ಪ್ರ್ಯೆಮವೇರಾ ಇದರ ಬಗ್ಗೆ ಮಾಹಿತಿ ತಿಳಿದಿದೆಯೇ ?

ಪ್ರ್ಯೆಮವೇರಾ ಇದರ ಬಗ್ಗೆ ಮಾಹಿತಿ ತಿಳಿದಿದೆಯೇ ?

ಸಂಪದೀಗರೇ !!!

 

ಪ್ರ್ಯೆಮಾವೇರಾ ಇದೊಂದು ಪ್ರಾಜೆಕ್ಟ್ ಮತ್ತು ಪೋರ್ಟ್ ಫೋಲಿಯೋ ಮ್ಯಾನೆಜ್ಮೆಂಟ್ ತಂತ್ರಾಂಶ. ಈ ತಂತ್ರಾಂಶದ ಸಹಾಯದಿಂದ ವ್ಯವಹಾರ ಮತ್ತು ಮ್ಯಾನೇಜ್ಮೆಂಟಗಳಿಗೆ ಉತ್ತಮ ಸಹಕಾರಿಯಾಗಬಲ್ಲದು. ಇದಕ್ಕೆ ೬೦೦ ಕೋಟಿ ಪ್ರಾಜೆಕ್ಟಗಳನ್ನು ತನ್ನ ತೆಕ್ಕೆಯಲ್ಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ.

ಇದು ಕ್ಯೆಗಾರಿಕೆಗಾಗಿಯೇ ಸಿದ್ದಪಡಿಸಿದ ವಿಶೇಷ ತಂತ್ರಾಂಶವೆಂಬುದು ತಜ್ಣರ ಅಭಿಮತ. ಈಗಾಗಲೇ ೭೬.೦೦೦ ಸಂಸ್ಥೆಗಳು ಇದರ ಬಳಕೆಯನ್ನು ಮಾಡುತ್ತಿವೆ. ಇದು ಯಾವುದೇ ಪ್ರಾಜೆಕ್ಟ್ಗಳನ್ನು ಸುಲಭವಾಗಿ ನಿರ್ವಹಿಸುವ ಮತ್ತದರ ಅಂಕಿ-ಅಂಶವನ್ನು ಸುಲಭವಾಗಿ ಹಾಗೂ ಉತ್ತಮವಾಗಿ ನಿರ್ವಹಿಸುವಂತೆ ಬರೆದಿದ್ದಾರೆ. ಇದು ಯಾವುದೇ ಪ್ರಾಜೆಕ್ಟಗಳ ಅಭಿವೃದ್ಧಿ ಮತ್ತು ಸಮರ್ಪಕ ಬಳಕ, ಸಮಯ ನಿರ್ವಹಣೆಯನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುತ್ತದೆ.

ಇದನ್ನು ಓರಾಕಲ್ ಸಂಸ್ಥೆಯ ಸಹಯೋಗದೊಂದಿಗೆ ತಂತ್ರಾಂಶವನ್ನು ತಯಾರಿಸಿದ್ದಾರೆ. ಈ ತಂತ್ರಾಂಶವನ್ನು ಕಟ್ಟಡ ನಿರ್ಮಾಣ ಸಂಸ್ಥೆಗಳು ಹೆಚ್ಚಿನ ಮಟ್ಟಿಗೆ ಉಪಯೋಗಿಸುತ್ತಿವೆ.

ಈ ತಂತ್ರಾಂಶದ ಬಗ್ಗೆ ತರಬೇತಿ ಹಾಗೂ ಇನ್ನೂ ಹೆಚ್ಚಿನ ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿಕೊಡಿ. 

 

 

ಮಾಹಿತಿಗೆ ಇಲ್ಲಿ ನೋಡಿ

Rating
No votes yet