ಎಣ್ಣೆ ಹೊಯ್ಯಮ್ಮ ದೀಪಕ್ಕೆ!
ಅನ್ಯ ಸಂಸ್ಕೃತಿಯ ಆಕ್ರಮಣ ಕುರಿತಾದ ಶ್ರೀ ಸೇಡಿಯಾಪು ಕೃಷ್ಣಭಟ್ಟರು ೧೯೬೦ರಲ್ಲಿ ರಚಿಸಿದ , ಆದರೆ ಇಂದಿಗೆ ಹೆಚ್ಚು ಪ್ರಸ್ತುತವಾದ ಈ ಕವನ ಜೂನ್ ೨೦೦೦೬ ತಿಂಗಳ ಮಯೂರದಲ್ಲಿದೆ . ಅವರ ಬಗ್ಗೆ ಮಾಹಿತಿ ಮತ್ತು 'ಎಣ್ಣೆ ಹೊಯ್ಯಮ್ಮ ದೀಪಕ್ಕೆ' ಕವನದ ಬಗ್ಗೆ ವಿಶ್ಲೇಷಣೆ ಇಲ್ಲಿದೆ.
ಮೊದಲ ಪ್ಯಾರ ಹೀಗಿದೆ .
ಎಣ್ಣೆ ಹೊಯ್ಯಮ್ಮ ದೀಪಕ್ಕೆ!
ಬತ್ತಿಯೊಣಗುತಿದೆ, ಬೆಳಕು ಬಾಡುತಿದೆ ,
ಕತ್ತಲೆ ಮುಂದೆ ಮುಂದೊತ್ತುತಿದೆ
ಅತ್ತಲಿಂದತ್ತಲು ಕಂಡಿಯೊಳಗೆ ನುಗ್ಗಿ
ಒತ್ತರದಲಿ ಗಾಳೀ ಬೀಸುತ್ತಿದೆ.
ಎಣ್ಣೆ ಹೊಯ್ಯಮ್ಮ ದೀಪಕ್ಕೆ!
ನಮ್ಮ ಸಂಪದವೆಂಬ ಕನ್ನಡದ ದೀಪಕ್ಕೂ ಎಣ್ಣೆ ಹೊಯ್ಯಬೇಕಿದೆ. ನಾನು ಒಂದು ತೊಟ್ಟು ಹಾಕಿದ್ದೇನೆ. ನೀವೂ ಒಂದು ತೊಟ್ಟು ಹಾಕಲಾರಿರಾ ? ಸಂಪದದಂತಹ ತಾಣ ಉಳಿದು ಬೆಳೆಯಬೇಕಲ್ಲವೇ ?
ಜಾಗತೀಕರಣಗೊಳ್ಳುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಸುಧಾ , ಮಯೂರ ಗಳೂ ಕೂಡ ಜಾಗತಿಕ ಮಟ್ಟದ ಸಾಹಿತ್ಯ/ಚಲನಚಿತ್ರ / ಮಾಹಿತಿ ಮುಂತಾದವನ್ನು ನೀಡುತ್ತಿವೆ. ಮುಖ ಪುಟ ಹಿಂಬದಿ ಪುಟಗಳು ಕೂಡ ವಿದೇಶೀಯರ ಚಿತ್ರಗಳಿವೆ! ಡಾ. ರ್‍ಆಜ್ ಅವರಿಗೇಕೊ ಒಳಪುಟದಲ್ಲಿ ಜಾಗ ಮಾಡಲಾಗಿದೆ.( ಇದೂ ಕೂಡ ಸ್ಥಳೀಯ ಸಂಸ್ಕೃತಿಯನ್ನು ಬದಿಗೊತ್ತುವ
ಜಾಗತೀಕರಣದ ಪರಿಣಾಮ ಅಲ್ಲ ತಾನೆ? )
ಪದಗತಿ ವಿಭಾಗದಲ್ಲಿ ಓದುವುದು ಎಂದರೇನು ಎಂಬ ವೈಚಾರಿಕ ಲೇಖನ ಬಂದಿದೆ. ಓದತಕ್ಕುದಾಗಿದೆ. ತ್ರಿವೇಣಿಯವರ 'ತಾವರೆಕೊಳ' ಕಾದಂಬರಿ , ದಿವಾಕರ್ ಅವರ 'ನಾಪತ್ತೆಯಾದ ಗ್ರಾಮಫೋನು ಮತ್ತು ಇತರ ಪ್ರಬಂಧಗಳು' ಕುರಿತ ಲೇಖನಗಳು , ಪುಸ್ತಕಲೋಕ, ಗ್ರಂಥಲೋಕ ಇತ್ಯಾದಿ ಪುಸ್ತಕ ಪರಿಚಯಕ್ಕೆ ಮೀಸಲಾದ ಪತ್ರಿಕೆಗಳನ್ನು ಪ್ರಬುದ್ಧಕರ್ನಾಟಕ, ಜಯಂತಿ, ದೇಶಕಾಲ , ರುಜುವಾತು , ಸಂಕ್ರಮಣ ಇತ್ಯಾದಿ ಮತ್ತು ಸಾಹಿತ್ಯಕ ಪತ್ರಿಕೆಗಳನ್ನು ಕುರಿತ ಲೇಖನಗಳಿವೆ. ಜುಂಜಪ್ಪನ ಕಥೆ ಮತ್ತು ಶ್ರೇಷ್ಠ ವಿದೇಶಿ ಚಲನ್ಚಿತ್ರವೊಂದರ ಪರಮರ್ಶೆ ಮತ್ತು ಸಾಕಷ್ಟು ಕವನಗಳಿಂದ ಸಮೃದ್ಧವಾಗಿ ಮಯೂರ ನಲಿಯುತ್ತ ಬಂದಿದೆ.
Comments
ಸಂಕ್ಷಿಪ್ತ ರೂಪ