ನಲ್ಲ ನಲ್ಲ ಮುದ್ದಿನ ನಲ್ಲ

ನಲ್ಲ ನಲ್ಲ ಮುದ್ದಿನ ನಲ್ಲ

(ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ ಎಂಬ ಕವನ ರೀತಿಯಲ್ಲಿ)

ನಲ್ಲ ನಲ್ಲ ಮುದ್ದಿನ ನಲ್ಲ
ಎಲ್ಲಿಗೆ ಹೋಗಿದ್ದೆ?
ಕರೆದರೂ ಇಲ್ಲ, ಒಂದು ಕಾಲೂ ಇಲ್ಲ
ಎಲೋಡಿ ಹೋಗಿದ್ದೆ?

ಕೇಳೇ ಗೆಳತಿ , ಮನದ ಒಡತಿ
ನಾ ಹೋಗಿದ್ದೆ ಎಮ್ ಜಿ ರೋಡಿಗೆ

ಹೇಳೋ ನಲ್ಲ ಮುದ್ದಿನ ಮಲ್ಲ
ನೋಡಿದ ಆ ನೋಟ

ಆಹಾ ಸವಿದೆ ಓಹೋ ನಲಿದೆ
ನೊಡುತ ಆ ಸೌಂದರ್ಯ
ಆಹ ಎಂಥಾ ಚೆಂದ ಎಂದೆ
ಕಂಡೆನು ರೂಪದೈಶ್ವರ್ಯ

ಹೋಗೋ ಮಳ್ಳ ನೀನು ಕಳ್ಳ
ನೀನು ಅಲ್ಲ ನನ್ನ ನಲ್ಲ
ನಾನು ನಿನ್ನವಳಾಗೋದಿಲ್ಲ

Rating
Average: 3 (1 vote)