ಬೆಳದಿಂಗಳಾಗಿ ಬಾ......!!

ಬೆಳದಿಂಗಳಾಗಿ ಬಾ......!!

ಬರಹ

ಹಾಯ್ " ಕ್ಯಾಂಟೀನ್ ಚೆಲುವೆ ...." ಹೇಗಿದ್ದೀಯಾ.....??!! ನಿನ್ನನ್ನ ಸರಿಯಾಗಿ ನೋಡಿ ಒಂದು ವಾರ ಆಯಿತು. ಹುಷಾರಾಗಿದ್ದೀ ತಾನೆ...?

ಓಹ್ !! ಇದೇನಿದು ’ಕ್ಯಾಂಟೀನ್ ಚೆಲುವೆ’ ಅಂತ ಕರೀತಿದ್ದೀನಿ ಅಂತ ಆಶ್ಚರ್ಯನಾ......!!!!?? ಒಂದೇ ಒಂದು ಸಲ ನೆನಪಿಸಿಕೊ.

ನಾನು ನಿನ್ನನ್ನ ಮೊದಲ ಸಲ ನೋಡಿದ್ದು ; ಈಗ ಪ್ರತಿದಿನ ನೋಡುತ್ತಿರುವುದು ಅದೇ ಕ್ಯಾಂಟೀನ್ ನಲ್ಲಿ ಅಲ್ವಾ....??!!

ದಿನಾ ಸರಿಯಾದ ಸಮಯಕ್ಕೆ ಕ್ಯಾಂಟೀನ್ ಗೆ ಹೋಗಬೇಕು ಅನ್ನೋ ಆತುರ, ಅಲ್ಲಿಗೆ ಹೋಗಿ ನಿನ್ನ ನೋಡಬೇಕು ಅನ್ನೋ ಮನಪೂರ ಕಾತುರ,

ನೋಡಿದಾಗ ಜಿಗಿ ಜಿಗಿ ಅಂತ ಕುಣಿಯೋ ಮನಸ್ಸು; ಸಂತಸದ ನಗು ನಕ್ಕು ಆನಂದಪಡೋ ಹೃದಯ..... ಹೀಗೆ, ಇವಕ್ಕೆಲ್ಲ ಕಾರಣ

ಆ ಕ್ಯಾಂಟೀನ್............ ಅಲ್ಲಲ್ಲ, ಅಲ್ಲಿಗೆ ಬರೋ ಚೆಲುವೆ ನೀನು ತಾನೆ ಕಾರಣ. ಅಷ್ಟಕ್ಕು ನನಗೆ ನಿನ್ನ ಹೆಸರು ಕೂಡ ಗೊತ್ತಿಲ್ಲವಲ್ಲ. !!

ಅದಕ್ಕೆ ನಿನ್ನ ’ ಕ್ಯಾಂಟೀನ್ ಚೆಲುವೆ ’ ಅಂತ ಕರೆದಿದ್ದು. :-)

ನನಗೆ ಈಗಲೂ ಚೆನ್ನಾಗಿ ನೆನಪಿದೆ. ಅವತ್ತು ಶುಕ್ರವಾರ ; ನನ್ನ ಪಾಲಿಗೆ ’ ಶುಭ ಶುಕ್ರವಾರ ’ ! ಕ್ಯಾಂಟೀನ್ ನಲ್ಲಿ ತಟ್ಟೆ ಹಿಡಿದುಕೊಂಡು,

ನಾನು ಕ್ಯೂ ನಲ್ಲಿ ನಿಂತಿದ್ದೆ. ಅದೆಲ್ಲಿಂದಲೋ ನೀನು ಬಂದೆ ; ಬಂದು, ’ಸ್ಪೂನ್ ಇದೆಯಾ ?’ ಅಂತ ಕ್ಯಾಂಟೀನ್ ಕೌಂಟರ್ ಬಾಯ್ ನ ಕೇಳಿದೆ.

ನಿನ್ನ ಮುದ್ದಾದ ಅರಗಿಣಿಯಂತ ಮಾತುಗಳನ್ನ ಕೇಳಿ, ನನ್ನ ತಟ್ಟೆಯಲ್ಲಿದ್ದ, ನನಗಾಗಿ ತೆಗೆದುಕೊಂಡಿದ್ದ ಸ್ಪೂನನ್ನು ನಾನು ನಿನಗಾಗಲೇ ಕೊಟ್ಟುಬಿಟ್ಟಿದೆ....!!! ;

ನನಗೇ ಗೊತ್ತಿಲ್ಲದೇ..........

ಸ್ಪೂನ್ ತೆಗೆದುಕೊಂಡ ನೀನು, ನಿನ್ನ ಬೊಗಸೆ ಕಣ್ಣುಗಳನ್ನು ಮಿಂಚಂತೆ ಒಮ್ಮೆ ಮಿಟುಕಿಸಿ, ಅರಳು ಮಲ್ಲಿಗೆಯಂಥ ನಗು ಚೆಲ್ಲಿ ಹೋದೆಯಲ್ಲ,

ಆಗಲೇ ನನ್ನ ನಾ ಕಳೆದುಕೊಂಡಿದ್ದು.

ಬೆಳಂದಿಗಳ ತಂಗಾಳಿ ತಂಪು ಮೈಯನ್ನೆಲ್ಲಾ ಆವರಿಸಿಕೊಂಡಂತೆ ;

ಅದ್ಯಾವುದೋ ವಿಶಾಲವಾದ ಆಕಾಶದಲ್ಲಿ ಗೊತ್ತು - ಗುರಿಯಿಲ್ಲದೆ ಅಲೆಮಾರಿಯಂತೆ ಹಾರಾಡಿದಂತೆ ;

ಒಂದರ ಹಿಂದೊಂದು ಹರುಷದ ಅಲೆಗಳು ಉಕ್ಕಿ ಉಕ್ಕಿ ಮನದ ತೀರಕ್ಕೆ ಬಂದಪ್ಪಳಿಸಿದಂತೆ.....

’ಮನಸ್ಸು’ ಹೀಗೆ ಸಂತಸದಲ್ಲಿ ತೇಲಾಡುತ್ತಿರುವಾಗಲೇ,

" ಛೇ...!! ಏನ್ ಹುಡ್ಗೀರೋ.... ಒಂದು ಥ್ಯಾಂಕ್ಸ್ ಕೂಡ ಹೇಳಲಿಲ್ಲ.... " ಅಂತ ’ಬುದ್ದಿ ’ ಮನಸ್ಸನ್ನು ಎಚ್ಚರಗೊಳಿಸಿತು.

"ಥ್ಯಾಂಕ್ಸ್ , ಸಾರಿ ,,,,, ಇವೆಲ್ಲ ’ ಬುದ್ದಿ ’ ಗೆ ಗೊತ್ತಿರುವ ಭಾಷೆಗಳಾದರೆ ;

ನಗು, ಅಳು ಮನಸ್ಸಿನ ಭಾಷೆ...... " ಅಂತ ಹೇಳಿ ಮನಸ್ಸು, ಬುದ್ದಿಯ ಬಾಯಿ ಮುಚ್ಚಿಸಿತು.....!!!!

ಅವತ್ತಿನಿಂದ, ಕ್ಯಾಟೀನ್ ಗೆ ಬಂದಾಗಲೆಲ್ಲ ನನ್ನ ಕಣ್ಣುಗಳು ನಿನ್ನನ್ನೇ ಹುಡುಕುತ್ತವೆ. ನೀನು ಸಿಗದೇ ಹೋದಾಗ ಚಡಪಡಿಸುತ್ತವೆ.

ಪ್ರತಿದಿನ ನಾನು ಕ್ಯಾಂಟೀನ್ ಗೆ ಬರೋ ಸಮಯಕ್ಕೆ ಸರಿಯಾಗಿ ನೀನೂ ಬರ್ತೀಯ.... ಅಥವಾ

ನೀನು ಬರೋ ಸಮಯಕ್ಕೆ ನಾನೂ ಬರ್ತೀನಾ...... ? ? !! ಗೊತ್ತಿಲ್ಲ.

ಆದ್ರೆ, ಹೀಗಾದಾಗಲೆಲ್ಲ ನನ್ನೊಳಗೆ ಸಂಭ್ರಮಿಸಲಾಗದ ಸಡಗರ. ಅಷ್ಟು ಜನರ ಮಧ್ಯೆ ನಾನು ನಿನ್ನ ಕದ್ದು ಕದ್ದು ನೋಡೋವಾಗ,

ಚಕ್ಕನೆ ನೀನು ನನ್ನೆಡೆ ತಿರುಗಿ ನೋಡುತ್ತೀಯಲ್ಲ ಆಗೆಲ್ಲ ಹೇಳಿಕೊಳ್ಳಲಾಗದ ಮುಜುಗರ ಆಗುತ್ತೆ..

ಒಂದಂತೂ ಸತ್ಯ ಕಣೇ ಹುಡುಗಿ, ಕ್ಯಾಂಟೀನ್ ಗೆ ಅಥವಾ ಆಫ್ಹೀಸ್ ಗೆ ನಿನಗಿಂತ ಚೆನ್ನಾಗಿರುವವರು, ಸುಂದರಾಂಗಿಯರು, ಲಲನೆಯರು,

ಮಿಟುಕಲಾಡಿಯರು ಬರಬಹುದು. ಆದರೆ, ಅವರ ಬಿಂಕ, ಬಿನ್ನಾಣ ಇವೆಲ್ಲ ಮಾದಕ, ಬರೀ ಮಾದಕ ಅಂತ ತಿಳಿದು ಮನಸ್ಸು ಜಾಗೃತವಾಗಿಬಿಡುತ್ತೆ.

ಅದೇ ನಿನ್ನನ್ನು, ನಿನ್ನ ನಗು, ನೋಟ, ನಡೆ, ಹಾವ, ಭಾವ ಇವುಗಳನ್ನಿಲ್ಲ ಕಣ್ತುಂಬಿಕೊಳ್ಳುವ ನನ್ನೀ ಮನಸ್ಸು ಮೋಹಕ,

ಮನಮೋಹಕ ಅಂತ ಹೇಳಿ ಹಿರಿ ಹಿರಿ ಹಿಗ್ಗುತ್ತೆ....! ! !

ಹುಡುಗಿ, ನನ್ನೆಡೆಗೆ ನೀ ಚೆಲ್ಲಿದ ಮುತ್ತಿನಂಥ ನಗು ; ಹೃದಯ ಮೀಟಿದ ಮಿಂಚಿನಂಥ ನೋಟ

ನನ್ನಲ್ಲಿ ಸದಾ ಹಚ್ಚ ಹಸಿರಾದ ನೆನಪು.

ನನ್ನೀ ಮನಸ್ಸಿನಲ್ಲಿ ನೂರಾಸೆಗಳೇನಿಲ್ಲ.

ನಿನ್ನ ಪ್ರೇಮ ಕಾಣಿಕೆಯನ್ನು ಮನ ಬಯಸುವುದಿಲ್ಲ.

ಇರುವುದೊಂದೇ ಆಸೆ ; ಬಯಸುವುದೊಂದೇ ಬೇಡಿಕೆ

ಪ್ರತಿದಿನ ಕ್ಯಾಂಟೀನ್ ನಲ್ಲಿ ತಪ್ಪದೆ ಸಿಗು.........

ಸಿಗ್ತೀಯಾ ಅಲ್ವಾ............ .... ???????? !!!!!!!!!