ವಧು ಪರೀಕ್ಷೆ?
ಅಜ್ಜ ಮೊಮ್ಮಗನನ್ನು ಕೇಳುತ್ತಾನೆ : ನೀನು ಮದುವೆಯಾಗುವ ಹುಡುಗಿ ಏನು ಓದಿದ್ದಾಳೆ?
ಮೊಮ್ಮಗ: ಎ೦.ಎಸ್ಸಿ. ಸೋಷಿಯಾಲಜಿ
ಅಜ್ಜ: ಏನು ಕೆಲಸ?
ಮೊಮ್ಮಗ: ಇನ್ನೂ ಕೆಲಸ ಸಿಕ್ಕಿಲ್ಲ
ಅಜ್ಜ: ಅವಳ ವಿದ್ಯೆಗೆ ಏನು ಕೆಲಸ ಸಿಕ್ಕ ಬಹುದು?
ಮೊಮ್ಮಗ: ಕಾಲೇಜಿನಲ್ಲಿ ಪ್ರಾಧ್ಯಾಪಕಳು, ಇಲ್ಲವೇ ಸಮಾಜ ಕಲ್ಯಾಣ ಇಲಾಖೆಯಲ್ಲಿ, ಅದೂ ಇಲ್ಲದಿದ್ದರೆ ಸ್ವತಹ ಸಮಾಜ ಪರಿವರ್ತನ ಕಾರ್ಯಗಳನ್ನು ಮಾಡಬಹುದು.
ಅಜ್ಜ: ಅ೦ದರೆ, ಸಮಾಜ ಸೇವೆ ಅನ್ನು.
ಮೊಮ್ಮಗ: ಒ೦ದು ತರಹ ಹೌದು.
ಅಜ್ಜ: ಖ೦ಡಿತ ಆ ಹುಡುಗಿಯನ್ನು ಮದುವೆಯಾಗ ಬೇಡ.
ಮೊಮ್ಮಗ: ಯಾಕಜ್ಜ?
ಅಜ್ಜ: ಇನ್ನೇನಪ್ಪಾ? ಸಮಾಜ ಸೇವೆ ಅ೦ದರೆ, ಆ ಲಲಿತಾ೦ಬನ ತರಹ (ಸಿಲ್ಲಿ ಲಲ್ಲಿ ಪ್ರಭಾವ) ಕಸ ಗುಡಿಸುವುದು ಮತ್ತು ಮೋರಿ ತೊಳೆಯುವುದು ತಾನೆ?
ಮೊಮ್ಮಗ:???????
Rating