ಕನ್ನಡ ಕಥೆಗಳ ಹೊಸ ಜಾಡು

ಕನ್ನಡ ಕಥೆಗಳ ಹೊಸ ಜಾಡು

ಕನ್ನಡ ಕಥೆಗಳ ಹೊಸ ಜಾಡು
-ಕಲಿಗಣನಾಥ ಗುಡದೂರು
ಕನ್ನಡದಲ್ಲಿ ಕಳೆದ ಒಂದೂವರೆ ದಶಕದಿಂದ ಕಥೆಗಳನ್ನು ಬರೆಯುತ್ತಿರುವೆ ಎಂಬ ನೆಪಕ್ಕೆ ನನ್ನಂತಾ ನಾನ್ ಅಕಾಡೆಮಿಕ್ ಪರಿಸರದ ಶುದ್ಧ ಹಳ್ಳಿಗನಾದ ನನ್ನನ್ನು 'ಕನ್ನಡ ಕಥೆಗಳ ಹೊಸ ಜಾಡು' ಕುರಿತು ಮಾತನಾಡಲು ಹಚ್ಚಿರುವ ಮಿತ್ರ ಕೆ.ರಂಗನಾಥರ ಸಾಹಸಕ್ಕೆ ಏನೆನ್ನಬೇಕೊ? ನನಗಂತೂ ಕಥೆ ಬರೆದಷ್ಟು ಕಥೆಗಳ ಬಗ್ಗೆ ಮಾತನಾಡುವುದು ಸಲೀಸಲ್ಲ ಹಾಗೂ ಮುಜುಗರದ ಸಂಗತಿ. ಕನ್ನಡ ಸಾಹಿತ್ಯ ಪ್ರಸಾರಕ ಮತ್ತು ಪರಿಚಾರಕರಾಗಿದ್ದ ಪ್ರೊ.ಚಿ.ಶ್ರೀನಿವಾಸರಾಜು ಮೇಸ್ಟ್ರು ನೆನಪಿನಲ್ಲಿ ನಡೆಯುತ್ತಿರುವ 'ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು' ಎಂಬ ಈ ವಿಚಾರ ಸಂಕಿರಣ ಬಹು ಅರ್ಥಪೂರ್ಣ. ಗುಲ್ಬರ್ಗದಲ್ಲಿ ಎಂ.ಎ. ಓದುತ್ತಿದ್ದಾಗ ಬರೆದ 'ಉಡಿಯಲ್ಲಿಯ ಉರಿ' ಕಥೆಗೆ 'ಪ್ರಜಾವಾಣಿ ದೀಪಾವಣಿ ಕಥಾ ಸ್ಪಧರ್ೆ-19997'ರಲ್ಲಿ ಪ್ರಥಮ ಬಹುಮಾನ ಬಂದಾಗ ಮೇಸ್ಟ್ರು ಗುಲ್ಬರ್ಗದಲ್ಲಿದ್ದ ಕವಿ ಜಿ.ಎನ್.ಮೋಹನ್ ಮನೆಗೆ ಬಂದಿದ್ದರು. ಅವರನ್ನು ಅತ್ಯಂತ ಸನಿಹದಿಂದ ಕಂಡು ಮಾತನಾಡಿಸಿದ್ದು, ಅವರು ನನ್ನ ಬೆನ್ತಟ್ಟಿ ಬರೆಯೆಂದು ಹಾರೈಸಿದ್ದು ನನಗಂತೂ ನೆನೆದಾಗಲೆಲ್ಲಾ ಚೈತನ್ಯ ತುಂಬುವ ಸಂಗತಿ. ಆ ವರ್ಷದ ಕಥಾ ಸ್ಪಧರ್ೆ ತೀಪರ್ುಗಾರರಿಬ್ಬರಲ್ಲಿ ಅವರೂ ಒಬ್ಬರು. ಹೀಗೆ ಸ್ವಲ್ಪ ಮಟ್ಟಿಗೆ ಮೇಸ್ಟ್ರು ಅವರ ಸಂಪರ್ಕಕ್ಕೆ ಬಂದಿದ್ದು ಮತ್ತೆ ಅವರು ಬೆಳೆಸಿದ ನನ್ನಂತಾ ನೂರಾರು ಯುವ ಲೇಖಕರ ಮಧ್ಯೆ ಕನ್ನಡ ಸಾಹಿತ್ಯ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಕ್ರೈಸ್ಟ್ ಕಾಲೇಜಿನ ಈ ಅಂಗಳದಲ್ಲಿ ನಿಂತು 'ಸಣ್ಣ ಕಥೆಗಳ ಹೊಸ ಜಾಡು' ಹುಡುಕ ಹೊರಟಿರುವುದಕ್ಕೂ ಏನೋ ಸಂಬಂಧವಿದೆ.

ಜೀವನಪ್ರೀತಿಯಂತೆಯೇ ಸಹಜವಾಗಿಯೇ ಹುಟ್ಟಿದ ಕತೆ ಇಂದು ಎಲ್ಲಾ ಸಾಹಿತ್ಯ ಪ್ರಾಕಾರಗಳಲ್ಲೂ ಹೆಚ್ಚು ಚಚರ್ಿಸಲ್ಪಡುವ ಆಸ್ವಾದಿಸಲ್ಪಡುವ ಪ್ರಾಕಾರ. ಕತೆ ಹೇಳುವ ಕಲೆ ಹೊಸದೇನಲ್ಲ. ಕತೆ ಹೇಳಲು ಮಾತು ಬರಲೇಬೇಕೆಂದೇನಿಲ್ಲ. ಮೌನದಲ್ಲೂ ನೂರಾರು ಕತೆಗಳು ಅರಳುತ್ತವೆ. ಮನುಷ್ಯನ ಭಾಷೆ, ಲಯ, ಭಾವನೆಗಳು, ಹೊಯ್ದಾಟ, ತುಡಿತ, ತುಮುಲಗಳಷ್ಟೇ ಕಥಾ ಚೌಕಟ್ಟಿಗೆ ಒಳಪಡುತ್ತವೆ ಎಂದೇನಲ್ಲ. ಪ್ರಾಣಿ ಪಕ್ಷಿ, ಗಿಡ ಮರ, ಬಳ್ಳಿ, ಒಂದು ಭೂಪ್ರದೇಶ, ಅಷ್ಟೇ ಯಾಕೆ ಕಲ್ಲು, ಕಟ್ಟಿಗೆ, ಒಂದು ಹುಲ್ಲು ಕಡ್ಡಿಯೂ ಕತೆ ಹೇಳಬಲ್ಲುದು ಎಂಬುದು ಭೂಮಿಯಷ್ಟೆ ಹಳೆಯದು. ಅನೇಕ ಸಂದರ್ಭ, ಸನ್ನಿವೇಶ, ಮಾತುಕತೆ, ಸಂಕೇತ, ಸಂಜ್ಞೆಗಳೂ ಕತೆಯ ಜೀವಂತಿಕೆಗೆ ಕುರುಹು. ಒಟ್ಟು ಸಾಹಿತ್ಯವನ್ನು ಕಾವ್ಯವೆಂದೇ ಪರಿಭಾವಿಸಿದ್ದ ಕಾಲಘಟ್ಟ ಕಳೆದು ಜಗತ್ತಿನ ಸಾಹಿತ್ಯದಲ್ಲಿ ಕತೆಗಳನ್ನು ಒಂದು ನಿಧರ್ಿಷ್ಟ ಫಾಮರ್್ ಆಗಿ ಹೆಣೆದಿದ್ದು ಮಧ್ಯಯುಗೀನ ಕಾಲಘಟ್ಟದಿಂದೀಚೆಗೆ. ಜನಪದೀಯ ರೂಪದಲ್ಲಿ ಬಹು ಶತಮಾನಗಳ ಹಿಂದೆಯೇ ರೂಪು ತಳೆದಿದ್ದ ಕನ್ನಡದ ಕಥಾ ಪರಂಪರೆ ಇವತ್ತಿನ ಕಥೆಗಳ ರೂಪು ತಳೆದಿದ್ದು 19ನೇ ಶತಮಾನದ ಆರಂಭ ಕಾಲದಿಂದ. ಪಂಜೆ ಮಂಗೇಶರಾಯ, ಮಾಸ್ತಿ ವೆಂಕಟೇಶ ಅಯ್ಯಾಂಗರ್, ಕೆರೂರು ವಾಸುದೇವಾಚಾರ್ಯ, ಎಂ.ಎನ್.ಕಾಮತ್, ಎಸ್.ಜಿ. ಶಾಸ್ತ್ರಿ ಅವರಿಂದ ಶುರುವಾದ ಸಿದ್ಧ ನೂತನ ಮಾದರಿ ಎನಿಸುವ ಕನ್ನಡ ಕಥನ ಕಲೆ ಇಹೊತ್ತಿನ ಟಿ.ಎಸ್.ಗೊರವರ್, ಶ್ವೇತಾ ಜಿ.ಎನ್., ವೀರೇಶ ಸೌದ್ರಿ,, ಸುಶೀಲಾ ಡೋಣೂರು, ಆದರ್ಶ ಕೊಂಕೋಡಿ, ಶಿ.ವಿ.ಸಿದ್ದಪ್ಪ, ರಾಜಲಕ್ಷ್ಮಿ ಕೋಡಿಬೆಟ್ಟು ಮತ್ತಿತರರವರೆಗೆ ಕನ್ನಡ ಕಥೆಗಳ ಜಾಡು ಬಹು ವಿಶಿಷ್ಟ, ವಿಭಿನ್ನ ಹಾಗೇ ನಿಗೂಢ. ಕನ್ನಡ ಕಥೆಗಳು ಜಗತ್ತಿನ ಯಾವ ಭಾಷೆಯ ಕಥೆಗಳಿಗಿಂತಲೂ ಕಡಿಮೆಯಿಲ್ಲದಂತೆ ಮೈದಳೆದಿರುವ ರೀತಿ ಬೆರುಗು ಹುಟ್ಟಿಸುವಂತದ್ದು. ಸಾಮಾಜಿಕ ಮೌಲ್ಯಗಳ ಪರಿಶೀಲನೆ, ಸುಧಾರಣೆ ಹಾಗೂ ಜೀವನಾನುಕಂಪದೊಂದಿಗೆ ಬೆಳೆದ ಕನ್ನಡ ಕಥಾ ಪರಂಪರೆ ವಿವಿಧ ಕಾಲಘಟ್ಟಗಳಲ್ಲಿ ಮನೋವಿಶ್ಲೇಷಣಾತ್ಮಕ, ಮಣ್ಣಿನ ವಾಸನೆ, ಗ್ರಾಮ್ಯ ಪರಿಸರ, ವಿಶಿಷ್ಟ ಭಾಷಾ ಪ್ರಯೋಗ, ಸಾಮಾಜಿಕ ಅಸಮಾನತೆ ಅನ್ಯಾಯದ ವಿರುದ್ಧ ಚಳವಳಿಯಾಗಿ, ತಾತ್ವಿಕ ನೆಲೆಗೆ ಮುಖಾಮುಖಿಯಾಗಿ, ಗೊಡ್ಡು ಸಂಪ್ರದಾಯಗಳಿಗೆ ಸವಾಲಾಗಿ, ಜನರ ಒಳತೋಟಿ, ವೈವಿಧ್ಯಮಯ ಬದುಕು, ಜಾಗತೀಕರಣ, ಉದಾರೀಕರಣ, ಖಾಸಗೀಕರಣ ವಿರುದ್ಧದ ಅಕ್ಷರ ರೂಪದ ಹೋರಾಟವಾಗಿ, ಕೋಮುವಾದಕ್ಕೆ ಸೆಡ್ಡುಹೊಡೆದು ಮಾನವಪ್ರೇಮ ಎತ್ತಿ ಹಿಡಿಯುವ ಅಸ್ತ್ರವಾಗಿ, ಕ್ಲೀಷೆ ಎನ್ನಿಸಬಹುದಾಗಿದ್ದ ಪ್ರೇಮ, ಕಾಮ, ಲೈಂಗಿಕತೆಯಿಂದ ಬೇರೊಂದು ನೈಜ ಪ್ರೀತಿಯ ಜಗತ್ತಿನ ಹುಡುಕಾಟವಾಗಿ, ಜನರ ದನಿಯೇ ಎಂಬಂತೆ ಕನ್ನಡ ಸಣ್ಣಕಥೆಗಳು ಬದಲಾದ ಬಗೆ ನಿಜಕ್ಕೂ ಆಶಾದಾಯಕ.

ಕನ್ನಡ ಸಣ್ಣಕಥೆ ಪ್ರಾಕಾರ ಆರಂಭದಲ್ಲಿ ಪಾಶ್ಚಾತ್ಯ ಕಥೆಗಳ ಅನುಕರಣೆ ಮಟ್ಟ ಮೀರಿ ತನ್ನದೇ ಆದ ವಿಶಿಷ್ಟ ಹಾಗೂ ಪ್ರಾದೇಶಿಕತೆಯನ್ನು ಮೈಗೂಡಿಸಿಕೊಂಡು ಬೆಳೆಯಿತು. ಸಣ್ಣಕತೆಗಳ ಬಗ್ಗೆ ಸಾಹಿತ್ಯ ಓದುಗರಲ್ಲಿ ಅಪ್ಯಾಯಮಾನ ಮೂಡಲು ಕಥೆ ಬಿಂಬಿಸಿದ ಬದುಕಿನ ಚಿತ್ರಣವೇ ಕಾರಣ. ಕಳೆದ ಶತಮಾನದುದ್ದಕ್ಕೂ ಹಲವು ಪ್ರಭಾವ, ಚಳವಳಿ, ಪಂಥಗಳನ್ನೂ ಮೀರಿ ಇಂದು ಕಥಾ ಪರಂಪರೆ ಸಾಹಿತ್ಯ ವಲಯದಲ್ಲಿ ತನ್ನದೇ ಆದ ಸ್ಪೇಸ್ ಕ್ರೀಯೇಟ್ ಮಾಡಿಕೊಂಡಿದೆ. ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕದ ಮಧ್ಯೆಯೂ ಕಥಾ ಜಗತ್ತು ಸೊರಗಿಲ್ಲ. ಆಧುನಿಕ ಮಾಧ್ಯಮಗಳ ಬಳಕೆಯೊಂದಿಗೇ ಸಣ್ಣಕಥೆ ಹೊಸ ರೂಪದೊಂದಿಗೆ ಬರೆಹದಿಂದ ಸ್ಕ್ರೀನ್ ಮೇಲೆ ಮೂಡುವ ಅಕ್ಷರಗಳಾಗಿ ರೂಪು ತಳೆದು ಜಗತ್ತಿನ ಮೂಲೆ ಮೂಲೆಯಲ್ಲೂ ಇರುವ ಕನ್ನಡ ಓದುಗರನ್ನು ಆಕಷರ್ಿಸುವಲ್ಲಿ ಯಶಸ್ವಿಯಾಗಿವೆ. ಇದಕ್ಕೆಲ್ಲಾ ಕನ್ನಡ ಸಣ್ಣಕಥೆಗಳು ಮೈಗೂಡಿಸಿಕೊಂಡ ಹೊಸತನ, ನಾವಿನ್ಯತೆ ಮಹತ್ವವಾದ ಸಂಗತಿಗಳು. ಬದಲಾಗುತ್ತಿರುವ ಜಗತ್ತಿನಲ್ಲಿ ಬದುಕು ಸಂಕೀರ್ಣಗೊಳ್ಳುತ್ತಿದೆ. ಮೌಲ್ಯಗಳು ಕುಸಿಯುತ್ತಿವೆ. ಮಾನವೀಯ ಪ್ರೀತಿ, ಪ್ರೇಮದ ಆಶಯಗಳು ಕೇವಲ ಉಪದೇಶ, ಬರೆಹಕ್ಕೆ ಸೀಮಿತವಾಗಿಯೇನೋ? ಕನ್ನಡ ಕಥೆಗಳನ್ನು ಸಾಕಿ ಸಲುಹಿದ ಪತ್ರಿಕೆಗಳು ಇತ್ತೀಚೆಗೆ ಸಣ್ಣ ಕಥೆಗಳೆಂದರೆ ಇಷ್ಟೇ ಪದಗಳಲ್ಲಿದ್ದರೆ ಮಾತ್ರ ಪ್ರಕಟಣೆಗೆ ಅವಕಾಶ ಎಂಬ ಕಟ್ಟಪ್ಪಣೆಯೂ ಕನ್ನಡ ಕಥೆಗಾರರನ್ನು ಸ್ವಲ್ಪ ಮಟ್ಟಿಗೆ ಕಂಗೆಡುವಂತೆ ಮಾಡಿದೆ. ಸಾಹಿತ್ಯ ಮತ್ತು ಓದುಗರ ಮಧ್ಯೆ ಸೇತುವೆಯಾಗಿದ್ದ ಸಾಪ್ತಾಹಿಕ ಪುರವಣಿಗಳು ಇತ್ತೀಚೆಗೆ ಸಾಹಿತ್ಯಕ್ಕಿಂತ ಓದುಗರ ಅಭಿರುಚಿಗೆ ತಕ್ಕಂತೆ ಎಂಬ ನೆಪದೊಂದಿಗೆ ಹೊಸ ವಿಷಯಗಳೆಂದು ಮುದ್ರಿಸುತ್ತಿರುವ ಅನೇಕ ಲೇಖನಗಳು ಜನರ ಮನಸೂರೆಗೊಳ್ಳುತ್ತಿಲ್ಲ ಎಂಬ ಅಪವಾದವಿದೆ. ಆದರೂ ವಿವಿಧ ಪತ್ರಿಕೆಗಳು, ಸಾಹಿತ್ಯಿಕ ಸಂಘ, ಸಂಸ್ಥೆ, ಕನ್ನಡ ಅಧ್ಯಯನ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ತು, ಪ್ರಸಾರಾಂಗ ನಡೆಸುತ್ತಿರುವ ಕಥಾ ಸ್ಪಧರ್ೆಗಳು ಹೊಸ ಕಥೆಗಾರರಿಗೆ ಉತ್ತಮ ವೇದಿಕೆಯಾಗಿವೆಯಷ್ಟೇ ಅಲ್ಲ ಕಥಾ ಪರಂಪರೆ ಸಾಗುತ್ತಿರುವ ಹೊಸ ದಿಕ್ಕಿಗೂ ಮುನ್ನುಡಿಯಾಗಿವೆ.
ಕನ್ನಡ ಸಾಹಿತ್ಯದಲ್ಲಿ ಲೇಖಕರನ್ನು ವಿಂಗಡಿಸಿದರೆ ಕಾವ್ಯದ ನಂತರ ಅತೀ ಹೆಚ್ಚು ಬರೆಹಗಾರರನ್ನು ಹೊಂದಿರುವುದು ಕಥಾ ಪ್ರಾಕಾರ. ಆಧುನಿಕ ತಂತ್ರಜ್ಞಾನ, ಹೊಸ ಆವಿಷ್ಕಾರಗಳು, ಮಾಧ್ಯಮಗಳ ಅಟಾಟೋಪದ ಮಧ್ಯೆಯೂ ಕಥೆ ಬರೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೊಸ ಕಥೆಗಾಗರರು ಹೊಸ ಆಶಯಗಳೊಂದಿಗೆ, ಜೀವನಾನುಭವ, ವೈಶಿಷ್ಟ್ಯತೆಯೊಂದಿಗೆ ತಮ್ಮದೇ ಆದ ಕಥಾ ಜಾಡು ಹಿಡಿದು ಹೊರಟಿರುವುದು ಸ್ಪಷ್ಟ. ಹಿಂದಿನ ಲೇಖಕರು ನನ್ನ ಸಹ ಲೇಖಕರ ಬರೆಹಗಳ ಓದಿನ ಬಗ್ಗೆ ತಾಳುತ್ತಿರುವ ತಾತ್ಸಾರವನ್ನೂ ತಳ್ಳಿಹಾಕುವಂತಿಲ್ಲ. ಕಥಾ ಪರಂಪರೆಯನ್ನೇ ಅರ್ಥ ಮಾಡಿಕೊಳ್ಳದೇ ಕಥಾ ರಚನೆಯಲ್ಲಿ ತೊಡಗಿದವರ ಸಂಖ್ಯೆಯೇ ಇಂದು ಹೆಚ್ಚು. ಕನ್ನಡ ಸಾಹಿತ್ಯ ಕಳೆದ ಶತಮಾನದ ಘಟ್ಟದಲ್ಲಿ ಆರಂಭಿಕ ಪುನಜ್ಜರ್ೀವನ ಕಾಲ, ನವ್ಯೋತ್ತರ, ನವ್ಯ, ಪ್ರಗತಿಶೀಲ, ಬಂಡಾಯ, ಆಧುನಿಕ ಹಂತಗಳನ್ನು ಮೀರಿ ಬೆಳೆಯುತ್ತಿದೆ ಎನ್ನಿಸಿದರೂ ಹಳೆಯ ಪ್ರಭಾವ, ಪಂಥ, ಘಟ್ಟಗಳಿಂದ ಸದ್ಯ ಬರೆಯುತ್ತಿರುವ ಲೇಖಕರು ಕರುಳು ಬಳ್ಳಿ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಹಾಕಿಕೊಂಡಿಲ್ಲ. ಇತ್ತೀಚಿಗೆ ವಿವಿಧ ಪತ್ರಿಕೆ, ವಿಶೇಷ ಸಂಚಿಕೆ ಹಾಗೂ ಸಂಕಲನಗಳನ್ನು ಗಮನಿಸದರೆ ಈ ಮಾತು ನಿಜವೆನ್ನಿಸುತ್ತದೆ. ಇಂದಿಗೂ ನವ್ಯೋತ್ತರ, ನವ್ಯದ ಆಶಯಗಳುಳ್ಳ ಕಥೆಗಳು ರಚನೆಯಾಗುತ್ತಿವೆ. ಕನ್ನಡ ಸಾಹಿತ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿದ ಬಂಡಾಯ ಸಾಹಿತ್ಯದ ಛಾಪು ಈಗಲೂ ಅನೇಕ ಕೃತಿಗಳಲ್ಲಿ ಢಾಳಾಗಿ ಕಾಣುತ್ತಿದೆ. ನವೋದಯ ಸಾಹಿತ್ಯ ಘಟ್ಟದಲ್ಲಿ ಬಂದ ಭಾರತೀಪ್ರಿಯರ 'ಮೋಚಿ' (1932), ಬೆಟಗೇರಿ ಕೃಷ್ಣಶರ್ಮ (ಆನಂದ ಕಂದ)ರ 'ಮಾಲ್ಕಿ ಹಕ್ಕು', ಕಡಂಗೊಡ್ಲು ಶಂಕರಭಟ್ಟರ 'ದುಡಿಯುವ ಮಕ್ಕಳು', ಕೊರಡ್ಕಲ್ ಶ್ರೀನಿವಾಸರ 'ಧನಿಯರ ಸತ್ಯನಾರಾಯಣ' (1938), ಕುವೆಂಪು ಬರೆದ 'ಸಾಲದ ಮಗು' (1940) ಇಂದಿಗೂ ಮಹತ್ವದ ಕಥೆಗಳಾಗಿ ಕಾಣುತ್ತವೆ. ಎಲ್ಲಾ ಪಂಥ, ಸಾಹಿತ್ಯಿಕ ಘಟ್ಟ, ಇಸಂಗಳನ್ನು ಮೀರಿ ಕಥೆಗಳು ರಿಲೆವೆಂಟ್ ಆಗಿವೆ. ಈ ಕಥೆಗಳಲ್ಲಿ ಕೆಳವರ್ಗದ ಜನರ ಸ್ವಾಭಿಮಾನ, ದಲಿತ ಸಂವೇದನೆ, ಧಣಿ ಮತ್ತು ಜೀತಗಾರರ ಸಂಬಂಧಗಳ ಕುರಿತ ಸಾಮಾಜಿಕ ಅಂಶಗಳು ಚಿತ್ರಣಗೊಂಡು ಓದುಗರ ಮನಕಲಕುವಂತಿವೆ.

ಸಾಹಿತ್ಯಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಒತ್ತಡಗಳ ಸಂಘರ್ಷದಿಂದಲೇ ಕನ್ನಡ ಕಥಾ ಪರಪಂಪರೆ ಬೆಳೆದಿದೆ. ಆರಂಭ ಕಾಲಘಟ್ಟದ ಕಥನ ಕಲೆಗೆ ಮಾನವ ಜೀವನ ಮತ್ತು ಸಮಾಜ ಕೇಂದ್ರಿತವಾದ ವಿಷಯಗಳೇ ಮೂಲದ್ರವ್ಯಗಳು. ಸಂಬಂಧಗಳ ವಾಸ್ತವ ವಿಶ್ಲೇಷಣೆ, ಆದರ್ಶ ಮಾನವನ ವ್ಯಕ್ತಿತ್ವದ ನಿಮರ್ಾಣ ಮತ್ತು ಮಾನವ ಸ್ವಭಾವದ ಮಜಲುಗಳ ಹುಡುಕಾಟವೇ ಕಥೆಗಳ ಮೂಲ ಆಶಯ. ಅಮಾನವೀಯ ವರ್ತನೆ, ಅಸಮಾನತೆ, ಸ್ವಾತಂತ್ರ್ಯ, ಏಕೀಕರಣ, ಸಾಂಸ್ಕೃತಿಕ ಪುನರುಜ್ಜೀವನ, ವಸಾಹತುಶಾಹಿಯ ಪ್ರಭಾವ, ಜಾತಿ ಪದ್ಧತಿ, ಪಾಶ್ಚಾತ್ಯ ವಿಜ್ಞಾನದ ಆಹ್ವಾನ ಮತ್ತು ಇಂಗ್ಲಿಷ್ ಶಿಕ್ಷಣದ ಸಂಭ್ರಮ ಮೊದಲಾದ ಸಂಗತಿಗಳು ಕಥೆಗಾರರಿಗೆ ಸವಾಲುಗಳಾಗಿದ್ದವು. ಸಾಂಸ್ಕೃತಿಕ ಪರಿವರ್ತನೆ, ಜಾತ್ಯತೀತ ಹಾಗೂ ಪ್ರಜಾಪ್ರಭುತ್ವದ ತಳಹದಿಯ ಸಮಾಜದ ನಿಮರ್ಾಣ, ಆಥರ್ಿಕ ಸಮಾನತೆಯನ್ನು ತರುವ ಪ್ರಕ್ರಿಯೆಗೆ ತಮ್ಮ ಕೃತಿಗಳಲ್ಲಿ ಶೋಧಿಸಬೇಕಾಗಿತ್ತು. ಹಳೆಯ ಆಶಯಗಳನ್ನು ಹೊಸ ಮೂಸೆೆಯಲ್ಲಿ ಕಾಣುವ ಮತ್ತು ಹೊಸದನ್ನು ವಿವೇಚನೆಯಿಂದ ಬಳಸುವ ಯತ್ನ ಆರಂಭಿಕ ಕಥಾ ಸಾಹಿತ್ಯ ಘಟ್ಟದಲ್ಲಿ ಪ್ರಯೋಗವಾಗಿ ನಡೆಯಿತು.

ಸ್ವಾತಂತ್ರ್ಯ ಪೂರ್ವದ ಐದು ದಶಕಗಳ ಅವಧಿಯ ಆಧುನಿಕ ಕಥಾ ಸಾಹಿತ್ಯವನ್ನು ನವೋದಯ ಮತ್ತು ಪ್ರಗತಿಶೀಲ ಎಂಬೆರೆಡು ಪರಿಕಲ್ಪನೆಗಳ ಮೂಲಕ ಗುರುತಿಸಲಾಗುತ್ತದೆ. ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಿಕಲ್ಪನೆಯ ನೆರಳಲ್ಲಿ ನವೋದಯ ಕಥಾ ಸಾಹಿತ್ಯ ಕಂಡರೆ, ನಿಧರ್ಿಷ್ಟ ಸಾಮಾಜಿಕ ಚಳವಳಿಯ ರೂಪದಲ್ಲಿ ಪ್ರಗತಿಶೀಲ ಕಥಾ ಸಾಹಿತ್ಯ ಮೈದಳೆಯಿತು. ಸಾಹಿತ್ಯ ವೈವಿಧ್ಯತೆಗೆ ನವೋದಯ ಕಥಾ ಸಾಹಿತ್ಯ ಸಾಕ್ಷಿಯಾದರೆ ದಲಿತರು ಮತ್ತು ಅಸಹಾಯಕರ ಬಗ್ಗೆ ಕರುಣೆ, ಶ್ರೀಮಂತರು ಮತ್ತು ಆಳುವ ವರ್ಗದ ಬಗ್ಗೆ ಸಿಟ್ಟಿನಿಂದ ಪ್ರಗತಿಶೀಲ ಕಥಾ ಸಾಹಿತ್ಯ ಹೆಚ್ಚು ಜೀವಂತಿಕೆಯಿಂದ ಹರಿದುಬಂತು. ಪ್ರಗತಿಶೀಲರ ಹೊಸ ಹೊಸ ಪ್ರಯೋಗಗಳ ಮಧ್ಯೆಯೂ ನವೋದಯ ಕಥಾ ಸಾಹಿತ್ಯ ಬಿಂಬಿಸಿದ ಸಾಹಿತ್ಯಿಕ ಪರಿಣಾಮಗಳು ಇಂದಿಗೂ ಕುತೂಹಲಕಾರಿಯಾಗಿವೆ. ಕನ್ನಡದ ಆದ್ಯ ಕಥೆಗಾರ ಪಂಜೆ ಮಂಗೆಶರಾಯರ ಕಥೆಗಳಲ್ಲಿ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳ ಅನಾವರಣ ನಡೆಯಿತು. ಪವಿತ್ರ ಪ್ರೇಮ, ಉಜ್ವಲ ಸಾಹಸ ಮತ್ತು ದುರಂತ ಸಾವು ಮುಂತಾದವು ಅವರ ಕಥೆಗಳ ವಸ್ತುಗಳಾದವು. ಉತ್ತರ ಕನರ್ಾಟಕ ಪ್ರತಿನಿಧಿಸುವ ಕೆರೂರು ವಾಸುದೇವಾಚಾರ್ಯ ಪ್ರಾದೇಶಿಕ ಶೈಲಿಯ ಜತೆಗೆ ಕಾಲ್ಪನಿಕ, ಐತಿಹಾಸಿಕ ಹಾಗೂ ಸಾಮಾಜಿಕವಾದ ವಸ್ತುಗಳು ಅವರಿಗೆ ಬಹುವಾಗಿ ಕಾಡಿದವು. ಕೆರೂರರ 'ಮಲ್ಲೇಶಿಯ ನಲ್ಲೆಯರು' ಈ ಆಶಯಗಳಿಗೆ ಮಾದರಿ. ಹಳ್ಳಿಯ ಬದುಕಿನ ವಿವಿಧ ನಂಬಿಕೆಗಳು, ಆಚರಣೆಗಳು, ಐತಿಹ್ಯ, ತ್ಯಾಗ ಬಲಿದಾನ, ಹೀರೋ ಅಂಡ್ ಹೀರೋ ವಶರ್ಿಪ್ ಮಾದರಿಯ ಕಥೆಗಳ ರಚನೆಯಲ್ಲಿ ತಮ್ಮ ಅನುಭವ ದುಡಿಸಿಕೊಂಡವರು ಬೆಟಗೇರಿ ಕೃಷ್ಣಶರ್ಮರು. ಭೂಮಾಲೀಕ ಮತ್ತು ಜೀತಗಾರನ ಸಂಬಂಧದ ವಿವಿಧ ಮುಖಗಳನ್ನು ಪರಿಚಯಿಸುವ ಇವರ 'ಮಾಲ್ಕಿ ಹಕ್ಕು' ಗಮಾನರ್ಹ ರಚನೆ. ಜನಪದ ಸಾಹಿತ್ಯದೊಡನೆ ಸೃಜನಾತ್ಮಕವಾಗಿ ಗಾಢ ಅನುಸಂಧಾನ ನಡೆಸಿದ ಕಥೆಗಾರರಲ್ಲಿ ಆನಂದಕಂದ ಪ್ರಮುಖರು.

ಗದ್ಯ ಬರೆಹವೇ ಕಥೆಯ ಅಭಿವ್ಯಕ್ತಿಗೆ ಮೂಲದ್ರವ್ಯ. ಗುಲ್ವಾಡಿ ವೆಂಕಟರಾಯ, ಎಂ.ಎಸ್.ಪುಟ್ಟಣ್ಣ ತಮ್ಮ ಕೃತಿಗಳಲ್ಲಿ ಬಳಸಿದ ಭಾಷಾ ಪರಂಪರೆಯೇ ಕನ್ನಡದ ಕಥೆಗಾರರಿಗೆ ಪ್ರಬಲವಾದ ಶೈಲಿಯ ನಿಮರ್ಾಣಕ್ಕೆ ನಾಂದಿ. ಮಾಸ್ತಿ ವೆಂಕಟೇಶ ಅಯ್ಯಂಗಾರ, ಕುವೆಂಪು ಕನ್ನಡ ಭಾಷೆಗೆ ಸಾಂಪ್ರದಾಯಿಕತೆ ಮೀರಿ ಆಧುನಿಕ ವಿಶಿಷ್ಟ ಗದ್ಯ ಕಥನದ ಶೈಲಿಯ ಚೌಕಟ್ಟನ್ನು ನೀಡುವಲ್ಲಿ ಶ್ರಮಿಸಿದವರು. ಪಾತ್ರಗಳ ಸಂಭಾಷಣೆಯ ಭಾಷೆ ಹಾಗೂ ಸನ್ನಿವೇಶ ನಿಮರ್ಾಣದ ಭಾಷೆಯನ್ನು ಎಚ್ಚರದಿಂದ ಬಳಸಿದ ಕ್ರಮ ಕನ್ನಡ ಕಥನ ನೆಲೆಯಲ್ಲಿ ಬಹು ಮಹತ್ವದ ಬದಲಾವಣೆ. ಸಾಮಾನ್ಯ ಮನುಷ್ಯನೇ ಕಥಾ ಸಾಹಿತ್ಯದ ಕೇಂದ್ರ ಬಿಂದು. ಮನುಷ್ಯನೇ ಅನ್ವೇಷಣೆಯ ಸಾಧನ ಮತ್ತು ಗುರಿ. ಈ ಹಿನ್ನೆಲೆಯಲ್ಲಿ ಮಾಸ್ತಿ, ಕುವೆಂಪು, ಕಾರಂತ ಅವರು ಶೋಧಿಸಿ ಸೃಷ್ಟಿಸಿದ ಸಾಂಸ್ಕೃತಿಕ ಸಾಮಗ್ರಿ ಮೌಲಿಕ. ವಸಾಹುತುಶಾಹಿ ಅನುಭವದ ಗ್ರಹಿಕೆಯೊಂದಿಗೆ ಆಗ ಕಥೆಗಳನ್ನು ರಚಿಸಬೇಕಾದ ಅನಿವಾರ್ಯತೆಯಿತ್ತು. ಈ ಗ್ರಹಿಕೆಗಳ ಕಪ್ಪೆಚಿಪ್ಪಿನಿಂದ ಹೊರಬಂದು ಮಾನವ ಕೇಂದ್ರಿತ ಗ್ರಹಿಕೆಗೆ ಜೋತುಬಿದ್ದು ಕಥೆಗಳನ್ನು ಬರೆದವರು ಮಾಸ್ತಿ. ಆಳವಾದ ಧಾಮರ್ಿಕ ಶ್ರದ್ಧೆಯಿಂದಲೇ ಜೀವನದ ಸಂಗತಿಗಳನ್ನು ಅವರು ಪರಿಭಾವಿಸಿದರು. 'ಇದು ಒಳ್ಳೆಯದು, ಇದು ಕೆಟ್ಟದ್ದು ಅಂತ ಹೇಳೊದಿಲ್ಲ. ನನ್ನ ಮುಖ್ಯ ಉದ್ದೇಶ ಜೀವನದ ಚಿತ್ರ ಕೊಡೋದು. ಕಂಡ ಜೀವನ ಹೇಳೋದು' ಎಂದು ಮಾಸ್ತಿಯವರ ಸ್ವಕಥನದ ಆಶಯವೇ ನವೋದಯ ಕಥಾ ಸಾಹಿತ್ಯಕ್ಕೂ ಅನ್ವಯಿಸುತ್ತದೆ. 'ಕನ್ನಡ ಸಣ್ಣ ಕಥೆಗಳ ಜನಕ' ಎಂದು ಕರೆಯಿಸಿಕೊಳ್ಳುವ ಮಾಸ್ತಿ ಆಧುನಿಕ ಕಥೆಗಳ ವೈವಿಧ್ಯಮಯ ಭಾಷೆ, ಶೈಲಿ, ಕಥಾ ವಸ್ತು, ನಿರೂಪಣೆ, ತಂತ್ರಗಾರಿಕೆ, ಪ್ರತಿಮೆ, ಸಂಕೇತಗಳ ಬಳಕೆಯಲ್ಲಿ ನಾವಿನ್ಯತೆ ಪ್ರಯೋಗಿಸುವಲ್ಲಿ ಸೋತಿರುವುದು ಅವರ ಸಣ್ಣ ಕಥೆಗಳ ಕೆಲ ಮಿತಿಗಳು.

ಕುವೆಂಪು ಮತ್ತು ಗೊರೂರು ರಾಮಸ್ವಾಮಿ ಅಯ್ಯಾಂಗರ್ ಮಾಸ್ತಿಯವರ ಸಮಕಾಲೀನ ಪ್ರಮುಖ ಕಥೆಗಾರರು. ಕುವೆಂಪು ಕಥೆಗಳು ವಾಸ್ತವವಾದಕ್ಕೆ ಹಿಡಿದ ಕೈಗನ್ನಡಿ. ಕಲಾತ್ಮಕ ಅಭಿವ್ಯಕ್ತಿಯನ್ನು ಮಾಸ್ತಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ದುಡಿಸಿಕೊಂಡರು. ಆದರ್ಶ ವ್ಯಕ್ತಿತ್ವ, ನವಸಮಾಜದ ನಿಮರ್ಾಣದ ಕನಸು, ಮಲೆನಾಡಿನ ಬದುಕು, ದ್ವೇಷ, ವೈಷಮ್ಯ, ಜೀತ, ಅಸೂಯೆ, ಕ್ಷುದ್ರತೆ, ಆಸ್ತಿಪಾಸ್ತಿಗಳ ಪಾಲು, ಕುಟುಂಬಗಳ ವಿಘಟನೆ ಇವರ ಕಥೆಗಳ ಪ್ರಮುಖ ಅಂಶಗಳು. ಇದೇ ಅವಧಿಯಲ್ಲಿ ಕೊಡಗಿನ ಗೌರಮ್ಮ, ಭಾರತೀಪ್ರಿಯ, ಆನಂದ, ಕಲ್ಲೂರು, ಬಾಗಲೋಡಿ, ಕಾಮತ, ಜೀಶಂಪ ಅಂದಿನ ಕಥಾ ಪರಂಪರೆಗೆ ಕಾಣಿಕೆ ನೀಡಿದವರು. ಗೊರೂರು ತಮ್ಮ ಕಥೆಗಳಲ್ಲಿ ಗ್ರಾಮ್ಯ ಜೀವನದ ವಿವಿಧ ಮುಖಗಳನ್ನು ದಟ್ಟವಾಗಿ ಚಿತ್ರಿಸಿದರು.
ನವೋದಯ ಸಾಹಿತ್ಯದ ವಿರುದ್ಧ ಅಸಹನೆ ಮತ್ತು ಪ್ರತಿರೋಧವೆಂಬಂತೆ ಹುಟ್ಟಿಕೊಂಡಿದ್ದೇ ಪ್ರಗತಿಶೀಲ ಚಳವಳಿ. ಪಾಶ್ಚಾತ್ಯ ಸಾಹಿತ್ಯದ ಪ್ರಭಾವಕ್ಕೆ ಪ್ರಗತಿಶೀಲ ಚಳವಳಿ ಒಳಗಾಯಿತು. ನವೋದಯ ಕಥೆಗಾರರು ಒಪ್ಪಿಕೊಂಡಿದ್ದ ಸ್ವಯಂಸ್ಫೂರ್ತತೆ ಮತ್ತು ಧ್ಯಾನಪೂರ್ವಕಲೆ ಧಿಕ್ಕರಿಸಿದ ಪ್ರಗತಿಶೀಲ ಕಥೆಗಾರರು ಆಶಯ ಹಾಗೂ ಅತಿಬಂಧ ಗ್ರಾಹ್ಯತೆಗೆ ಒತ್ತುನೀಡಿದರು. ನವೋದಯ ಕಥಾ ಸಾಹಿತ್ಯದಲ್ಲಿ ಒಡಮೂಡಿದ್ದ ಭಿನ್ನ ಮಾದರಿಗಳು ಪ್ರಗತಿಶೀಲ ಕಥೆಗಳಲ್ಲಿ ಮಾಸಿದವು. ಆದರೂ ಕನ್ನಡ ಸಾಹಿತ್ಯದ ನೆಲೆಗಳನ್ನು ಹಿಗ್ಗಿಸಿದ ಕೀತರ್ಿ ಪ್ರಗತಿಶೀಲರಿಗೆ ಸಲ್ಲುತ್ತದೆ. 1943ರಲ್ಲಿ ಅನಕೃ ನೇತೃತ್ವದಲ್ಲಿ ಹುಟ್ಟಿಕೊಂಡ 'ಪ್ರಗತಿಶೀಲ ಲೇಖಕರ ಸಂಘ' ಹೊಸ ಕಥನ ಕಲೆಗೆ ವೇದಿಕೆಯಾಯಿತು. ನಿರಂಜನ, ಬಸವರಾಜ ಕಟ್ಟಿಮನಿ, ಚದುರಂಗ, ತರಾಸು, ತ್ರಿವೇಣಿ ಮೊದಲಾದ ಕಥೆಗಾರರು ಪ್ರಗತಿಶೀಲ ಚಳವಳಿಯ ಆಶಯಗಳನ್ನು ತಮ್ಮ ಕಥೆಗಳ ಮೂಲಕ ಪಾರಂಪರಿಕ ಮೌಲ್ಯಗಳನ್ನು ಪ್ರಶ್ನಿಸಿ, ಸಾಮಾಜಿಕ ಅಸಮಾನತೆಯ ವಿರುದ್ಧ ದನಿ ಎತ್ತಿದರು. ಕನ್ನಡ ಕಥಾಸಾಹಿತ್ಯ ಪರಂಪರೆಗೆ ಗಟ್ಟಿ ದ್ರವ್ಯ ನೀಡಿದ ಪ್ರಗತಿಶೀಲರೆಂದರೆ ಅನಕೃ, ವ್ಯಾಸರಾಯ ಬಲ್ಲಾಳ, ಚದುರಂಗ, ನಿರಂಜನ, ಅನುಪಮ ನಿರಂಜನ ಮತ್ತು ತ್ರಿವೇಣಿ. ಮಾಸ್ತಿಯವರ ಕಥಾ ಪರಂಪರೆಯನ್ನೇ ಮುಂದುವರೆಸಿದಂತೆ ಕಾಣುವ ಬಲ್ಲಾಳರು ಪ್ರಗತಿಶೀಲ ಚಳವಳಿಯ ಪ್ರಭಾವವನ್ನು ಮೈಗೂಡಿಸಿಕೊಂಡು ಕನ್ನಡೇತರ ಬದುಕನ್ನು ಚಿತ್ರಿಸಿದ್ದು ಇವರ ಕಥೆಗಳ ಹೆಚ್ಚುಗಾರಿಕೆ. ಆದುನಿಕ ಕಥಾ ಸಾಹಿತ್ಯದಲ್ಲೂ ಕನ್ನಡೇತರ ಪರಿಸರ, ಬದುಕನ್ನು ಹೆಚ್ಚು ತಾಧ್ಯಾತ್ಮ ಹಾಗೂ ಕನ್ನಡ ನೇಟಿವಿಟಿಗೆ ಜೋಡಿಸಿದವರೆಂದರೆ ಜಯಂತ ಕಾಯ್ಕಿಣಿ, ಕೆ.ಸತ್ಯನಾರಾಯಣ, ಎಸ್.ದಿವಾಕರ ಮತ್ತಿತರರು ಪ್ರಮುಖರು.

ಅನಕೃ ಮುಖ್ಯವಾಗಿ ವೇಶ್ಯಾ ಸಮಸ್ಯೆ, ಹಸಿವು, ಶೋಷಣೆಯ ಮುಖಗಳನ್ನು ಅಬ್ಬರದಿಂದ ಚಿತ್ರಿಸಿದರು. ಅನ್ಯಾಯಕ್ಕೆ ಒಳಗಾಗುವ ವ್ಯಕ್ತಿಯ ದುಃಖವನ್ನು ಚದುರಂಗರು ಸ್ವಸ್ಥತೆಯಿಂದಲೇ ಬರೆದುದು ವಿಶೇಷ. ಬಸವರಾಜ ಕಟ್ಟಿಮನಿ ಕಟ್ಟಿಕೊಟ್ಟ ಉತ್ತರ ಕನರ್ಾಟಕದ ಜನಜೀವನ ಕಥಾ ಶೈಲಿ ವಿಶಿಷ್ಟವೆನಿಸಿದರೂ ಬರೀ ವರ್ಗ ಸಮಸ್ಯೆಯನ್ನಾಗಿ ನಿರ್ವಹಿಸಿದ್ದರಿಂದ ಅವರ ಕಥೆಗಳಲ್ಲಿ ರಮ್ಯಲೋಕ ತೆರೆದುಕೊಂಡಿತು.
1953ರಿಂದ 1973ರವರೆಗೆ ರಚನೆಯಾದ ಕಥಾ ಸಾಹಿತ್ಯವನ್ನು ನವ್ಯ ಕಥಾ ಸಾಹಿತ್ಯ ಎಂದು ಗುರುತಿಸುವುದು ವಾಡಿಕೆ. ರಾಮಚಂದ್ರಶರ್ಮ (ಮಂದಾರ ಕುಸುಮ-1953), ಯು.ಆರ್.ಅನಂತಮೂತರ್ಿ ('ಎಂದೆಂದೂ ಮುಗಿಯದ ಕಥೆ'-1955, ಮೌನಿ-1973), ಪೂರ್ಣಚಂದ್ರತೇಜಸ್ವಿ (ಅಬಚೂರಿನ ಪೋಸ್ಟಾಫೀಸು-1973), ದೇವನೂರು ಮಹಾದೇವ (ದ್ಯಾವನೂರು-1973), ಪಿ.ಲಂಕೇಶ (ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ-1973), ಬೆಸಗರಹಳ್ಳಿ ರಾಮಣ್ಣ (ಗರ್ಜನೆ-1972), ಜಿ.ಸದಾಶಿವ (ತುಣುಕುಗಳು-1973), ಶಾಂತಿನಾಥ ದೇಸಾಯಿ (ದಂಡೆ-1971), ಕೆ.ಸದಾಶಿವ (ಅಪರಿಚತರು-1971), ವೀಣಾ ಶಾಂತೇಶ್ವರ (ಕೊನೆಯ ಗಿರಾಕಿ-1973), ಎ.ಕೆ.ರಾಮನುಜನ್ (ಅಣ್ಣಯ್ಯನ ಮಾನವಶಾಸ್ತ್ರ-1971), ಚಂದ್ರಶೇಖರ ಕಂಬಾರ (ನಾಸರ್ಿಸಸ್-1971) ನವ್ಯ ಕಥಾ ಪರಂಪರೆಯನ್ನು ಬೆಳೆಸಿದರು.

ಕನ್ನಡದ ನವ್ಯ ಕಥೆಗಳು ಬದುಕಿನ ವೈರುಧ್ಯ ಮತ್ತು ದ್ವಂದ್ವ ಶೋಧಿಸುತ್ತಾ ಬದುಕಿನ ಸ್ವಾನುಭವವನ್ನು ಆತ್ಮ ವಿಮಶರ್ೆಗೊಳಪಡಿಸುವಲ್ಲಿ ಯಶಸ್ಸು ಸಾಧಿಸಿವೆ. ಬದುಕಿನ ಅನುಭವಗಳನ್ನು ಸಂಕೇತ, ಪ್ರತಿಮೆ, ರೂಪಕಗಳ ಮೂಲಕ ಕಾವ್ಯದಂತೆಯೇ ನವ್ಯ ಕಥೆಗಳು ರಚಿಸಲ್ಪಟ್ಟವು. ನವ್ಯ ಕಥೆಗಳು ವಸ್ತು, ಭಾಷೆ, ತಂತ್ರ, ಪ್ರಯೋಗದಲ್ಲಿ ಹೊಸತನ ಸಾಧಿಸಿ ನವೀನ ಪರಿಣಾಮ ಮೂಡಿಸಿದವು. ರಾಜಕೀಯ ಹಾಗೂ ನಿರೀಶ್ವರವಾದಂತಾ ಸಮಕಾಲೀನ ಸಂಗತಿಗಳನ್ನು ಶೋಧಿಸುವಲ್ಲಿ ನವ್ಯಕಥೆಗಳ ತಂತ್ರಗಾರಿಕೆ ಅಡಗಿದೆ. ಮನುಷ್ಯ ಮತ್ತು ಇತರೆ ಅಂತರ್ ಸಂಬಂಧಗಳನ್ನು ಸಮೃದ್ಧವಾಗಿ ಚಿತ್ರಿಸುವುದರ ಜೊತೆಗೆ ಹೊಸ ಸಮಾಜ ಮತ್ತು ಬದುಕಿನ ಹಂಬಲ ಹೊಂದಿವೆ. ಹಳ್ಳಿ-ನಗರಗಳ ಸಂಬಂಧ, ವ್ಯಕ್ತಿವ್ಯಕ್ತಿಗಳ ನಡುವಿನ ಮಾನವೀಯ ಸಂಬಂಧ ಹಾಗೂ ಮಾನಸಿಕ ತೊಳಲಾಟಗಳನ್ನು ನವ್ಯ ಕಥೆಗಳು ವಿಶ್ಲೇಷಣೆಗೆ ಹಚ್ಚಿದವು. ನವ್ಯ ಕಥೆಗಳಲ್ಲಿ ಕಾಣುವ ವಿವಿಧ ಮಾದರಿಗಳು ಬೇರೆ ಯಾವ ಕಥಾ ಸಾಹಿತ್ಯ ಪಂಥಗಳಲ್ಲಿ ಕಂಡು ಬರುವುದಿಲ್ಲ. ಪ್ರತಿ ಕಥೆಗಾರ ತನ್ನದೇ ಆದ ವೈಯಕ್ತಿಕ ಮಾದರಿ ಶೋಧನೆ ನಡೆಸಿರುವುದು ವಿಶಿಷ್ಟ ಎನಿಸಿದೆ. ಶರ್ಮ, ಅನಂತಮೂತರ್ಿ, ಚಿತ್ತಾಲ, ಸದಾಶಿವ, ಲಂಕೇಶ, ರಾಮಣ್ಣ, ತೇಜಸ್ವಿ, ಮಹಾದೇವ, ವೀಣಾ ಶಾಂತೇಶ್ವರ ಇನ್ನೂ ಹಲವಾರು ನವ್ಯ ಕಥೆಗಾರರು ವೈಯಕ್ತಿಕ ಮಾದರಿಗಳನ್ನು ಬೆಳೆಸಿದರು. ಈ ಕಥೆಗಾರರ ಮಾದರಿಗಳು ಮುಂದಿನ ನವ್ಯೋತ್ತರ ಕಾಲದ ಹಲವು ಕಥೆಗಾರರಲ್ಲೂ ಬೆರೆತುಕೊಂಡಿರುವುದನ್ನು ಕಾಣುತ್ತೇವೆ. ನವ್ಯ ಕಾವ್ಯವನ್ನು ಕಾವ್ಯ ಕೇಂದ್ರಿತ ಸಾಂಸ್ಕೃತಿಕ ವಿಶ್ಲೇಷಣೆಗೆ ಒಳಪಡಿಸಿದಂತೆ ನವ್ಯಕಥೆಗಳನ್ನೂ ಸಾಂಸ್ಕೃತಿಕ ವಿಶ್ಲೇಷಣೆ ಮಾಡುವ ಮಾದರಿಗಳು ಸಿದ್ಧವಾಗಬೇಕಿದೆ. ತಂತ್ರಕ್ಕೆ ಸಂಬಂಧಿಸಿದಂತೆ ನವ್ಯ ಕಥೆಗಳಲ್ಲಿ ಅನೇಕ ಪ್ರಯೋಗ ಮತ್ತು ಪ್ರಯತ್ನಗಳು ನಡೆದವು. ತಂತ್ರ ಎನ್ನುವುದು ಬದುಕಿನ ಅನುಭವದ ಸೂಕ್ಷ್ಮತೆಗಳನ್ನು ಭಾವಪೂರ್ಣವಾಗಿ ಅಭಿವ್ಯಕ್ತಿಸುವ ಒಂದು ಕಲೆಯಾಗಿ ರೂಪು ತಳೆದಿದೆ.

ಕಥೆಯಲ್ಲಿ ಕಥೆಗಾರನೇ ನಾಯಕನಾದಾಗ ಆತ್ಮವಿಮಶರ್ೆ ಮುನ್ನೆಲೆಗೆ ಬರುತ್ತದೆ. ಕಥೆಗಾರ ಬರೀ ನಿರೂಪಕನಾದಾಗ ಸಮಾಜದ ವಿಮಶರ್ೆ ಹೊರಹೊಮ್ಮುತ್ತದೆ. ನವ್ಯ ಕಥೆಗಾರರು ಈ ಎರಡೂ ಪ್ರವೃತ್ತಿಗಳನ್ನು ಗಾಢವಾಗಿ ತಮ್ಮ ಕಥೆಗಳಲ್ಲಿ ಅಭಿವ್ಯಕ್ತಿಗೊಳಿಸಿದರು. ವ್ಯಕ್ತಿಕೇಂದ್ರೀಕೃತ ನೆಲೆಯಿಂದಲೇ ಸಮಕಾಲೀನ ಸಮಾಜದ ದರ್ಶನ ಹೊರಗೆಡುಹಲು ಸಾಧ್ಯ ಎಂಬುದನ್ನು ನವ್ಯ ಕಥೆಗಳು ಪ್ರದಶರ್ಿಸಿವೆ. ಅನಂತಮೂತರ್ಿಯವರಲ್ಲಿ ಕಥಾವಸ್ತು ವೈಚಾರಿಕವಾಗಿ ಭಾಷೆ ಸೂಕ್ಷ್ಮವಾಗಿ ಪ್ರಕಟಗೊಂಡಿತು. ಅವರ ಕಥೆಗಳಲ್ಲಿ ಜೀವನದ ಅರ್ಥ ಶೋಧನೆ ಮುಖ್ಯವಾಗಿ ಗೋಚರವಾಗುತ್ತದೆ. 'ಕ್ಲಿಪ್ ಜಾಯಿಂಟ್' ಕಥೆಯಲ್ಲಿ ಆಧುನಿಕತೆ ಮತ್ತು ಸಂಪ್ರದಾಯದ ಸಂಘರ್ಷ ಪ್ರಖರವಾಗಿ ಪ್ರಕಟವಾಗಿದೆ. ನವ್ಯ ಕಥೆಗಳ ಮೂಲ ಆಶಯವಾದ ಆತ್ಮವಿಮಶರ್ೆಗೇ ಕಟ್ಟುಬೀಳದ ಶಾಂತಿನಾಥ ದೇಸಾಯಿ ಕಥಾ ವಸ್ತು, ಭಾಷೆ, ತಂತ್ರದಲ್ಲಿ ಹೊಸತನ ಕಂಡುಕೊಂಡರು. ಅವರ 'ಕ್ಷಿತಿಜ' ಕಥೆ ಸಂಪ್ರದಾಯಬದ್ಧ ಸಮಾಜದಿಂದ ಆಧುನಿಕ ಸಮಾಜದೆಡೆ ಮುಖಮಾಡಿದ ಹೆಣ್ಣಿನ ಮನಸ್ಸಿನ ಚಿತ್ರಣ ಬಿಂಬಿಸುತ್ತದೆ. ನವ್ಯ ಕಥೆಯ ಆವರಣಕ್ಕೆ ಹೆಚ್ಚು ಸೂಕ್ಷ್ಮತೆ, ಸಂಕ್ಷಿಪ್ತತೆ ಮತ್ತು ಗೇಯತೆ ತಂದವರು ಲಂಕೇಶರು. ಮನುಷ್ಯನ ಮೂಲ ಪ್ರವೃತ್ತಿಗಳ ಶೋಧನೆ ಲಂಕೇಶರ ಕಥೆಗಳಲ್ಲಿ ಯಥೇಚ್ಛವಾಗಿ ನಡೆಯುತ್ತದೆ. ಚಿತ್ತಾಲರ ಕಥೆಗಳಲ್ಲಿ ಸಾವು, ನಿರಪರಾದಿ ಭಾವನೆ, ಯಾತನೆ, ಭಾಷೆಯ ಬಗೆಗಿನ ಅರಿವು ಕಂಡುಬಂದರೆ ತೇಜಸ್ವಿ ಮತ್ತು ಬೆಸಗರಹಳ್ಳಿ ಅವರ ಕಥೆಗಳಲ್ಲಿ ಗ್ರಾಮೀಣ ಬದುಕಿನಲ್ಲಿ ಮಾನವತೆಯ ಹುಡುಕಾಟ ಸಾಮಾನ್ಯ. ಮಹಾದೇವರ ಕಥೆಗಳಲ್ಲಿ ಶೋಷಣೆಯ ವಿವಿಧ ಮುಖಗಳು ಅನಾವರಣಗೊಂಡಿವೆ. ದಲಿತ ಸಾಹಿತ್ಯ ಸೃಷ್ಟಿಗೆ ಅವರು ನಾಂದಿಹಾಡಿದರು. ದಲಿತ ಜಗತ್ತಿನ ನೋವು, ಯಾತನೆ, ಅವಮಾನ, ಅಸಹಾಯಕತೆ, ಹಸಿವು ಮತ್ತು ಸಾಮಾಜಿಕ, ಆಥರ್ಿಕವಾದ ಅಸಮಾನತೆ ಮತ್ತು ವಿರೋಧಾಭಾಸಗಳನ್ನು ಅವರ ಕಥೆಗಳು ಬಿಚ್ಚಿಡುತ್ತವೆ.
ತೇಜಸ್ವಿಯವರ 'ಅಬಚೂರಿನ ಪೋಸ್ಟಾಫೀಸು' ನವ್ಯ ಮತ್ತು ಬಂಡಾಯ ಸಾಹಿತ್ಯ ಸಂಧಿಕಾಲದ ಮಹತ್ವದ ಕಥಾ ಸಂಕಲನ. ನವ್ಯದ ಸೋಲುಗಳು ಮತ್ತು ನಂತರದ ಹೊಸತನ ಹುಡುಕಾಟದ ಸಾಧ್ಯತೆಗಳನ್ನು ಈ ಸಂಕಲನ ಸಮರ್ಥವಾಗಿ ಚಿತ್ರಿಸುತ್ತದೆ. ಸಾಮಾಜಿಕ ಸಮಸ್ಯೆಗಳನ್ನು ಸಾಂದ್ರವಾಗಿ ಮತ್ತು ಕಲಾತ್ಮಕವಾಗಿ ದಾಖಲು ಮಾಡುವಲ್ಲಿ ತೇಜಸ್ವಿ ಸಿದ್ಧಹಸ್ತರು. ಆಧುನಿಕತೆಯ ಪ್ರಭಾವದಿಂದ ಗ್ರಾಮೀಣ ಪರಿಸರ, ಸಂಸ್ಕೃತಿ ಮತ್ತು ತಾಂತ್ರಿಕ ಕೌಶಲ್ಯಲತೆ ಮೇಲಾಗುವ ಪಲ್ಲಟಗಳನ್ನು ತೇಜಸ್ವಿಯವರ ಕಥೆಗಳು ಹಿಡಿದಿಟ್ಟವು. ನವ್ಯ ಕಾಲದ ಸಾಮಾಜಿಕ ಮತ್ತು ಸಾಹಿತ್ಯಿಕ ಮೌಲ್ಯಗಳನ್ನು ಪ್ರಶ್ನಿಸುವ ಮೂಲಕ ಹೊಸ ಕಥಾ ಪರಂಪರೆಗೆ ಪ್ರವರ್ತಕರಾದರು. 12ನೇ ಶತಮಾನದ ಸಾಮಾಜಿಕಕ್ರಾಂತಿಯ ಮರುಕಳಿಸುವಿಕೆ ಎಂಬಂತೆ ಸಾಹಿತ್ಯಿಕ ವಲಯದ ಮಡಿ ಮೈಲಿಗೆ ಕಳೆಯುವಲ್ಲಿ ಬಂಡಾಯ ದಲಿತ ಸಾಹಿತ್ಯ ಮಾರ್ಗ ಯಶಸ್ವಿಯಾಯಿತು. ಗ್ರಾಮೀಣ ಪರಿಸರದ, ಹಿಂದುಳಿದ, ಅಲ್ಪಸಂಖ್ಯಾತ, ದೀನ ದಲಿತ, ಅಸಹಾಯಕ ಹಾಗೂ ಬಡ ಕುಟುಂಬಗಳಲ್ಲಿ ಹುಟ್ಟಿ ಬೆಳೆದ ಮಹಿಳೆಯರನ್ನೊಳಗೊಂಡು ಅನೇಕ ಕಥೆಗಾರರು ಹೆಚ್ಚು ಸಶಕ್ತರಾಗಿ ಕಥೆಗಳ ರಚನೆಗೆ ಮುಂದಾದರು. ಕನ್ನಡ ಕಥಾ ಸಾಹಿತ್ಯದಲ್ಲಿ ಅದುವರೆಗೂ ಅಷ್ಟಾಗಿಯೂ ಮುನ್ನೆಲೆಗೆ ಬಾರದ ಕತ್ತಲಲೋಕ ಪರಿಚಯವಾಯಿತು. ದಲಿತ ವರ್ಗದ ಕಥೆಗಾರರು, ಮುಸ್ಲಿಂ ಕಥೆಗಾರರು, ಮಹಿಳಾ ಕಥೆಗಾರರು ತಮ್ಮ ಸುತ್ತಲಿನ ಅನ್ಯಾಯ, ಅಸಮಾನತೆ, ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಕಥೆಗಳ ಮೂಲಕ ಗಟ್ಟಿ ದನಿ ಎತ್ತಿದರು. ಎಂಬತ್ತರ ದಶಕ ಮತ್ತು ನಂತರ ಬಂದ ಕಥೆಗಳು ಕನ್ನಡಕ್ಕೆ ಹೊಸ ಸತ್ವ ಸೇರಿಸಿವೆ. ಹೆಚ್ಚಾಗಿ ಮಧ್ಯಮವರ್ಗದ ಶಿಷ್ಟ ಅನುಭವದ ಕಥೆಗಾರರ ಆಡುಂಬೊಲವಾಗಿದ್ದ ಸಣ್ಣಕಥಾ ಕ್ಷೇತ್ರಕ್ಕೆ ಗ್ರಾಮೀಣ ಕೆಳಜಾತಿ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ತಲೆಮಾರು ಹೊಸ ಸಾಂಸ್ಕೃತಿಕ ಚಲನೆಯ ಆಶಯಗಳನ್ನು ಪ್ರಕಟಿಸುತ್ತಿರುವುದು ಗಮನಾರ್ಹ. ನವ್ಯದ ಅಭಿವ್ಯಕ್ತಿ ವಿಧಾನಗಳು ಮತ್ತು ತಾತ್ವಿಕತೆಯು ಈ ಕಥೆಗಾರರ ಅನುಭವ ಮತ್ತು ಸಾಮಾಜಿಕ ಸ್ತರದೊಂದಿಗೆ ಹೊಂದಿಕೆಯಾಗದೆ ಸೃಷ್ಟಿಯಾದ ಬಿಕ್ಕಟ್ಟು ಮುಂದಿನ ಬಂಡಾಯ ದಲಿತ ಸಾಹಿತ್ಯ ರಚನೆಗೆ ನಾಂದಿಯಾಯಿತು. ಎಪ್ಪತ್ತರ ದಶಕದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಪಲ್ಲಟಗಳಿಗೆ ನೇರ ಕಾರಣವಾದ ದೇವರಾಜ ಅರಸರ ಭೂಸುಧಾರಣೆ, ಹಾವನೂರು ವರದಿ, ಬೂಸಾ ಪ್ರಕರಣ, ಜಾತಿ ವಿನಾಶ ಸಮ್ಮೇಳನ, ಬರೆಹಗಾರರ ಕಲಾವಿದರ ಒಕ್ಕೂಟ, ಪ್ರಗತಿಪಂಥದಂಥ ಸಮಾವೇಶಗಳು, ತುತರ್ು ಪರಿಸ್ಥಿತಿ ಹುಟ್ಟಿಸಿದ ಪ್ರಜಾತಾಂತ್ರಿಕ ಶಕ್ತಿಗಳು, ಸಮುದಾಯಗಳು, ದಲಿತ ಸಂಘರ್ಷ ಸಮಿತಿ, ರೈತ ಸಂಘದ ಉದಯ ಕನ್ನಡ ಕಥನ ಸೇರಿದಂತೆ ವಿವಿಧ ಸಾಹಿತ್ಯ ಪ್ರಾಕಾರಗಳಲ್ಲಿ ತಾತ್ವಿಕ ಮಥನಕ್ಕೆ ಕಾರಣವಾದವು. ಬಂಡಾಯ ಸಾಹಿತ್ಯ ಸಮಾವೇಶ ಒಂದು ತಾಕರ್ಿಕ ವಲಯವನ್ನೇ ಸೃಷ್ಟಿಸಿತು. ಕೆಳವರ್ಗಗಳಲ್ಲಿ ಜಾಗೃತಿಗೆ ಕಾರಣವಾಯಿತು. ಬಂಡಾಯ ಸಾಹಿತ್ಯದ ಮೊದಲ ಮೊಳಕೆಗಳೊಡೆದಿದ್ದು ಸಣ್ಣಕತೆಯ ಒಡಲಿನಿಂದ ಎಂಬುದನ್ನು ವಿಮರ್ಶಕ ರಹಮತ್ ತರಿಕೆರೆ ಗುರುತಿಸುತ್ತಾರೆ. ದುಡಿಮೆಯ ಅನುಭವದ ಜೊತೆ ಗ್ರಾಮೀಣ ಪ್ರದೇಶದಲ್ಲಿ ಚಾಲ್ತಿಯಲ್ಲಿದ್ದ ಜಮೀನ್ದಾರಿ ದಬ್ಬಾಳಿಕೆ, ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯ ಸಂವೇದನೆಗಳು ಕೆಳಜಾತಿ ಮತ್ತು ವರ್ಗಗಳಿಂದ ಬಂದ ಕಥೆಗಾರರನ್ನು ಬಹು ಕಾಡಿದವು. ಸಮಾಜವಾದಿ ಮತ್ತು ಎಡತಾತ್ವಿಕತೆಯೊಂದಿಗೆ ಬರೆದ ದೇವನೂರರ 'ದತ್ತ', 'ಅಮಾಸ', ಬರಗೂರರ 'ಅವನು ನಪುಂಸಕ', 'ಕ್ಷಾಮ', ನಾಗವಾರರ 'ಬಿಚ್ಚಿದ ಬಟ್ಟೆ', 'ಮೀನುಗಳು', ತೇಜಸ್ವಿಯವರ 'ಸ್ವರೂಪ', 'ತಬರನಕತೆ' ಉತ್ತಮ ಉದಾಹರಣೆಗಳು.

ನವ್ಯದಲ್ಲೇ ಉಳಿದ ಕೆಲವು ಕಥೆಗಾರರಿಂದ ಬಂದ ('ರೊಟ್ಟಿ', 'ಬರ') ಕತೆಗಳು ಬಂಡಾಯದ ಆಶಯಗಳನ್ನು ಹೊಂದಿಯೂ ಕಥಾ ಜಗತ್ತು ಹೆಚ್ಚಾಗಿ ನಗರ ಮಧ್ಯಮವರ್ಗದ ಶಿಷ್ಟಜಾತಿಯದಾಗಿತ್ತು. ಸಮಸ್ಯೆಯನ್ನು ಪರಿಶೀಲಿಸುವ ಕತೆಗಾರರ ತಾತ್ವಿಕತೆಯು ವ್ಯಕ್ತಿ ನೆಲೆಯದಾಗಿತ್ತು. ಹಸಿವು, ದಾರಿದ್ರ್ಯ, ಸಾಮಾಜಿಕ ಅಪಮಾನ, ದಬ್ಬಾಳಿಕೆ, ಪ್ರತಿಭಟನೆ ದಲಿತ ಬಂಡಾಯ ಕಥೆಗಳ ಮೂಲ ಸಲೆಗಳಾಗಿವೆ. ಕುವೆಂಪು, ಗಾಕರ್ಿ, ಪ್ರೇಮಚಂದ್, ದಾಸ್ತೋವಸ್ಕಿಯಂಥ ಮಾನವತಾವಾದಿ-ವಾಸ್ತವವಾದಿ ಲೇಖಕರ ಪ್ರಭಾವಕ್ಕೆ ಒಳಗಾದ ಬೆಸಗರಹಳ್ಳಿಯವರು ಬರೆದ ಜೀತ, ಗರ್ಜನೆ, ಹರಕೆಯ ಹಣ, ಕಕರನ ಯುಗಾದಿಯಂಥ ಕಥೆಗಳು ನವ್ಯದ ಸೆಳೆತಕ್ಕೆ ಅಷ್ಟಾಗಿಯೂ ಒಳಗಾಗದೇ ಇರುವುದು ಸೋಜಿಗದ ಸಂಗತಿ. ನಿರಂಜನರ 'ಕೊನೆಯ ಗಿರಾಕಿ', ಕುವೆಂಪು ಅವರ 'ಸಾಲದ ಮಗು' ಕಥೆಗಳು ಇಂಥದೇ ವಿಶಿಷ್ಟತೆಯನ್ನು ಪರಿಚಯಿಸುತ್ತವೆ. ಬೆಸಗರಹಳ್ಳಿಯವರ ಜೊತೆಗೆ ಸುಧಾಕರ ಅವರು ಪ್ರಾದೇಶಿಕ ವಿಶಿಷ್ಟವಾದ ಜನಪದ ಸತ್ವದೊಂದಿಗೆ ಬರೆದ ಕಥೆಗಳು ಬಂಡಾಯ ಮತ್ತು ನಂತರದ ಅವಧಿಯ ಕಥೆಗಾರರಲ್ಲೂ ಮರುಕಳಿಸುತ್ತವೆ. ಗ್ರಾಮೀಣ ಅನುಭವ, ಭಾಷೆ, ವಿಷಯ ವಸ್ತುಗಳಷ್ಟೆ ಕಥೆಗಳ ಗುಣಾತ್ಮಕ ಸತ್ವಗಳೆಂದೇನಲ್ಲ. ಚಿತ್ತಾಲರು ಮತ್ತು ಅನಂತಮೂತರ್ಿಯವರ ಕಥೆಗಳಲ್ಲಿ ಬರುವ ಗ್ರಾಮೀಣ ಪರಿಸರ ಜಾತಿಯ ಸಂಘರ್ಷಗಳನ್ನು ನಿರಾಕರಿಸಿದ ಶಿಷ್ಟ ಹಾಗೂ ವ್ಯಕ್ತಿ ಕೇಂದ್ರಿತವಾದುದು. ಬಂಡಾಯ ಮತ್ತು ನಂತರದ ಕಥೆಗಳಲ್ಲಿ ತೆರೆದುಕೊಳ್ಳುವ ಗ್ರಾಮೀಣ ಜಗತ್ತು ಊಳಿಗಾಮಾನ್ಯ ವ್ಯವಸ್ಥೆಯೊಳಗೆ ಬದುಕುತ್ತಿರುವ ದುರ್ಬಲರ ವೇದನೆ ಮತ್ತು ವರ್ಗ ಸಂಘರ್ಷದ ಚಿತ್ರಣ ಸ್ಪಷ್ಟ ರೂಪು ಪಡೆದಿದೆ. ನವ್ಯದ ನಂತರ ಬಂದ ಕಥೆಗಳು ವ್ಯಕ್ತಿಯ ಮನೋವಿಶ್ಲಷಣೆಯನ್ನು ಸಂಪೂರ್ಣ ಧಿಕ್ಕರಿಸಿದವು ಎಂದರೆ ತಪ್ಪಾದೀತು. ವ್ಯಕ್ತಿಯ ವೈಯಕ್ತಿಕ ವೇದನೆ ಕೇವಲ ಒಂದು ಪಾತ್ರಕ್ಕೆ ಸೀಮಿತವಾಗದೆ ಹಾಗೇ ಬದುಕುವ ವಿವಿಧ ಸಮುದಾಯಗಳ ಜೀವನ ದರ್ಶನ ಎಂಬಂತೆ ಭಾವಿಸಲಾಯಿತು. ಕುಂವಿಯವರ ಪಾತ್ರಗಳಾದ ಡೋಮ, ಎಲುಗರ ಸಂಕಟಗಳ ಅನಾವರಣದಿಂದ ಅಂಥದೇ ಸಮುದಾಯಗಳ ವೇದನೆಯ ಪ್ರಪಂಚ ಕಣ್ಣ ಮುಂದೆ ತೆರೆದುಕೊಳ್ಳುವುದು ಸಾಮಾನ್ಯ. ವೈಯಕ್ತಿಕ ನೆಲೆಯಲ್ಲಿ ಕಥೆಗಳು ಚಿತ್ರಿತವಾದಂತೆ ಕಂಡರೂ ಸಮುದಾಯದ ಬೆಳವಣಿಗೆಯ ವಿವಿಧ ಘಟ್ಟಗಳನ್ನು ಪರಿಚಯಿಸುತ್ತವೆ. ಬಂಡಾಯ ಕಥೆಗಳು ವಸ್ತು ಮತ್ತು ಧೋರಣಾ ಪ್ರಧಾನ ಎಂಬ ಅಪವಾದವೂ ಕೇಳಿ ಬರುತ್ತದೆ. ಕುಂವಿ, ಬೆಸಗರಹಳ್ಳಿ, ಕಟ್ಪಾಡಿ ಅವರ ಕಥೆಗಳಲ್ಲಿ ಗಟ್ಟಿ ವಸ್ತುವೊಂದು ಎದ್ದು ಕಂಡರೆ, ಬರಗೂರು, ವಾಲೀಕಾರ, ಬಿ.ಟಿ.ಲಲಿತಾ ನಾಯಕ, ಗೀತಾ ನಾಗಭೂಷಣ ಅವರಲ್ಲಿ ಧೋರಣೆ ಎದ್ದು ಕಾಣುತ್ತದೆ. ಕನ್ನಡ ಕಥೆಗಾರರ ಮೇಲೆ ಭಾರತೀಯ ಪ್ರಗತಿಶೀಲ ಬರೆಹಗಾರರಾದ ಪ್ರೇಮಚಂದ, ಶರಶ್ಚಂದ್ರ, ಪಾಶ್ಚಾತ್ಯ ಲೇಖಕರಾದ ಚೆಕಾಫ್, ಕಾಮು, ದಾಸ್ತೋವಸ್ಕಿ ಅವರ ಕಥೆ ಕಾದಂಬರಿಗಳು, ಮರಾಠಿ ಆತ್ಮಕಥನಗಳ ಮೂಲಕ ಭಾರತೀಯ ಸಾಹಿತ್ಯದಲ್ಲೆ ಸಂಚಲನ ಮೂಡಿಸಿದ ಉಚ್ಯಲ್ಯಾ, ಗಬಾಳ, ಅಕ್ರಮಸಂತಾನ ಮುಂತಾದ ಕೃತಿಗಳು, ಮಲೆಯಾಳಿ ಲೇಖಕರಾದ ವೈಕಂ, ಎಂ.ಟಿ.ವಾಸುದೇವ ನಾಯರ್ ಅವರ ಪ್ರಭಾವವೂ ಹಲವು ಕಥೆಗಾರರಲ್ಲಿ ಕಾಣುತ್ತೇವೆ. (ಬೋಳುವಾರು ಮತ್ತು ಬೆಸಗರಹಳ್ಳಿ)

ಬಂಡಾಯ ಕಥನ ಸಾಹಿತ್ಯ ಮತ್ತು ಪರಂಪರೆ ಮಧ್ಯೆ ಕರಳುಬಳ್ಳಿ ಸಂಬಂಧವಿದೆ. ಗಾಢ ಜಾನಪದ ಸತ್ವ ಮೈಗೂಡಿಸಿಕೊಂಡು ಬರೆಯುವ ಲೇಖಕರು ತಮ್ಮ ಪ್ರಜ್ಞಾಪೂರ್ವಕತೆಯ ಮಿತಿಯೊಳಗೆ ಬರೆಯುತ್ತಾ ಹೊಸ ರೂಪಾಂತರ ಮತ್ತು ತಾತ್ವಿಕ ಆಯಾಮವನ್ನು ಕಥೆಗಳಿಗೆ ತೊಡಿಸುವಲ್ಲಿ ವಿಫಲವಾಗಿರುವುದು ಎದ್ದು ಕಾಣುತ್ತದೆ. ವೈಚಾರಿಕತೆರಹಿತ ಜಾನಪದ ಸತ್ವದಲ್ಲೆ ಬರೆದ ಕಥೆಗಳು ಅನಗತ್ಯ ಅಲಂಕಾರದೊಂದಿಗೆ ಸೊರಗಿರುವುದನ್ನು ಗುರುತಿಸಬಹುದು. ತಾತ್ವಿಕತೆ ಮತ್ತು ಕಲೆಗಾರಿಕೆಯನ್ನು ಕಥೆಗಾರ ತನ್ನ ವಿಮರ್ಶಕ ಪ್ರಜ್ಞೆಯಿಂದ ಬಳಸಿದಾಗ ಉತ್ತಮ ಕೃತಿ ರಚನೆ ಸಾಧ್ಯ. ಗಾಢ ಜಾನಪದ ಪ್ರಭಾವದಿಂದ ಬರೆಯುವ ಹನೂರು, ಕರೀಗೌಡ ಬೀಚನಳ್ಳಿ, ಚಿಕ್ಕಣ್ಣ ಅವರ ಕಥೆಗಳು ವೈಶಿಷ್ಟತೆ ಮಧ್ಯೆಯೂ ಈ ಎಚ್ಚರಿಕೆಯನ್ನು ಮೀರುವುದಿಲ್ಲ. ಈ ಶತಮಾನದ ಕೊನೆಯ ಎರಡು ದಶಕಗಳಿಂದ ಬರೆಹ ಶುರು ಮಾಡಿದ ಹಲವು ಕಥೆಗಾರರ ಕಥೆಗಳಲ್ಲೂ ಈ ರೀತಿಯ ಸಮಸ್ಯೆ ಎದುರಾಗುವುದು ಸಾಮಾನ್ಯ.

ಮೇಲ್ವರ್ಗಕ್ಕೆ ಮುಜುಗರವಾಗುವ ಅನೇಕ ಸಂಗತಿಗಳು ದಲಿತ, ಮುಸ್ಲಿಂ ಮತ್ತು ಸ್ತ್ರೀ ಸಂವೇದನೆಯ ಕಥೆಗಳಲ್ಲಿ ಆಪ್ತವಾಗಿ ಚಿತ್ರಿತವಾಗಿವೆ. ಕುಂವಿಯವರ 'ಡೋಮ' ಮತ್ತು 'ಎಲುಗನೆಂಬ ಕೊರಚನೂ' ಕಥೆಗಳಲ್ಲಿ ಬರುವ ವರ್ಣನೆ 'ಹಂದಿ ಉದುರಿಸುತ್ತಿದ್ದ ಹಿಕ್ಕೆಯನ್ನು ಅಮಾವಾಸ್ಯೆ ರಾತ್ರಿಯಂದು ಮುಗಿಲತುಂಬ ಚೆಲ್ಲುತ್ತಿದ್ದ ಚುಕ್ಕೆಗಳಿಗೆ ಹೋಲಿಸುವ ವರ್ಣನೆ ಬಹು ವಿಶಿಷ್ಟ. ಪ್ರತಿಷ್ಠಿತ ಸಮಾಜ ತುಚ್ಛವೆಂದು ಪರಿಗಣಿಸಿದ ಜನರು ಇಂಥಹ ಕಥೆಗಾರರಲ್ಲಿ ಪ್ರಧಾನ ಪಾತ್ರಗಳಾಗಿ ಬರುತ್ತವೆ. ಈ ಪಾತ್ರಗಳನ್ನು ಪ್ರತಿನಿಧಿಸುವವರು ದುರ್ಬಲರೆನಿಸಿದರೂ ಅಸಾಧಾರಣ ಶಕ್ತಿವಂತರೂ, ಬುದ್ಧಿವಂತರೆಂಬಂತೆಯೂ ಚಿತ್ರಿತವಾಗಿರುವುದು ಹಳೆಯ ಸಿದ್ಧ ಮಾದರಿಯನ್ನು ಪ್ರಶ್ನಿಸುವುದಾಗಿದೆ. ಸಾರಾ, ಶಾಂತರಸ, ವಾಲೀಕಾರ, ಗೀತಾ ನಾಗಭೂಷಣ, ಬಿ.ಟಿ.ಲಲಿತಾನಾಯಕ, ಅಮರೇಶ ನುಗಡೋಣಿ ಮೊದಲಾದವರ ಕಥೆಗಳಲ್ಲಿ ಹೆಣ್ಣು ತನ್ನ ಅಸಹಾಯಕ ಪರಿಸ್ಥಿತಿಯಲ್ಲೂ ಅಪ್ರತಿಮ ಚೈತನ್ಯದಿಂದ ಬದುಕುವ ರೀತಿ ಮತ್ತು ಆರೋಗ್ಯಕರ ಪ್ರತಿಭಟನೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಚಿತ್ರಿತವಾಗಿದೆ. ಗಂಡು ಹೆಣ್ಣಿನ ಲೈಂಗಿಕ ಸಂಬಂಧ ಬಂಡಾಯ ಮತ್ತು ನಂತರದ ಕಥೆಗಳಲ್ಲೂ ಮುಖ್ಯ ವಿಷಯವಾಗಿದೆ. ಆಳುವ ವರ್ಗದ ವಿರೋಧವೆಂಬಂತೆ ಎರಡು ರೀತಿಗಳಲ್ಲಿ ಈ ಸಂಬಂಧ ಬಳಸಲ್ಪಟ್ಟಿದೆ. ಕೆಳಜಾತಿಯ ಗಂಡು ಮತ್ತು ಮೇಲ್ಜಾತಿಯ ಹೆಣ್ಣಿನ ಸಂಬಂಧ ಮತ್ತು ಜೀತದಾಳಿನೊಂದಿಗೆ ಗೌಡರ ಹೆಂಡತಿ ಅಥವಾ ಮಗಳ ಸಂಬಂಧ, ಜೊತೆಗೆ ಲೈಂಗಿಕವಾಗಿ ದುರ್ಬಲನಾಗಿರುವ ಸಾಹುಕಾರನನ್ನು ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠನಾಗಿರುವ ಕೆಲಸದಾಳನ್ನು ಚಿತ್ರಿಸುವ ರೀತಿ ಅನನ್ಯ. ಶಾಂತರಸ, ಬೆಸಗರಹಳ್ಳಿ, ಮಾಲಗತ್ತಿ, ಕುಂವಿ, ನಾಗವಾರರ ಕಥೆಗಳು ಭೂಮಾಲೀಕ ಪದ್ಧತಿಯ ಅವನತಿ ಸೂಚಿಸಲೆಂಬಂತೆ ರೀತಿಯಲ್ಲಿ ಪ್ರತಿಬಿಂಬಿತವಾಗಿವೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಜಮೀನುದಾರಿ / ಪುರೋಹಿತಶಾಹಿ ಪಾತ್ರಗಳನ್ನು ಕಾಮಿಕ್ ರೀತಿಯಲ್ಲಿ ಚಿತ್ರಿಸುವ ವಿಧಾನವೂ ಗಮನಾರ್ಹ. ಕೇವಲ ಇಂಥದೇ ಆಶಯವೂ ಕಥೆಗಳ ಹೆಚ್ಚುಗಾರಿಕೆಯಾಗಲಾರದು ಎಂಬುದೂ ನೆನಪಿನಲ್ಲಿಡಬೇಕಾದ ಸಂಗತಿ.

ವಾಲಿಕಾರರು ಅಚ್ಚರಿಯೆನೆಸುವಷ್ಟು ಸರಳತೆಯಲ್ಲಿ ಕಥೆಗಳನ್ನು ಹೇಳುತ್ತಾರೆ. ವಸ್ತುವಾಗಿ ಗಂಭೀರ ಹುಡುಕಾಟ ನಡೆಸದೆ ಸಾಧಾರಣ ಸಂಗತಿಯನ್ನೂ ಅವರು ಸಮಾಜವಾದಿ ದೃಷ್ಟಿಕೋನದಿಂದ ನಿಭಾಯಿಸುವ ರೀತಿ 'ಬುದ್ಧನ ನಾಡಿನಲ್ಲಿ' ಮತ್ತು 'ಶಾಸ್ತ್ರಿ ಮಾಸ್ತರ ಮಕ್ಕಳು' ಕಥೆಗಳಲ್ಲಿ ಪ್ರತಿಬಿಂಬಿತವಾಗಿದೆ. ನವ್ಯದ ಸಾಂಕೇತಿಕ ವಿಧಾನ ಬಿಟ್ಟು ಮಾನವೀಯ ಗ್ರಹಿಕೆಯ ಕ್ರಮದಿಂದ ಜಾನಪದದ ಸರಳತೆಯೇ ಅವರ ಕಥೆಗಳ ಜೀವಾಳ. ಎಲ್ಲ ದುರ್ಬಲರೂ ಅವರ ಕಥೆಗಳಲ್ಲಿ ಎದ್ದು ನಿಲ್ಲುವುಂತೆ ಚಿತ್ರಿಸಲ್ಪಟ್ಟಿರುವುದು ವಿಶೇಷ. ಇವರಿಗಿಂತ ಸ್ವಲ್ಪ ಭಿನ್ನವಾಗಿ ಕುಂವಿಯವರ ಕಥೆಗಳಲ್ಲಿ ಅತ್ಯಂತ ಕೆಳಸ್ತರದ ದಲಿತರ ಭೀಭತ್ಸ ಬದುಕು ಮುನ್ನೆಲೆಯಾಗಿ ಚಿತ್ರಿತವಾಗುತ್ತದೆ. ಪ್ರೇಮಚಂದರ 'ಹೆಣದ ಬಟ್ಟೆ' ರೀತಿಯಲ್ಲಿ ಕುಂವಿಯವರ ಗಮನ ಸಾಮಾಜಿಕ ಮತ್ತು ಆಥರ್ಿಕ ಒತ್ತಡಗಳು ತಂದಿಟ್ಟ ಸಂಕಷ್ಟದತ್ತ ಹರಿಯುತ್ತದೆ. ನವ್ಯದ ಜಾಡಿನಲ್ಲೆ ಸಾಗುವ ಅವರ ಆರಂಭದ ಕಥೆಗಳು 'ಶೋಷಣೆ'ಯ ಸ್ವರೂಪವನ್ನು ವಾಚ್ಯವಾಗಿಯೇ ಗ್ರಹಿಸಲೆತ್ನಿಸಿರುವುದು ಎದ್ದುಕಾಣುತ್ತದೆ. ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದಾದ 'ದೇವರ ಹೆಣ' ಕಥೆಯಲ್ಲಿ ಪ್ರಬುದ್ಧ ಕಥೆಗಾರಿಕೆ ಮೈದಳೆದು ಕುಂವೀಯವರ ವಿಶಿಷ್ಟ ಶೈಲಿ ಪರಿಚಯವಾಗುತ್ತದೆ. ಇದಕ್ಕೆಲ್ಲಾ ಅವರು ವಾಸ್ತವ ಮಾರ್ಗದಲ್ಲಿ ಕಂಡುಕೊಂಡಿರುವ ವಿನೋದ ಮತ್ತು ವ್ಯಂಗ್ಯದ ಜೊತೆಗೆ ಕಲಾತ್ಮಕ ತಾಳ್ಮೆ ಮುಖ್ಯವೆನಿಸುತ್ತವೆ. ಕನ್ನಡ ಕಥನಕಲೆಗೆ ವಿಶಿಷ್ಟವೆನಿಸುವ ಶೈಲಿಯ ಕಸುವು, ಪ್ರಾದೇಶಿಕ ಭಾಷೆ ಬಳಕೆ ಕುಂವಿಯವರ ಕಥೆಗಳ ಅಂತಃಶಕ್ತಿ. ತಮ್ಮೆಲ್ಲ ಪ್ರಾಣವನ್ನು ತುಂಬಿ ಬರೆಯುವ ಕುಂವಿ ಓದುಗರ ಅಂಗೈಯ ಗೆರೆಗಳಂತೆ ಅವರ ಪಾತ್ರ, ಕಥಾ ವಸ್ತು, ಭಾಷೆ ಆಪ್ತವಾಗಿವೆ. ಜೀವಂತಚಿತ್ರದಂತೆ ಎದ್ದು ಬರಬೇಕೆಂಬ ಮಹತ್ವಾಂಕ್ಷೆಯಲ್ಲಿ ಬರೆಯುತ್ತಿರುವ ಕುಂವಿಯವರ ಅನುಭವ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ಆವೇಗ ಶೈಲಿಯನ್ನು ಭಾರ ಮಾಡುವ ಅಥವಾ ಅಂದಗೆಡಿಸುವ ಬಗ್ಗೆ ಎಚ್ಚರವಹಿಸಬೇಕಿದೆ ಎಂಬುದು ವಿಮರ್ಶಕರ ಸಲಹೆಯಾಗಿದೆ.

ಬೆಸಗರಹಳ್ಳಿಯವರು ಗಟ್ಟಿಯಾದ ವಸ್ತುವನ್ನು ಆಯ್ದುಕೊಂಡು ತಂತ್ರದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ ಬರೆದ ಕಾರಣದಿಂದ ಅವರ ಕಥೆಗಳು ಸಹಜವಾಗಿವೆ. ಮಾನವತೆಯನ್ನು ನಲುಗಿಸುವ, ವ್ಯವಸ್ಥೆಯನ್ನು ನಿಷ್ಠುರವಾಗಿ ನೋಡುವ ಅವರು 'ಪ್ರಜಾಪ್ರಭುತ್ವ ಮತ್ತು ಮೂರು ಮಂಗ'ಗಳಂಥ ಕಥೆಯನ್ನು ತುತರ್ು ಪರಿಸ್ಥಿತಿ ಹೊತ್ತಲ್ಲಿ ಬರೆದರು. ನಾಗವಾರರ ಕಥನ ಶೈಲಿ ಇದಕ್ಕಿಂತ ಸ್ವಲ್ಪ ಬಿನ್ನವಾಗಿ ತೋರುತ್ತದೆ. ಬೌದ್ಧಿಕ ಸತ್ವದ ಜೊತೆಗೆ ಆಧುನಿಕ ಮನಸ್ಸಿನ ಅಂತರಾಳ ಅರಿಯುವ ಪ್ರಕ್ರಿಯೆ ಅವರ ಕಥೆಗಳಲ್ಲಿ ನಡೆಯುತ್ತದೆ. ಕೇವಲ ಲೈಂಗಿಕವಲ್ಲದ ಪ್ರೇಮ ಪ್ರೀತಿಯಂಥ ತೀವ್ರ ಗಳಿಗೆಗಳಲ್ಲಿ ಮನುಷ್ಯ ನಿಮರ್ಿತ ಕೃತಕ ಬೇಲಿಗಳನ್ನು ಧಿಕ್ಕರಿಸಿ ನೈಜ ಮನುಷ್ಯತ್ವದ ನೆಲೆ ಹುಡುಕುವ ಆಶಯ ಎದ್ದುಕಾಣುತ್ತದೆ.

ಬಂಡಾಯದ ಬಹು ಮಹತ್ವವಾದ ಬೆಳಸು ಮುಸ್ಲಿಂ ಕಥನ ಸಾಹಿತ್ಯ. ಈ ಲೇಖಕರು ತಮ್ಮ ಅನುಭವ ಮತ್ತು ಬದುಕನ್ನು ಕಥೆಗಳಲ್ಲಿ ಚಿತ್ರಿಸಿದ್ದು. ಬೊಳುವಾರು ಮಹ್ಮದ್ ಕುಂಞ, ಫಕೀರ್ ಮಹ್ಮದ್ ಕಟ್ಪಾಡಿ, ಸಾರಾ ಅಬೂಬಕರ್, ಬಾನು ಮುಷ್ತಾಕ್, ಅಬ್ದುಲ್ ರಶೀದ್, ಅಬ್ಬಾಸ್ ಮೇಲಿನಮನಿ ಅದುವರೆಗೆ ಅವಜ್ಞೆಗೆ ಗುರಿಯಾಗಿದ್ದ ಮುಸ್ಲಿಂ ಸಂವೇದನೆಗಳನ್ನು ಪರಿಚಯಿಸಿದರು. ಮುಸ್ಲಿಂ ಲೇಖಕಿಯರೂ ಬರೆಯಲಾರಂಭಿಸಿದ್ದು ಒಂದು ದೊಡ್ಡ ಬದಲಾವಣೆಯಾಗಿ ಗೋಚರವಾಗುತ್ತದೆ. ಬೊಳುವಾರರು ತಾತ್ವಿಕವಾಗಿ ಖಚಿತತೆ ಹೊಂದಿ ಸಂಕೀರ್ಣ ವಸ್ತುವನ್ನೂ ಸರಳವಾಗಿ ನಿರೂಪಿಸುವಲ್ಲಿ ಅವರ ಕಥೆಗಳ ಶಕ್ತಿ ಅಡಗಿದೆ. ವೈಚಾರಿಕ ವಿಶ್ಲೇಷಣೆ ಮೂಲಕ ಮೌಲ್ಯಗಳನ್ನು ಹೆಕ್ಕುವ ವಿಧಾನ ವಿಶಿಷ್ಟ. ಅವರ 'ಅಂಕ', 'ದೇವರುಗಳ ರಾಜ್ಯದಲ್ಲಿ', 'ರುಖಿಯಾ', 'ಮುತ್ತುಚ್ಛೇರಾ' ಕಥೆಗಳು ಮಾನವತೆಯ ತೀವ್ರ ಕಳಕಳಿಯನ್ನು ಬಿಂಬಿಸುತ್ತವೆ. ವರ್ತಮಾನದ ಮುಸ್ಲಿಂ ಬದುಕಿನ ವೈರುಧ್ಯಗಳನ್ನು ವಿಮಶರ್ಿಸುವ ಫಕೀರ್ ಮಹ್ಮದ್ ಕಟ್ಪಾಡಿಯವರ ಕಥನದ ಪ್ರಹಾರ ಹೆಚ್ಚು ತೀವ್ರ. ಮುಗ್ಧ ಮಕ್ಕಳ ವಿಸ್ಮಯಪ್ರಜ್ಞೆಯ ಮೂಲಕ ವಿಷಾದದ ವ್ಯಂಗ್ಯ ಬೆರೆಸುವ ಅವರ ಶೈಲಿ ಅನನ್ಯ. ಸಾರಾ ಅಬೂಬಕರ್ ನೇರ ಆಕ್ರೋಶದ ಮೂಲಕ ಗಮನಸೆಳೆಯುತ್ತಾರೆ. ತೀರಾ ಭಾವುಕರಾದ ಕಥೆಗಾತರ್ಿ ಕಥೆಯ ಪಾತ್ರಗಳಲ್ಲಿ ಪೂರ್ಣ ಬೆರೆತುಬಿಡುತ್ತಾರೆ. ಅಸಹಾಯಕರನ್ನು ಪ್ರೀತಿಯಿಂದ ಚಿತ್ರಿಸುವ ಅವರು ಜನವಿರೋಧಿ ಶಕ್ತಿಗಳನ್ನು ವ್ಯಂಗ್ಯ ಸಿಟ್ಟಿಲ್ಲದೆ, ಕರುಣೆಯಿಂದ ಅಟ್ಲೀಸ್ಟ್ ಕಾಮಿಕ್ ಆಗಿ ನೋಡದ ಅವರ ಶೈಲಿ ಪ್ರಶ್ನಾರ್ಹ. ಈ ಮುಸ್ಲಿಂ ಕಥೆಗಾರರು ಸಾಂಸ್ಕೃತಿಕವಾಗಿ ತೋರಿರುವ ಧೈರ್ಯ ದೊಡ್ಡ ಪ್ರತಿಭಟನೆಯೇ ಸರಿ. ಹಿಂದೂ ಮುಸ್ಲಿಂ ಸಮುದಾಯಗಳೆರಡರ ಸಂಗಮವಾಗಿ ಮುಸ್ಲಿಂ ಕಥನ ಸಾಹಿತ್ಯ ಮೈದಳೆದರೂ ಅವರು ಹೆಚ್ಚು ಒತ್ತು ನೀಡುವುದು ಸ್ವಾನುಭವಕ್ಕೆ, ಸ್ವಸಮುದಾಯದ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳಿಗೆ. ಮುಸ್ಲಿಮೇತರ ಸಮುದಾಯಗಳ ಕಡೆಗೂ ಈ ಕಥೆಗಾರರ ಗಮನಹರಿಯಬೇಕಾಗಿದೆಯೇನೊ?

ಶಾಂತರಸ, ಕುಂ.ವೀರಭದ್ರಪ್ಪ, ಕಾಳೇಗೌಡ ನಾಗೇವಾರ, ಬಿ.ಟಿ.ಲಲಿತಾ ನಾಯಕ, ಬರಗೂರು ರಾಮಚಂದ್ರಪ್ಪ, ಗೀತಾ ನಾಗಭೂಷಣ, ಚೆನ್ನಣ್ಣ ವಾಲೀಕಾರ, ಬೊಳುವಾರ ಮಹ್ಮದ್ ಕುಂಞಿ, ಫಕೀರ್ ಮಹ್ಮದ್ ಕಟ್ಪಾಡಿ, ಅಬ್ದುಲ್ ರಶೀದ್, ಭಾನುಮುಸ್ತಾಕ್, ಸಾರಾ ಅಬೂಬಕರ್, ಮೊಗಳ್ಳಿ ಗಣೇಶ, ಅರವಿಂದ ಮಾಲಗತ್ತಿ, ರಾಘವೇಂದ್ರ ಪಾಟೀಲ್, ಅಮರೇಶ ನುಗಡೋಣಿ, ಪ್ರಹ್ಲಾದ ಅಗಸನಕಟ್ಟೆ, ಬಾಳಾಸಾಹೇಬ ಲೋಕಾಪುರ, ನಟರಾಜ ಹುಳಿಯಾರ, ರೇಖಾರಾಣಿ, ಬಸವರಾಜ ಕುಕ್ಕರವಳ್ಳಿ, ರಾಜಶೇಖರ ಹತಗುಂದಿ, ಬಸವರಾಜ ಕುಕ್ಕರವಳ್ಳಿ, ಸೇರಿದಂತೆ ಇನ್ನೂ ಅನೇಕ ಕಥೆಗಾರರು ದಲಿತ ಬಂಡಾಯ ಮನೋಭಾವದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಮೂಲ ನವ್ಯದ ವಿಸ್ತರಣೆಯ ಪ್ರಯೋಗಶೀಲ ನವ್ಯಕಥೆಗಾರರೆಂದೇ ಕರೆಯಿಸಿಕೊಳ್ಳುವ ಕರೀಗೌಡ ಬೀಚನಹಳ್ಳಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಎಚ್.ನಾಗವೇಣಿ, ಮಿತ್ರಾ ವೆಂಕಟ್ರಾಜ್, ವೈದೇಹಿ, ಸುಮಂಗಲಾ, ಡಾ.ವಿನಯಾ ಮುಂತಾದ ಕಥೆಗಾರರು ಪ್ರಯೋಗದಲ್ಲಿ ವೈಶಿಷ್ಟತೆ ಮೆರೆಯುತ್ತಿದ್ದಾರೆ.
ನೂರು ವರ್ಷ ಕಂಡ ಆಧುನಿಕ ಕನ್ನಡ ಕಥಾ ಜಗತ್ತಿಗೆ ಇಂದು ಜಾಗತೀಕರಣ, ಉದಾರೀಕರಣ, ತಾಂತ್ರಿಕ ವಿಜ್ಞಾನ, ಸಾಮ್ರಾಜ್ಯಶಾಹಿ ಶಕ್ತಿಗಳ ಮೇಲಾಟ ಹೊಸ ಸವಾಲುಗಳನ್ನು ಸೃಷ್ಟಿಸಿವೆ. ಇಪ್ಪತ್ತನೆಯ ಶತಮಾನದ ಕನ್ನಡದ ಸಣ್ಣ ಕಥಾ ಸಾಹಿತ್ಯ ಬಹುಮಟ್ಟಿಗೆ ಮಾನವೀಯತೆ, ಅವಮಾನ, ಕನ್ನಡ ಕಟ್ಟುವಿಕೆ ಮತ್ತು ಸಂಸ್ಕೃತಿಯ ಅರ್ಥ ಪರಂಪರೆಗಳನ್ನು ವ್ಯಾಖ್ಯಾನಿಸುತ್ತದೆ. ಈ ಆಶಯಗಳನ್ನು ಮೀರಿ ಬೆಳೆದಿರುವ ಕನ್ನಡದ ಕಥನ ಇಂದು ಜಾಗತೀಕರಣ, ವಾಣಿಜ್ಯೀಕರಣ ಮತ್ತು ಸ್ಥಳೀಯ ಸಂಸ್ಕೃತೀಕರಣದ ವಿವಿಧ ಮಗ್ಗಲುಗಳನ್ನು ಪರಿಚಯಿಸುತ್ತದೆ. ವಸಾಹತುಶಾಹಿ ಸಂದರ್ಭ ದಾಟಿದ ಮೇಲೆ ನವ ವಸಾಹತುಶಾಹಿ ಸವಾಲಾಗಿದೆ. ಗ್ಲೋಬಲ್ ಮತ್ತು ಲೋಕಲ್ ಸಮಸ್ಯೆಗಳು ಸಂಕೀರ್ಣ ಸ್ವರೂಪ ತಾಳಿವೆ. ಯಾವುದೇ ಆಥರ್ಿಕ ಅಭಿವೃದ್ಧಿಯು ಸಂಸ್ಕೃತಿಯ ಅರ್ಥ ಪರಂಪರೆಗಳನ್ನು ಒಳಗೊಳ್ಳದಿದ್ದರೆ ಅದು ಹುಸಿ ನಾಗರಿಕತೆಯ ಬೆಳವಣಿಗೆಯಾಗುವ ಅಪಾಯವನ್ನು ಇಂದಿನ ಕಥನ ಎದುರಿಸಬಹುದಾದ ರೀತಿ ಕುತೂಹಲಕಾರಿ. ಹಲವು ಪಂಥ, ವರ್ಗ, ಮಾದರಿಗಳ ಮೂಲಕ ನಿರಾಯಾಸವಾಗಿ ಹರಿದು ಬಂದ ಕಥಾ ಕಿನಾರೆ ಇತ್ತೀಚೆಗೆ ಮೈದುಂಬಿ ಭೋಗರ್ೋರೆಯುತ್ತಿದೆ. ಉಳಿದೆಲ್ಲಾ ಸಾಹಿತ್ಯ ಪ್ರಾಕಾರಗಳಿಗಿಂತಲೂ ಕಥಾ ಪ್ರಾಕಾರ ಹೆಚ್ಚು ಚಚರ್ೆಯಾಗುತ್ತಿದೆ. ಜತೆಗೆ ಓದುಗ ವರ್ಗವನ್ನೂ ಕಾಪಾಡಿಕೊಂಡಿದೆ. ಹಿಂದಿನ ಕಥೆಗಾರರ ಹಲವು ಕಥೆಗಳನ್ನು ಹಾಗೂ ಕಥಾ ಪರಂಪರೆಗಳನ್ನು ಓದಿ ಅರಗಿಸಿಕೊಂಡು 20ನೇ ಶತಮಾನದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡ ಕಥೆಗಾರರು ಹೊಸ ಸಾಧ್ಯತೆಗಳ ಸೃಷ್ಟಿಗೆ ಕಾರಣರಾಗಿದ್ದಾರೆ. ನವ್ಯ ಮತ್ತು ದಲಿತ ಬಂಡಾಯ ಕಥೆಗಾರರೊಂದಿಗೇ ಬರೆಯುತ್ತಿದ್ದರೂ ಅವರ ಪ್ರಭಾವಕ್ಕೆ ಒಳಗಾಗಂದತೆ ಬರೆಯುತ್ತಿರುವುದು ಇತ್ತೀಚಿನ ಕಥೆಗಾರರ ಹೆಚ್ಚುಗಾರಿಕೆ. ನವ್ಯ ಮತ್ತು ಬಂಡಾಯದ ಸಂಧಿ ಕಾಲದಲ್ಲಿ ತಮ್ಮದೇ ಆದ ವಿಭಿನ್ನ ಕಥಾಲೋಕ ಸೃಷ್ಟಿಸಿದ ದೇವನೂರು ಮಹಾದೇವ ಮತ್ತು ಕುಂ.ವೀರಭದ್ರಪ್ಪ ಸೇರಿದಂತೆ ಇನ್ನೂ ಕೆಲವರ ದಟ್ಟ ಪ್ರಭಾವ ಇಂದು ಬರೆಯುತ್ತಿರುವ ಅನೇಕ ಕಥೆಗಾರರ ಮೇಲಿರುವುದು ಸ್ಪಷ್ಟ. ಕನ್ನಡ ಕಥನಶೈಲಿಯಲ್ಲಿ ವಿಶಿಷ್ಟತೆ ಸಾಧಿಸಿದ ಜಯಂತ ಕಾಯ್ಕಿಣಿ, ಎಸ್.ದಿವಾಕರ, ಕೆ.ಸತ್ಯನಾರಾಯಣ, ವಿವೇಕ ಶಾನಭಾಗ, ಕೇಶವ ಮಳಗಿ ಅವರದು ಮತ್ತೊಂದು ಮಾದರಿ. ಅವರನ್ನೂ ಅನುಕರಣೆ ಮಾಡಿದಂತೆ ಗೋಚರಿಸುವ ಅನೇಕ ಯುವ ಕಥೆಗಾರರು ವಿಭಿನ್ನ ಕಥಾ ವಸ್ತು, ಭಾಷಾ ಪ್ರಯೋಗ ಮತ್ತು ತಂತ್ರಗಾರಿಕೆ ಮೂಲಕ ವೈಶಿಷ್ಟ್ಯತೆ ಮೆರೆಯುತ್ತಿದ್ದಾರೆ.

ಕೌಟುಂಬಿಕ ಸಂಬಂಧಗಳ ಜಗತ್ತಿನ ಸುತ್ತ ಗಿರಕಿಹಾಕುವ ಕಥೆಗಾತರ್ಿಯರು ವ್ಯವಸ್ಥೆಯ ಅಪೇಕ್ಷೆಗಳನ್ನು ತಣಿಸುತ್ತಾ ಬಂದಿದ್ದಾರೇನೊ ಎಂಬತೆ ಭಾಸವಾಗುತ್ತಿದೆ. ಕನ್ನಡ ಕಥನಕ್ಕೆ ಮೊದಲ ಬಾರಿಗೆ ಮಹಿಳಾ ಪ್ರಜ್ಞೆಯನ್ನು ಢಾಳಾಗಿ ಕಾಣಿಸಿದವರು ವೀಣಾ ಶಾಂತೇಶ್ವರ. ನಂತರ ವೈದೇಹಿ, ಗೀತಾ ನಾಗಭೂಷಣ, ಬಿ.ಟಿ.ಲಲಿತಾ ನಾಯಕ, ಸಾರಾ ಅಬೂಬಕರ್, ಬಾನು ಮುಷ್ತಾಕ್, ನೇಮಿಚಂದ್ರ, ನಾಗವೇಣಿ, ಡಾ.ವಿನಯಾ, ಡಾ.ಸಬಿಹಾ ಕನ್ನಡ ಕಥೆಗಳಿಗೆ ಹೊಸ ಆಯಾಮ ತಂದುಕೊಡುವಲ್ಲಿ ಬಹು ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಬಂಡಾಯ ಘಟ್ಟ ಮತ್ತು ಇತ್ತೀಚಿನ ಎರಡು ದಶಕಗಳಿಂದ ಬರೆಯುತ್ತಿರುವ ಕಥೆಗಾರರು ಹೆಣ್ಣನ್ನು ಬದುಕಿನ ದೊಡ್ಡ ಚೈತನ್ಯವಾಗಿ ಚಿತ್ರಿಸುತ್ತಿರುವುದು ಸಾಮಾನ್ಯ. ವೀಣಾ ಶಾಂತೇಶ್ವರರ 'ತಿರುಗಿ ಹೋದಳು' ಕಥೆ ಸುಡು ವಾಸ್ತವ ಪರಿಚಯಿಸುವ ಕಥೆ. ವೈದೇಹಿಯವರು ಹೆಣ್ಣಿನ ಅಂತರಾಳದ ವಿವಿಧ ಮಗ್ಗಲುಗಳನ್ನು ಹೊರಗೆಡುಹುತ್ತಾರೆ. ಲಲಿತಾ ನಾಯಕರ ಕಥೆಗಳು ಭಾವುಕತೆ, ಅವಾಸ್ತವ ಸಂಗತಿಗಳಿಂದಲೇ ತುಂಬಿ ಬಂದ ಕಥೆಗಳಾಗಿವೆ. ಸಮಾಜದ ಮುಖ್ಯವಾಹಿನಿಯೆಂದು ತಿಳಿಯಲ್ಪಟ್ಟ ಸಂಸ್ಕೃತಿ ತಿರಸ್ಕರಿಸುವ ಸಂಗತಿಗಳನ್ನೇ ಹೆಚ್ಚು ಪ್ರೀತಿಯಿಂದ ಚಿತ್ರಿಸುವ ಕಾರ್ಯ ಇತ್ತೀಚಿನ ಕಥೆಗಳಲ್ಲಿ ದಟ್ಟವಾಗಿ ಕಾಣುತ್ತದೆ. ಬದುಕಿನ ಎಲ್ಲ ಸ್ತರಗಳಲ್ಲಿ ಅಡಗಿದ ಜೀವಂತಿಕೆ ಮತ್ತು ಚೈತನ್ಯಗಳನ್ನು ಬಹು ಸೂಕ್ಷ್ಮವಾಗಿ ಅಷ್ಟೆ ಪ್ರಬಲವಾದ ಪ್ರತಿಭಟನೆ ರೂಪದಲ್ಲಿ ಬಿಂಬಿಸುವ ಕ್ರಮ ಹಿಂದಿನ ಎಲ್ಲ ಮಾದರಿ ಮತ್ತು ಪಂಥಗಳಿಗಿಂತ ವಿಶಿಷ್ಟವೆನಿಸಿದೆ.

ಭಾರತೀಯ ಉಳಿದ ಭಾಷೆಗಳಿಗಿಂತಲೂ ಬಹು ಹೆಚ್ಚುಗಾರಿಕೆಯಿಂದ ಕನ್ನಡದಲ್ಲಿ ಪ್ರತಿ ವರ್ಷ ಹತ್ತಾರು ಜನ ಹೊಸ ಕಥೆಗಾರರು ಸಶಕ್ತರಾಗಿ ಹೊರಹೊಮ್ಮುತ್ತಿದ್ದಾರೆ. ವಿವಿಧ ಪತ್ರಿಕೆಗಳು ಮತ್ತು ಕನ್ನಡಪರ ಸಂಘ, ಸಂಸ್ಥೆ, ವಿಭಾಗಗಳು ನಡೆಸುವ ಸ್ಪಧರ್ೆಗಳೇ ಹೊಸ ಕಥೆಗಾರರನ್ನು ಮುಖ್ಯವಾಹಿನಿಗೆ ಪರಿಚಯಿಸುವ ವೇದಿಕೆಗಳಾಗಿವೆ. ಎಷ್ಟೇ ಸ್ವಾನುಭವ, ಓದಿನ ವಿಸ್ತಾರ, ಅನುಭವದ ಮೂಷೆಯೊಂದಿಗೆ ಬರೆಯುತ್ತಿರುವ ಅನೇಕ ಯುವ ಲೇಖಕರ ಕೃತಿಗಳು ಸಾಹಿತ್ಯಿಕ ವಲಯದಲ್ಲಿ ಚಚರ್ೆಯಾಗುವುದೇ ತೀರಾ ಅಪರೂಪವಾಗಿರುವುದು ಖೇದನೀಯ. ಹೊಸಬರ ಬರೆವಣಿಗೆ ಬಗ್ಗೆ ಬಹುತೇಕ ಹಿರಿಯ ಲೇಖಕರು ತಾಳಿರುವ ಅಸಡ್ಡೆ ತಕ್ಕುದಲ್ಲ. ಯಾವುದೇ ಸಾಹಿತ್ಯಿಕ ಸಭೆ, ಸಮಾರಂಭ, ಸಮ್ಮೇಳನ, ವಿಚಾರ ಸಂಕಿರಣ ನಡೆದರೂ ಹೊಸ ಲೇಖಕರ ಹೆಸರು, ಅವರು ಬರೆದದ್ದು ಕ್ಷೀಣವಾಗಿಯೇ ಪ್ರಕಟವಾಗುವುದು ವಾಡಿಕೆ. ಹಿಂದಿನವರು ಬರೆದದ್ದನ್ನು ಓದಿ ಅರಗಿಸಿಕೊಂಡು ವಿಶಿಷ್ಟಾನುಭವದಿಂದ ಬರೆಯಬೇಕೆಂದು ಸಮಯ, ವೇದಿಕೆ ಸಿಕ್ಕಾಗಲೆಲ್ಲಾ ಸಲಹೆ ನೀಡುವವರು ಯುವಲೇಖಕರ ಕೃತಿಗಳನ್ನು ಓದುವ ತಾಳ್ಮೆ ಮತ್ತು ಪೂವರ್ಾಗ್ರಹರಹಿತ ಚಚರ್ೆಗೆ ಅನುಕೂಲ ಪರಿಸ್ಥಿತಿ ಮಾಡಿಕೊಡಬೇಕೆಂಬುದು ಇಂದಿನ ಎಲ್ಲಾ ಯುವ ಲೇಖಕರ ಒತ್ತಾಸೆ. ಆಧುನಿಕತೆ, ಜಾಗತೀಕರಣ ಮತ್ತು ಮಾಧ್ಯಮ ಕ್ರಾಂತಿ ಹೆಸರಲ್ಲಿ ಏನೆಲ್ಲಾ ಗಾಬರಿ ಹುಟ್ಟಿಸುವ ಸಂಗತಿಗಳು ನಡೆದರೂ ಕನ್ನಡ ಸಾಹಿತ್ಯ ತನ್ನದೇ ಆದ ಗಾಂಭೀರ್ಯದಿಂದ ಮುನ್ನುಗ್ಗುತ್ತಿದೆ ಎಂಬುದು ಎಲ್ಲರೂ ಒಪ್ಪಲೇಬೇಕಾದ ಮಾತು. ಸದ್ಯ ಯಾವುದೇ ಎದ್ದುಕಾಣುವ ಸಾಹಿತ್ಯಿಕ ಚಳವಳಿ, ಪ್ರಭಾವಬೀರುವ ಅಂಶಗಳು ಅಷ್ಟಾಗಿ ಗೋಚರವಾಗುತ್ತಿಲ್ಲ ಎನ್ನಿಸಿದರೂ ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣವಾದ ಬದುಕೇ ಸಾಕು ಹೊಸ ಸಾಹಿತ್ಯದ ಸೃಷ್ಟಿಗೆ. ವೈವಿಧ್ಯಮಯ ಕಥಾ ವಸ್ತುವಿಗೆ ಕೊರತೆಯಿಲ್ಲ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ , ನವವಸಾಹುತುಶಾಹಿ, ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳು ತಂದಿಟ್ಟಿರುವ ಬಿಕ್ಕಟ್ಟು ಬಂಡಾಯದ ಸಂದರ್ಭಕ್ಕಿಂತಲೂ ಹೆಚ್ಚು ಕ್ರೂರ ಹಾಗೂ ಹಾಗೇ ನಿಭಾಯಿಸಲು ಅಸಾಧ್ಯವಾದದ್ದು. ಇವುಗಳ ಜೊತೆಗೆ ಮತಾಂಧತೆ, ಕೋಮುದ್ವೇಷ, ಆಧುನಿಕ ತಂತ್ರಜ್ಞಾನ ಕೇಂದ್ರಿತ ಉದ್ಯೋಗ ಮತ್ತು ಬದುಕು ಸೃಷ್ಟಿಸುತ್ತಿರುವ ದಯನೀಯ ಸಂಗತಿಗಳು ಹೆಚ್ಚು ಸಶಕ್ತವಾಗಿ ಬರೆಯುವವರನ್ನು ಪ್ರೇರೇಪಿಸುತ್ತಿವೆ. ದೇಶ, ಗಡಿ, ಪ್ರಾದೇಶಿಕತೆ, ಭಾಷೆ, ಜಲ, ಸಂಪತ್ತಿನ ಮೇಲೆ ಹಿಡಿತ ಸಾಧಿಸಲು ನಿತ್ಯ ಹೊಂಚು ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಇದನ್ನೆಲ್ಲಾ ಗಮನಿಸದರೆ ಸಾಹಿತ್ಯ ಹಿಡಿಯಬೇಕಾದ ಹೊಸ ಜಾಡಿನ ಅನಿವಾರ್ಯತೆ ಸ್ಪಷ್ಟವಾಗುತ್ತದೆ.

ಇಂದು ಕಥೆ ಬರೆಯುವವರಿಗೇನೂ ಕೊರತೆಯಿಲ್ಲ. ಆದರೆ ಹಿರಿಯ ಕಥೆಗಾರರೆನಿಸಿಕೊಂಡವರೂ ಹಳೆಯ ತಲೆಮಾರಿನ ಹಳಸಲು ಕಥಾ ವಸ್ತು, ಮಾದರಿ, ಶೈಲಿ, ಭಾಷೆ, ಪಾತ್ರ ಮತ್ತು ಬಳಸಲ್ಪಟ್ಟ ಕಥನ ಕಲೆ ನಿರ್ವಹಣೆಯನ್ನೇ ಮುಂದುವರೆಸಿದ್ದನ್ನೂ ತಳ್ಳಿಹಾಕುವಂತಿಲ್ಲ. ಕಥೆಯೆಂದರೆ ಹೀಗೆ ಎಂಬ ಸಿದ್ಧಸೂತ್ರಗಳನ್ನು ಬಂಡಾಯಕ್ಕಿಂತಲೂ ಹೆಚ್ಚು ತೀವ್ರ ಹಾಗೂ ಗೋಚರಿಸುವ ರೀತಿಯಲ್ಲಿ ಧಿಕ್ಕರಿಸಿದ್ದು ಕಳೆದ ಎರಡು ದಶಕಗಳಿಂದ ಬರೆಯುತ್ತಿರುವ ಕಥೆಗಾರರಲ್ಲಿ ಎದ್ದುಕಾಣುತ್ತದೆ. ಕಥಾ ಪರಂಪರೆಯನ್ನು ಹೆಚ್ಚು ಆಸ್ತೆಯಿಂದ ಬೆಳೆಸುತ್ತಿರುವ ಕುಂ.ವೀರಭದ್ರಪ್ಪ, ಅಬ್ದುಲ್ ರಶೀದ್, ಫಕೀರ್ ಮಹ್ಮದ್ ಕಟ್ಪಾಡಿ, ರಾಘವೇಂದ್ರ ಪಾಟೀಲ್, ಮೊಗಳ್ಳಿ ಗಣೇಶ, ಅಮರೇಶ ನುಗಡೋಣಿ, ಜಯಂತ ಕಾಯ್ಕಿಣಿ, ಚೆನ್ನಣ್ಣ ವಾಲೀಕಾರ, ಮಲ್ಲಿಕಾಜರ್ುನ ಹಿರೇಮಠ, ಡಿ.ಎಸ್.ಚೌಗಲೆ, ಮಲ್ಲಿಕಾಜರ್ುನ ಪಾಟೀಲ್, ಬಾಳಾಸಾಹೇಬ ಲೋಕಾಪುರ, ಚಿತ್ರಶೇಖರ ಕಂಠಿ, ಅಬ್ಬಾಸ್ ಮೇಲಿನಮನಿ, ಬಸು ಬೇವಿನಗಿಡದ, ಅಲಕ ತೀರ್ಥಹಳ್ಳಿ, ಕಂನಾಡಿಗಾ ನಾರಾಯಣ, ಪ್ರಹ್ಲಾದ ಅಗಸನಕಟ್ಟೆ, ಲೋಕೇಶ ಅಗಸನಕಟ್ಟೆ, ಕೇಶವ ಮಳಗಿ, ವಿವೇಕ ಶಾನಭಾಗ, ಮತ್ತಿತರರ ಜೊತೆಗೆ ಸ್ಪಧರ್ಿಗಳೆಂಬಂತೆ ಭಿನ್ನ ಯೋಚನಾ ಕ್ರಮ ಮೈಗೂಡಿಸಿಕೊಂಡು ಬರೆಯುತ್ತಿರುವ ಯುವ ಕಥೆಗಾರರ ಪಡೆ ಕನ್ನಡ ಸಾಹಿತ್ಯ ವಲಯಕ್ಕೆ ಗಾಬರಿ ಹುಟ್ಟಿಸುವ ರೀತಿಯಲ್ಲಿ ಬರೆಯುತ್ತಿದೆ. ಆನಂದ ಋಗ್ವೇದಿ, ವಿ.ಎಂ.ಮಂಜುನಾಥ, ಚಿದಾನಂದ ಸಾಲಿ, ಕಸ್ತೂರಿ ಬಾಯಿರಿ, ಡಾ.ವಿನಯಾ, ಕೆ.ಶರೀಫಾ, ಸಜರ್ಾಶಂಕರ್, ಮಹಾಂತೇಶ ನವಲಕಲ್, ಸಚ್ಚಿದಾನಂದ ಹೆಗಡೆ, ಎನ್.ಕೆ.ಹನುಮಂತಯ್ಯ, ಮಂಜುನಾಥ ಗೀತಾ, ಮಂಜುನಾಥ ಲತಾ, ಗಂಗಾಧರ ಬೀಚನಹಳ್ಳಿ, ನಾಗಮಂಗಲ ಕೃಷ್ಣಮೂತರ್ಿ, ಡಾ.ಯಲ್ಲಪ್ಪ ಕೆ.ಕೆ.ಪುರ ಬಹು ಕಸುವಿನಿಂದ ಬರೆಯುತ್ತಿರುವುದು ಅಭಿಮಾನ ಮತ್ತು ಆಶಾಯಕ ಸಂಗತಿ.

'ಒಳ್ಳೆಯ ಕಥೆಗಳ ರಚನೆಗೆ ಸ್ವಾನುಭವ ಮತ್ತು ಅನ್ಯನುಭವಗಳ ನಿರೂಪಣೆಯಷ್ಟೇ ಸಾಕಾಗುವುದಿಲ್ಲ. ವಾಸ್ತವದ ಶೋಧನೆಗೆ ಕಂಡುಂಡ ಅನುಭವಗಳಂತೆಯೇ ಕಲ್ಪನೆಯ ನೆರವಿನಿಂದ ಕಟ್ಟಿಕೊಡುವ ಅನುಭವಗಳೂ ಅತ್ಯಗತ್ಯ. ಹಲವು ದೇಶ, ಕಾಲ, ಸಂದರ್ಭಗಳನ್ನು ಒಮ್ಮೆಲೆ ಹಿಡಿಯಬೇಕಾದ 'ಕಥೆ'ಗಳಿಗಂತೂ ಈ ಬಗೆಯ ಕಲ್ಪನಾತ್ಮಕ ಪ್ರತಿಭೆಯು ಅತ್ಯಗತ್ಯ. ಅಂತೆಯೇ, ಕಥೆಯ ವಿಭಿನ್ನ ಭಾಗಗಳಲ್ಲಿ ಯಾವುದು ಎಷ್ಟು ಮುಖ್ಯ, ಯಾವುದು ಎಷ್ಟು ಇರಬೇಕು ಎನ್ನುವ ತಿಳಿವಳಿಕೆ, ಮೂರ್ತವಾದ ವಿವರಗಳಿಂದಲೇ ಅಮೂರ್ತವಾದ ದರ್ಶನವನ್ನು ಒಡಮೂಡಿಸುವ ಶಕ್ತಿ, ಭಾಷೆಯ ವಿಭಿನ್ನ ನೆಲೆಗಳನ್ನು ಸಂಯೋಜಿಸುವ ಸಾಮಥ್ರ್ಯ, ದೈನಿಕ ವಿವರಗಳ ಸಾಂಕೇತಿಕ ಬಳಕೆ ಇವೆಲ್ಲದರ ಸಂಯೋಗದಿಂದ ಉತ್ತಮವಾದ ಕಥೆಯು ಮೂಡಿ ಬರುತ್ತದೆ. ಕನ್ನಡದ ಮತ್ತು ಜಗತ್ತಿನ ಕಥಾ ಪರಂಪರೆಯ ನಿಕಟ ಪರಿಚಯವು ನಮ್ಮ ಕಥೇಗಾರರನ್ನು ಈ ಸಾಧ್ಯತೆಗಳ ದಿಕ್ಕಿನತ್ತ ಕರೆದೊಯ್ಯಬೇಕು' ಎಂದು ಬರಗೂರು ರಾಮಚಂದ್ರಪ್ಪ ಮತ್ತು ಎಚ್.ಎಸ್.ರಾಘವೇಂದ್ರರಾವ್ ಇತ್ತೀಚಿನ ಕಥೆಗಳ ಕುರಿತು ಹೇಳಿರುವ ಮಾತು ಹೊಸ ಕಥೆಗಳ ಜಾಡು ಗುರುತಿಸುವಲ್ಲಿ ದಿಕ್ಸೂಚಿಯಾಗಿದೆ.

ಯಾವುದೇ ಲೋಕಾನುಭವವು ಕಥೆಗಾರನ ಅಂತರಂಗದಲ್ಲಿ ಪ್ರವೇಶ ಪಡೆದು ಅವನಿಗೇ ವಿಶಿಷ್ಟವಾದ ಗ್ರಹಿಕೆಯ ಕ್ರಮದಿಂದ ಮರುಹುಟ್ಟು ಪಡೆದಾಗ ಮಾತ್ರ 'ಕಥೆ'ಯೆಂಬ ಪವಾಡ ಸಂಭವಿಸುತ್ತದೆ. ಕಥೆ ಎಂಬುದು ಕೇವಲ ಲೋಕಾನುಭವಕ್ಕೆ ಸಂವಾದಿಯಾದ ಭಾಷಾ ಶರೀರವಲ್ಲ. ತನ್ನ ಕಲ್ಪನಾ ಶಕ್ತಿಯ ನೆರವಿನಿಂದ ಕಥೆಗಾರ ಕಥೆಯಲ್ಲಿ ತನ್ನದೇ ಆಶಯ, ಅರ್ಥಗಳನ್ನೂ ನೀಡಬೇಕು. ಸಣ್ಣಕಥೆ ಎಂಬ ಸಾಹಿತ್ಯ ಪ್ರಕಾರದ ಹರಹು ಹಾಗೂ ಇತಿಮಿತಿಗಳ ಬಗ್ಗೆ ಸರಿಯಾದ ತಿಳಿವಳಿಕೆ ಹೊಂದಿಲ್ಲದ ಅನೇಕ ಪ್ರಯತ್ನವಾದಿ ಕಥೆಗಾರರ ಸೋಲಿಗೆ ಅವರಲ್ಲೆ ಉತ್ತರವಿದೆ. ಕಥೆಯೆನ್ನುವುದು ಕೇವಲ ಭಾವನೆಗಳ ಮತ್ತು ಸೃಜನಶಕ್ತಿಯ ದುಂದುಗಾರಿಕೆಯೆಂದು ತಿಳಿಯದೆ ಒಂದು ನಿಧರ್ಿಷ್ಟ ಉದ್ದೇಶಕ್ಕೆ ದುಡಿಸಿಕೊಳ್ಳುವ ಕಲೆಗಾರಿಕೆಯಾಗಬೇಕು. ಸ್ವಯಂಪೂರ್ಣ ಜಗತ್ತನ್ನು ಸೃಷ್ಟಿಸುವ ಆಶಯದೊಂದಿಗೆ ಕಥೆ ರಚನೆಯಾಗುವ ಬದಲು ಸುಧಾರಣೆ ಅಥವಾ ಆದರ್ಶಗಳ ಭಾರವನ್ನು ಅಕ್ಷರಗಳ ಮೂಲಕ ಸಾಧಿಸುವುದಲ್ಲ. ಕನ್ನಡ ಕಥೆಗಳೆಂದರೆ ಇಡಿಯಾಗಿ ಕಾಣಸಿಗದೆ ವಿವಿಧ ಪ್ರಾಂತ, ಭಾಷಾ ಶೈಲಿ, ಕಥೆಗಾರರ ಸಂವೇದನಾಶೀಲತೆ, ಸೃಜನಶೀಲ ಮನಸ್ಸು, ಸಮಸ್ಯೆಗಳು, ಚಳವಳಿಗಳೂ ಭಿನ್ನ ಕಥೆಗಳ ರಚನೆಗೆ ಕಾರಣವಾದ ಅಂಶಗಳಾಗಿವೆ. ಕನ್ನಡ ಕಥನಕ್ಕೆ ತಮ್ಮದೇ ಆದ ವಿಶಿಷ್ಟಾನುಭವವನ್ನು ಉಣಬಡಿಸಿದ ಮೊಗಳ್ಳಿ ಗಣೇಶ 'ಬುಗುರಿ' ಮೂಲಕ ಸಂಚಲನ ಮೂಡಿಸಿದರು. ನಂತರದ ಬಹುತೇಕ ಕಥೆಗಳಲ್ಲಿ ಹಿಂದಿನ ಬುಗುರಿಯ ಸುತ್ತ ಸುತ್ತಲು ಹೊಸ ಜಾವಳಗಿ (ದಾರ) ಬಳಸಿದರಷ್ಟೆ ಅನ್ನಿಸುತ್ತದೆ. ಅವರು ಉಳಿದ ತಮ್ಮ ಸಹಲೇಖಕರಂತೆ ಕಥೆ ಹೇಳುವ ಕ್ರಮದಲ್ಲಿ ವೈವಿಧ್ಯತೆಯನ್ನು ಸಾಧಿಸಲಿಲ್ಲ. 'ಬುಗುರಿ' ಪ್ರಕಟವಾದ ದಿನದಿಂದ ಇಲ್ಲಿಯವರೆಗೂ ಮೊಗಳ್ಳಿ ಬರೆದ ಅತ್ಯುತ್ತಮ ಕಥೆ ಎಂಬುದರಲ್ಲಿ ಎರಡು ಮಾತಿಲ್ಲ. ದಲಿತ ಜಗತ್ತನ್ನು ತುಂಬಿಕೊಂಡಿರುವ ವಿಷಾದ ಮತ್ತು ಅಸಹಾಯಕತೆಗಳನ್ನು ಈ ಕಥೆ ಸಂಕೀರ್ಣವಾಗಿ ಅಷ್ಟೇ ಕಲಾತ್ಮಕವಾಗಿ ಕಟ್ಟಿಕೊಡುತ್ತದೆ. ಆವೇಶ ಮತ್ತು ಭಾವುಕತೆಗಳ ಲವಲೇಶವೂ ಇಲ್ಲದೆ ಪಾತ್ರಗಳ ಒಳಜಗತ್ತಿನ ತಲ್ಲಣಗಳು ಮತ್ತು ಆ ತಲ್ಲಣಗಳಿಗೆ ಕಾರಣವಾದ ಹೊರಜಗತ್ತಿನ ಶಕ್ತಿಗಳು ಕಥೆಯಲ್ಲಿ ಚಿತ್ರಿತವಾಗಿವೆ. ಮುಗ್ಧ ಬಾಲಕ ಚೆಲುವನ ನೆಲೆಯಿಂದ ನಿರೂಪಿತವಾಗುವ ಕಥೆಗೆ ವ್ಯಕ್ತಿನಿಷ್ಠ ಆಯಾಮಗಳು ದೊರಕುತ್ತವೆ. ಜೀವನಪ್ರೀತಿಗೆ ಸಂಕೇತವಾಗಿರುವ ಬುಗುರಿಯ ಬಗೆಗಿನ ಹಂಬಲವನ್ನು ನೀಗಿಕೊಳ್ಳುವ ಮಟ್ಟಿಗೆ ಅವನ ಚೇತನದ ಮೇಲೆ ಆಗುವ ಹೊರಲೋಕದ ಆಕ್ರಮಣ ಅಸಾಧಾರಣವಾದುದು. ತಾಯಗರ್ಭವನ್ನು ಮರಳಿ ಸೇರಿಬಿಡಬೇಕೆಂಬ ಅವನ ಬಯಕೆ ಒಂದು ಇಡೀ ಸಮುದಾಯದ ಆಕ್ರಂದನವಾಗುತ್ತದೆ. ಗುಂಜಾರಯ್ಯ, ಅಟಾರಿ, ಚಿಕ್ಕಣ್ಣ ಮತ್ತಿತರ ಪಾತ್ರಗಳ ಅವಮಾನದ ಆಳಗಳು ವಿವರಣೆಗೆ ನಿಲುಕುವುದಿಲ್ಲ. ತಣ್ಣಗೆ ಉರಿಯುವ ಭಾಷೆ, ಅಲ್ಲಲ್ಲಿ ಮಿಂಚುವ ಹಾಸ್ಯದ ಎಳೆಗಳು ಮತ್ತು ಒಂದು ಜೀವನ ಕ್ರಮದ ಪ್ರಬುದ್ಧ ಅರಿವು 'ಬುಗುರಿ' ಕಥೆಯ ಯಶಸ್ಸಿಗೆ ಕಾರಣ ಎನಿಸಿದೆ. ಅವರ 'ನನ್ನ ಅಜ್ಜನಿಗೊಂದಾಸೆಯಿತ್ತು', 'ಆ ಅಳು ಇನ್ನೂ ಈಗಲೂ' ಸೇರಿದಂತೆ ಅನೇಕ ಕಥೆಗಳು 'ಬುಗುರಿ'ಯ ಮುಂದುವರೆದ ಭಾಗಗಳಾಗಿವೆ. ನಂತರದ ಕೆಲವು ಕಥೆಗಳಲ್ಲಿ ಜಾನಪದ ಹಾಗೂ ಐತಿಹಾಸಿಕ ವಸ್ತುಗಳಾಧರಿಸಿ ಬರೆದ ಕಥೆಗಳು ಗಮನ ಸೆಳೆಯುತ್ತವೆಯಾದರೂ 'ಬುಗುರಿ' ಬರೆದ ಕಾಲ ಘಟ್ಟದಿಂದ ತೀರಾ ಭಿನ್ನವಾಗಿ ಬದುಕುತ್ತಿರುವ ಹಾಗೆ ಯೋಚಿಸುತ್ತಿರುವ ಮೊಗಳ್ಳಿಯವರು ಏಕತಾನತೆಯಿಂದ ಹೊರಬಂದು ವಿಭಿನ್ನ ದೃಷ್ಟಿಕೋನದ ಹಾಗೂ ಪ್ರಸ್ತುತ ಸವಾಲುಗಳು ಸೃಷ್ಟಿಸಿರುವ ಸಂಕಷ್ಟಗಳ ಬಗ್ಗೆಯೂ ಮತ್ತೊಮ್ಮೆ 'ಬುಗುರಿ' ತಿರುಗಿಸಬೇಕಾಗಿದೆ.

ಮೊಗಳ್ಳಿಯವರ ಜೊತೆ ಜೊತೆಗೆ ಬೆಳೆಯುತ್ತಿರುವ ಹಾಗೂ ಬರೆಯುತ್ತಿರುವ ಕನ್ನಡದ ಮತ್ತೊಬ್ಬ ಮಹತ್ವದ ಕಥೆಗಾರ ಅಮರೇಶ ನುಗಡೋಣಿ, ಹೈದರಾಬಾದ್ ಕನರ್ಾಟಕ ಪ್ರದೇಶದ ಉತ್ತಮ ಕೊಡುಗೆ. ಶಾಂತರಸರ ಗರಡಿಯಲ್ಲಿ ಬರೆಯಲು ಆರಂಭಿಸಿದ ಅವರು ಮೊದಲಿದ್ದ ಹಿಂಜರಿಕೆ ಮೀರಿ ತಮ್ಮದೇ ಆದ ಕಥನ ಮಾದರಿಯತ್ತ ವಾಲಿರುವುದು ಆಶಾದಾಯಕ. ನವ್ಯ ಹಾಗೂ ಬಂಡಾಯ ಮಾದರಿಯಲ್ಲೆ ಮೈದಳೆಯುವ ಅವರ ಆರಂಭದ ಕಥೆಗಳು ಇತ್ತೀಚೆಗೆ ಜಾಗತೀಕರಣದ ಸವಾರಿಯನ್ನೂ ಎಳೆ ಎಳೆಯಾಗಿ ಬಿಡಿಸಲು ಯತ್ನಿಸುತ್ತಿವೆ. ರಾಯಚೂರು ಜಿಲ್ಲೆಯ ಸಿರವಾರ ಸುತ್ತಲಿನ ಭಾಷಾ ಪ್ರಯೋಗ ಅವರ ಕಥೆಗಳಲ್ಲಿ ಮೈದಳೆದರೂ ಬಳ್ಳಾರಿಯ ವಿಶಿಷ್ಟ ಆಡುಭಾಷೆಯ ಲಯ, ಗತಿ, ಶೈಲಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ ಕುಂವಿಯವರಂತೆ ವ್ಯಂಗ್ಯ, ವಿಡಂಬನಾ ರೀತಿಯ ಭಾಷಾ ಪ್ರಯೋಗದಲ್ಲಿ ನುಗಡೋಣಿ ಸ್ವಲ್ಪ ಮಟ್ಟಿಗೆ ಸೋಲುತ್ತಾರೆ. ಆಧುನಿಕ ಕನ್ನಡ ಕಥಾ ಪರಂಪರೆ ಸಾಗುತ್ತಿರುವ ಹೊಸ ಹಾದಿಯಲ್ಲಿ ಸಾಗುತ್ತಿರುವ ಕಥೆಗಾರರ ಸಾಲಿನಲ್ಲಿ ಮುಂದೆ ನಡೆಯುತ್ತಿರುವ ನುಗಡೋಣಿಯವರು ಮತ್ತಷ್ಟು ಕಸುವು ಹೊಂದಬೇಕಿದೆ. 'ಮಣ್ಣು ಸೇರಿತು ಬೀಜ' ಮತ್ತು 'ತಮಂಧದ ಕೇಡು' ಕಥಾ ಸಂಕಲನಗಳ ಮೂಲಕ ಕನ್ನತ ಕಥಾ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ ಅವರು ಮೂರನೇ ಕಥಾ ಸಂಕಲನ 'ಸವಾರಿ'ಯ ಮೂಲಕ ಕನ್ನಡದ ಕಥಾ ಲೋಕ ಸಾಗಿರುವ ಹೊಸ ಜಾಡಿನ ಶೋಧನೆಗೆ ಮೈಲುಗಲ್ಲಾಗಿದ್ದಾರೆ. ಕಥೆಗಳ ಶೀಷರ್ಿಕೆಗೆ ವಚನಗಳ ಸಾಲುಗಳನ್ನೇ ಆಯ್ಕೆಮಾಡಿಕೊಳ್ಳುವ ನುಗಡೋಣಿಯವರ ಪ್ರಿಫೆರೆನ್ಸ್ ವಿಶಿಷ್ಟವೆನಿಸುತ್ತದೆ. 'ಏ ದಿಲ್ ಮಾಂಗೆ ಮೋರ್', 'ಕಣ್ಣು ಮುಕ್ಕಾದ ಬೀಜಗಳು', 'ಮೀರುವ ಘನ', 'ಜೋಗುಳ ನಿಂದಲ್ಲದೆ', 'ದೈವಕ್ಕೆ ಶರಣಂಬೆವು', 'ಒಡಲುಗೊಂಡವರು', 'ಕುಡಿಬಂದ ದೀಪಗಳು' ಮತ್ತು 'ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು' ಎಂಬ ಕಥೆಗಳು ಕನ್ನಡ ಕಥೆಗಳಿಗೆ ಉತ್ತಮ ಸೇರ್ಪಡೆ. ಸದ್ಯದ ವಿದ್ಯಮಾನಗಳನ್ನು ವಿಶಿಷ್ಟ ಸ್ವಾನುಭವ ಮತ್ತು ಭಾಷಾ ಶೈಲಿಯೊಂದಿಗೆ ಚಿತ್ರಿಸುವಲ್ಲಿ ನುಗಡೋಣಿಯವರು ಓದುಗರ ಗಮನಸೆಳೆಯುತ್ತಾರೆ.
ನೈಸಗರ್ಿಕ ಸಂಪನ್ಮೂಲಗಳೇ ಖಾಲಿಯಾಗಿ ಕೈಗಾರಿಕೆಗಳು ನಿಂತು ಲೆನಿನ್ ಪ್ರಣೀತ ಕಾಮರ್ಿಕ ಕ್ರಾಂತಿ ಬಣ್ಣ ಕಳೆದುಕೊಳ್ಳುತ್ತಿರುವುದನ್ನು, ಮಾವೋ ವಿಚಾರಧಾರೆಯ ಕೃಷಿ ಮತ್ತು ಕಾಮರ್ಿಕ ಕ್ರಾಂತಿ ಬದಲಾಗುತ್ತಿರುವ ರೀತಿಯನ್ನು ಮತ್ತು ಹಸಿರು ಕ್ರಾಂತಿ ಸದ್ಯದ ಪರಿಸ್ಥಿತಿಯಲ್ಲಿ ಹೊಸ ತಂತ್ರಗಳ ಬಗ್ಗೆ ಕಲಾತ್ಮಕತೆ ಮತ್ತು ವೈವಿಧ್ಯಮಯವಾಗಿ ಚಿತ್ರಿಸುವ 'ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು' ಕಥೆ, ಕನ್ನಡದ ಕಥನ ಕಲೆ ಪಡೆಯುತ್ತಿರುವ ಹೊಸ ಹೊಳುಹನ್ನು ಗುರುತಿಸಲು ಸಾಕ್ಷಿ. ಡಾ.ಪ್ರಹ್ಲಾದ ಅಗಸನಕಟ್ಟೆ, ಬಸವರಾಜ ಕುಕ್ಕರಹಳ್ಳಿ, ಲೋಕೇಶ ಅಗಸನಕಟ್ಟೆ ಬರೆಯುತ್ತಿರುವ ಕಥೆಗಳು ಕನ್ನಡ ಓದುಗರನ್ನು ಆಗಾಗ್ಗೆ ಬೆಚ್ಚಿಬೀಳಿಸುತ್ತಿವೆ ಎಂಬುದನ್ನೂ ಮರೆಯಲಾಗದು. 'ದೇವರ ಸವಾಲ್', 'ಕಮಾನ್ ಇಂಡಿಯಾ', ಸೇರಿದಂತೆ ಹಲವು ಗಮನಿಸಲೇಬೇಕಾದ ಕಥೆಗಳನ್ನು ಡಾ.ಪ್ರಹ್ಲಾದ ಅಗಸನಕಟ್ಟೆ ಬರೆದಿದ್ದಾರೆ.

ಎಲ್ಲಾ ಪಂಥ, ಮಾದರಿ, ಮಾರ್ಗ, ಇಸಂಗಳನ್ನು ಮೀರಿ ಸಶಕ್ತವಾಗಿ ಬರೆಯುತ್ತಿರುವ ನಮ್ಮ ನಡುವಿನ ಬಹುಮುಖ್ಯ ಕಥೆಗಾರರೆಂದರೆ ವಿ.ಎಂ.ಮಂಜುನಾಥ, ಆನಂದ ಋಗ್ವೇದಿ, ಚಿದಾನಂದ ಸಾಲಿ, ಅಲಕ ತೀರ್ಥಹಳ್ಳಿ, ಮಂಜುನಾಥ ಲತಾ, ವಸುಧೇಂದ್ರ, ಸಚ್ಚಿದಾನಂದ, ನಾಗರಾಜ ವಸ್ತಾರೆ ಹಾಗೆ ಇನ್ನು ಕೆಲವರು. ವಿ.ಎಂ. ಮಂಜುನಾಥ ಸೃಷ್ಟಿಸುತ್ತಿರುವ ಕಥೆಗಳು ಈ ಹಿಂದಿನ ಕಥನ ಮಾದರಿಗಳನ್ನೇ ಪ್ರಶ್ನಿಸುತ್ತವೆ. 'ಈ ಅಸ್ಥಿರತೆಯ ಜೀವ ಕ್ಷಣಕ್ಷಣಕ್ಕೂ ವಸಂತದ ಚಿಗುರಿನಂತೆ ಪ್ರಫುಲ್ಲಗೊಳ್ಳುತ್ತಿತ್ತು. ಎಲುಬುಗಳು ತಾವರೆ ಪಕಳೆಗಳಂತೆ ಅರಳತೊಡಗಿದವು. ರಾಗಿ ತೆನೆಗಳು ಐನಾತಿ ಹೆಣ್ಣುಗಳ ಎದೆ ಮಟ್ಟ ಬೆಳೆಯುತ್ತಿದ್ದವು. ಟ್ರಂಕ್, ಕಿಟ್ ಬ್ಯಾಗ್ ಎತ್ತಿಕೊಂಡು ಮುರಿದ ಮರದಂತೆ, ಸಾವಿನಂತೆ ಹೊರಟೇ ಹೋದರು' ಎಂಬ ಸಾಲುಗಳ ಮೂಲಕ ಕನ್ನಡದ ಕಥಾ ಪರಂಪರೆಯನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಹೊರಬಂದ ಅವರ ಕಥಾ ಸಂಕಲನ 'ಬ್ರಾಂಡಿ' ಶೀಷರ್ಿಕೆಯಿಂದಷ್ಟೆ ಅಲ್ಲದೆ ನಮ್ಮ ನಡುವೆಯೇ ಇರುವ ವಿಲಕ್ಷಣ ಜಗತ್ತಿನ ವಿವಿಧ ಮಗ್ಗಲುಗಳನ್ನು ಪರಿಚಯಿಸುತ್ತದೆ. 'ಕೆಂಡದ ನೂಲುಗಳು', 'ಜಿನ್', 'ಡಾನ್ ಮೇರಿ ಅಲಿಯಾಸ್ ಪುಷ್ಪಾ', 'ಜಾನ್ ಗೋವಾ', 'ಪೇಯಿಂಗ್ ಗೆಸ್ಟ್', 'ಎಲುಬುಗಳು' ಮತ್ತಿತರ ಕಥೆಗಳು ಗಮನಸೆಳೆಯುತ್ತವೆ. ಬದುಕಿನ ವಿಕಾರಗಳನ್ನು ಸ್ಪಷ್ಟವಾಗಿ ಕಟ್ಟಿಕೊಡುವ ಹಸಿ ಹಸಿ ಚಿತ್ರಗಗಳು ಅವರ ಕಥನ ಶೈಲಿ ಮತ್ತು ಕ್ರಮಕ್ಕೆ ಹಿಡಿದ ಕೈಗನ್ನಡಿ. ಇವರ ಕಥೆಗಳನ್ನು ಓದುತ್ತಾ ಹೋದಂತೆ ಒಂದು ಬೆಚ್ಚಗಿನ ಬದುಕಿಗೆ ಎಂಟ್ರಿ ನೀಡುವ ಜೊತೆಗೆ ವಿಶಿಷ್ಟ ವಿವರಣೆ, ಸಂಕೇತ, ನಿರೂಪಣೆ, ಪಾತ್ರಗಳ ಆಯ್ಕೆ ಬೆಚ್ಚಿಬೀಳಿಸುವುದು ನಿಶ್ಚಿತ. ಆಧುನಿಕರ ಮಾನಸಿಕ ಅವಸ್ಥೆಯ ವಿವಿಧ ಸ್ಥಿತ್ಯಂತರಗಳ ಅನಾವರಣ ಥೇಟ್ ನಮ್ಮ ಮೈಚರ್ಮದಂತೆ ಆಪ್ತವೆನಿಸುತ್ತದೆ. ಮಂಜುನಾಥರ ಪಾತ್ರಗಳು ಅಮಾನವೀಯ ಕ್ರೌರ್ಯ, ಶೋಷಣೆ, ಅಸ್ಪೃಶ್ಯತೆ, ಜಾತಿಯಂಥಾ ಭೀಕರ ರೋಗಗಳಿಂದ ನಲುಗಿದರೂ ತಮ್ಮಷ್ಟಕ್ಕೆ ಗುಣಪಡಿಸಿಕೊಂಡು ದಿಟ್ಟತನದಿಂದ ಬದುಕಲು ಹೊಸ ಮಾರ್ಗ ಅನ್ವೇಷಿಸುವ ರೀತಿ ಅನನ್ಯ. ಇವರು ಬಳಸಿರುವ ವಿಶಿಷ್ಟ ಭಾಷೆಯೊಳಗಿನ ಬನಿ ಮತ್ತು ಎಚ್ಚರವನ್ನು ಕನ್ನಡ ಸಾಹಿತ್ಯ ಪರಿಚಾರಕರು ವಿಭಿನ್ನ ನೆಲೆಯಲ್ಲಿ ಅಧ್ಯಯನ ಮಾಡಬೇಕಾದ ಅನಿವಾರ್ಯತೆಯಿದೆ.

ಇತ್ತೀಚಿಗೆ ಅದಮ್ಯ ಉತ್ಸಾಹದಿಂದ ಬರೆಯುತ್ತಿರುವ ಕಥೆಗಾರರಲ್ಲಿ ಒಂದು ಸಾಮಾನ್ಯ ಅಂಶವನ್ನು ಗುರುತಿಸಬಹುದು. ಸದ್ಯದ ಸಾಮಾಜಿಕ ವಿಷಮತೆ, ರಾಜಕೀಯ ಒಳಸುಳಿಗಳನ್ನು ಶೋಧಿಸುತ್ತಾ ಹೆಚ್ಚು ಸಮಕಾಲೀನತೆ ಹೊಂದುವ ಕೆಲಸ ಅವ್ಯಾವಹತವಾಗಿ ನಡೆದಿದೆ. ಸಾಮಾಜಿಕ ಇತಿಹಾಸದ ಜೊತೆಗೆ ವ್ಯಕ್ತಿಯ ಅಂತರಂಗದಲ್ಲಿಯೇ ಹುದುಗಿರುವ ವೈಯಕ್ತಿಕ ಅನುಭವಗಳ ಇತಿಹಾಸವೂ ಇತ್ತೀಚಿನ ಕಥಾ ಹಂದರವನ್ನು ಹಿಗ್ಗಿಸುತ್ತಿದೆ. ಹೊಸ ಕಥನ ಕ್ರಮದಲ್ಲಿ ವಿಶಿಷ್ಟವಾಗಿ ಬರೆಯುತ್ತಿರುವವರಲ್ಲಿ ಗಮನ ಸೆಳೆಯುತ್ತಿರುವ ಮತ್ತೊಬ್ಬ ಕಥೆಗಾರರೆಂದರೆ ಆನಂದ ಋಗ್ವೇದಿ. 'ಜನ್ನ ಮತ್ತು ಅನೂಹ್ಯ ಸಾಧ್ಯತೆ' ಎಂಬ ಕಥೆ ಮೂಲಕ ಯುವ ಕಥೆಗಾರರು ತುಳಿಯಬಹುದಾದ ಹೊಸ ಹಾದಿಗೆ ಮುನ್ಸೂಚನೆಯಾಗಿದ್ದಾರೆ. 'ಹರೆಯ ಮೈಹೊಕ್ಕ ಕೂಡಲೆ ಮನಸ್ಸು ಕಾಮನೆಯ ಗೂಡಾಗಿ ಬಿಡಬಾರದು', 'ನಿಲುವಳಿ, ನಿಯಮಗಳಲ್ಲಿ ನಾವು ಮನುಷ್ಯರಾಗದೆ ಬರೀ ಮುಖವಾಡದ ಬೊಂಬೆಗಳಾಗಿ ಬಿಡ್ತೀವಿ', 'ಎಲ್ಲರ ಮನಸ್ಸಿನ ಬಟ್ಟೆ ಬಿಚ್ಚುವ, ಬೆತ್ತಲಾಗಿಸುವ ತನ್ಮೂಲಕ ನಾವು ಮಾತ್ರ ಬೆತ್ತಲಲ್ಲ ಎಂದು ಭ್ರಮಿಸುವುದು, ಯಾಕೆ ಸಾರ್?', 'ಮನುಷ್ಯನನ್ನು ಕೊಲ್ಲಲು ಆಯುಧಗಳೇ ಬೇಕಿಲ್ಲ. ಒಂದು ತಿರಸ್ಕಾರ, ಮಿಲನದ ನಂತರದ ಹತಾಶೆ, ಒಂದು ಗುಮಾನಿ ಅಥವಾ ಬದುಕಿನ ಒಂದೇ ಒಂದು ಸತ್ಯದ ದರ್ಶನ ಸಾಕು' ಎಂಬ ಸಾಲುಗಳು ಋಗ್ವೇದಿ ಕಥನ ಶೈಲಿಯನ್ನು ದಟ್ಟವಾಗಿ ಪರಿಚಯಿಸುತ್ತವೆ. ದಟ್ಟವಾದ ಸಾಂಕೇತಿಕತೆ ಹಾಗೂ ಶೈಲಿಗೆ ಅವರ 'ಕತ್ತಲ ಬೀಜ' ಕಥೆ ಉತ್ತಮ ಉದಾಹರಣೆ. ವರ್ಗ, ವರ್ಣಗಳ ಅಂತರವನ್ನು, ಮನುಷ್ಯ ಸ್ವಭಾವದ ವಿವಿಧ ನಿಗೂಢಗಳನ್ನು ಹುಡುಕುವ ಪ್ರಯತ್ನ, ಕತ್ತಲು-ಬೆಳಕುಗಳ ಮುಖಾಮುಖಿಯನ್ನು ಪಾತ್ರ ಚಿತ್ರಣದ ನೆಲೆಯಲ್ಲಿಯೇ ಕಟ್ಟಿಕೊಡುವ ಪ್ರಯತ್ನ ವಿಶಿಷ್ಟವೆನಿಸುತ್ತಿದೆ.

ಕಥೆಗಳ ಸಂಖ್ಯೆ, ಕಥೆಗಾರರ ಸಂಖ್ಯೆಯನ್ನು ಗಮನಿಸಿದರೆ ಹಿಂದೆಂದೂ ಇಲ್ಲದಂತಹ ರೀತಿಯಲ್ಲಿ ಈವತ್ತು ಕಥೆಗಳು ಪ್ರಕಟವಾಗುತ್ತಿವೆ. ಪ್ರತಿ ವರ್ಷ ಇಪ್ಪತ್ತಕ್ಕೂ ಹೆಚ್ಚು ಸಶಕ್ತ ಕಥಾ ಸಂಕಲನಗಳು ಕನ್ನಡ ಕಥಾ ಪರಂಪರೆಯಲ್ಲಿ ದಾಖಲಾಗುತ್ತಿವೆ. ಕಥೆಗಾರ ಕಥಾ ಪ್ರಾಕಾರದಲ್ಲಿ ಅಭಿವ್ಯಕ್ತಿಸುವ ರೀತಿ ಮತ್ತು ಸ್ವಾನುಭವಗಳ ಮಧ್ಯೆ ಐಕ್ಯತೆ ಸಾಧಿಸುವ ಕಲೆ ಕರಗತವಾದರೆ ಮತ್ತಷ್ಟು ಉತ್ತಮ ಕಥೆಗಳನ್ನು ನಿರೀಕ್ಷಿಸಬಹುದು. ಆಧುನಿಕ ಜಗತ್ತಿನ ಸಂಕಷ್ಟ ಹಾಗೂ ಸವಾಲಿನ ಬದುಕಿನ ಸಮಸ್ಯೆಗಳ ವಿವಿಧ ಮಗ್ಗಲುಗಳನ್ನು ವಿಶಿಷ್ಟ ಶೈಲಿಯಿಂದ ಮತ್ತಷ್ಟು ಗಂಭೀರವಾಗಿ ಚಿತ್ರಿಸುವ ಕೆಲಸ ಕಥೆಗಾರರಿಂದ ನಡೆಯಬೇಕಿದೆ. ಕನ್ನಡ ಸಾಹಿತ್ಯದಲ್ಲಿ ಕಥನ ಸಾಹಿತ್ಯ ಬಹು ದೂರ ಸಾಗಬಹುದಾದ, ಸದಾ ಚಚರ್ಿಸಲ್ಪಡುವ, ಓದುಗರನ್ನು ಮತ್ತೆ ಮತ್ತೆ ಕಾಡಬಹುದಾದ ಪ್ರಾಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಪತ್ರಿಕೆಗಳು ಇಂದು ಒಡ್ಡಿರುವ ಶಬ್ದಗಳ ಮಿತಿಗಳಿಂದ ಕಥೆಗಾರ ಅನುಭವಿಸುತ್ತಿರುವ ಸಂಕಷ್ಟವನ್ನು ಪರಿಹರಿಸಬೇಕಿದೆ. ಆಧುನಿಕ ದೃಶ್ಯ ಮಾಧ್ಯಮಗಳಲ್ಲೂ ಕನ್ನಡದ ಎಲ್ಲ ಮಾದರಿಯ ಮತ್ತು ವಿವಿಧ ತಲೆಮಾರುಗಳ ಕಥೆಗಾರರ ಕಥೆಗಳು ದೃಶ್ಯ ರೂಪ ಪಡೆಯುವುದು ಅಗತ್ಯವಿದೆ. ಹಾಗೆಯೇ ಇಂಟರ್ನೆಟ್, ವೈಯಕ್ತಿಕ ಬ್ಲಾಗ್ಗಳು, ಅಂತಜರ್ಾಲ ಪತ್ರಿಕೆಗಳೂ ಕನ್ನಡ ಕಥೆಗಳನ್ನು ಬೆಳೆಸಿ ಪೋಷಿಸುವ ಜವಾಬ್ದಾರಿ ಹೊತ್ತಿವೆ. ಓದುಗರ ಮನದಾಳಕ್ಕೆ ಇಳಿದು ಸಂಚಲನ ಸೃಷ್ಟಿಸಲು ಶಕ್ಯವಿರುವ ಕಥೆಗಳು ಮತ್ತು ಕಥೆಗಾರರು ಮುಂದಿನ ದಿನಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆಥರ್ಿಕ ಪಲ್ಲಟಗಳ ಜೊತೆಗೆ ನವ ವಸಾಹತುಶಾಹಿ ಮತ್ತು ಜಾಗತೀಕರಣದ ಪ್ರಭಾವ ಮತ್ತು ಪರಿಣಾಮಗಳನ್ನು ಸಶಕ್ತವಾಗಿ ಎದುರಿಸುವಲ್ಲೂ ತಮ್ಮ ಶಕ್ತಿ ಮೆರೆಯಬೇಕಿದೆ. ಸೃಜನಶೀಲ ಲೇಖಕ ತನ್ನ ಕಾಲದ ನಿರಂತರತೆ ಮತ್ತು ಸಮಕಾಲೀನ ವಿದ್ಯಮಾನಗಳ ಒತ್ತಡಗಳನ್ನು ದಾಟಿ ಸೃಜನ ಕ್ರಿಯೆಯಲ್ಲಿ ಎಲ್ಲ ಕಾಲದ, ಎಲ್ಲ ಮೌಲಿಕ ಅಂಶಗಳನ್ನು ಸೇರಿಸಲು ಯತ್ನಿಸುವುದು ಸರ್ವವಿಧಿತ.

-ಕಲಿಗಣನಾಥ ಗುಡದೂರು
ಇಂಗ್ಲಿಷ್ ಉಪನ್ಯಾಸಕ
ಸಂಕೇತ್ ಕಾಲೇಜ್
ಸಿಂಧನೂರು
ಜಿಲ್ಲೆ: ರಾಯಚೂರು
ಮೊ: 9916051329

Rating
Average: 5 (2 votes)

Comments