ಸಹ ಚರ

ಸಹ ಚರ

ಬರಹ

ಅದೇ ನಗು
ಬೇಡವೆಂದರೂ
ಹಿಂಬಾಲಿಸುತಿದೆ
ಹೊಳೆವ ತಾರೆಯಂತೆ

ಅದೇ ಸ್ಪರ್ಶ
ಬೇಡವೆಂದರೂ
ಹಿಂಬಾಲಿಸುತಿದೆ
ಮಗುವಿನ ಎಳೆ ಮೈಯಂತೆ

ಅದೇ ಚೆಲುವು
ಬೇಡವೆಂದರೂ
ಹಿಂಬಾಲಿಸುತಿದೆ
ವೇದಮಾತೆ ಗಾಯತ್ರಿಯಂತೆ

ಅದೇ ವಾಹಿನಿ
ಬೇಡವೆಂದರೂ
ಹಿಂಬಾಲಿಸುತಿದೆ
ಪವಿತ್ರ ಗಂಗಾ ಧಾರೆಯಂತೆ

ಅದೇ ಗಾಳಿ
ಬೇಡವೆಂದರೂ
ಹಿಂಬಾಲಿಸುತಿದೆ
ಹೂವಿನೊಳಗಣ ಗಂಧದಂತೆ

ಅದೇ ಆತ್ಮ
ಬೇಡವೆಂದರೂ
ಹಿಂಬಾಲಿಸುತಿದೆ
ನಾನು ನಾನೇ ಎಂಬಂತೆ

ಜೊತೆಗಾಗಿ ಹುಡುಕಾಡುತ್ತಿರುವಾಗ ಸಿಕ್ಕದ್ದು ನಾನು ಮತ್ತು ನಾನು. ನನ್ನೊಳಗೆ ನಾನೇ ಸಿಕ್ಕಂತೆ ಭಾಸವಾಯ್ತು .ಇನ್ನೂ ಹುದುಕಾದುತ್ತಿದ್ದೇನೆ ನಾನೂ ನನಗೆ ಪೂರ್ತಿ ಸಿಕ್ಕಿಲ್ಲ .
ಪೂರ್ಣಮದ: ಪೂರ್ಣ ಮಿದಂ ಪೂರ್ಣಾತ್ ಪೂರ್ಣ ಮದುಚ್ಚತೆ |
ಪೂರ್ಣಸ್ಯ ಪೂರ್ಣ ಮಾದಾಯ ಪೂರ್ಣಮೇವಾವ ಶಿಷ್ಯತೆ ||