ಮೂರು ’ಛೆ’ ಹೋಗಿ ಬಿದ್ದರು.

ಮೂರು ’ಛೆ’ ಹೋಗಿ ಬಿದ್ದರು.

ಬರಹ

ಎಲ್ಲಾರಿಗೂ ಶ..ಶ..ಶ...ಶ...ಶ...ಶರಣ್ರೀಪ್ಪಾ..
ನಾನು ಸಣ್ಣವಿದ್ದಾಗ(೧೦ -೧೨ ವರುಶ ಆಗಿರಬೇಕು ಅನ್ಸುತ್ತ) ಒಂದು ದಿನ ಮನ್ಯಾಗ.. ವಾರಿಗಿ ಹುಡುಗುರಕೂಡ..ತುಂಟಾಟ ಮಾಡಿಕೊಂಡು ಮಸ್ತ ಆಟ ಆಡಾಕತ್ತಿದ್ವಿ..ಮನೀಗೆ ಒಬ್ಬ ಸ್ವಾಮೀಜಿ ಬಂದಿದ್ದ..
(ಹೆಸರು ಗೊತ್ತಿಲ್ಲ)..
ಹಿಂಗ... ಮನ್ಯಾಗ ಅಪ್ಪಾ, ಅಮ್ಮ, ಅಜ್ಜಿ, ಅಜ್ಜ ......... ಎಪ್ಪಾ ಎಶ್ಟು ಮಂದೀದು ಅಂತ ಪಟ್ಟಿ ಮಾಡ್ಲಿ ರೀ..೪೫ ಮಂದಿ ಇದ್ದರು ನಮ್ಮ ಮನ್ಯಾಗ..ಒಟ್ಟ ಎಲ್ಲಾರು..ಸೇರಿದ್ರು.. ಮತ್ತ ಸ್ವಾಮಿಗುಳು ಅಂದಮ್ಯಾಗ..ಪೂಜೆ ಗೀಜೆ ಎಲ್ಲಾ ಆತು..ಆದಮ್ಯಾಗ, ಸ್ವಾಮಿಗುಳು ಏನರ ಹೇಳಿಕಿ ಹೇಳತಾರನು ಅಂತ ಕೇಳಾಕತ್ತಿದ್ರು..
ಇದ್ದಕ್ಕಿದ್ದಂಗ ನನ್ನ ಬುದ್ಧಿಗೆ ಏನು ಹೊಳಿತೋ ಏನೋ..
ಮುರು ’ಗಾ’ ಮಠದ ಸ್ವಾಮಿಗಳು
ಆರು ’ತಿ’ ಮಾಡಲು ಹೋಗಿ
ಮೂರು ’ಛೆ’ ಹೋಗಿ ಬಿದ್ದರು...
ಅಂದೆ..(ಸಣ್ಣವರಿದ್ದಾಗ ಹಿಂಗ ಏನೇನೋ ಹಾಡು ಕಟ್ಟಿತ್ತಿದ್ದೆವು)
ಆಗ ಅವರು ಮುಖ ನೋಡಬೇಕಿತ್ರೀ...ಅವರ ಸಿಟ್ಟು ಹೆಂಗ ತಡಕೊಂಡ್ರೊ ಗೊತ್ತಿಲ್ಲ..ಹಾಂಗ ನನ್ನ ಗಲ್ಲ ಹಿಂಡಿ..
ತುಸು ನಕ್ಕು..ಹೆಂಗೋ ನಾಕು ಮಾತು ಹೇಳಿ ನೆಡೆದ್ರು...
ಅವರು ಹೋದಮ್ಯಾಲ ನನಗ ಅಪ್ಪ ಅಮ್ಮ ಇಬ್ಬರ ಕೈಯಿಂದ .ಬಿಸಿಬಿಸಿ ಕಜ್ಜಾಯ ಸಿಕ್ತು..

ಹಿಂಗೂನು ಆಕ್ಕಾವು ನೋಡ್ರಿ..:)
ಇಂತಿ ನಿಮ್ಮ ಪ್ರೀತಿಯ ಮೂರು ’ಖ’
ಗಿರೀಶ ರಾಜನಾಳ.