ಸಾಠ್ ಕಬರ್....!!!!!!!

ಸಾಠ್ ಕಬರ್....!!!!!!!

ಇದೊಂದು ಐತಿಹಾಸಿಕ ಸ್ಥಳ... ಛತ್ರಪತಿ ಶಿವಾಜಿ ಮಹಾರಾಜರ ವ್ಯಾಘ್ರನಖಕ್ಕೆ ಬಲಿಯಾದ ಅಫಜಲಖಾನ ನ ಅರಮನೆ ಇದ್ದ ಸ್ಥಳ....
ಅಫಜಲಖಾನನ ಕಥೆ ನಿಮಗೆ ಗೊತ್ತಿದ್ದರೂ ಮತ್ತೊಮ್ಮೆ....

ಅದು ೧೬೫೮ನೇ ಇಸವಿ... ಅತ್ತ ದಿಲ್ಲಿ ಇತ್ತ ಬಿಜಾಪುರವೆರಡು ಶಿವಾಜಿ ಮಹಾರಾಜರ ಪ್ರತಾಪದೆದುರು ನಡು ಬಗ್ಗಿಸಿ ನಿಂತಿದ್ದ ಕಾಲ...
ಬಿಜಾಪುರ ಆದಿಲಶಾಹಿ ಶಿವಾಜಿಯನ್ನು ಬಗ್ಗು ಬಡಿಯಲು ತನ್ನ ಆಸ್ಥಾನ ದೈತ್ಯ ಪಠಾಣ ಖಾನನನ್ನು ಕಳುಹಿಸುತ್ತಾನೆ...

ಖಾನ ೬೪ ಪತ್ನಿಯರ ಸರದಾರ... ಶಿವಾಜಿಯೊಡನೆ ಹೋರಾಡುವುದಕ್ಕಿಂತ ಮುಂಚೆ ತನ್ನ ಪತ್ನಿಯರಿಗೆ ಒಂದು ದಾರಿ ಮಾಡಿಕೊಡಲು ನಿರ್ಧರಿಸುತ್ತಾನೆ... ಸತತ ೮ ದಿನಗಳ ಕಾಲ ಅವರ ವಿಲಾಸಿ ಸಹವಾಸದಲ್ಲಿದ್ದು ನಂತರ ಒಬ್ಬೊಬ್ಬಳನ್ನೇ ಅಂತಃಪುರಕ್ಕೆ ಕರೆದು ಕೊಚ್ಚಿಹಾಕಿ ಪಕ್ಕದಲ್ಲಿದ್ದ ಬಾವಿಗೆ ಹಾಕುತ್ತಾನೆ...

ತನಗೆ ಯುದ್ಧದಲ್ಲೇನಾದರು ಆದರೆ ತನ್ನ ಪತ್ನಿಯರ್ಅ ಪಾತಿವ್ರತ್ಯ ಕೆಡಬಾರದೆಂಬ ಮಹೋದ್ದೇಶ ಅವನದು..!!!!!

ಒಳಗೆ ಹೋದವರು ಹೊರಗೆ ಬರದ್ದಿದ್ದಾಗ ಉಳಿದವರಿಗೆ ಅನುಮಾನ ಶುರುವಾಗುತ್ತದೆ... ಆಗ ಅವರಲ್ಲಿ ಮೂರು ಜನ ಖಾನನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರೆ... ಅಟ್ಟಿಸಿಕೊಂಡು ಹೋದ ಖಾನ ಅವರೆಲ್ಲರನ್ನೂ ಸಾಯಿಸುತ್ತಾನೆ...

ಆತ ಕೊಂದು ಬಾವಿಯಲ್ಲಿ ಹಾಕಿದ ಹೆಂಡತಿಯರ ಸಮಾಧಿಯನ್ನು ಅಂತಃಪುರವಿದ್ದ ಜಾಗದಲ್ಲೇ ನಿರ್ಮಿಸಲು ಏರ್ಪಾಡು ಮಾಡುತ್ತಾನೆ...
ಉಳಿದ ಮೂವರ ಸಮಾಧಿ ಅವರು ಸತ್ತ ಜಾಗದಲ್ಲೇ ಇದೆ...

೬೧ ಸಮಾಧಿ ಒಂದೇ ಕಡೆ ಇದ್ದರೆ ಒಂದು ಸುಮಾರು ೧ ಕಿ.ಮೀ ದೂರದಲ್ಲಿದೆ. ಮತ್ತೊಂದು ೩ ಕಿ.ಮೀ ದೂರದಲ್ಲಿದೆ. ಮೂರನೆಯದು ೧೮ ಕಿ.ಮೀ ದೂರದಲ್ಲಿದೆ... ಮೂರನೆಯದನ್ನು ನೋಡಲಾಗಲಿಲ್ಲ ನಮಗೆ...

ಐತಿಹಾಸಿಕ ದೃಷ್ಟಿಯಿಂದ ಅತ್ಯಂತ ಮಹತ್ವವಾಗಿರುವ ಈ ಸ್ಠಳವನ್ನು ನೋಡಲು ಹೋದಾಗ ಆದ ಬೇಸರ ಅಷ್ಟಿಷ್ಟಲ್ಲ...
ಇದರೊಳಗೆ ಹೋಗಲು ಸರಿಯಾದ ದಾರಿಯಿಲ್ಲ...
ಮಾಹಿತಿಗಳೂ ಇಲ್ಲ..
ಸ್ಥಳೀಯರಿಗೆ ತಮ್ಮೂರಲ್ಲಿ ಇಂತಹುದ್ದೊಂದು ಇದೆ ಎಂಬುದು ಗೊತ್ತಿಲ್ಲ..!!!
ಪಡಬಾರದ ಕಷ್ಟ ಪಟ್ಟುಕೊಂಡು ಮೂಗು ಮುಚ್ಚಿಕೊಂಡು ನೋಡಿದ್ದಾಯ್ತು....
ಪ್ರವಾಸೋದ್ಯಮ ಇಲಾಖೆ ಇದರ ಬಗ್ಗೆ ಯಾವಾಗ ದೃಷ್ಟಿ ಹರಿಸುತ್ತೋ ಗೊತ್ತಿಲ್ಲ....
ಅದರ ಗಮನ ಈ ಕಡೆ ಬರುವ ತನಕ ಸಾಠ್ ಖಬರನ ಗತಿ??????????

ನನ್ನಿ
ದೃಶ್ಯ ಪ್ರದೀಪ :)

Rating
No votes yet

Comments