ಕಬ್ಬಿನ ಹಾಲಿನ ಅಂಗಡಿಗೆ ಅಚ್ಚ ಗನ್ನಡದ ಹೆಸರು?!
ನಮ್ಮ ಗೆಳೆಯ ಒಬ್ಬ ಇದ್ದಾನೆ. ಇಲ್ಲೇ ಆಫೀಸಿನಲ್ಲೇ!. ಟೀ ಅಂಗಡಿ ಇಟ್ಟಿದ್ದಾನೆ. ನಾನು ಅವನಿಗೆ ದೊಡ್ಡ ಟೀ ಗಿರಾಕಿ. ;)
ಮೊನ್ನೆ ( ತಿಂಗಳೇ ಆಯ್ತು?!) ಹೀಗೇ ಮಾತಾಡ್ತಾ ಅವನು ಅವನ ಯೋಜನೆಗಳ ಬಗ್ಗೆ ಹೇಳಿದ. ನಗರದ ವಿವಿಧ ಭಾಗಗಳಲ್ಲಿ ಅವನ ಅಂಗಡಿ ಅನ್ನು ಆರಂಬಿಸೋದು..... ಕಬ್ಬಿನ ಹಾಲಿನ ಅಂಗಡಿ (ಮತ್ತು ಸ್ವಲ್ಪ ಕುರುಚಲು.. ಅದೇ ಸ್ನ್ಯಾಕ್ಸ್ :) ಅಂಗಡಿ ) ಇಡಬೇಕು ಅಂತ.
ನಾನು ಅವನಿಗೆ ಸ್ವಲ್ಪ ಗ್ಲಾಮರ್ ಇರೋ ಕನ್ನಡ ಹೆಸರು ಇಡು... ಇತ್ತೀಚೆಗೆ ಕನ್ನಡಕ್ಕೆ ಬಾಳನೇ ಗ್ಲಾಮರ್ ಬರ್ತಾ ಇದೆ ಅಂತ ಸಲಹೆ ಕೊಟ್ಟೆ. ಅವನು ನನಗೆನೇ ಕನ್ನಡ ಹೆಸರು ಸೂಚಿಸಲು ಕೇಳಿದ. ಒಪ್ಪಿಕೊಂಡು ಬಂದೆ. ಆಗ ಸಂಪದದಲ್ಲಿಯಾದರೂ/ ಸಂಪದಿಗರಿಂದಲಾದರೂ ಒಳ್ಳೆ ಕನ್ನಡ ಹೆಸರು ಸಿಗುತ್ತೆ ಅನ್ನೋ ಆಶಾವದಿಯಾಗಿದ್ದೆ ;) .
ನೀವು ಕಬ್ಬಿನ ಹಾಲಿನ ಅಂಗಡಿಗೆ ಒಂದು ಒಳ್ಳೆ ಕನ್ನಡದ ಗ್ಲಾಮರ್ ಇರೋ ಹೆಸರು ಸುಚಿಸ್ತೀರಾ?
ಮುಂಚಿತವಾಗಿ ನನ್ನೀ.
extra:
ವಿಜಯನಗರದಲ್ಲಿ ಒಂದು ಕಬ್ಬಿನ ಹಾಲಿನ ಅಂಗಡಿ ಇದೆ. "ಆಲೆಮನೆ" ಅಂತ. ಸಕತ್ ಹೆಸರು.. ಅರ್ಥ ಹೊಂದುತ್ತೆ ಮತ್ತು ಸಕತ್ ಗ್ಲಾಮರಸ್ ಆಗಿಯೂ ಇದೆ. ಅಂತಹ ಹೆಸರುಗಳಿದ್ದರೆ ಚೆನ್ನ.
ಈ ಅಂಗಡಿಯ ಹೆಸರಿಗಾಗಿಯೇ ;) ಆ ಜಾಗದಲ್ಲಿ ಹೋಗುವಾಗಲೆಲ್ಲ ಅಲ್ಲಿ ಕಬ್ಬಿನ ಹಾಲು ಕುಡಿದೇ ಹೋಗುವುದು!. :).
Comments
ಉ: ಕಬ್ಬಿನ ಹಾಲಿನ ಅಂಗಡಿಗೆ ಅಚ್ಚ ಗನ್ನಡದ ಹೆಸರು?!
ಉ: ಕಬ್ಬಿನ ಹಾಲಿನ ಅಂಗಡಿಗೆ ಅಚ್ಚ ಗನ್ನಡದ ಹೆಸರು?!