ಮನಸ್ಸಿನಲ್ಲಿ ಇರುವ ಹಲವಾರು ಯೋಚನೆಗಳು, ಉತ್ತರಕ್ಕಗಿ ಕಾಯುತ್ತಿರುವ ಪ್ರಶ್ನೆಗಳು, ಉತ್ತರ ಸಿಗದಿರುವ ಒಗಟುಗಳು, ಹಳೆಯ ನೆನಪುಗಳು, ಹೊಸ ಯೊಚನೆಗಳು.... ಪಕ್ಷಿಗಳಹಾಗೆ ಚಿಲಿಪಿಲಿ ಸದ್ದುಮಾಡುತ್ತಿರುತ್ತವೆ..

ಇವುಗಳ ಮಿಷ್ರಣವನ್ನು ಕಲ್ಪಿಸಿಕೊಂಡರೆ.. ಕಲ್ಪನಾಲೋಕದಿಂದ ಹೊರಬರಲು ಕಷ್ಟವಾಗುತ್ತದೆ.. ಮನಸ್ಸನ್ನು ಇಷ್ಟು ಸುಂದರವಾಗಿ ಸ್ರಿಷ್ಟಿಸಿದ ದೇವರಿಗೆ ನನ್ನ ಪ್ರಣಾಮಗಳು..

ಇದೆಲ್ಲಾ ಸರಿ.. ಆದರೆ ಇಷ್ಟು ಶಕ್ತಿಯುಳ್ಳ ಮನಸ್ಸು, ನಮ್ಮ "ದೇಹದ ಯಾವ ಭಾಗದಲ್ಲಿದೆ?"... ನೀವು.. ಕಲ್ಪನಾಲೋಕದಿಂದ ಹೊರಬಂದು ನನ್ನ ಮನಸ್ಸಿನಲ್ಲಿರುವ ಒಗಟನ್ನು ಬಿಡಿಸಲು ಸಹಾಯ ಮಾಡುವಿರಾ ಗೆಳೆಯರೆ?