ಡಿಕೆಎನ್ ಮೇಷ್ಟ್ರು ಮತ್ತವರ ನಗು

ಡಿಕೆಎನ್ ಮೇಷ್ಟ್ರು ಮತ್ತವರ ನಗು

ಬರಹ

ಡಿಕೆಎನ್ ಮೇಷ್ಟ್ರು ಕೆಂಡಾಮಂಡಲವಾಗಿದ್ರು. ಅವರ ಕೈಯೊಳಗಿನ ಕೋಲು ಯಾವಾಗ ಅಮಾನ್ ನ ಮೈಮೇಲೆ ಹರಿದಾಡಲಿ ಎಂದು ಕಾಯುತ್ತಿರುವಂತೆ ತೋರುತ್ತಿತ್ತು . "ಎಷ್ಟು ಬಂದಿದೆ ಮಾರ್ಕ್ಸು ಬೊಗಳು ",ಇ..ಇಪ್ಪತ್ನಾಲ್ಕು ಸಾರ್",ತೊದಲುತ್ತಿದ್ದ ಅಮಾನ್ "ಎಂಟನೆ ಕ್ಲಾಸಿನಲ್ಲಿ ನೂರ ಒಂಭತ್ತು ,ಒಂಭತ್ತರಲ್ಲಿ ಎಪ್ಪತ್ನಾಲ್ಕು ಈ ಮೊದಲನೇ ಟೆಸ್ಟ್ನಲ್ಲಿ ಫೇಲ್ .ಹೊಟ್ಟೆಗೆ ಅಣ್ಣ ತಿನ್ತಿಯೋ ಇಲ್ಲ ಸಗಣಿ ತಿನ್ತಿಯೋ, ದನ ಕಾಯೋನೆ .ನಿಮ್ಮಪ್ಪ ಓದಲಿ ಅಂತ ದಿನ ಐಸ್ ಕ್ಯಾಂಡಿ ಮಾರೋದು ನೀನು ಇಲ್ಲದ ಆಟ ಆಡ್ತಿಯ" ಧಪ್ ಧಪ್ ಧಪ್ ಏಟುಗಳು ಪೇರಿಸುತ್ತಿದ್ದರು ಮೇಷ್ಟ್ರು .ತೊದಲುತ್ತಿದ್ದ ಅಮ್ಮನ ಅತ್ತು ಸುಮ್ಮನಾದ
********
*******ಸಂಜೆ ಮಾವಿನ ತೋಪಿನ ಒಳಗೆ ಅಮಾನ್ ನ ಗುಂಪು ಸೇರಿತ್ತು "ಎ ಬೀಡಿ ಲಾವ್ ರೆ " ಅಂದವನೇ ಸಿರ್ರೆ೦ದು ಒಳಗೆಲದು ಕೊಂದು ಉಫ್ ಅಂತ ಹೋಗೆ ಹೊರಬಿಟ್ಟ . ಏ ಮಾಫೂಸ್ , ರೆಡ್ಡಿ , ಆಚಾರಿ ಆ ನನ್ಮಗ ನಂಗೇ ಹೊದಿತಾನ ನೋಡ್ಕೋತೀನಿ ನಮ್ಮಪ್ಪನ ದುಡ್ಡು ನನ್ನಿಷ್ಟ ಅವನದೇನು ಹೋಯ್ತು .ಗಾಂಚಾಲಿ ಜಾಸ್ತಿ ಆಯ್ತು " "ಅವನು ನಂಗೂ ಹೊಡೆದಿದ್ದ .ಸ್ಕೂಲಲ್ಲಿ ಎಲ್ರೂ ಅವನ ಮಾತು ಕೇಳ್ತಾರೆ .ಪೊಗರು ಜಾಸ್ತಿ ಅವನಿಗೆ .ರೆಡ್ಡಿ ಜೊತೆ ಸೇರಿಸಿದ . "ಏ ಅಲ್ನೋಡ್ರೋ ಮೇಷ್ಟ್ರು ಮಗ ಶಂಕರ ಬರ್ತಾ ಇದಾನೆ " ಆಚಾರಿ ಕೂಗಿದ ಕೂಗಿಗೆ ಎಲ್ಲರೂ ಆ ಕಡೆ ತಿರುಗಿದರು.ಅಮಾನ್ ಶಂಕರನ ಎದುರಿಗೆ ನೋಟ "ಏ ಶಂಕರ ನಿಮ್ಮಪ್ಪನ್ಗೆ ಹೇಳು ನಾನಾ ತಂಟೆಗೆ ಬರಬೇಡ ಅಂತ .ನನ್ನ ಹಿಂದೆ ದೊಡ್ಡ ದೊಡ್ಡ ರೌಡಿಗಳು ಇದಾರೆ ಊರಲ್ಲಿ ಉಳಿಬೇಕೂಂದ್ರೆ,ನಿಮ್ಮಕ್ಕ ನಿಮ್ಮಮ್ಮ ಚೆನ್ನಗಿರ್ಬೇಕೂಂದ್ರೆ ನನ್ನ ಕೆಣಕಬೇಡ ಅಂತ ಹೇಳೋಗು ". " ಏ ಅಮಾನ್ ಚುಪ್ಕೆ ಆರೇ . ಚೋಡ್ ದೇ ಉಸಕೋ. ಸಾಲ, ಓ ಟೀಚರ್ ಕೋ ಮಾರ್ದೇನ್ಗೆ ಹಂ".ಅಮಾನ್ ನ ಮಾತಿಗೆ ಶಂಕರ ಅಳುತ್ತ ಮನೆಗೆ ಓದಿ ಬಂದ 'ಅಪ್ಪಂಗೆ ಹೇಳಿದ್ರೆ ಮತ್ತೆ ನಾಳೆ ಅಮಾನ್ಗೆ ಹೊಡಿತಾರೆ ಅವನೇನಾದರು ಮಾಡಿದ್ರೆ' ಹೇಳೋದೇ ಬೇಡ ಎಂದು ಸುಮ್ಮನಾಗಿಬಿಟ್ಟ. ಭಯದಿಂದ ತಟ್ಟೆಯೊಳಗೆ ಬೆರಳಾಡಿಸುತ್ತ ಕೂತವನನ್ನು ನಿರ್ಮಲಮ್ಮ 'ಏನಾಯ್ತೋ' ಎಂದು ಕೇಳಿದ್ರು 'ಎನಿಲ್ಲಮ್ಮ' ಎಂದಷ್ಟೇ ಉತ್ತರಿಸಿದ .ರಾತ್ರಿ ಅಷ್ಟೊತ್ತಿಗೆ ತಡೆಯಲಾರದೆ ಎಲ್ಲವನ್ನೂ ಹೇಳಿಬಿಟ್ಟಿದ್ದ .
*********
********ಮಾರೆನೆಯ ದಿನ ಮೇಷ್ಟ್ರು ಟೆಂತ್ 'ಎ' ಸೆಕ್ಷನ್ ನ ಹಾಜರಿ ಹಾಕ್ತಾ ಮೊದಲನೆಯ ಹೆಸರು ಅಮಾನ್ ಕೂಗಲೇ ಇಲ್ಲ .ಎಲ್ಲ ಮುಗಿದ ನಂತರ ಅಮಾನ್ ನನ್ನ ನಿಲ್ಲಿಸಿದರು "ಏನು ಸಮಾಚಾರ ಅಮಾನ್.ನೀನು ರೌಡಿಗಳನ್ನ ಕರ್ಕೊಂಡು ಬರ್ತೀಯ?ಸರಿ , ಎಷ್ಟು ಜನಾನಾದ್ರೂ ಕರ್ಕೊಂಡು ಬಾ,ಎಲ್ಲಿಗೆ ಬರಬೇಕು ? ಎಷ್ಟು ಹೊತ್ತಿನಲ್ಲಿ ಬರಬೇಕು ? ಬರ್ತೀನಿ ನಾನು ರೆಡಿ .ಯಾರಿದ್ದಾರೆ ನಿಂಜೊತೆ ಆ ಮಾಫೂಸ್ ,ಚಂಗಳ ರೆಡ್ಡಿ, ಮಾಯಾಚಾರಿ, ಮತ್ತೆ ಇಮ್ರಾನ್ ಇವರೇನಾ ನಿನ್ನ ರೌಡಿಗಳು . ನನ್ನ ಹತ್ತಿರ ಒದೆ ತಿಂದ ನನ್ನ ಹಳೆ ಸ್ಟುಡೆ0ಟ್ಸ್. ನನ್ನ ಮೇಲೆ ಜಿದ್ದು ಇಟ್ಟುಕೊಂಡಿರೋರು ನಿನ್ನ ಸ್ನೇಹಿತರು .ಒಳ್ಳೇದು . ಚೆನ್ನಾಗಿ ಓದಲಿ ಅಂತ ಬುದ್ಧಿ ಹೇಳಿ ಒಂದೆರಡು ಏಟು ಕೊಟ್ಟರೆ ನನಗೆ ವಾರ್ನಿಂಗ್ ಕೊಡು ಮಟ್ಟಕ್ಕೆ ಬೆಳೆದಿದಿರ .ಅವರೆಲ್ಲ ಏನಾಗಿದಾರೆ ನೋಡಿದ್ದಿಯ ಒಬ್ಬ ಗಾರೆ ಕೆಲಸ ಮಾಡ್ತಾನೆ ಯಾವ ಕೆಲಸ ಆದ್ರೇನು ಆದ್ರೆ ಎನಾಗಬೇಕಿದ್ದೋನು ಏನಾದ .ಇನ್ನಿಬ್ಬರು ಕಳ್ಳತನ ಮಾಡಿ ಜೀವನ ಮಾಡ್ತಾ ಇದಾರೆ ಇವ್ರು ನಿನ್ನ ಫ್ರೆಂಡ್ಸು ಆಲ್ವಾ ನಾಚಿಕೆ ಆಗಬೇಕು ನಿನಗೆ .ನಿಮ್ಮಪ್ಪ ದಿನಾ ಬಿಸ್ಲಲ್ಲಿ ವ್ಯಾಪಾರ ಮಾಡಿ ನಿನ್ನ ಓಡಿಸ್ತ ಇದಾನೆ .ಸಿಕ್ಕಾಗಲೆಲ್ಲಾ 'ನನ್ನ ಬೀಟಾ ಬಡ ಆಫಿಸರ್ ಆಗ್ಬೇಕು ಸಾಬ್' ಅಂತಾನೆ ನೀನು ಇಲ್ಲಿ ರೌಡಿಸಂ ಮಾಡ್ತೀಯಾ ತಪ್ಪಲ್ವಾ ಇದು "? ಮೇಷ್ಟ್ರು ಸಮಾಧಾನವಾಗೇ ಹೇಳುತ್ತಿದರು."ಸಾರ್ ಅವ್ರು ತುಂಬಾ ಒಳ್ಳೆಯವರು ಸಾರ್" ಅಂದ ಅಮಾನ್.ಧಪ್ ಧಪ ಧಪ್ ಎಂಬ ಶಬ್ದ ತರಗತಿಯನ್ನು ತುಂಬಿತು."ಅವ್ರು ಎಂಥವರು ಅಂತ ಇಡೀ ಊರಿಗೆ ಗೊತ್ತು .ನೀನು ಎಷ್ಟು ಹೊತ್ತಿನಲ್ಲಿ ಎಲ್ಲಿದ್ದೆ,ಎಲ್ಲಿರ್ತಿಯ ಅನ್ನೋದೆಲ್ಲ ನಂಗೇ ಗೊತ್ತು.ನಿನ್ನೆ ಸಂಜೆ ರಂಗಶಾಮಪ್ಪನ ತೋಟದಿಂದ ಕಾಯಿ ಕದ್ದಿದ್ದು ಹೇಳ್ಲ ಇಲ್ಲಾ ದೇಹ ಬೆಳೆದಿದೆ ಅಂತ ಮೊನ್ನೆ ಮಲ್ಲೆಕುಪ್ಪದ ಹುಡುಗರ ಜೊತೆ ಹೊಡೆದಾಡಿದ್ದು ಹೇಳ್ಲ "ಅಮಾನ್ ಅವಾಕ್ಕಾಗಿ ನಿಂತಿದ್ದ 'ಇದೆಲ್ಲ ಇವರಿಗೆ ಹೇಗೆ ಗೊತ್ತಾಯ್ತ' ಎಂದು ಯೋಚಿಸುತಿದ್ದ ."ಅದು ನನ್ನಿಷ್ಟ ಸರ್"ಅಂದ ಭಂಡತನದಿಂದ."ಓ ಸರಿ ಹಾಗಾದ್ರೆ ನಿನ್ನಿಷ್ಟದನ್ತೇನೆ ಆಗಲಿ ನಿನ್ನನ್ನ ಇವತ್ತಿನಿಂದ ಬಿಟ್ಟು ಬಿಟ್ಟಿದ್ದೀನಿ . ನೀನು ಹೋಂ ವರ್ಕ್ ಮಾಡಿದ್ಯ ಇಲ್ವಾ ಕೇಳಲ್ಲ ನೀನು ನೋಟ್ಸ್ ತೋರಿಸ್ಬೇಕಗಿಲ್ಲ ಪ್ರಶ್ನೆಗೆ ಉತ್ತರಗಳನ್ನ ನಿನ್ನನ್ನ ಕೇಳಲ್ಲ ನನ್ನ ಪಾಲಿಗೆ ನೀನು ಸಗಣಿ .ಹೋಗು ಬಿಟ್ಟೆ ನಿನ್ನ" .ಅಂದು ಬಿಟ್ಟರು
********
ಮುಂದುವರಿಯುವುದು