ದೊಡ್ಡವರ ಹಿತ ವಚನಗಳು (ಒಂದು ಸಂಗ್ರಹ)!!!

ದೊಡ್ಡವರ ಹಿತ ವಚನಗಳು (ಒಂದು ಸಂಗ್ರಹ)!!!

* ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು

-ಮೋಕ್ಷಗುಂಡಂ ವಿಶ್ವೇಶ್ವರಯ್ಯ

* ಅಭಾವದಿಂದ ವಸ್ತುಗಳ ಮಹತ್ವವು ಗೊತ್ತಾಗುತ್ತದೆ

-ಡಾ. ಕೆ. ಶಿವರಾಮ ಕಾರಂತ

* ಸ್ವಭಾಷೆಯ ಮೇಲೆ ಅಭಿಮಾನಿಯಾಗಿರಲಾರದವನು ಸ್ವದೇಶದಲ್ಲಿದ್ದೂ ವಿದೇಶಿಯನಿದ್ದಂತೆ

-ಆಲೂರು ವೆಂಕಟರಾಯರು

* ಪುಷ್ಪದ ಪರಿಮಳವು ಪುಷ್ಪಕ್ಕೆಂದಿಗೂ ಗೋಚರಿಸದು

-ಸಿ. ಕೆ. ವೆಂಕಟರಾಮಯ್ಯ

* ಪರಿಸ್ಥಿತಿಯು ಪ್ರತಿಕೂಲವಾಗಿರುವಾಗ ಮಾತನಾಡುವುದು ಸಾಹಸವೆ?

-ಡಾ. ರಂ ಶ್ರೀ. ಮುಗಳಿ

* ಮನುಷ್ಯ ಕೇವಲ ಸ್ಥಿತಪ್ರಜ್ಞನಾಗಿದ್ದರೆ ಸಾಲದು; ಸ್ಥಿತಿಪ್ರಜ್ಞನೂ ಆಗಿರಬೇಕು

-ಡಾ. ಹಾ. ಮಾ. ನಾಯಕ್.

* ಒಂದು ಸನ್ನೆ, ಒಂದು ನೋಟ, ಒಂದು ಮಾತು, ಒಂದು ಊಹೆ ಸಾಕು, ಸಂಶಯದ ಹುಟ್ಟಿಗೆ

-ಗೌರೀಶ ಕಾಯ್ಕಿಣಿ

* ಒಳ್ಳೆಯದು ಉಳಿಯಬೇಕಾದರೆ ಕೆಟ್ಟವರೊಂದಿಗೆ ಹೋರಾಡಬೇಕು

-ಅ.ನ. ಕೃಷ್ಣರಾಯ

* ಅಪಾಯವು ಸನ್ನಿಹಿತವಾದಾಗ ಉಪಾಯವು ತಾನಾಗಿಯೇ ತೋಚುತ್ತದೆ

-ಡಾ. ಗೊರೂರು ರಾಮಸ್ವಾಮಿ ಐಯ್ಯಂಗಾರ್

* ದುಡಿಯುವ ಕೈ ನಾಲಿಗೆಗೆ ಅಂಜುತ್ತಾ ಕುಳಿತರೆ ಯಾವ ಕೆಲಸವಾದೀತು?

-ತ. ರಾ. ಸುಬ್ಬರಾವ್

Rating
Average: 5 (1 vote)

Comments