"ಇಂಟರ್‌ನ್ಯಾಶನಲ್ ಫೊನೆಟಿಕ್ ಆಲ್ಫಬೆಟ್ " ಚೌಕದಲ್ಲಿ ಕನ್ನಡ ವರ್ಣ ಮಾಲೆ / ದನಿಯಱಿವು

"ಇಂಟರ್‌ನ್ಯಾಶನಲ್ ಫೊನೆಟಿಕ್ ಆಲ್ಫಬೆಟ್ " ಚೌಕದಲ್ಲಿ ಕನ್ನಡ ವರ್ಣ ಮಾಲೆ / ದನಿಯಱಿವು

ಬರಹ

ಈಚಿನ ದಿನಗಳಲ್ಲಿ ಸಾಮಾನ್ಯವಾಗಿ ಕನ್ನಡ ಅಕ್ಷರ ಮಾಲೆಯಲ್ಲಿ ಯಾವ ಅಕ್ಷರಗಳು ಇರಬೇಕು ಯಾವ ಅಕ್ಷರಗಳು ಇರಬಾರದು ಅನ್ನುವುದೇ ದೊಡ್ಡ ಚರ್ಚೆಯ ವಿಷಯವಾಗಿ ಬಿಟ್ಟಿದೆ.

ಶ್ರೀ ಶಂಕರ ಭಟ್ಟರು, ಬರೆದಿರುವ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ"/"ಕನ್ನಡ ಬರಹವನ್ನು ಸರಿಪಡಿಸೋಣ" ಅನ್ನೊ ಪುಸ್ತಕ ಈ ಚರ್ಚೆಗೆ ಒಂದಿಷ್ಟು ಪುಷ್ಠಿ ಕೊಟ್ಟುಬಿಟ್ಟಿದೆ.

ಆ ಚರ್ಚೆ ಏನೇ ಇರಲಿ, ಏನೇ ಒಂದು ವಿಷಯದಲ್ಲಿ ಕೈ ಹಾಕುವ ಮೊದಲು, ಆ ವಿಷಯದ ಮೌಲ್ಯವನ್ನು ಒಂದು ಮಾನದಂಡಕ್ಕೆ/ಅಳತೆಗೋಲಿಗೆ ಹೋಲಿಸಿಏ ನಿರ್ಧಾರವನ್ನು ಕೈಗೊಳ್ಳಬೇಕು.

ನಮ್ಮ ಕನ್ನಡದ ವಿಷಯದಲ್ಲಿ ಹೇಳುವುದಾದರೆ, ಕನ್ನಡ ವರ್ಣಮಾಲೆಯನ್ನು ಕುಗ್ಗಿಸಬೇಕೋ/ಹಿಗ್ಗಿಸಬೇಕೋ ಅನ್ನೋ ನಿರ್ಧಾರಕ್ಕೆ ಬರಬೇಕಾದರೆ ಅದನ್ನು "ಇಂಟರ್‌ನ್ಯಶನಲ್ ಫೊನೆಟಿಕ್ ಆಲ್ಫಾಬೆಟ್" ("International phonetic alphabet" ) ಸಂಸ್ಥೆಯು"
ಸಿದ್ದಪಡಿಸಿರುವ ವರ್ಣಮಾಲೆಯ ಜೊತೆ ಹೋಲಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.