ಮನಸು ಮನಸು ದೂರ

ಮನಸು ಮನಸು ದೂರ

ಕೋಪ ಬಂದಾಗ ನಾವು ಕೂಗಾಡುವುದೇಕೆ? ಒಬ್ಬ ಸಾಧು ತನ್ನ ಶಿಷ್ಯರನ್ನು ಕೇಳಿದ.ನಾವು ಶಾಂತಚಿತ್ಥತೆಯನ್ನು ಕಳೆದು ಕೊಳ್ಳುತ್ತೆವೆ ಇತ್ಯಾದಿ ಏನೇನೊ ಹೇಳಿದರು ಶಿಷ್ಯರು.
ಸಾಧು ಮತ್ತೆ ಕೇಳಿದ: ಪಕ್ಕದಲ್ಲೇ ಇರುವ ವ್ಯಕ್ತಿಗೆ ನಾವು ಅಷ್ಟು ಕೂಗಿ ಹೇಳುವುದೇಕೆ?ಹೇಳಬೇಕಾದನ್ನು ಮೇಲುದನಿಯಲ್ಲೂ ಹೇಳಬಹುದಾಗಿತ್ಹಲ್ಲವೇ?
ಶಿಷ್ಯರಿಗೆ ಗೊತ್ತಾಗಲಿಲ್ಲ.ಗುರುವೇ ಬಿಡಿಸಿ ಹೇಳಿದ: 'ಯಾಕೆಂದರೆ ಕೋಪ ಬಂದಾಗ ಮನುಷ್ಯರು ಪಕ್ಕದಲ್ಲೇ ಇದ್ದರು ಮನಸುಗಳು ದೂರಾಗಿರುತ್ತವೆ.ಅದಕ್ಕೆ ಆ ಅಂತರವನ್ನು ಸರಿದೂಗಿಸಲು ಕೂಗಿ ಹೇಳಬೇಕಾಗುತ್ತದೆ.ಇನ್ನು ಹೆಚ್ಚು ಕೋಪ ಬಂದರೆ ಮನಸುಗಳು ಮತ್ತೂ ದೂರ ಆಗುತ್ತವೆ.ಆಗ ಮತ್ತಷ್ಟು ಜೋರಾಗಿ ಕೂಗಾಡಾಬೇಕಾಗುತ್ತದೆ.ಅದೇ ರೀತಿ ಇಬ್ಬರು ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತದೆ ಗೊತ್ತೆ? ಮನಸುಗಳು ಹತ್ತಿರವಾಗುತ್ತವೆ.ಅದಕ್ಕೆ ಆಗ ತಿರ ಮೆಲುದನಿಯಲ್ಲಿ ಮಾತಾಡಿದರು ಸಾಕು,ಕೇಳಿಬರುತ್ತದೆ.ಇನ್ನು ಪ್ರೀತಿ ಹೆಚ್ಚಾಯಿತು ಅಂದರೆ ಪಿಸುಗುಟ್ಟಿದರು ಸಾಕು,ಕೇಳುವಷ್ಟು ಹತ್ತಿರ ಬರುತ್ತವೆ ಹೃದಯಗಳು.ಕಡೆಗೊಂದು ದಿನ ಪಿಸುಗುಟ್ಟುವುದು ಬೇಕಾಗುವುದಿಲ್ಲ.ಸುಮ್ಮನೆ ಒಬ್ಬರನ್ನೊಬ್ಬರು ನೋಡಿದರು ಸಾಕು,ಅಡಬೇಕಾದ್ದು ತಿಳಿದುಹೋಗುತ್ತದೆ.
ಅದಕ್ಕೆ ವಾದ ಮಾಡುವಾಗ ಮನಸುಗಳು ದೂರ ದೂರ ಆಗದಂತೆ ನೋಡಿಕೊಳ್ಳಿ.ಹೃದಯಗಳನ್ನು ಮತ್ತಷ್ಟು ದೂರಗೊಳಿಸುವಂತ ಮಾತುಗಳನ್ನೂ ಎಂದು ಆಡದಿರಿ.ಇಲ್ಲದಿದ್ದರೆ ಒಂದು ದಿನ ಮನಸುಗಳು ಎಷ್ಟೊಂದು ದೂರ ದೂರ ಅಗಬಹುದೆಂದರೆ ನೀವು ಎಷ್ಟು ಅರಚಿದರು ಕೇಳಿಸದೆ ಹೋಗಬಹುದು.ಮತ್ತು ಅಷ್ಟು ದೂರದಿಂದ ನೀವು ಮರಳಿ ಬರಲಾಗದಿರಬಹುದು.
ಈ ಕತೆಯಿದ್ದ ಸಂದೇಶ ಕಳಿಸಿದ್ದು ಒಬ್ಬ ಗೆಳತಿ.ಸಂದೇಶಗಳಲ್ಲಿ ಇಂಥ ಎಷ್ಟೋ ಆಸಕ್ತಿದಾಯಕ ಮತ್ತು ಬದುಕಿಗೆ ನೆರವಾಗುವ ಸಂಗತಿಗಳು ಬರುತ್ತಲೇ ಇರುತ್ತವೆ.ಇವನ್ನೆಲ್ಲ ಯಾರು ಬರೆಯುತ್ತಾರೆ ಅವರ ಹೆಸರು ಕೂಡ ಇರುವುದಿಲ್ಲ.ಅಚ್ಚರಿಯಗುವುದಿಲ್ಲವೇ?..ಇದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಅಂಕಣ,ಯಾರೇ ಬರೆದಿರಲಿ ಅವರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನ ಧನ್ಯವಾದಗಳು.

Rating
No votes yet