ಬಿಟ್ಟ ಕಾಯಿಯೂ, ಬಿಟ್ಟ ಬೆಳ್ಳುಳ್ಳಿಯೂ!
(ಬೊಗಳೂರು ಅಡುಗೆ ಬ್ಯುರೋದಿಂದ)
ಬೊಗಳೂರು, ಜೂ.2- ಹೆಂಡ್ತಿ ತವರು ಮನೆಗೆ ಹೋಗಿರುವ ಪುರುಷರ ಸಂಘದ ಒತ್ತಾಸೆ ಮೇರೆಗೆ ಅಡುಗೆ ಅಂಕಣವೊಂದನ್ನು ಆರಂಭಿಸಲು ಹೊರಟಾಗ ಎದುರಾದ ತೊಂದರೆ ತಾಪತ್ರಯಗಳು ಮೂರಾರು.
ದಟ್ಸ್ ಕನ್ನಡದಲ್ಲಿ ಪ್ರಕಟವಾಗಿರುವ ಸಬ್ಬಸಿಗೆ ಸೊಪ್ಪಿನ ವಿಚಿತ್ರಾನ್ನದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅದನ್ನು ಮಾಡಲು ಹೋದ ಬೊಗಳೆ ಪಂಡಿತರಿಗೆ ನೂರಾರು ಸಂಕಟಗಳು ಎದುರಾದ ಬಗೆಯಿದು.
ಮೊತ್ತ ಮೊದಲು, ಈ ಅಡುಗೆ ಮಾಡಬೇಕಿದ್ದರೆ ಹೆಂಡ್ತಿ ತವರು ಮನೆಗೆ ಹೋಗಿರಲಿ ಮತ್ತು ಬ್ರಹ್ಮಚಾರಿಯಾಗಿದ್ದರೆ, ಒಬ್ಬಂಟಿ ಜೀವನ ನಡೆಸುತ್ತಿದ್ದರೆ ಇನ್ನೂ ಒಳಿತು ಎಂಬ ಸಲಹೆಯಿಂದಲೇ ಅಡುಗೆ ಪಾಕ ಶುರು.
ಅದೇ ಪ್ರಕಾರ ಹೆಂಡತಿಯನ್ನು ತವರು ಮನೆಗೆ ತಳ್ಳಿದ ಬೊಗಳೆ ಪಂಡಿತರು, ದಿನಾ ಮಾಡಿ ಮಾಡಿ ತಿಂದು ಸುಸ್ತಾದ ಚಿತ್ರಾನ್ನವನ್ನೇ ವಿಚಿತ್ರಾನ್ನವಾಗಿಸಿ ಹೊಸರುಚಿ ಉಣಬಡಿಸುವವರನ್ನು ನೆನಪಿಸಿಕೊಂಡು ಮುಂದುವರಿದಾಗ ಮೊದಲು ಎದುರಾದದ್ದು ಬೆಳ್ಳುಳ್ಳಿ ಎಂಬ ಕಂಟೆಂಟ್ ಸಂಗ್ರಹಿಸುವ ಸಮಸ್ಯೆ.
ಬೇಕಾಗುವ ಸಾಮಾನುಗಳು ಎಂಬ ಪಟ್ಟಿಯಲ್ಲಿ ದಾಖಲಿಸಿದಂತೆ "1 ಬೆಳ್ಳುಳ್ಳಿ (ನಿಮಗೆ ಬಿಟ್ಟದ್ದು)" ಎಂಬುದು ಗೊಂದಲಕ್ಕೆ ಕಾರಣ. ಇದುವರೆಗೆ ಕೇಳಿರುವ ಪ್ರಕಾರ ಹಲಸಿನ ಮರದಲ್ಲಿ ಕಾಯಿ ಬಿಡುತ್ತದೆ, ಸೌತೆ ಬಳ್ಳಿಯಲ್ಲಿ ಸೌತೆಕಾಯಿ ಬಿಡುತ್ತದೆ, ತೆಂಗಿನ ಮರದಲ್ಲಿ ಕಾಯಿ ಬಿಡುತ್ತದೆ. ಆದರೆ ನಮ್ಮಲ್ಲಿ ಬಿಟ್ಟ ಬೆಳ್ಳುಳ್ಳಿಯೇ ಆಗಬೇಕೆಂಬ ಪ್ರಸ್ತಾಪ ಮಾತ್ರ ತಲೆ ಕೆರೆದುಕೊಳ್ಳುವಂತೆ ಮಾಡಿತು.
ಮತ್ತಷ್ಟು ವಿವರ: bogaleragale.blogspot.com ನಲ್ಲಿ