ಒಂದಿಷ್ಟು ತರಲೆ ಕವನಗಳು

ಒಂದಿಷ್ಟು ತರಲೆ ಕವನಗಳು

ಸಮಯವಿಲ್ಲವೆ?

ಕಾಲ ಕಾಯದು ನಿನಗಾಗಿನ್ ಎನ್ನುವೆಯಾ ಗೆಳೆಯಾ?
ಗಡಿಯಾರದಿಂದ ಬ್ಯಾಟರಿಯ ತೆಗೆದು ಪಕ್ಕಕ್ಕಿಟ್ಟು
ಮನ ದಣಿಯುವ ತನಕ, ತನು ಕುಸಿಯುವತನಕ
ಆಡು, ಆಟವಾಡು, ಎಲ್ಲವನೆಲ್ಲವ ಈಗಲೇ ಬದಿಗಿಟ್ಟು!

*****

ಒಳ್ಳೆಯತನ

ನೀನು ಒಳ್ಳೆಯವನೆಂದು ಜಗವೆಲ್ಲ ಒಳ್ಳೆಯದಾಗಬೇಕೆ ನಿನಗೆ?
ನೀನು ಸಸ್ಯಾಹಾರಿಯೆಂದು ಹುಲ್ಲು ತಿನ್ನು ಎನ್ನುವೆಯಾ ಹುಲಿಗೆ?

*****

ಅಂತರಂಗ ಸೌಂದರ್ಯ

ಸೌಂದರ್ಯವೆನ್ನುವುದು ನಮ್ಮ ಉಡುಗೆ ತೊಡುಗೆಗಳಲ್ಲಿಲ್ಲ
ಅಂತರಂಗದ ಸೌಂದರ್ಯವೇ ಹಿರಿದೆನ್ನುವೆಯಾ?
ಹೋಗಿನೋಡು ಒಮ್ಮೆ ಬಟ್ಟೆಗಳಿಲ್ಲದೆ ಎಂ.ಜಿ.ರೋಡಿನಲಿ
ಎಷ್ಟು ಜನರು ಪರಿಕಿಸುವರು ನಿನ್ನ ಅಂತರಂಗವ!

*****

ಹಾರೈಕೆ!

ತನ್ನ ಮಗಳು ತನ್ನ ಗಂಡನಿಗಿಂತ ಒಳ್ಳೆಯ ಗಂಡನನ್ನು ಪಡೆಯಲಿ
ತನ್ನ ಮಗ ಅವನಪ್ಪ ಮದುವೆಯಾದಂತಹವಳ ಮದುವೆಯಾಗಲಿ!

*****

ವಿಮೆಯ ಕಥೆ

ನನ್ನ ಗೆಳೆಯ! ಮರ್ಯಾದಾ ಪುರುಷೋತ್ತಮ! ಸಿಗರೇಟ್ ಸೇದಲಿಲ್ಲ!
ಮದಿರೆಯಂ ಕುಡಿಯಲಿಲ್ಲ, ಅನ್ಯ ಮಾನಿನಿಯರ ಸಂಗ ಮಾಡಲಿಲ್ಲ
ಕುದುರೆಯ ಬಾಲವಂ ಹಿಡಿಯಲಿಲ್ಲ, ಸತ್ಯಂನಲ್ಲಿ ಹಣ ತೊಡಗಿಸಲಿಲ್ಲ
ಸತ್ತ ಮೇಲೆ ನುಡಿಯುತಿಂತು ವಿಮಾ ಸಂಸ್ಥೆ! ಬದುಕಿದ್ದನೇ ಅವನು?
ಬದುಕಿ ಸತ್ತವರಿಗಷ್ಟೇ ವಿಮೆ! ಬದುಕದೇ ಸಾಯಲು ಇಲ್ಲವಿಲ್ಲಿ ಕ್ಷಮೆ!!

-ನಾಸೋ

Rating
No votes yet

Comments