ಮಹಿಳಾ ದಿನಾಚರಣೆಯ ವಿಶೇಷ: woman ಪವಾರ್ ಜಾದೂ.

ಮಹಿಳಾ ದಿನಾಚರಣೆಯ ವಿಶೇಷ: woman ಪವಾರ್ ಜಾದೂ.

ನೂರು ವರುಷ ಹಿಂದಿನ ಮಹಿಳಾಮಣಿ ಮನೋರಮೆ ತನ್ನ ಸರಸ ಸಲ್ಲಾಪಗಳಿಂದ ತನ್ನ ನಲ್ಲ ಮಹಾಕವಿ ಮುದ್ದಣನ ಮನ ಒಲಿಸಿದಳು. ಪದ್ಯಂ ವದ್ಯಂ ಗದ್ಯಂ ಹೃದ್ಯಂ ಎಂದು ಅವನಿಗೆ ಹೇಳಿ ಅವನ ಮೇರುಕೃತಿಯಾದ ಶ್ರೀ ರಾಮಾಶ್ವಮೇಧವನ್ನು ಗದ್ಯರೂಪದಲ್ಲಿ ಬರೆಸಿದಳು.

ಇಂದಿನ ಮಾಡ್ ರನ್ ಮಹಿಳೆ ಹೇಮ ಪವಾರ್ ಅವರು ಮನೋರಮೆಯ ಸಾಧನೆಯನ್ನೂ ಮೀರಿಸಿದ್ದಾರೆ. ಇದುವರೆಗೂ ಗದ್ಯವನ್ನೇ ನೆಚ್ಚಿಕೊಂಡಿದ್ದ ಸುಮಾರು ನಾಲ್ವತ್ತು ಸಂಪದಿಗರ ಕೈಗಳಿಗೆ ಕವಿತ್ವದ ಶಕ್ತಿಯನ್ನು ಕೊಟ್ಟು ಅವರಿಂದ ದಿಢೀರ್ ಕವಿತೆಗಳನ್ನು ಬರೆಸಿ ತಮ್ಮ ಪವರ್ ಮೆರೆದಿದ್ದಾರೆ.

International Women's Day ಯ ಪೋಸ್ಟರ್ ಒಂದರಲ್ಲಿ ನೋಡಿದ್ದು: "All of us, no matter how big or small, whether male or female -- we all owe our lives to a woman."

ನನಗನ್ನಿಸುತ್ತದೆ, ಪುರುಷನ ಜೀವ ಮಾತ್ರವಲ್ಲ, ಜೀವನದ ಗುಣಮಟ್ಟ ಕೂಡಾ ಮಹಿಳೆ ಒಬ್ಬಳಿಂದಲೇ ನಿರ್ಧರಿತವಾಗುವುದು.

ತನ್ನ ಮೂಲಭೂತವಾದ, ಹಿಂಸಾತ್ಮಕ ಪ್ರವೃತ್ತಿ ಗಳಿಗೆ ಕುಖ್ಯಾತವಾದ ಜನಾಂಗ ತಾನು ಪೂರ್ತಿಯಾಗಿ ಬದಲಾಗಬೇಕಾದರೆ, ತನ್ನ ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟು, ಅವರಿಗೆ ಸಮಾನ ಅವಕಾಶ, ಗೌರವಗಳನ್ನು ಒದಗಿಸಬೇಕು. ಕನ್ನಡದ ನಲ್ನುಡಿ "ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು" ಎಷ್ಟೊಂದು ಅರ್ಥಪೂರ್ಣ!

ಹೌದು, ಪರದೆಗಳ ಹಿಂದೆ ಬಂಧಿತರಾದ ಇವರುಗಳನ್ನು em ಪವಾರ್ ಮಾಡುವದಾದರೂ ಹೇಗೆ?

Rating
No votes yet

Comments