ಕನ್ನಡದಲ್ಲಿ ಅಱ=ಧರ್ಮ=ಪರೋಪಕಾರ
ಬರಹ
ಕನ್ನಡದಲ್ಲಿ ಅಱವಟ್ಟಿಗೆ, ಅಱಬಾವಿ (ಅಱಭಾವಿ) ಮತ್ತು ಅಱಕೆಱೆ ಇವು ಸಾಮಾನ್ಯವಾಗಿ ಬೞಸುವ ಊರನ್ನೋ ಸ್ಥಳವನ್ನೋ ಸೂಚಿಸುವ ಶಬ್ದಗಳು. ಇಲ್ಲಿ ಅಱ ಅಂದರೆ ಧರ್ಮ. ಕನ್ನಡಿಗರಿಗೆ ಧರ್ಮವೆಂದರೆ ಪರೋಪಕಾರ ಅಥವಾ ಬಹಳ ಜನರಿಗೆ ಉಪಯೋಗ ಬರಲೆಂಬ ಉದ್ದೇಶದಿಂದ ಅಱವಟ್ಟಿಗೆ=ಧರ್ಮಛತ್ರ, ಅಱಬಾವಿ, ಅಱಕೆಱೆ=ಧರ್ಮಾರ್ಥವಾಗಿ ಬೇಱೆಯವರಿಗೆ ಉಪಯೋಗವಾಗಲೆಂದು ನೀರಿಗೋಸ್ಕರ ಬಾವಿಯನ್ನೋ ಕೆಱೆಯನ್ನೊ ಕಟ್ಟಿಸಿ ಅದನ್ನು ಅಱಬಾವಿ, ಅಱಕೆಱೆ ಎಂದು ಹೆಸರಿಡುವುದನ್ನು ನೋಡಬಹುದು. ಹಾಗೆಯೇ ಅಱಗುಲಿ ಅಂದರೆ ಅಱ+ಕುಲಿ(ಕೊಲ್ ನಿಂದ) ಧರ್ಮವನ್ನು ಕೊಲ್ಲುವವನು, ಸಮಾಜಕಂಟಕ ಅಥವಾ ಯುದ್ಧದಲ್ಲಿ ಯುದ್ಧ ನೀತಿ ಬಿಟ್ಟು ಮೋಸದಿಂದ ಕೊಲ್ಲುವವನೂ ಅಱಗುಲಿ. ಒಟ್ಟಿನಲ್ಲಿ ಕನ್ನಡಿಗರಿಗೆ ಅಥವಾ ಸಮಸ್ತ ತೆನ್ನುಡಿಗರಿಗೆ ಅಱ ಎಂದರೆ ಒಳ್ಳೆಯ ನಡತೆ, ಪರೋಪಕಾರ, ಸ್ವಾರ್ಥರಾಹಿತ್ಯ. ಅದೇ ಧರ್ಮ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ