ವಿಜ್ನಾನ ದಿನಾಚರಣೆ

ವಿಜ್ನಾನ ದಿನಾಚರಣೆ

Comments

ಬರಹ

ನಿನ್ನೆ ದಿನಾಂಕ ೨೮ ಫೆಬ್ರವರಿ - ರಾಷ್ಟ್ರೀಯ ವಿಜ್ನಾನ ದಿನಾಚರಣೆ: ಇಡೀ ದೇಶದಲ್ಲಿ ಇದನ್ನು ಆಚರಿಸಲಾಗಿದೆ. ಆದರೆ ಆಶ್ಚರ್ಯಕರ ವಿಚಾರವೆಂದರೆ, ನಿನ್ನೆ ಅದರ ಬಗೆಗೆ ಮಾಹಿತಿಯನ್ನು ನೀಡುವ ಯಾವುದೇ ಲೇಖನಗಳು ನಮ್ಮ ಮುಖ್ಯ ಕನ್ನಡ ದಿನಪತ್ರಿಕೆಗಳಲ್ಲಿ ಬರಲೇ ಇಲ್ಲ. ವಿಜ್ನಾನದ ಪ್ರಯೋಜನವನ್ನು ಹೆಜ್ಜೆ ಹೆಜ್ಜೆಗೆ ಮಾಡಿಕೊಳ್ಳುತ್ತಿರುವ ನಾವು ಈ ದಿನವನ್ನು ನೆನಪಿಸಿಕೊಳ್ಳಲಿಲ್ಲವೇ?
೧೯೨೮ ರಲ್ಲಿ ಈ ದಿನ ಅದೆಂಥಹ ಮಹತ್ವವಾದ ದಿನ!
ಭಾರತೀಯ ಸಂಜಾತ ಭಾರತರತ್ನ ಸರ್ ಸಿ.ವಿ.ರಾಮನ್ ರವರು ತಮ್ಮ ಅತ್ಯಮೂಲ್ಯ ಸಂಶೋಧನೆಯನ್ನು ವಿಶ್ವಕ್ಕೆ ಪ್ರಚುರಪಡಿಸಿದ ದಿನವದು. ಇಂದು ``ರಾಮನ್ ಪರಿಣಾಮ'' ಎಂದು ಕರೆಯಲ್ಪಡುವ ಆ ಮಹತ್ವದ ಸಂಶೋಧನೆಗಾಗಿ ಅವರಿಗೆ ವಿಜ್ನಾನಲೋಕದ ಅತ್ಯುನ್ನತ ಕಿರೀಟವಾದ ``ನೊಬೆಲ್ ಪ್ರಶಸ್ತಿ'' ಲಭಿಸಿತು. ಇದು ವಿಜ್ನಾನಲೋಕದಲ್ಲಿ ನಮ್ಮ ದೇಶದ ಮಹತ್ವದ ಹೆಜ್ಜೆಯಾಗಿದೆ. ಅಂತಹ ವಿಶೇಷವಾದ ದಿನವನ್ನಲ್ಲದೇ ಇನ್ನಾವ ದಿನವನ್ನು ನಾವು ವಿಜ್ನಾನದಿನವನ್ನಾಗಿ ಆಚರಿಸಲಾದೀತು?
ಆದರೆ ಆ ದಿನವನ್ನು ನಾವು ಸರಿಯಾಗಿ, ವ್ಯವಸ್ಥಿತವಾಗಿ ಆಚರಿಸುತ್ತಿದ್ದೇವೆಯೇ ಎಂಬುದೇ ಇಂದು ನಾವು ಚರ್ಚಿಸಬೇಕಾಗಿರುವ ವಿಚಾರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet