ಕಾಗೆಯ ನೀತಿ ಪಾಠ

ಕಾಗೆಯ ನೀತಿ ಪಾಠ

ಬರಹ
ನಾನೊಂದು ಸೊಲ್ಲಾಪುರದ ಕಾಗೆ ಹೊರಟಿಹೆನು ಮಗಳ ಬೆಂಗಳೂರಿಗೆ ನನಗೆ ಬೇಕಿಲ್ಲ ಟ್ರೈನಿಗೆ ತಿಕೀಟು ಎಲ್ಲರೂ ಹೊಡೆಯುವರು ನನಗೆ ಸಲಾಮು ಇವರಂತೆ ಎನಗಿಲ್ಲ ನೀರಿನ ಸಮಸ್ಯೆ ಹೂಜಿಯ ತಳದಿಹ ಕೊಂಚ ನೀರನೂ ಕುಡಿಯಬಲ್ಲೆ ಕೆರೆ ಕಟ್ಟೆಗಳು ತುಂಬಿದರೂ ಕುಡಿಯದವರು ಇಲ್ಲದಾಗ ಕೊಡರೆಂದು ಹಾಹಾಕರಿಸುವರು ಎನಗಿಲ್ಲ ಇವರಂತೆ ಗಡಿಯ ಸಮಸ್ಯೆ ನನ್ನೂರಿಹದು ಮರಾಠಿಗರ ಕೈಯಲ್ಲಿ ನಮ್ಮೋರಿಹರು ಜಗದೊಳಗೆ ಅಲ್ಲಿ ಇಲ್ಲಿ ನಮಗೆಲ್ಲರೂ ಒಂದೇ ನಾವೆಲ್ಲರೂ ಒಂದೇ ನಮಗಿಲ್ಲ ಭಾಷೆಯ ಮೇಲಿನ ಜಗಳ ಎಲ್ಲ ಭಾಷೆಗೂ ಮೂಲವರಿಯದವ ಬಾಳ ಎಲ್ಲರ ಮನದೊಳಗಿಹ ಚಿಂತೆಯೂ ಅರಿವೆನು ನನ್ನ ಮನದಿಂಗಿತ ನಿಮಗರ್ಥವಾಯಿತೇನು? ದಾರಿಯುದ್ದಕ್ಕೂ ನನಗೆ ಸಿಗುತಿಹುದು ರಸಕವಳ ಗಟ್ಟಿಯಾಗಿ ಹಿಡಿದಿಹೆ ಕಿಟಕಿಯ ಸರಳ ಕಸಿಯಲಾರ ಮೋಸಮಾಡಲಾರ ಆ ಕಳ್ಳ ನರಿ ಹಿತವಾಗಿಹ ಮಾಂಸ ಕಾಯುತಿಹೆ ನನ್ನ ಬಾಯಿಗೆ ಸೀಟಿನ ಕೆಳಗೆ ಬೆಚ್ಚಗಿಹುದು ಹಾಸಿಗೆ ನನ್ನನು ತೋರಿಸುವರು ಹೆದರಿಸಲು ಮಕ್ಕಳಿಗೆ ನನ್ನ ದೇವನಿಂದಾಗಿ ಸಿಗುವುದೆಲ್ಲ ಮನ್ನಣೆ ಪ್ರಯಾಣವನನುಭವಿಸುತಿರುವೆ ಜುಮ್ಮನೆ