ಕನಿಷ್ಠ ಉಡುಗೆ: ಟಿವಿ ಬಳಿಕ ರೇಡಿಯೋ ಸರದಿ!

ಕನಿಷ್ಠ ಉಡುಗೆ: ಟಿವಿ ಬಳಿಕ ರೇಡಿಯೋ ಸರದಿ!

ಬೊಗಳೂರು, ಜೂ.1- Too sexyಯಾಗಿ ಉಡುಗೆ ತೊಟ್ಟಿದ್ದಕ್ಕಾಗಿ ಕೆಲಸದಿಂದ ವಜಾಗೊಂಡ ರೇಡಿಯೋ ಉದ್ಘೋಷಕಿ(ಜಾಕಿ)ಯೊಬ್ಬಳು ಮಾಲೀಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿರುವುದು ಹಲವು ಹುಬ್ಬುಗಳನ್ನು ಮೇಲಕ್ಕೆ ಏರಿಸಿ, ಕೆಲವರ ಕಣ್ಣ ಮೇಲೆ ಕಪ್ಪು ಗೆರೆಯೇ ಇಲ್ಲದಂತಾಗಿದೆ.
ಈ ವರದಿ ಪ್ರಕಟವಾದ ತಕ್ಷಣ ಲಂಡನ್‌ಗೆ ಧಾವಿಸಿದ ಬೊಗಳೆ ಬ್ಯುರೋ ವರದಿಗಾರರು, ಈ ಸುದ್ದಿಯನ್ನು ಬಟಾಬಯಲಾಗಿಸಿದ್ದು ಖಂಡಿತವಾಗಿಯೂ ತಾವಲ್ಲ ಎಂದು ಉದ್ಘೋಷಕಿಗೆ ತಿಳಿ ಹೇಳುವಲ್ಲಿ ಹೆಣಗಾಡಿ, ಕೊನೆಗೂ ಆಕೆಯ ಬಿಚ್ರೋಶದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.
ನಾನು ಬಟ್ಟೆ ತೊಟ್ಟರೂ ತೊಡದಿದ್ದರೂ ರೇಡಿಯೋದಲ್ಲಿ ಅದು ಶ್ರೋತೃಗಳಿಗೇನೂ ಕಾಣಿಸುವುದಿಲ್ಲವಲ್ಲ ಎಂದು ಸ್ಪಷ್ಟನೆ ನೀಡಿದ ಆಕೆ, ಕೆಲವು ಟೀವಿ ಚಾನೆಲ್‌ಗಳಲ್ಲಿ ಬಟ್ಟೆಯೇ ಇರೋದಿಲ್ಲ, ಕೇವಲ ದೇಹ ಮಾತ್ರ ಕಾಣಿಸುತ್ತದೆ, ಇದರ ಮೇಲೆ ಕ್ರಮ ಕೈಗೊಳ್ಳುವುದಿಲ್ಲವೇಕೆ ಎಂದು ಪ್ರಶ್ನಿಸಿದ್ದಾಳೆ.
ಕನಿಷ್ಠ ಉಡುಗೆ ತೊಟ್ಟರೆ ಧ್ವನಿ ಮತ್ತಷ್ಟು ಮಾದಕವಾಗುತ್ತದೆ, ರೇಡಿಯೋ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದಿತ್ತಲ್ಲ ಎಂದು ಆಕೆ ಮಾಲೀಕರಿಗೆ ಸಲಹೆಯನ್ನೂ ನೀಡಿದ್ದಾಳೆ.
ಈ ಮಧ್ಯೆ ಆಕೆಗೆ ಮತ್ತೂ ಸಂದೇಹ. ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದು ತೊಟ್ಟ ಬಟ್ಟೆ ಕಡಿಮೆಯಾಗಿದ್ದಕ್ಕೋ ಅಥವಾ ಕಡಿಮೆ ತೊಟ್ಟದ್ದು ಸಾಲದ್ದಕ್ಕೋ ಎಂಬುದರ ಬಗ್ಗೆ ಆಕೆಯಿನ್ನೂ ಸಂಶೋಧನೆ ನಡೆಸುತ್ತಿದ್ದಾಳೆ.
ಈ ಮಧ್ಯೆ, ಕ್ರಮವನ್ನು ಸಮರ್ಥಿಸಿಕೊಂಡಿರುವ ರೇಡಿಯೋ ಚಾನೆಲ್ ಮಾಲೀಕರು, ಆಕೆಯ ಮಾತಿನ ಮಾದಕತೆ ಹೆಚ್ಚಾಗಿ ವೀಕ್ಷಕರ ಅಲ್ಲಲ್ಲ ಶ್ರೋತೃಗಳ ಸಂಖ್ಯೆ ವಿಪರೀತ ಆಗಿಬಿಟ್ಟರೆ ಜನಜಂಗುಳಿ ಹೆಚ್ಚಾಗಿ ಏರ್‌ಟೈಮ್ ಟ್ರಾಫಿಕ್ ಜಾಮ್ ಆಗಬಹುದಿತ್ತು ಎಂದವರು ಭೀತಿ ವ್ಯಕ್ತಪಡಿಸಿದ್ದಾರೆ. ಆದ್ರೂ ತಾವು ಹೇಳುವ ಮೊದಲೇ ಆಕೆ ಬಟ್ಟೆಯ ಗಾತ್ರ ಕುಗ್ಗಿಸಿಕೊಂಡಳಲ್ಲ ಎಂಬುದು ಅವರಿಗೆ ಇನ್ನೂ ಇರುವ ಅಸಮಾಧಾನ.
ಪೂರ್ಣ ವರದಿ: http://bogaleragale.blogspot.com ನಲ್ಲಿದೆ.

Rating
No votes yet