ಅಮ್ಮ.

ಅಮ್ಮ.

ಅಮ್ಮ.

ಗಮ್ಮತ್ತಮ್ಮ ಗಮ್ಮತ್ತು
ಗಮಗಮಗಮಿಸುವ ಗಮ್ಮತ್ತು//

ಅಮ್ಮನ ಪ್ರೀತಿಯ ಕೈತುತ್ತು
ತಿಂದರೆ ಬರುವ ತಾಖತ್ತು
ನಿತ್ಯವು ಮಾಡುವ ಕಸರತ್ತು
ತಪ್ಪದೆ ಬರುವುದು ಮೈಕಟ್ಟು/೧/

ಅಮ್ಮನ ಪ್ರೀತಿಯ ಕಿಮ್ಮತ್ತು
ಮರಣದ ನಂತರ ಗೊತ್ತಾಯ್ತು
ಗೀತೆಯ ಮಾತು ಗೊತ್ತಿತ್ತು
ಆದರೂ ದುಃಖವು ಒಡೆದಿತ್ತು/೨/

ಪ್ರಣತಿಯ ನಿರ್ಮಲ ಸಿಹಿಮುತ್ತು
ಅಮ್ಮನ ನೆನಪನು ತರುತಿತ್ತು
ನನ್ನ ಗೌರವದ ಒಳಗುಟ್ಟು
ಅಮ್ಮನು ಕೊಟ್ಟ ಸಂಪತ್ತು/೩/

ಭವಭಾರದ ಸಾಲಕೆ ತಲೆಕೊಟ್ಟು
ಮುರಿಯಿತು ಅಮ್ಮನ ನಡುಕಟ್ಟು
ಬಾರವು ಬೆಳೆಯಿತು ದುಪ್ಪಟ್ಟು
ಸಾಲವೆ ಅಮ್ಮನ ಕೊಂದಿತ್ತು/೪/

ಹೇಳುವೆ ಕೇಳಿ ಈ ಗುಟ್ಟು
ಸಾಲವೆ ದುಃಖದ ತಲೆಕಟ್ಟು
ಯಾರಿಗು ಬೇಡ ಈ ಕುತ್ತು
ಅಮ್ಮನು ಇಲ್ಲದ ಆಪತ್ತು/೫/

ಆಪತ್ತಮ್ಮ ಆಪತ್ತು
ಸಾಲವು ನಮಗೆ ಆಪತ್ತು//

ಅಹೋರಾತ್ರ.
೧೦:೪೦ ರಾತ್ರಿ.
೨/೫/೬.
ಮುಂಬೈ.

 

 

 

 

 

 

 

 

Rating
No votes yet