ಪ್ರಿಯ ವಿಂಡೋಸ್ ಬಳಕೆದಾರರೆ: ಏಪ್ರಿಲ್ ೧ ರಂದು ಎಚ್ಚರದಿಂದಿರಿ

ಪ್ರಿಯ ವಿಂಡೋಸ್ ಬಳಕೆದಾರರೆ: ಏಪ್ರಿಲ್ ೧ ರಂದು ಎಚ್ಚರದಿಂದಿರಿ

ಬರಹ

ನೀವು ವಿಂಡೋಸ್ ಬಳಕೆದಾರರೇ? ಹಾಗಿದ್ದಲ್ಲಿ ಎಪ್ರಿಲ್ ಒಂದರಂದು, ಖಂಡಿತ ನೀವು ಎಚ್ಚರದಿಂದಿರಬೇಕು. ಇದು ಫೂಲ್ಸ್ ದಿನ ಅಂತಲ್ಲ ಆದ್ರೆ Conficker ಅಥವಾ DownAdUP ಅನ್ನೋ ವರ್ಮ್ (worm) ಇವತ್ತು ನಿಮ್ಮ ಕಂಪ್ಯೂಟರ್ ಗೆ ದಾಳಿ ಮಾಡಿ, ದಾಂದಲೆ ನೆಡೆಸಬಹುದು. ಬೇಡದವರಿಗೆಲ್ಲ ಸ್ಪ್ಯಾಮ್ (SPAM) ಮಾಡೋ ಕೆಟ್ಟ ಬುದ್ದಿ ಈ ವರ್ಮ್ ಗೆ ಇದೆಯಂತೆ. (AFP)

 

ಅದೇನೇ ಇರಲಿ, ನಮಗ್ಯಾರ್ಗೂ ಇಂತಹ ವರ್ಮ್ ನ ಸಹವಾಸ ಬೇಕಿಲ್ಲ ಅಲ್ವಾ? ಈ ಒಂದು ಮಾಲ್ವೇರ್ (malware) ಸಾಕ್ರಾಂಮಿಕ ಪ್ರೋಗ್ರಾಮ್ ಆಗಿ ಕೆಲಸ ಮಾಡೋ ಶಕ್ತಿಯನ್ನು ಹೊಂದಿದ್ದು, ಸುಲಭವಾಗಿ ನೆಟ್ವರ್ಕಿನಲ್ಲಿರುವ ಇತರೆ ಕಂಪ್ಯೂಟರ್ ಗಳಿಗೂ ಹಬ್ಬುವ ಸಾಧ್ಯತೆಗಳಿವೆ. ಇಂಟರ್ನೆಟ್ ಮತ್ತು USB flash ಡಿಸ್ಕ್ ಗಳು ಈ ವರ್ಮ್ ಹಬ್ಬುವಲ್ಲಿ ಮಾಧ್ಯಮವಾಗಿ  ಸಹಾಯ ಮಾಡಲಿವೆ. ಇದು ನಿಮ್ಮ ಕಂಪ್ಯೂಟರಿನಲ್ಲಿರುವ ಸೂಕ್ಷ್ಮ ದಾಖಲೆಗಳ ಕಳವಿಗೂ ಕಾರಣವಾಗಬಲ್ಲದು.  Conficker ಬಗ್ಗೆ ಇಲ್ಲಿ ಓದಿ.

ಈ ವರ್ಮ್ ದಾಳಿ ಮಾಡಿರುವುದನ್ನು ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿಯ ಸೂಚನೆಗಳು ನಿಮ್ಮ ಸಿಸ್ಟಂನಲ್ಲಿ ಕಂಡು ಬಂದಲ್ಲಿ ಧೃಡೀಕರಿಸಿಕೊಳ್ಳಬಹುದು.

* ನಿಮ್ಮ ಕಂಪ್ಯೂಟರಿನಲ್ಲಿ ನ ಬಳಕೆದಾರನ policy ಗಳು ಬದಲಾಗಿರೋದು ಕಂಡು ಬರಬಹುದು (ಕಂಪ್ಯೂಟರ್ ನಿರ್ವಾಹಕ ಕಂಪ್ಯೂಟರ್ ನಲ್ಲಿ ತನ್ನ ಕಾರ್ಯನಿರ್ವಹಿಸದಂತಾಗುವುದು ಇತ್ಯಾದಿ )
* ವಿಂಡೋಸ್ನ Automatic Updates, Background Intelligent Transfer Service (BITS), Windows Defender and Error Reporting  ಸರ್ವಿಸ್ ಗಳು ಡಿಸೇಬಲ್ ಆಗಿರುವುದು.
* Domain controllers ನಿಧಾನವಾಗಿ ತನ್ನ ಕ್ಲೈಂಟುಗಳೊಂದಿಗೆ ವ್ಯವಹರಿಸುತ್ತಿದ್ದಲ್ಲಿ
* ಸಿಸ್ಟಂನ ನೆಟ್ವರ್ಕ್ ಸರಿಯಾಗಿ ಕೆಲಸ ನಿರ್ವಹಿಸದಿಲ್ಲಲ್ಲಿ.
* ನಿಮ್ಮ antivirus ಸಾಫ್ಟ್ವೇರ್ಗೆ  ವೆಬ್ಸೈಟ್ ಕೆಲಸ ಮಾಡದಿದ್ದಲ್ಲಿ.

ಹೀಗಾಗಿ, ನಿಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂ ಅಪ್ಡೇಟ್ ಆಗಿರುವಂತೆ ನೋಡಿ ಕೊಳ್ಳಿ.  McAfee AVERT Stinger Conficker  ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಸಿಸ್ಟಂ ಈ ವರ್ಮ್ ನಿಂದ ದೂರವಿರುವಂತೆ ನೋಡಿ ಕೊಳ್ಳಿ.  ಹೆದರಬೇಡಿ, ನಾನು ಹೇಳಿರುವ ಈ ವೆಬ್ ಸೈಟ್ ನಿಮಗೆ ಯಾವುದೇ ತೊಂದರೆ ಯನ್ನೂ ಮಾಡುವುದಿಲ್ಲ. softpedia.com ಒಂದು ನಂಬಲಹ೯ ಮೂಲ .

ಇಂತಹ ವೈರಸ್ , ಮಾಲ್ವೇರ್ ಮತ್ತು ವರ್ಮ್ ಗಳಿಂದ ಬೇಸತ್ತಿದ್ದಲ್ಲಿ, ನೀವೇಕೆ ನಿಮ್ಮ ಆಪರೇಟಿಂಗ್ ಸಿಸ್ಟಂ ಬದಲಿಸಬಾರದು. ಸಂಪದ ಟೆಕ್ ತಂಡ ಸಿದ್ದಪಡಿಸಿರುವ ಚಿಗುರು ಗ್ನು/ಲಿನಕ್ಸ್ ಬಗ್ಗೆ ಕೇಳಿದ್ದೀರಲ್ಲವೇ? ಅದನ್ನು ಯಾಕೆ ಬಳಸಬಾರದು?

ವೈರಸ್ , ಮಾಲ್ವೇರ್ ಮತ್ತು ವರ್ಮ್ ಗಳು ಇಲ್ಲದ ಕಂಪ್ಯೂಟರ್ ನಲ್ಲಿ ಕುಳಿತು ಕೆಲಸ ಮಾಡೋದಂದ್ರೆ ಅದರ ಮಜಾನೇ ಬೇರೆ. ಏನೇ ಆಗ್ಲಿ ನಿಮ್ಮ ಈ ದಿನ ವೈರಸ್ ನಿಂದ ದೂರವಿರಲಿ.

ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನೂ ಓದಿ.