ಗೋಲಿಯೋ VI, ೨೦೦೬, ವಿಶ್ವಕಪ್ಪಿನ ಸಾಕರ್ ಆಟದ, ಎಂದೂ ಕಂಡು ಕೇಳರಿಯದ ಲಾಂಛನ (ಸಿಂಹ ಮಾನವ) !

ಗೋಲಿಯೋ VI, ೨೦೦೬, ವಿಶ್ವಕಪ್ಪಿನ ಸಾಕರ್ ಆಟದ, ಎಂದೂ ಕಂಡು ಕೇಳರಿಯದ ಲಾಂಛನ (ಸಿಂಹ ಮಾನವ) !

ಬರಹ

ಗೊಲಿಯೋ VI, ವಿಶ್ವಕಪ್ ಕಾಲ್ಚೆಂಡಾಟ ೨೦೦೬,ರ ಎಂದೂ ಕಂಡು ಕೇಳರಿಯದ ಲಾಂಛನ,ದ ಅನಾವರಣ ಶನಿವಾರದಂದು,ಜರ್ಮನಿಯಲ್ಲಿ ನಡೆಯಲಿದೆ ! ವಿಶ್ವ ಫುಟ್ ಬಾಲ್ ಪ್ರೇಮಿಗಳು ಅತಿಸಂಭ್ರಮ, ಪ್ರೀತಿಗಳಿಂದ ನೋಡಲು ಕಾತರಿಸುತ್ತಿರುವ ಗೋಲಿಯೋ, ಶನಿವಾರದ ದಿನ ವಿಧ್ಯುಕ್ತವಾಗಿ ಜರ್ಮನಿಯ ದೂರದರ್ಶನ ಹಾಗು ಕ್ರೀಡಾಂಗಣದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಳ್ಳಲಿದೆ. ಫಿಫಾ ಪ್ರಕಾರ, ಗೋಲಿಯೋ ಪದವನ್ನು ವಿಸ್ತರಿಸಿದರೆ, 'ಗೋ ಲಿಯೋ ಗೋ' ಎಂದಾಗುತ್ತದೆ. ಈ ಸಿಂಹ ಮುಖದ ಮಾನವನ ಕಾರ್ನಾಮಗಳೆಲ್ಲಾ, ವಿಶೇಷವೇ ! ಲೋಥರ್ ಮಾಥಿಯೊಸ್ ನ ಸುಂದರ ಮುಖ, ಡಿಯಾಗೋ ಮೆರಡೋನರ ನಾಜೂಕು, ಆಲಿವರ್ ಬಿಯರಾಫ್ ರ ಜಾತಿ, ಮತ,ಭಾಷೆಗಳ, ಭೇದವಿಲ್ಲದ ವಿಶ್ವಮಾನವತ್ವ ! 'ನಾನು ಹೊರಗೆ ಬಂದಾಗ, ನಿಮ್ಮೆಲ್ಲರ ಮೇಲೆ ಮಾಡುವ ಜಾದು ವಿನಿಂದ ಎಚ್ಚರವಾಗಿರಿ- ನನ್ನ ಹುಟ್ಟು ಗುಣವೆ ಅದು '! ಎನ್ನು ತ್ತಾನೆ ಗೋಲಿಯೋ .

ಆದರೆ ೨೧ ರಂದು, ಐವರಿಕೊಸ್ಟ್ ಪಂದ್ಯದ ಪುರ್ವಭಾವಿಯಾಗಿ ಎರಡು ನಿಮಿಷ ಕಂಡು, ಮುಖ ತೊರಿಸಿ ಮಾಯವಾದ ವಿಷಯ ತಿಳಿದುಬಂದಿದೆ. ಆ ದಿನ ಅವನು ಮಳೆಗಾಲದ ಟೊಪಿ, ಧರಿಸಿದ್ದನಂತೆ ! ಗೋಲಿಯೋ, ಮಾತಿನಮಲ್ಲ. ಹಾಡುಗಳನ್ನು ವಾದ್ಯದಲ್ಲಿ ನುಡಿಸಬಲ್ಲ. ಮಕ್ಕಳನ್ನು ಗೋಳ್ಹೊಯ್ಕೊತಾನಂತೆ ! ಅವನ ಕೈಯಲ್ಲಿ ಒಂದು ಚೆಂಡಿದೆ.ಅದರ ಹೆಸರು 'ಪಿಲ್ಲೆ'! ಈ ಕಾಲ್ಚೆಂಡು ಮಾತಾಡುತ್ತೆ, ಫುಟ್ಬಾಲ್ ಆಟದ ಪರಿಪೂರ್ಣ ಮಾಹಿತಿ, ಇದಕ್ಕೆ ಗೊತ್ತು. ಇದೊಂದು ಅದ್ಭುತವಲ್ಲವೇ ? ಫುಟ್ ಬಾಲ್ ಆಟದ ದಿಗ್ಗಜರೆಂದು ಖ್ಯಾತಿಪಡೆದ, ಪಿಲೆ, ಮತ್ತು ಫ್ರಾನ್ಝ್ ಬೆಕೆನ್ ಬರ್, ಜೊತೆಯಲ್ಲಿ 'ಗೋಲಿಯೋ' ಮತ್ತು 'ಪಿಲೆ' ಸಾರ್ವಜನಿಕವಾಗಿ ಮೊದಲು ಕಾಣಿಸಿಕೊಳ್ಳುವುದು ಒಂದು ವಿಶೇಷ ! ಆ ಬೆರಗು ಕ್ಷಣಗಳಿಗೆ ತಯಾರಾಗಿರಿ.ಫಿಫಾವರ್ಲ್ಡಕಪ್.ಕಾಂ ನಲ್ಲಿ ಓದಿ ಆನಂದಿಸಿ !