ಧರ್ಮ ಮತ್ತು ಸಮರ - ಒಂದು ಅಲೋಚನೆ.

ಧರ್ಮ ಮತ್ತು ಸಮರ - ಒಂದು ಅಲೋಚನೆ.

ಅಮೆರಿಕಾ ಹಾಗು ಭಯೋತ್ಪಾದಕ ಸಂಘಟನೆ ತಾಲಿಬಾನ್ ನಡುವಣ ಕದನ ಅಂತಿಮ ಹಂತದಲ್ಲಿದ್ದು , ವಿಶ್ವ ಸಂಸ್ಥೆ ಹಾಗು ಇತರ ರಾಷ್ಟ್ರಗಳ ಸಭೆಯ ಪರಿಣಾಮವಗಿ ತಾಲಿಬಾನ್ ತದನಂತರದ ಸರ್ಕಾರದ ನಿರ್ವಹಣೆಗಾಗಿ ಪಶ್ತೂನ್ ಸಂಘಟನೆಯ ನಾಯಕ ಹಮೀದ್ ಕರ್ಜೈ ಅವರನ್ನು ನೇಮಿಸಲಾಗಿದೆ . ಈ ಮೇಲಿನ ಸಂಗತಿಗೆ ಅಮೆರಿಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯೇ ಕಾರಣ . ಸೆಪ್ಟೆಂಬರ್ ೧೧ ನೇ ತಾರೀಖಿನ ಭಯೋತ್ಪಾದಕ ಕೃತ್ಯ , ಸುಮಾರು ೧೨ ವರ್ಷಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ - ಇವೆಲ್ಲವೂ ಒಬ್ಬರಿಂದಲೇ ಮಾಡಲು ಅಸಾಧ್ಯ . ಹಾಗದರೆ ಯಾರು ಮಾಡುತ್ತಿದ್ದಾರೆ ? ಏಕೆ ಮಾಡುತ್ತಿದ್ದಾರೆ ? ಮುಗ್ಧ ಜನ ಏಕೆ ಬಲಿಯಾಗುತ್ತಿದ್ದಾರೆ ? ಜನರನ್ನು ಹೇಗೆ ಕೆರಳಿಸಲಾಗುತ್ತಿದೆ ?

ಈ ಮೇಲಿನ ಪ್ರಶ್ನೆಗಳು ಬರುವುದು ಸಹಜ . ಭಾರತದಲ್ಲಿನ ಎರಡು ಶ್ರೇಷ್ಠ ಗ್ರಂಥಗಳೆಂದರೆ "ಮಹಾಭಾರತ" ಹಾಗು "ರಾಮಾಯಣ" . ಈ ಎರಡೂ ಗ್ರಂಥಗಳಲ್ಲಿ "ಧರ್ಮಯುದ್ಧ" ಎಂಬ ಪದಗಳು ಕಾಣಸಿಗುತ್ತವೆ . ಪಾಂಡವರು ಕೌರವರ ವಿರುದ್ಧವೂ ರಾಮನು ರಾವಣನ ವಿರುದ್ಧವೂ ಧರ್ಮ ಯುದ್ಧದಲ್ಲಿ ಜಯಗಳಿಸುತ್ತಾರೆ . ಇದನ್ನು ಸತ್ಯ ಅಸತ್ಯಗಳ ನಡುವೆ ನಡೆಯುವ ಯುದ್ಧವೆಂದು ಬಣ್ಣಿಸುತ್ತಾರೆ . ಈ ಮೇಲಿನ ಧೀಮಂತರು ಹಾಗು ವೀರರು "ಧರ್ಮೋ ರಕ್ಷತಿ ರಕ್ಷಿತಃ" ಎಂದು ನಂಬಿದ್ದರು . ಅದರೆ ಈಗಿನ ಕಲಿಯುಗದಲ್ಲಿ ಧರ್ಮ ಯುದ್ಧದ ಹೆಸರಿನಲ್ಲಿ ಅಮಾಯಕರು ಕೊಲ್ಲಲ್ಪಡುತಿದ್ದಾರೆ. ಧರ್ಮ ರಕ್ಷಣೆಯ ನೆಪದಲ್ಲಿ ತಮ್ಮ ಸ್ವಾರ್ಥವನ್ನು ಪೂರೈಸಲು ಅನೇಕ ಯುವಕರನ್ನು "ಭಯೋತ್ಪಾದನೆ" ಎಂಬ ಕರಾಳ ಜಗತ್ತಿಗೆ ತಳ್ಳಲ್ಲಪಡುತ್ತಿದ್ದಾರೆ . "ಜಿಹಾದ್" ಎಂಬ ಹೆಸರಿನಲ್ಲಿ ಕೊಲೆ , ಅನ್ಯಾಯ ,ಅಪಚಾರ ನಡೆಯುತ್ತಲಿದೆ . ಹಿರಿಯರೊಬ್ಬರಿಂದ ದೊರೆತ ಮಾಹಿತಿಯಂತೆ "ಜಿಹಾದ್" ಎಂಬ ಪದದ ಅರ್ಥ ಶತ್ರುವನ್ನು ಶಿಕ್ಷಿಸುವುದು . ಆ ಶಿಕ್ಷೆಯನ್ನು ಮಾತಿನಿಂದಲಾದರು , ಹೃದಯದಿಂದ , ಕೈಗಳಿಂದ ಅಥವಾ ಖಡ್ಗದಿಂದ ನೀಡಬಹುದು ಎಂಬುದಾಗಿ ತಿಳಿದು ಬರುತ್ತದೆ . ಈ ಮಾತಿನ ಅಂತರಾರ್ಥವನ್ನು ಅರಿಯದ ಮೂಢರು ಕ್ರೂರವಾಗಿ ಜನರನ್ನು ವಿಶ್ವದೆಲ್ಲೆಡೆ ಕೊಲ್ಲುತ್ತಾರೆ . ಅಲ್ಖೈದ - ಅಂತರಾಷ್ಟ್ರೀಯ ಭಯೊತ್ಪಾದಕರ ಮುಖ್ಯಸ್ಥನು ನ್ಯೂಯಾರ್ಕ್ ಮೇಲೆ ನಡೆಸುವ ದಾಳಿಕೊರರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಹಾಗು ಅವರು ಮಾಡುತ್ತಿರುವ ಕೆಲೆಸ ದೇವರ ಕೆಲಸ ಎಂದು ಬರೆದಿದ್ದನಂತೆ ! ಅಮಾಯಕರ ರಕ್ತದ ಮಡುವಿನಲ್ಲಿ ಒದ್ದಾಡುವುದರಿಂದ ಅದೆಂಥ ಸ್ವರ್ಗ ಪ್ರಾಪ್ತಿಯೋ , ದೇವರ ಕೆಲಸವೋ ನಾನು ಅರಿಯೆ . ಇದು ಧರ್ಮ ಸಮ್ಮತವಲ್ಲ ಎಂಬುದಾಗಿ ಖಡಾಖಂಡಿತವಾಗಿ ಹೇಳಬಹುದು.

ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಎಲ್ಲಾ ದೇಶಗಳು ಒಗ್ಗೂಡಿ ಅತ್ಮೀಯತೆಯನ್ನು ಬೆಳೆಸಿಕೊಳ್ಳುತ್ತಿರುವುದು ಶುಭ ಸೂಚನೆಯಾಗಿದೆ. ಧರ್ಮಯುದ್ಧವೆಂಬ ಮೊಡದ ಮುಸುಕಿನಲ್ಲಿ ಭಯೊತ್ಪಾದನೆಯನ್ನು ಸಕಾಲದಲ್ಲಿ ಅರಿತಿರುವ ದೇಶಗಳು ಅನೇಕ ಕ್ರಮಗಳ್ಳನ್ನು ಕೈಗೊಳ್ಳುತ್ತಿದ್ದಾರೆ . ಈ ಕ್ರಮಗಳ್ಳಲ್ಲಿ ಸತ್ಯ - ಅಸತ್ಯತೆಗಳ ಅರ್ಥವನ್ನು ದಾರಿ ತಪ್ಪಿರುವ ಯುವಕರಿಗೆ ನೀಡುವುದು ಸೇರಿದರೆ ಸರಿ ಎಂದು ನನ್ನ ಅನಿಸಿಕೆ . ಹೀಗೆ ದೇಶಗಳ ನಡುವೆ ಇರುವ ತೊಡಕುಗಳು ನಿವಾರಣೆಯಾಗಿ ಎಲ್ಲರೂ ಒಗ್ಗೂಡಿ ಸಹಬಾಳ್ವೆ ನಡೆಸಿದರೆ ಎಲ್ಲೆಡೆ "ವಿಶ್ವಶಾಂತಿ" ಸ್ಥಾಪನೆ ಆಗುವುದರಲ್ಲಿ ಸಂದೇಹವೇ ಇಲ್ಲ.

Rating
No votes yet

Comments